ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾರುತಿದೆ ಮನಸು..

ಚಾಂದಿನಿ ಖಲೀದ್

ಜಾರುತಿದೆ ಮನಸು ಮತ್ಯಾಕೋ
ಕಾಲದ ಕಹಿ ನೋವುಂಡ ಮೇಲೂ
ತಿಳಿದು ತಿಳಿದು ಮೋಹದ ಇಳಿ ಜಾರಿನಲಿ.

ಓಲೆಯ ಪದಗಳ ಸಂಭ್ರಮದಾಚೆ
ರವಾನಿಸುವ ಭಾವಶೂನ್ಯ ಒಸಗೆಯತ್ತ
ಜಾರುತಿದೆ ಮನಸು

ಬಣ್ಣಗಳರಳದ ಪರದೆಯ ಹಿಂದೆ
ಕಲೆಯದ ಕಣ್ಣೋಟ, ಕಾಣದ ಮುಗುಳಿಗೆ
ಜಾರುತಿದೆ ಮನಸು

ಅರಿಯದೆ ಬೆರೆಯದ
ಪಶ್ಮಿನ ನೂಲ ಎಳೆಯಂತಹ
ಬಂಧನದ, ಬಂಧಕ್ಕೆ
ಜಾರುತಿದೆ ಮನಸು

ಸಾವಿರ ಕಿಟಕಿಗಳ ಮೋಹಕ್ಕೆ
ಬಾಗಿಲು ಗಳಿಲ್ಲದ ಮನೆಗೆ
ಜಾರುತಿದೆ ಮನಸು

‍ಲೇಖಕರು Admin

17 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading