ಪುಸ್ತಕವನ್ನು ಇನ್ನಿಲ್ಲದಂತೆ ಪ್ರೀತಿಸುವ ಜಯಲಕ್ಷ್ಮಿ ಪಾಟೀಲ್ ಗೆ

jayalakshmi patilಚಂಪಾ ಹೆಸರು ಕೇಳಿದಾಗಲೆಲ್ಲಾ ನಮಗೆ ತಕ್ಷಣ ನೆನಪಿಗೆ ಬರುವ ಹೆಸರು ಜಯಲಕ್ಷ್ಮಿ ಪಾಟೀಲ್. ಇದಕ್ಕೆ ಕಾರಣವಿದೆ. ಚಂಪಾ ಅವರಿಗೆ ತುಂಬಾ ಹೆಸರು ತಂದು ಕೊಟ್ಟ ನಾಟಕ ‘ಅಪ್ಪ’. ಅಪ್ಪ ಇಲ್ಲದ ಅಪ್ಪ ಕಥೆ ಅದು. ಅದರಲ್ಲಿ ಅಮ್ಮ, ಮಗ ಇಬ್ಬರೇ. ಆ ಅಮ್ಮನಾಗಿ ಜಯಲಕ್ಷ್ಮಿ ಪಾಟೀಲ್ ಆ ನಾಟಕವನ್ನು ಗೆಲ್ಲಿಸಿಕೊಟ್ಟದ್ದಿದೆಯಲ್ಲಾ.. ಓಹ್! ..

ಜಯಲಕ್ಷ್ಮಿ ಪಾಟೀಲ್ ರಂಗಭೂಮಿ, ಕಿರುತೆರೆ ಜೊತೆ ಸದಾ ಗೆಳೆತನ ಇಟ್ಟುಕೊಂಡವರು. ರಂಗಭೂಮಿಯಿಂದ ಎದ್ದು ಬಂದ ಕಾರಣಕ್ಕೇ ಇರಬೇಕು, ಸದಾ ಚಟುವಟಿಕೆ, ಅರಳು ಹುರಿದಂತ ಮಾತು, ಬತ್ತದ ಉತ್ಸಾಹ. ಈ ಜಯಲಕ್ಷ್ಮಿ ಪಾಟೀಲ್ ತಮ್ಮೊಡನೆ ಅಂದಿನಿಂದಲೂ ಕೈ ಹಿಡಿದು ನಡೆಸಿಕೊಂಡು ಬಂದಿರುವುದು ಅವರ ಪುಸ್ತಕ ಪ್ರೀತಿಯನ್ನು. ‘ಈ ಹೊತ್ತಿಗೆ’ ಪುಟ್ಟದಾಗಿ ಆರಂಭವಾಗಿ ದೊಡ್ಡ ಮಟ್ಟದಲ್ಲಿ ಕಮ್ಮಟ ನಡೆಸುವಷ್ಟು ಬೆಳೆದು ನಿಂತಿದೆ. ಜಯಲಕ್ಷ್ಮಿ ಪಾಟೀಲ್ ಮಹಿಳಾ ಪರ ಸಂಗತಿಗಳ ಪರವಾಗಿ ಸದಾ ನಿಲ್ಲುವವರು. ಅವಧಿ ಹೊರ ತಂದ ಗುಚ್ಛ ‘ಹೇಳತೇವ ಕೇಳ’ ಸಂಪಾದಕರಲ್ಲೊಬ್ಬರು.
ಆ ಪುಸ್ತಕ ಪ್ರೀತಿಯ ಜಯಲಕ್ಷ್ಮಿ ಪಾಟೀಲ್ ಅವರಿಗೆ ಈಗ ಈ ಪುಸ್ತಕ ಗುಚ್ಛ,  ಅವರದೇ ಖುಷಿಯ ಮಾತಿನೊಂದಿಗೆ..

ee hottigeಜನರ ಕಲ್ಪನೆ ಸುಳ್ಳೂರೀ, ವಿಮರ್ಶಾ ಕಮ್ಮಟ ಖಂಡಿತ ಬೋರ್ ಅಲ್ಲ!

ಇವತ್ತಿನ ಕಮ್ಮಟದಲ್ಲಿ ನಾಲ್ಕೂ ಜನ ಪ್ರಾಜ್ಞರ ಮಾತುಗಳನ್ನು ಕೇಳಿದ ಮೇಲೆ, ಸಾಹಿತ್ಯ, ಕನ್ನಡ ಸಾಹಿತ್ಯದ ಆಗಾಧತೆ ಕಂಡು, ಈ ವಿಮರ್ಶಾ ಕಮ್ಮಟ ಏರ್ಪಡಿಸಿದ್ದಕ್ಕೆ ಒದಗಿದ ಧನ್ಯತೆ ಇದೆಯಲ್ಲ, ಅದನ್ನಳೆಯಲು ಮಾಪನವಿಲ್ಲ!

ನನ್ನ ಈ ಹುಂಬುತನಕ್ಕೆ ಜೊತೆಯಾದ ವೀರೇಂದ್ರ, ತೇಜು, ‘ಇಲ್ಲಿವರೆಗೂ ಯಾರೂ ವಿಮರ್ಶಾ ಕಮ್ಮಟ ಮಾಡುವುದಕ್ಕೆ ಧೈರ್ಯ ಮಾಡಿಲ್ಲ ಯೋಚಿಸಿ ನೋಡಿ’ ಎನ್ನುತ್ತಲೇ ಇಡೀ ಕಮ್ಮಟದ ನಿರ್ದೇಶನ ಹೊತ್ತ ದಿವಾಕರ್ ಸರ್, ಜಯಶ್ರೀ, ಕೇಳಿದ ಕೂಡಲೇ ‘ಕಪ್ಪಣ್ಣ ಅಂಗಳ’ವನ್ನು ಕೊಡಮಾಡಿದ್ದಲ್ಲದೇ ಎಲ್ಲ ವ್ಯವಸ್ಥೆಗಳನ್ನು ಮಾಡಿಸಿ ಒಂದು ದಿನದ ಊಟದ ಖರ್ಚನ್ನೂ ಹಂಚಿಕೊಂಡ ಕಪ್ಪಣ್ಣ ಸರ್, ದೂರದ ಮುಂಬೈಯಲ್ಲಿದ್ದೂ ಈ ಗೆಳತಿಯ ಹುಂಬತನಕ್ಕೆ ಇಂಬೆನ್ನುವಂತೆ ೩೦೦೦ ರೂಪಾಯಿಗಳನ್ನು ನನ್ನ ಬ್ಯಾಂಕ್ ಅಕೌಂಟಿಗೆ ಹಾಕಿದ ಅಕ್ಷತಾ (ಶ್ಶ್! ಬಾಯ್ ಬಿಟ್ರೆ ಜೋಕೆ ಅನ್ನೊ ಧಮ್ಕಿ ಇದೆ ನನಗೆ ಈ ದೇಣಿಗೆ ಬಗ್ಗೆ. ಸೋ ಪ್ಲೀಸ್ ನಿಮಗೆ ಹೇಳಿದೆ ಅಂತ ಯಾರೂ ಅಕ್ಷತಾಗೆ ಹೇಳಬೇಡಿ!),

ನಮ್ಮನಿಯವ್ರು, ವಿನಯ್, ಇವತ್ತು ಕೇಳಿದ್ದೆಲ್ಲದಕ್ಕೂ ಸಾಥ್ ನೀಡಿದ ಅಶೋಕ್, ಮುರಳಿ ಮತ್ತವನ ಸ್ನೇಹಿತ, ರಾಮ್, ಅನಿಲ್ ಮತ್ತು ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ಬರಲೊಪ್ಪಿದ, ಖ್ಯಾತ ವಿಮರ್ಶಕರುಗಳಾದ ಸಿ.ಎನ್‍.ಆರ್ ಸರ್, ಜಿ.ಬಿ ಹರೀಶ್, ಎಸ್.ಆರ್ ವಿಜಯಶಂಕರ್, ಕೆ.ಎಸ್.ಮಧುಸುದನ, ಬಿ.ಎನ್.ಸುಮಿತ್ರಾಬಾಯಿ, ಕೆ.ವೈ.ನಾರಾಯಣಸ್ವಾಮಿ, ಓ.ಎಲ್.ನಾಗಭೂಷಣಸ್ವಾಮಿ ಅವರುಗಳು ಮತ್ತು ಊರು, ಪರವೂರುಗಳಿಂದ ಬಂದು ಕಮ್ಮಟದಲ್ಲಿ ಭಾಗವಹಿಸಿದ ಎಲ್ಲ ಸಾಹಿತ್ಯಾಸಕ್ತರಿಗೆ ನನ್ನ ತುಂಬು ಹೃದಯದ ವಂದನೆಗಳು.

{ಜಯಲಕ್ಷ್ಮಿ ಪಾಟೀಲ್ ಚಿತ್ರಗಳು: ರೋಹಿತ್ ಹಾಗೂ ಜಯಶ್ರೀ ದೇಶಪಾಂಡೆ }

books2

books16

books15

books5

books9

books18

books4

books3

 

books14

books11

 

 

books6

books12

‍ಲೇಖಕರು admin

November 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Ahalya Ballal

    ಜೆಪಿಯ ಅದಮ್ಯ ಉತ್ಸಾಹ ಮತ್ತು ತಾದಾತ್ಮ್ಯದಿಂದ ನಾವು ಎಷ್ಟು ಹಾಳೆಗಳನ್ನು ತಗೋಬಹುದು ಅಂತ ಲೆಕ್ಕ ಮಾಡ್ತಾ ಹೋದೆ……
    …..ಇನ್ನೂ ಸಾಗಿದೆ ನನ್ನ ಕೆಲಸ.
    ಖುಶಿ. ಸಂಭ್ರಮ!!

    ಅಹಲ್ಯಾ

    ಪ್ರತಿಕ್ರಿಯೆ
    • ಜಯಲಕ್ಷ್ಮೀ ಪಾಟೀಲ್

      ಅಹಲ್ಯ… ನಾನಿನ್ನೂ ಊದಿದ್ರೆ ಅಷ್ಟೇ ಆಮೇಲೆ!
      ಥ್ಯಾಂಕ್ಸು. 🙂

      ಪ್ರತಿಕ್ರಿಯೆ
  2. ತಲಕಾಡು ಶ್ರೀನಿಧಿ

    ಈ ಉತ್ಸಾಹಿ ಪ್ರತಿಭಾವಂತ ಸಾಮಾಜಿಕ ಕಳಕಳಿಯ ಜೇಪಿ ಅವರ ಪರಿಚಯ ಸ್ನೇಹ ನನಗೆ ಹೆಮ್ಮೆ ತರುವ ಅನುಭವ.ಅವರ ಎಲ್ಲ ಪ್ರಯತ್ನಗಳು ಪ್ರಯೋಗಗಳು ಈ ಕಮ್ಮಟದಷ್ಟೇ ಅಥವಾ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಲು ಎಂದು ಪ್ರೀತಿಯಿಂದ ಹಾರೈಸುತ್ತೇನೆ.

    ಪ್ರತಿಕ್ರಿಯೆ
    • ಜಯಲಕ್ಷ್ಮೀ ಪಾಟೀಲ್

      ಥ್ಯಾಂಕ್ಸ್ ಶ್ರೀನಿಧಿ ಸರ್. 🙂

      ಪ್ರತಿಕ್ರಿಯೆ
  3. ಲಲಿತಾ ಸಿದ್ಧಬಸವಯ್ಯ

    ಓಹ್ ಸೂಪರ್
    ಜಯಲಕ್ಷ್ಮಿಯವರ ಸಾಹಸಕ್ಕೆ ಸೊಗಸಾದ ಚಿತ್ರಗಳು.

    ಪ್ರತಿಕ್ರಿಯೆ
    • Anonymous

      ನಿಜಕ್ಕೂ ಸಾಹಸ ಮಾಡಿದ ಸಾರ್ಥಕತೆ ಮನಸು ತುಂಬಿದ್ದು ಸುಳ್ಳಲ್ಲ ಮೇಡಂ. ಥ್ಯಾಂಕ್ಸ್.

      ಪ್ರತಿಕ್ರಿಯೆ
    • ಜಯಲಕ್ಷ್ಮೀ ಪಾಟೀಲ್

      ಸಾಹಸ! ನಿಜಕ್ಕೂ ಅಂಥದ್ದೊಂದು ಸಾರ್ಥಕತೆಯಿಂದ ಮನಸು ತುಂಬಿದೆ ಮೇಡಂ. 🙂

      ಪ್ರತಿಕ್ರಿಯೆ
  4. ಸುಧಾ ಚಿದಾನಂದಗೌಡ

    ಓ…ತುಂಬ ಖುಷಿಯಾಯಿತು ಜೆಪಿ, ನಿಮ್ಮ ಬಗ್ಗೆ ಓದಿ.
    ಈ ಹೊತ್ತಿಗೆ ಆರಂಭವಾದಾಗಿನಿಂದ ಒಂದೆರಡು ಬಾರಿ ಕರೆದಿದ್ದಿರಿ.
    ಬೇಸರವಿದೆ, ನಂಗೆ ಇದುವರೆಗೂ ಬರಲಾಗಿಲ್ಲ.
    ಮತ್ತಷ್ಟು ಕಮ್ಮಟಗಳು ನಿಮ್ಮಿಂದ ಏರ್ಪಡುವಂತಾಗಲಿ.
    ಅಭಿನಂದೆನೆ.

    ಪ್ರತಿಕ್ರಿಯೆ
    • ಜಯಲಕ್ಷ್ಮೀ ಪಾಟೀಲ್

      ಥ್ಯಾಂಕ್ಸ್ ಸುಧಾ. ಬೆಂಗಳೂರಿಗೆ ಇನ್ನೊಮ್ಮೆ ಬಂದಾಗ ಈ ಹೊತ್ತಿಗೆಗೆ ಬನ್ನಿ, ಇಲ್ಲವೇ ಮುಂದಿನ ಕಮ್ಮಟದ ವೇಳೆಗಾದ್ರೂ ಬನ್ನಿ ಪ್ಲೀಸ್. 🙂

      ಪ್ರತಿಕ್ರಿಯೆ
  5. umavallish

    ಹೊಗಳಿಕೆ ಅಂದರೆ ಕಡಿಮೆ, ಅಭಿಮಾನದ ಗೌರವದ ನಮನ. ಇಂತಹ ಅಸಂಖ್ಯ, ಅನಂತ ಅಪೂರ್ವ ಸಾಧನೆ ನಿಮ್ಮದಾಗಲಿ ಜಯಲಕ್ಷ್ಮಿ ಅವರೇ ಸಾದಿಸುವ ನಿಮ್ಮ ”ಉತ್ಸಾಹದ ಕಾರಂಜಿ” ಸದಾ ಚಿಮ್ಮುತ್ತಲೆ ಇರಲಿ

    ಪ್ರತಿಕ್ರಿಯೆ
    • ಜಯಲಕ್ಷ್ಮೀ ಪಾಟೀಲ್

      ಧನ್ಯವಾದಗಳು ಉಮಾ ಅವರೇ. ನಿಮ್ಮ ಹಾರೈಕೆ ನನ್ನ ಪಾಲಿನ ನೆಲದ ಗಟ್ಟಿ ಬೇರಾಗಲಿ. 🙂

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: