ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಷಮೆ ಇರಲಿ ಗೆಳತಿ… ಡೆಸ್ಡಮೋನಾ

381743_257914500942333_1356625730_n

ವಸಂತಸೇನೆ

ಕ್ಷಮೆ ಇರಲಿ
ಗೆಳತಿ… ಡೆಸ್ಡಮೋನಾ

ನೀ ಕೊಟ್ಟ ಕರವಸ್ತ್ರವ
ಯಾರಿಗೂ ಕಾಣಬಾರದು
ಸಿಗಬಾರದೆಂದು ಗೋರಿಯೊಳಗೆ
ಹೂತಿಟ್ಟು ಬಚ್ಚಿಟ್ಟ ಗುಟ್ಟೇ
ಗುಟ್ಟನ್ನು ಹುಡುಕುತ್ತ ಹೊರಟಿದೆ

desdamonaಶಪಿಸಿದೆ||
ಅಂದು ನಾ ನಿನಗಿತ್ತ ಪದ್ಯವ
ಎನ್ನೆದುರೇ ನಯವಾಗಿ ಹರಿದು
ತಿಪ್ಪೆಗೆಸದದ್ದಕ್ಕೆ ನಿಂದಿಸಿ
ಪ್ರೀತಿಮರೆತು ಮರೆಯಾದಕ್ಕೆ

ಹುಡುಕಲು ಆಗದೆಇರಲು||
ದಣಿದಿರಲು ಮಣಿದಿರಲು
ಮರದಡಿಯಲಿ ಕುಳಿತಿರಲು
ನನ್ನದೇ ಪದ್ಯದ ಪದಗಳು ಒಂದಾಗಿ
ಎರಡಾಗಿ, ಮೂರಾಗಿ ಉದುರುತಲಿರಲು
ದನಕರು ಧನಿಕರು
ದಾರಿಹೋಕರು
ಒಂದೊಂದನೆ ಆಯುತ್ತಾ
ಬೆರಗು ಗಣ್ಣಿನಲಿ
ತಮ್ಮದೆಂಬಂತೆ ಭ್ರಮಿಸುತ್ತ
ಮೆಲ್ಲುತಿರೆ ಅಗಮನವಾಯಿತು,
ಆಗಂತುಕ ಬಂದವನೇ ಒಂದನ್ನು ಹೆಕ್ಕಿ
ಎಲ್ಲವೂ ಎಲ್ಲಾ ಮರಗಳು
ತನ್ನದೆಂದ
ಹಳೆಯ ಗೆಳತಿಯ ಜರಿದ
ತಬ್ಬಿದ್ದ ಇವಳನ್ನು ಬಳಸಿ ಮುತ್ತಿಟ್ಟ.

ಹಾಡಲಾರದ್ದಕ್ಕೆ ||
ಶೋಕ ಮಿಶ್ರಿತ ಗೀತೆಗಳು
‘ಆ’ ಮರಗಳಾದವು
ಹಕ್ಕಿಗಳು ಹಾಡಲು ಅನುವಾದವು
ಮಳೆ ಅಳಲಾರಂಭಿಸಿತು.

ಪ್ರೇಮ ಬಡತನಕ್ಕೆ||
ಕಾಮ ಮರಣಿಸಿದ
ಪ್ರೇಮಧಮ್ಮಕ್ಕೆ ಶರಣು
ಸೂರ್ಯ ಚಂದ್ರನಿಗೆ
ಚಂದ್ರ ಸೂರ್ಯನಿಗೆ
ನೋವು ಅಕ್ಷರಕ್ಕೆ
ಭಾನು ಭುವಿ
ಹೂ ಮುಳ್ಳು…
ಇಲ್ಲಿ ರಾತ್ರಿ ತಿಂಗಳ
ಬೆಳಕಿಗೂ ನೆರಳಿದೆ
ಬರಿಯ ತಂಪು ಬದುಕಲ್ಲ.
ತಿಳಿದಿದೆ
ಉಬ್ಬಿದ್ದ ಎದೆಯಂದು ಮಾಗಿರಲಿಲ್ಲ
ಹದವಾಗಿ ಬೆಂದರೂ ಈಗ
ಚಿಗುರು ಮೀಸೆ ಇಲ್ಲ.

ಹೀಗೆ ಹೇಳುವುದಕ್ಕೆ ||
ನಶಿಸದ ಪ್ರೀತಿಕೊಟ್ಟವಳಿಗೆ
ಬಾಳ್ವೆಯ ಬೆಳಕು ಮೂಡಿಸಿದವಳಿಗೆ
ಯಾವ ಪ್ರಶ್ನೆಯೂ ಇರಲಿಲ್ಲವೆ…?
ಅಥವಾ ಉತ್ತರವೇ ಬೇಕಿರಲಿಲ್ಲವೇ?
ಪ್ರಶ್ನೆಯ ಚೂರಿಗಳು
ನನ್ನಾತ್ಮವ ಇರಿಯುತಿರೆ
ಸಾಯುವಷ್ಟು ಸಂತೋಷವಾಗಿದೆ.

ಇನ್ನು ನಡೆಯಲಾರೆ||
ಹಾದಿ ಕಡಿಮೆಯಾದರೂ
ನಡೆದೆ ನೀ ದೂರಾತಿದೂರ
ಬರಲಾರೆ ಅಲ್ಲಿಗೆ
ನಾ…
ನೀ…
ಇಲ್ಲಿಗೆ
ಇಲ್ಲಿಯೇ ಕಾಯುತ್ತೀನಾದರೂ
ನೀನು ಬರುತ್ತೀ … ಅಂದಲ್ಲ
ಬರುವ ಬಹಳ ಮಂದಿಗೆ
ನಿನ್ನೊಲುಮೆಯ ದಾರಿ ತೋರಿ
ಬಯಲಾಗಲು

ಇನ್ನು ನುಡಿಯಲೂ ಆರೆ||
ಮೂರ್ಕತೆಯನ್ನು ಸಾಕ್ಷಾತ್ಕಾರಗೊಳಿಸಿದ
ನೀನು ಚಿರ ಪ್ರೇಮಿಯಾದೆ
ಇನ್ನು …..
ನನಗೆ ಚಿರನಿದ್ರೆಯೂ ಬೇಡವೇ?

‍ಲೇಖಕರು admin

23 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading