ಚುಕು ಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡ್ತೈತೋ ..
ರಾಜ್ ಅನ್ನುವ ಹೆಸರು ಗಾಳಿಯಲ್ಲಿ ತೇಲಿದ್ದೇ ತಡ ಬೆಂಗಳೂರಿನಿಂದ ಹೊರಟ ಚುಕು ಬುಕು ರೈಲು ಶರವೇಗದಲ್ಲಿ ಓಡ ಹಂಪಿ ಸೇರಿಕೊಂಡಿದೆ.
ರಾಜ್ ಮೈಲಿಗಲ್ಲಿನ ಹಾಗೆ. ಈ ಮೈಲಿಗಲ್ಲನ್ನು ಇಂದಿಗೂ ನಾಡು ಬೆರಗುಗಣ್ಣಿನಿಂದ ನೋಡುತ್ತಲೇ ಬಂದಿದೆ. ಹಾಗಾಗಿಯೇ ‘ಅವಿರತ’ ಈ ರಾಜ್ ಮಥನಕ್ಕೆ ಸಜ್ಜಾದದ್ದು.
‘ಅವಿರತ’ ಎನ್ನುವುದು ಒಂದು ಬೆರಗಿನ ರೂಪಕವಾಗಿ ಹೋಗಿದೆ. ನಾನಾ ವಾದ, ನಾನಾ ದಿಕ್ಕಿನ ಜನರ ನಡುವೆ ತಂಗಾಳಿಯ ಹಾಗೆ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ.. ಎಲ್ಲರನ್ನೂ ತೆಕ್ಕೆಗೆ ತೆಗೆದುಕೊಂಡು ಹಲವು ವರ್ಷಗಳಿಂದ ಹೆಜ್ಜೆ ಹಾಕುತ್ತಲೇ ಇದೆ.
ಈ ಬಾರಿ ‘ಅವಿರತ’ಕ್ಕೆ ರಾಜ್ ಹುಮ್ಮಸ್ಸು. ಮೊನ್ನೆ ಮೊನ್ನೆ ತಾನೇ ‘ರಾಜ್ ರಾಗ’ ಹಮ್ಮಿಕೊಂಡು ರಾಜ್ ಹಾಡುಗಳ ಸುಧೆ ಬಡಿಸಿ ‘ಅವಿರತ’ ಈಗ ರಾಜ್ ಅವರನ್ನು ಅರ್ಥ ಮಾಡಿಕೊಳ್ಳುವ ಬಗೆಯನ್ನು ಹುಡುಕುತ್ತಿದೆ. ಅದಕ್ಕಾಗಿ ಹಂಪಿಯಲ್ಲಿ ಎರಡು ದಿನ ಪೂರ್ತಿ ರಾಜ್ ರಾಜ್ ರಾಜ್. ಹಲವು ರಾಜ್ ತಜ್ಞರು ತಮ್ಮ ನೋಟವನ್ನು ಹರಿಸಲಿದ್ದಾರೆ.
ಈ ರಾಜ್ ಪಯಣಕ್ಕೆ ಹೊರಟ ರೈಲು ಇದು. ಸರಿಸುಮಾರು ೫೦ ಜನ ರಾಜ್ ರೈಲು ಹತ್ತಿದ್ದಾರೆ.
‘ಅವಿರತ’ದ ಬೋಗಿಯಲ್ಲಿ ‘ಅವಧಿ’ ಹೊಕ್ಕು ಕ್ಲಿಕ್ಕಿಸಿದ್ದು ಇಲ್ಲಿದೆ
0 ಪ್ರತಿಕ್ರಿಯೆಗಳು