ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುರುಪ್ರಸಾದ್ ಕಂಟಲಗೆರೆ ಕವಿತೆ- ಕಣ್ಣೀರು ಬಸಿದೋಗಿದೆ…

ಗುರುಪ್ರಸಾದ್ ಕಂಟಲಗೆರೆ

ನಮ್ಮ‌ ಮನೆಯ ಊಟ
ಸದ್ಯಕ್ಕೆ ನಿಮಗಿಲ್ಲ!
ನಿಮ್ಮ ಮನೆಗೆ ನಾವೂ ಬರುವುದಿಲ್ಲ.

ನಿಮ್ಮ‌ ಮನೆ ಮಗಳ
ಮಾತಾಡಿಸಿದ್ದಕ್ಕೆ ಇಲ್ಲೊಂದು ಕೊಲೆಯಾಗಿದೆ
ಅತ್ತೂ ಅತ್ತೂ
ಆ ತಾಯಿಯ ಕಣ್ಣೀರು ಬಸಿದೋಗಿದೆ.

ಆ ಮಗು ನಿಮ್ಮ‌ ಗುಡಿ ಹೊಕ್ಕಿದ್ದಕ್ಕೆ
ದಂಡ ತೆರಲು ಹೋದ
ಅವ್ವ ಇನ್ನು‌ ಬಂದಿಲ್ಲ
ಹಾಲುಗಲ್ಲದ ಮಗುವಿನ ಆಕ್ರಂದನ ನಿಂತಿಲ್ಲ.

ನಮ್ಮ ಆಹಾರ ಹೊತ್ತಿದ್ದ
ರಥವನ್ನು ಹಿಡಿಯಲಾಗಿದೆ
ನಾವ್ ಮೇಯಿಸಿದ್ದ ಅನ್ನವದು
ಮಣ್ಣು ಪಾಲಾಗಿದೆ.

ನಮ್ಮ‌ ಮನೆಯಲ್ಲಿ ಅನ್ನವಿಲ್ಲ
ನೀವು ತಿನ್ನುವ ಅನ್ನವದು ನಮ್ಮದಲ್ಲ.

‍ಲೇಖಕರು Admin

14 October, 2022

1 Comment

  1. prathibha nandakumar

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading