ರೇಖಾ ಹೊನ್ನಗದ್ದೆ
ಬದುಕು ಖಂಡಿತ ಬೆಳಗಲಿದೆ ನಂಬಿಕೆಯಿರಲಿ
ಕಂಬನಿ ಗುರುತು ಅಳಿಯಲಿದೆ ನಂಬಿಕೆಯಿರಲಿ
ಕನಸಿನ ಬಿತ್ತಗಳೇ ಎಂದೂ ಧ್ಯಾನ ನಿಲ್ಲಿಸದಿರಿ
ಮೋಡ ನಿಮಗಾಗಿ ಇಳಿಯಲಿದೆ ನಂಬಿಕೆಯಿರಲಿ
ಬಯಕೆಯ ಬೇರುಗಳೇ ಹೆದರಿ ಮುದುಡುವಿರೇಕೆ
ಆಳದಲಿ ತಂಪೆರೆಯುವ ಸೆಲೆಯಿದೆ ನಂಬಿಕೆಯಿರಲಿ
ನದಿಗಳೇ ಹತಾಶೆಯಲಿ ಸೋಲದೆ ಮುನ್ನಡೆಯುತ್ತಿರಿ
ಬಯಲು ಹಸಿರಾಗಲು ಕಾಯುತಲಿದೆ ನಂಬಿಕೆಯಿರಲಿ
ಮೂಡಿದರೂ ಚಿತ್ರವಾಗದ ಭಾವ’ರೇಖೆ’ಗಳೆ ಸೋಲದಿರಿ
ಕುಂಚ ಹಿಡಿದ ಕೈಗಳು ಕರೆದೊಯ್ಯಲಿವೆ ನಂಬಿಕೆಯಿರಲಿ
0 ಪ್ರತಿಕ್ರಿಯೆಗಳು