ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಲಾಬಿಯನೇ  ಕೊಡಬೇಕೆಂಬ ಆಸೆಯಿದೆ.. 

ಗುಲಾಬಿ- ಮುಳ್ಳು

ವಸುಂಧರಾ. ಕೆ. ಎಂ.

ಗುಲಾಬಿ ಹಿಡಿಯುತ್ತಿದ್ದ
ನನ್ನ ಕೈಗಳಿಗೀಗ ಚಾಟಿಯನು
ಕೊಟ್ಟಿರುವೆ !
ಒಲವ ತೋರಿದರೆ ಹೂ
ಕುಟಿಲತೆಗೆ ಚಾಟಿ, ಆಯ್ಕೆ
ನಿನಗೆ ಬಿಟ್ಟಿರುವೆ..!

ನನ್ನ ಜಗತ್ತಿಗೆ ಇನ್ನು ನಿನ್ನ
ಆಗಮನಕ್ಕೆ ವಿಧಿಸಿರುವೆ
ನಿರ್ಬಂಧ.
ಋಜುವಿದ್ದರೆ ಎಲ್ಲೂ
ಉಳಿದು ಬರುವುದು
ಸಂಬಂಧ..

ಹೂ ಅರಳಿಸಿ ಕಂಪನ್ನಷ್ಟೇ
ನಿನಗೆ ನೀಡ ಬಯಸಿದೆ..,
ಹುಡುಕಿ ಹುಡುಕಿ ಮುಳ್ಳ
ಬುಡವ ನೀನೇ ಎತ್ತಿ ಹಿಡಿದೆ..!

ಅಷ್ಟು ಮಾತ್ರ ಬೇಡವೇನು
ನನ್ನ ರಕ್ಷಣೆಗೆ ಒಂದಷ್ಟು
ಮುಳ್ಳು..?
ಬೇಲಿ ಎದ್ದು ಹೊಲವ
ಮೇವ ಕತೆಯದೇನಾ
ಸುಳ್ಳು..?

ನಿನಗೆ ಗುಲಾಬಿಯನೇ
ಕೊಡಬೇಕೆಂಬ ಆಸೆಯಿದೆ
ನನಗೆ.
ಒಳಿತಿನಲ್ಲೂ ಕೆಡುಕನೇ
ಹುಡುಕುವುದ ಬಿಡು ನೀನಿನ್ನು
ಕೊನೆಗೆ…

‍ಲೇಖಕರು avadhi

20 March, 2020

2 Comments

  1. Kala Bhagwat

    Nice

    • Vasundhara k m

      Thank you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading