ನಾ ಮೊಗಸಾಲೆ ಕಂಡಂತೆ ‘ಕರಾವಳಿಯ ಸಾವಿರದೊಂದು ದೈವಗಳು’

ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ

ಡಾ ನಾ ಮೊಗಸಾಲೆ

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು.

ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.

ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ.

ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ಇನ್ನೂರ ಮೂವತ್ತು ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.

ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧನಾ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ.

ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! ಡಾ. ಲಕ್ಷ್ಮೀ ಪ್ರಸಾದರು ಸಂಸ್ಕೃತ( ಮೊದಲನೆಯ ರ‌್ಯಾಂಕ್) ಹಿಂದಿ ಮತ್ತು ಕನ್ನಡ( ನಾಲ್ಕನೆಯ ರ‌್ಯಾಂಕ್), ದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು ಎಂ.ಫಿಲ್ ಪದವಿ ಹಾಗೂ ಎರಡು ಪಿ.ಹೆಚ್.ಡಿ ಪದವಿಗಳ‌ ಗರಿಯೂ ಅವರ ಸಾಧನೆಗೆ ದಕ್ಕಿದೆ.

ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.

ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಆಧಾರಿತ ಅಧ್ಯಯನ ಅಪರೂಪದಲ್ಲಿ ಅಪರೂಪದ್ದು.

ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟು ವಿಶ್ಲೇಷಿಸಲ್ಪಟ್ಟ ಅವರ ಸಂಶೋಧನೆಯ ಆಯ್ದ ಸಾವಿರದ ಇನ್ನೂರ ಎಂಟು ದೈವ(1228)ಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ.

ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.

ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.

ಕರಾವಳಿಯ ಸಾವಿರದೊಂದು ದೈವಗಳು
ಅನುಕ್ರಮಣಿಕೆ 315 ಅಧ್ಯಾಯಗಳು
1 ಅಕ್ಕಚ್ಚು
2- ಅಕ್ಕ ಬೋಳಾರಿಗೆ
3-4ಅಕ್ಕೆರ್ಲು- ಅಂಬೆರ್ಲು
5-6 ಅಚ್ಚು ಮತ್ತು ಮೆಚ್ಚು ಬಂಗೇತಿಯರು
7 ಅಗ್ನಿ ಕೊರತಿ
8-13 ಅಗ್ನಿ ಭೈರವನ್ ಮತ್ತು ಪರಿವಾರ
13- 15 ಅಜ್ಜ ಬಳಯ ಮತ್ತು ಮಾಮಿ ಕುಲೆ
15-17 ಅಜ್ಜಮ್ಮ ದೇವರು ಮತ್ತು ಪರಿವಾರ
18-26 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು
27 ಅಜ್ಜಿ ಬೆರೆಂತೊಲು
28-29 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ
30 ಅಡ್ಯಲಾಯ
31 ಅಡ್ಯಂತಾಯ
32-33 ಅಡಿ ಮಣಿತ್ತಾಯ ಮತ್ತು ಅಡಿಮರಾಂಡಿ
34-35 ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು
36-37 ಅಣ್ಣೋಡಿ ಕುಮಾರ- ಕಿನ್ಯಂಬು
38 ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ
39 -40 ಅರಬ್ಬಿ ಮತ್ತು ಬ್ರಾಂದಿ
41-44 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು
45 ಅಸುರಾಳನ್/ ಅಸುಳಾನುಂ ಮಕ್ಕಳು
46-47 ಅಂಗಕ್ಕಾರನ್ ಮರುಟೋಳನ್
48 ಅಂಗಾರ ಬಾಕುಡ
49 ಅಂಮಣ ಬನ್ನಾಯ
50-51 ಅಂಕೆ- ಉಮ್ಮಯ
52 ಆಚಾರಿ ಭೂತ
53 ಆಟಕಾರ್ತಿ
54 ಆಟಿ ಕಳೆಂಜ
55-57 ಆದಿ ವೇಡನ್ ಮತ್ತು ಪರಿವಾರ
58 ಇಷ್ಟಜಾವದೆ
59 ಉಗ್ಗೆದಲ್ತಾಯ
60 ಉಮ್ಮಲ್ತಿ
61-62 ಉಪ್ರಝಾಸ್ಸಿ ಮತ್ತು ಉಚ್ಚಬಲಿ ತೆಯ್ಯಂ
63-64 ಉರವ ಎರುಬಂಟ
65-88 ಉಳ್ಳಾಕುಲು ಮತ್ತು ಉಳ್ಳಾಲ್ತಿ ದೈವಗಳು
89-90 ಎರು ಶೆಟ್ಟಿ( ಮಲೆ ಮುದ್ದ)
91-92 ಎಂಬ್ರಾನ್ ದೇವ- ಐಪ್ಪಳ್ಳಿ
93-99 ಏಲುವೆರ್ ಸಿರಿಕುಲು
100 ಒಕ್ಕು ಬಲ್ಲಾಳ
101-102 ಒರುಬಾಣಿಯೆತ್ತಿ ,ನೆಲ್ಲೂರಾಯ
103- 105 ಓಣಂ ದೈವಗಳು
106 ಓಟೆಚರಾಯ
107: ಕಟ್ಟು ಎಡ್ತುನ್ ಕುಟ್ಟಿ
‌108 ಕಟ್ಟದಲ್ತಾಯ
‌109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ
111-112 ಕಡಂಬಳಿತ್ತಾಯ,ಕೊಡಂಬಿಲ್ತಾಯ
113-114 ಕನಪಾಡಿತ್ತಾಯ ಮತ್ತು ಮಗ್ರಂದಾಯ
115 ಕನ್ನಡ ಕಲ್ಕುಡ
116 ಕನ್ನಡ ಬೀರ
117 ಕನ್ನಡ ಭೂತ
118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ
120 ಕನಿಯತಿ
121 ಕಪ್ಪಣ್ಣಣಿಕ/ ಕಾರ್ಯಸ್ಥನ್
123-124 ಕರಿಯಣ್ಣ ನಾಯಕ ಮತ್ತು ಕೋಟಿ ನಾಯಕ
125 ಕರಿಯ ಮಲ್ಲಯ್ಯ
126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು
134 -135 ಕರ್ನಗೆ ಮತ್ತು ಮಲಾರ್ ಜುಮಾದಿ
136-137 ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು
138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು
140 ಕಂಡನಾರ ಕೇಳನ್
141 ಕಂರ್ಭಿ ಬೈದ್ಯೆದಿ
142 ಕಾಜಿಗಾರ್ತಿ
143-153 ಕಾಡ್ಯನಾಟದ ದೈವಗಳು
154- 155 ಕಾಡೆದಿ ಮತ್ತು ಕಾಡ್ತಿಯಮ್ನ
156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು
158-160 ಕಾನಲ್ತಾಯ ಮತ್ತು ಪರಿವಾರ ದೈವಗಳು
161-162 ಕಾಯರ್ತಾಯ ಮಾದ್ರಿತ್ತಾಯ
163-167 ಕಾರಿ ಕಬಿಲ ದೈವಗಳು
168 ಕಾಳರಾತ್ರಿ
169-172 ಧರ್ಮಸ್ಥಳದಲ್ಲಿ ನೆಲೆಸಿದ ದೈವಗಳು ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ‌ ಕನ್ಯಾಕುಮಾರಿ
173-178 ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು
179 ಕಾಂತು ನೆಕ್ರಿ ಭೂತ
180 ಕಿನ್ನಿದಾರು
181 ಕೀಳು ದೈವ
183-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು
184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ ದೈವಗಳು
186-190 ಕುಟ್ಟಿಚ್ಚಾತ್ತನ್ ,ಪಮ್ಮಚ್ಚು ಮತ್ತು ಸೇರಿಗೆ ದೈವಗಳು
191 ಕುಡಿ ವೀರನ್
192 ಕುದುರೆತ್ತಾಯ / ಕುದುರೆ ಮುಖ ದೈವ
‌ 193-194 ಕುರವ ಮತ್ತು ಸತ್ಯಂಗಳದ ಕೊರತಿ
195 ಕುರುವಾಯಿ ದೈವ
‌196-203 ಕುಲೆ ಭೂತಗಳು – ತುಳುನಾಡಿನ ವಿಶಿಷ್ಟ ದೈವಗಳು
‌204 ಕುಂಞಮ್ಮ ಆಚಾರ್ದಿ
‌205 ಕುಂಞಾಳ್ವ ಬಂಟ
‌206 ಕುಂಞಿ ಭೂತ
‌207 ಕುಂಞಿ ರಾಮ ಕುರಿಕ್ಕಳ್
208 – 212 ಕುಂಜಿರಾಯ ದೈವಗಳು
213-214 ಕುಂಜಿ ಮತ್ತು ಅಂಗಾರ ದೈವಗಳು
215 ಕುಂಜೂರಂಗಾರ
‌216 ಕುಂಟಲ್ದಾಯ
‌217 ಕುಂಟುಕಾನ ಕೊರವ
‌218-219 ಕುಂಡ – ಮಲ್ಲು ದೈವಗಳು
220 ಕುಂಡೋದರ
221-224 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ
225-226 ಕೇಚ ರಾವುತ ಮತ್ತು ರೇವಂತ
‌227 ಕೇತುರ್ಲಾಯ
228-231 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು
232 ಕೊಟ್ಟೆದಲ್ತಾಯ
‌233 ಕೊನ್ನೊಟ್ಟು ಕಡ್ತ
‌234 ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ
‌235 ಕೊರತಿ
‌236 -237 ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ
238-239 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ
240 ಅಪ್ರತಿಮ ವೀರ ಕೋಚು ಮಲ್ಲಿ
241 242 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು
‌243-244 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ
‌245 ಕೋಟ್ರ ಗುತ್ತಿನ ಬಬ್ಬು
‌246-247 ಕೋಟೆರಾಯ ಮತ್ತು ಕೋಟೇಶ್ವರ ದೈವಗಳು
248 ಕೋರಚ್ಚನ್
‌249 ಕೋಲು ಭಂಡಾರಿ
250 ಕೋಳೆಯಾರ ಮಾಮ
251ಗಣಪತಿ ಕೋಲ
252 ಗಂಗೆ ನಾಡಿ ಕುಮಾರ ,( ಓಡಿಲ್ತಾಯ)
253-254 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ
255-256 ಗಂಧರ್ವ ದೈವಗಳು
257 ಗಿಳಿರಾಮ
258 ಗಿಡಿರಾವಂತ
259 -260 ಗಿರಾವು ಮತ್ತು ಕೊಡೆಕಲ್ಲಾಯ
261 ಗುರು ಕಾರ್ನವೆರ್
262 ಗುರುನಾಥನ್
263-275 ಗುಳಿಗ ಮತ್ತು ಸೇರಿಗೆ ದೈವಗಳು
( ಒರಿ ಮಾಣಿ ಗುಳಿಗ ,ಮಂತ್ರವಾದಿ ಗುಳಿಗ,ಸನ್ಯಾಸಿ ಗುಳಿಗ ,ತಂರ್ಜಿ ಗುತ್ತಿನ ಗುಳಿಗ ,ಮುಕಾಂಬಿ ಗುಳಿಗ,ಸಂಕೊಲಿಗ ಗುಳಿಗ,ಶಾಂತಿ ಗುಳಿಗ,ಸುಬ್ಬಿಯಮ್ಮ ಗುಳಿಗ,ಕಲಾಲ್ತಾಯ ಗುಳಿಗ ,ಜಾಗೆದ ಖಾವಂದೆರಾವು ಗುಳಿಗ,ಕಲಿಚ್ಚಿ,ಕಾಲನ್ ಗುಳಿಗ )
276-300 ಚಾಮುಂಡಿ ಮತ್ತು ಸೇರಿಗೆದೈವಗಳು
ಅಗ್ನಿ ಚಾಮುಂಡಿ ಗುಳಿಗ, ಕರಿ ಚಾಮುಂಡಿ,ಕೆರೆ ಚಾಮುಂಡಿ,ಚೌಂಡಿ,ಗುಡ್ಡೆ ಚಾಮುಂಡಿ ಅರದರೆ ಚಾಮುಂಡಿ ,ಅಸಗಲ ಚಾಮುಂಡಿ,ನಾಗ ಚಾಮುಂಡಿ,ಪಾಪೆಲು ಚಾಮುಂಡಿ, ನೆತ್ರಾಂಡಿ ,ಮನದಲಾತ್ ಚಾಮುಂಡಿ,ಮಾಪಿಳ್ಳ ಚಾಮುಂಡಿ ಕೋಮಾರು ಚಾಮುಂಡಿ ಇತ್ಯಾದಿ)
301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ
303-314 ಚಿಕ್ಕು/ ಚಿಕ್ಕಮ್ಮ ಪರಿವಾರ ದೈವಗಳು
315 ಚಿನಿಕಾರ/ ಚೀನೀ ಬೂತಗಳು
316 ಚೆನ್ನಿಗರಾಯ
317-319 ಚೆಮ್ಮರತಿ,ಪಡುವೀರನ್ ದೈವಗಳು
320 ಚೆಂಬರ್ಪುನ್ನಾಯ
321-322 ಜಟಾಧಾರಿ ಮತ್ತು ಶಾಂತ ದುರ್ಗೆ
323 -334′ ಜಟ್ಟಿಗ ದೈವಗಳು
(ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಮಾಣಿ ಬೀರ ಜಟ್ಟಿಗಮಾಣಿಭದ್ರ ಜಟ್ಟಿಗ ಇತ್ಯಾದಿ)
335-337 ಜಮೆಯ- ಜಮಯತಿ ,ಬಡೆದಿ ದೈವಗಳು
338 ಜಂಗ ಬಂಟ
339-340 ಜಾನು ನಾಯ್ಕ ಮತ್ತು ಬಂಡಿರಾಮ
341 ಜಾರಂದಾಯ
342 ಜಾಲ ಬೈಕಾಡ್ತಿ
343 ಪನ್ನೆ ಬೀಡಿನ ಜಾಲ್ಸೂರಾಯ
344 ಜೋಕುಲು ದೈವೊಲು
345-346 ಜೈನ ಗುಜ್ಜಾರ್ಲು ಮತ್ತು ಜೈನ ಭೂತ
347 ತಪ್ಪೇದಿ
348 ತನ್ನಿಮಾಣಿಗ
349-351 ತಂತ್ರಿಗಣಗಳು
352 ತಿಮ್ಮಣ್ಣ ನಾಯಕ
353-355 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ
356 ತೋಡ ಕುಕ್ಕಿನಾರ್
357 ದಾರಮ್ಮ ಬಳ್ಳಾಲ್ತಿ
358-361 ದಾರು ಕುಂದಯ ದೈವಗಳು
362 ದೀಪದ ಮಾಣಿ
363 ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ
364 ದೂಮ
365 ದೂಧುರ್ಮ / ದೂರ್ದುಮ
366-367 ದೆಸಿಲು ಮತ್ತು ಕಿಲಮರತ್ತಾಯ
368 ದೇಬೆ ದೈವ,
369-370 ದೇರೆ ಮತ್ತು ಮಾನಿ ದೈವಗಳು
371ದೇವಾನು ಪಂಬೆದಿಯಮ್ಮ
372 ದೇಯಿ ಬೈದೆತಿ
373-374 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್
375-378 ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ
379 ದೈವಂತಿ
380-400 ಧೂಮಾವತಿ ಮತ್ತು ಸೇರಿಗೆ ದೈವಗಳು
ಕಾಂತೇರಿ ಜುಮಾದಿ,ಬಂಟ,ಮರ್ಲು ಜುಮಾದಿ,ಕರ್ಮಲೆ ಜುಮಾದಿ ,ದುರ್ಗಲ್ಲ ಜುಮಾದಿ,ಮಾಪುಳ್ತಿ ಧೂಮಾವತಿ ,ಪಡಿಂಞರೆ ಧೂಮಾವತಿ, ಧೂಮಹಾಸ್ತಿಯಮ್ಮ ,ಮಲಾರ್ ಜುಮಾದಿ ಮತ್ತು ಕರ್ನಗೆ ಇತ್ಯಾದಿ)
401-404 ನಂದಿ ಹೆಸರಿನ ದೈವಗಳು ( ಹಿರೇ ನಂದಿ ಕಿರರ ನಂದಿ ,ಜೋಗಪ್ಪ ಶೆಟ್ಟಿ ,ನಂದಿಕೇಶ್ವರ ,ನಂದಿ ಗೋಣ)
405-408 ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು
409 ನಂದಿಗೆನ್ನಾಯ
410-412 ನಾಗ ಕನ್ನಿಕೆ ಮತ್ತು ನಾಗರಾಜರು
413 ನಾಗ ದೈವ/ಭೂತ
414 ನಾಗ ಬ್ರಹ್ಮ
415 ನಾಗ ಬ್ರಹ್ಮ ಮಂಡಲದ ದೈವಗಳು
416-417 ನಾರಳ್ತಾಯ ಮತ್ತು ಭೂತರಾಜ
418 ನಾಲ್ಕೈತಾಯ
419-420 ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ
421-422 ನುರ್ಗಿ‌ಮದಿಮಾಲ್ ಮತ್ತು ದುರ್ಗಿ ಮದಿಮಾಲ್
423-424 ನೆತ್ತರು ಮುಗುಳಿ ಮತ್ತು ಭೈರವ
425 ನೇರಳತ್ತಾಯ
426 -428 ನೈದಾಲ ಪಾಂಡಿ ,ಪೂವತ್ತಿಮಾರ್ ಮತ್ತು ಮಹೇಶ್ವರನ್ ದೈವಗಳು
429 ಪಟ್ಟಾರ್ ತೆಯ್ಯಂ
430 ಪಟ್ಟೋರಿತ್ತಾಯ
431 ಪಡೆ ಬೀರ ಕಣ್ಣಂಡ ದೊಡ್ಡಯ್ಯ
432-433 ಪಡ್ಕಂತಾಯ ಮತ್ತು ಗೆಂಡಕೇತ್ರಾಯ
434 ಪತ್ತೊಕ್ಕೆಲು ಜನನಂದ ದೈವ
435-436:ಪನಯಾರ್ ಮತ್ತು ಸಂಪ್ರದಾಯ ದೈವ
437:ಪಯ್ಯ ಬೈದ್ಯ
438-443’ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ನ ಮತ್ತು ಪರಿವಾರ
444-445 ಪರವ ಮತ್ತು ಪರಿವಾರ ನಾಯಕ
446 ಪಂಜಿ ಭೂತ
447 -462 ಪಂಜುರ್ಲಿ ಮತ್ತು ಸೇರಿಗೆ ದೈವಗಳು
ಅಂಗಣತ್ತಾಯ ಪಂಜುರ್ಲಿ ಅಟ್ಟೊಡಾಯೆ ಪಂಜುರ್ಲಿ
ಅಣ್ಣಪ್ಪ ಪಂಜುರ್ಲಿ ಅಲೇರ ಪಂಜುರ್ಲಿ‌
ಉಂರ್ದರ ಪಂಜುರ್ಲು ,ಒರಿ ಮರ್ಲೆ ಪಂಜುರ್ಲಿ
ಕಟ್ಟದಲ್ತಾಯ ಪಂಜುರ್ಲಿ ,ಕೆಂಪರ್ನ ಪಂಜುರ್ಲಿ ‌,ಕುಪ್ಪೆ ಪಂಜುರ್ಲಿ,ಕುಪ್ಪೆಟ್ಟು ಪಂಜುರ್ಲಿ
ಗಣಾಮಣಿ ಪಂಜುರ್ಲಿ,ಜುಂಬುರ್ಲಿ ,ತೆಲ್ಲಾರ್ ಪಂಜುರ್ಲಿ ದಾಸಪ್ಪ ಪಂಜುರ್ಲಿ
ದೆಂದೂರ ಪಂಜುರ್ಲಿ
ದೇವರ ಪೂಜಾರಿ ಪಂಜುರ್ಲಿ
ಪಂಜಣತ್ತಾಯ ಪಂಜುರ್ಲಿ‌
ಬಗ್ಗು ಪಂಜುರ್ಲಿ,
ಬಗ್ಗು ಮೊಯ್ಲಿದಿ
ವರ್ಣಾರ ಪಂಜುರ್ಲಿ
ಸೇಮಿಕಲ್ಲ ಪಂಜುರ್ಲಿ
468 ಪಾಣರಾಟ
469 ಪಿಲಿ ಭೂತ
470 -471 ಪುದರ್ ಚಿನ್ನ ಬಂಟ ಮತ್ತು ಪಿಲೆ ಪೆಲತ್ತಿ ದೈವಗಳು
472 ಪುದ ಮತ್ತು ಪೋತಾಳ
473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು
491-500ತುಳುನಾಡಿನ ಪುರುಷ ಭೂತಗಳು
501 ಪುಲಂದಾಯ ಬಂಟ
502 ಪುಲಿಮರಂಞ ತೊಂಡನ್
503 -510 ಪುಲಿಯೂರ್ ಕಾಳಿ ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು
511 ಪೆರಿಯಾಟ್ ಕಂಡನ್
512 ಪೆರುಂಬಳಯಚ್ಚನ್
513 ಪೊಟ್ಟನ್
514 520 ಪೊನ್ನಂಗಾಲತಮ್ಮೆ ಮತ್ತು ಆರು ಸಹೋದರರು
521 ಪೊನ್ವಾನ್ ತೊಂಡಚ್ಚನ್
522-525:ಪೊಸಮಹರಾಯ ,ಉಳ್ಳಾಲ್ತಿಯರುಮತ್ತು ಮಾಡ್ಲಾಯಿ
526 -536 ಪೋಲೀಸ್, ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ, ಸೇನವ ದೈವಗಳು
537 ಪೋಲೀಸ್ ತೆಯ್ಯಂ
538-539 ಬಚ್ಚನಾಯಕ ಮತ್ತು ಮಂಞಣ ನಾಯಕ‌
540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು
545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ
549 ಬಲ್ಲ ಮಂಜತ್ತಾಯ
550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು
556 ಬಲೀಂದ್ರ
557 ಬಸ್ತಿನಾಯಕ
558 ಬಂಕಿ ನಾಯ್ಕ
559-562 ಬಂಟಜಾವದೆ ಮತ್ತು ಉಳ್ಳಾಲ್ತಿ ಪಡಿಕಲ್ಲಾಯ
562 ಬಾಕುಡತಿ
563 ಬಾಲೆ ಕನ್ಯಾಪು
564 -605 ಬ್ರಾಹ್ಮಣ ಮೂಲದ ದೈವಗಳು
606 ಬಿರ್ಮಣಾಚಾರಿ
607 -608 ಬಿಲ್ಲಾರ ಬಿಲ್ಲಾರ್ತಿ ದೈವಗಳು
609 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ
610 ಬೀರ್ನಾಚಾರಿ
611-613 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು
614-616:ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು
617-618 ಬೆಲೆಟಂಗರಜ್ಜ ಮತ್ತು ತಂಗಡಿ
619-620 ಬೇಡವ ಮತ್ತು ಬೇಟೆಗಾರ ದೈವಗಳು
621 ಬೊಟ್ಟಿ ಭೂತ
622 -625:ಬೋವ ದೈವಗಳು .
626 ಬೈನಾಟಿ
627 ಬೈಸು ನಾಯಕ
628-690 ಭಗವತಿ ದೈವಗಳು
692-694 ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ
695 – 696 ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ
697-698 ಭಂಡಾರಿ ಮತ್ತು ಪಿಲಡ್ಕತ್ತಾಯ‌
699 ಮಡಿಕತ್ತಾಯ
700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು
702-703′ ಮದಂಗಲ್ಲಾಯ ಕಡಂಗಲ್ಲಾಯ
704-705 ಮದಿಮಾಯ ಮದಿಮಾಲ್
706ಮನಕ್ಕಡನ್ ಗುರುಕ್ಕಳ್
707 ಮನಕ್ಕೊಟ್ಟ ಅಮ್ಮ
708- 726 ಮನ್ಸರ ದೈವಗಳು
717 ಮರಾಂಗಣೆ
718;ಮರುತಿಯೋಡನ್ ಕುರಿಕ್ಕಳ್
719-720 ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು
721 ಮಲರಾಯ
722 ಮಲೆಕುಡಿಯರ ಅಯ್ಯಪ್ಪ
723-726: ಮಲೆ ತಮ್ಮಚ್ಚ ಮತ್ತು ಪರಿವಾರ
727-730 ಮಲೆರಾಯ ಮತ್ತು ಪರಿವಾರ
731 ಮಲೆಸಾವಿರ ದೈವ
732-733:ಮಂಗಳೆರ್ ಮತ್ತು ಗುರು ಮಂಗೞೆರ್
734 -736:ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು
737 ಮಂದ್ರಾಯ
738-739 ಮಹಾಕಾಳಿ ಮತ್ತು ಮಾಂಕಾಳಿ ದೈವಗಳು
740-745 ಮಾಯಂದಾಲ್ ಮತ್ತು ಪರಿವಾರ
746-747 ಮಾಯೊಲು ಮಾಯೊಲಜ್ಜಿ.
748-760 ಮಾರಿ ಭೂತಗಳು
761 -763 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು‌
764 ಮಾಸ್ತಿಯಮ್ಮ
765-766 ಮಿತ್ತೂರು ನಾಯರ್ ದೈವಗಳು

768-782 ಮುಗೇರ ದೈವಗಳು
783 ಮುಡದೇರ್ ಕಾಳ ಭೈರವ
784-786 ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ
787 ಮುತ್ತು ಮಾರಿಯಮ್ಮ
788 ಮುನಿಸ್ವಾಮಿ ದೈವ
789 ಮುವ್ವೆ ಮೂವ,ಮೂವಿಗೆ ವಾತೆ
790 – 816ಮುಸ್ಲಿಂ ಮೂಲದ ದೈವಗಳು
817 ಮೂಜಿಲ್ನಾಯ
818-819 ಮೂಡೊಟ್ನಾರ್,ಪಡುವೆಟ್ನಾರ್
820 ಮೂರಿಲು
821 ಮೂರ್ತಿಲ್ಲಾಯ
822- 900 ಮೂಲ ಪುರುಷ ದೈವಗಳು
901 ಮೆಕ್ಕೆ ಕಟ್ಟಿನ ಉರುಗಳು
902-903 ಮೇರ ಮೇತಿಯರು
904 ಮೇಲಂಟಾಯ
905 ಮೈಯೊಂದಿ
906 ಮೈಸಂದಾಯ
907 ಮೋಂದಿ ಕೋಲ‌
908 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ ಯಕುಮ ಕೋಲ‌
909 -910 ರಕ್ತೇಶ್ವರಿ ಮತ್ತು ಬವನೊ
911 ರಾಜನ್ ದೈವಗಳು
912 -914 ವಣ್ಣಾತನ್ ವಯನಾಡು ಕುಲವನ್,ಕಣ್ಣನ್
915 ವಡ್ಡಮರಾಯ
916 ವಿದೇಶೀ ಕಾಫ್ರೀ ದೈವಗಳು
917 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್
919 – 920 ವೀರಭದ್ರ/ ವೈರಜಾತ್,ವೀರನ್
921-924 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್
925 ವೆಳ್ಳು ಕುರಿಕ್ಕಳ್
926 ವೇಟಕ್ಕೊರುಮಗನ್
927 ವೈದ್ಯಾಚಾರ್ಯ/ ವೈದ್ಯರಾಜನ್
928 ಶಗ್ರಿತ್ತಾಯ ದೈವ
929 ಶಂಕರ ಬಡವಣ
930 -932 ಶಾಸ್ತಾವು,ಕರಿ ಭೂತ,ಕೋಮಾಳಿ
933 ಶಿರಾಡಿ ಭೂತ.
934 ಶಿವರಾಯ
935 ಶ್ರೀಮಂತಿ ದೈವ
936-937 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ
938 -942 ಬಾಕುಡರ ಸರ್ಪಕೋಲದ ದೈವಗಳು
943 ಸರ್ಪಂಕಳಿ
944 ಸರ್ಪಂತುಳ್ಳಲ್
945 ಸಂನ್ಯಾಸಿ ಮಂತ್ರ ದೇವತೆ
946 ಸಾದಿಕರಾಯ ಮತ್ತು ಹಾದಿಕಾರಾಯ
947 ಸಾರ ಮಾಂಕಾಳಿ
948 ಸ್ವಾಮಿ ದೈವ
949-956 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ
957: ಸುಬ್ಬರಾಯ
958 ಸೋಣದ ಜೋಗಿ
959 ಹನುಮಂತ/ ಸಾರ ಪುಲ್ಲಿದಾರ್ ದೈವ
960 -961ಹಳ್ಳತ್ತಾಯ ಮತ್ತು ಅಲ್ನತ್ತಾಯ
962 ಹಳೆಯಮ್ಮ
963 -973 ಹಾಯ್ಗುಳಿ ಮತ್ತು ಪರಿವಾರ
ಮೂಕ ಹಾಯ್ಗುಳಿ, ಕೆಪ್ಪ ಹಾಯ್ಗುಳಿ, ತಾತ್ರಯ್ಯ, ಅಕ್ಸಾಲಿ, ಮೂಡೂರ್ ಹಾಯ್ಗುಳಿ, ನೆತ್ರ ಹಾಯ್ಗುಳಿ ಇತ್ಯಾದಿ )
974 -995 ಹಿರಿಯಾಯ ದೈವಗಳು
( ಆನೆ ಬೈದ್ಯ,ಸಿದ್ದ ಮರ್ದ ಬೈದ್ಯ,ಬಗ್ಗ ಪೂಜಾರಿ, ನಾಡು ಬೈದ್ಯ, ಬೊಲ್ಲ ಬೈದ್ಯ,ದೇರೆ ಬೈದ್ಯ ,ಚೆನ್ನಪ್ಪ ಪೂಜಾರಿ ,ಸಿದ್ದ ಬೈದ್ಯ,ಕೊರಗ ಬೈದ್ಯ ಇತ್ಯಾದಿ );
996-997 ಹುಲಿ ಮತ್ತು ಹಸರ ತಿಮ್ಮ
998 -1000 ಹೊಸಮ್ಮ, ಹೊಸಳಿಗಮ್ಮ ಮತ್ತು ಕುಲೆ ಮಾಣಿಕೊ
1001 ಹೌಟಲ್ದಾಯ ಮತ್ತು ಮಾಳದ ಕೊರಗ
ಅಧ್ಯಯನಾತ್ಮಕ ಗ್ರಂಥ ಸಂಗ್ರಹ-© ಡಾ.ಲಕ್ಷ್ಮೀ ಜಿ ಪ್ರಸಾದ್
mobile 9480516684

‍ಲೇಖಕರು Admin

October 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: