ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂಡಮಾರುತ

ಲಕ್ಷ್ಮಿ ಕೆ ಬಿ

ಭಾವನೆಗಳ ತೀರದೆಡೆಗೆ
ಭಾವಯಾನ
ಭಾವದಲೆಗಳ ಮೊರೆತದಲಿ
ಮನ ವಿಲೀನ

ಹೋದವೆಲ್ಲಿ ನಿನ್ನ ಒಲವ
ಮಾರುತಗಳು?
ಇಂದು ಆರ್ಭಟಿಸಿವೆ
ಚಂಡಮಾರುತಗಳು

ಸುತ್ತುತ್ತಿವೆ ಸುರು ಸುರುಳಿ
ಸುಂಟರಗಾಳಿಗಳು
ಆವರಿಸಿವೆ ನನ್ನೊಲವ,
ಚಂಡಮಾರುತಗಳು

ನನ್ನೆದೆಯ ಕಡಲಿನಲ್ಲಿ
ಭಾವದಲೆಗಳ ಭರತ
ನಿತ್ಯ ನಿರಂತರ ನೆನಪಿನಲ್ಲಿ
ಒಲವಿನಲೆಯ ಭೋರ್ಗರೆತ

ಆಕ್ರೋಶದ ಅಲೆಗಳ ಅಬ್ಬರ
ಆತಂಕದ ಅಲೆಗಳ ಉಬ್ಬರ
ಕಡಲ ತೀರದ ಕೊರತ
ಮನದಂಗಳದಿ ಭಾವನೆಗಳ ಇರಿತ

ನಿನ್ನುಸಿರು ಸಾರುವ ತಂಗಾಳಿ
ಚಂಡಮಾರುತ ಹೊರುವ ಬಿರುಗಾಳಿ
ಮೇಘರಾಜನ ಆರ್ಭಟ
ಮನ ತತ್ತರಿಸುತ್ತಿರುವುದಂತೂ ದಿಟ

ಕಣ್ಣರಿವಿನಷ್ಟೂ
ಕಡಲ ತೀರ
ಭಾವನೆಗಳ ಹೊಡೆತಕ್ಕೆ
ಒಡಲು ಭಾರ

ಸರಳಿನಂಚಿನ ದೃಶ್ಯ
ಮನವಾಗಿಹುದು ವಶ್ಯ
ಚಂಡಮಾರುತದ ಇಳಿತ
ಮೌನಿ ಮನದ ಮೊರೆತ

‍ಲೇಖಕರು Admin

4 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading