ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತೋಸ್ಮಿ ಕವಿತೆ – ಮಹಾಯಾನ….

ಗೀತೋಷ್ಮಿ

ಹರಿಯುವುದೆಲ್ಲಿಗೆ ನದಿ
ತನ್ನೊಡಲ ಭಾರವನು ಹೊತ್ತು?
ಇನ್ನೊಮ್ಮೆ ಮರಳಲಾರೆ-
ಎಂಬ ನಿರ್ಲಿಪ್ತಿ
ಅದಕೆ- ಗೊತ್ತು.

ಮರುಕಳಿಸುವುದೆ ನನಗೆ
ಅಸಂಖ್ಯ ಜನ್ಮಗಳ ನೆನಪು:
ಹುಟ್ಟಿದೆಡೆ, ಬಿಟ್ಟ ದಡ,
ಅಳವಟ್ಟ ಪಾತ್ರ?

ಕಡಲ ಸೇರುವುದೊಂದೆ
ಗುರಿಯಾಗಿರಬೇಕೆ?-
ಈ ಮರ್ಮ ತಿಳಿದಿಹುದು
ನದಿಗೆ ಮಾತ್ರ!

‍ಲೇಖಕರು avadhi

21 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading