ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊನೆಯಿರದ ಪ್ರವಾಹದಲ್ಲೊಂದು ನಡುಗಡ್ಡೆ ಇದು

೩೧ ಮಾರ್ಚ್ ೨೦೧೨ಕ್ಕೆ ಮುಚ್ಚಲ್ಪಡುವ ಮಂಗಳೂರಿನ ಅತ್ರಿ ಬುಕ್ ಸೆಂಟರ್ ಕುರಿತು ರಾಧೇಶ್ ತೋಳ್ಪಾಡಿ ಎಸ್, ಉಪಾಧ್ಯಾಯ ಬರೆದ ಕವನ

 

ಯಾಕತ್ರಿ ಅನುವವರಿಗೇನು ಹೇಳುವುದು?

– ರಾಧೇಶ್ ತೋಳ್ಪಾಡಿ ಎಸ್, ಉಪಾಧ್ಯಾಯ

ಅತ್ರಿ ಬುಕ್ ಸೆ೦ಟರ್   ಕೊನೆಯಿರದ ಪ್ರವಾಹದಲ್ಲೊಂದು ನಡುಗಡ್ಡೆ ಇದು ಆಲಿಬಾಬನ ಗುಹೆ ತೆರಕೊಂಡಾಗ ಆ ಹುಡುಗ ಚಪ್ಪಾಳೆ ತಟ್ಟಿ ಕೇಕೆ ಹಾಕಿದ್ದು ಇಲ್ಲೇ   ಇದರ ಕಿರುದಾರಿ, ಓಣಿಗಳಲ್ಲೇ ಗೋಚರಿಸಿದ್ದು ಅಲ್ಲಮನ ಬಯಲು, ಎಷ್ಟೊಂದು ಮುಗಿಲು, ನಕ್ಶತ್ರ ಚಂದ್ರಲೋಕದ ತಾಯಿ ಬೆಳದಿಂಗಳು. ನಾಯಿಗುತ್ತಿ, ಸರಸೋತಿ, ಪಾರೋತಿಯರೆಲ್ಲ ಸಿಕ್ಕದ್ದು ಇಲ್ಲೇ. ಇಲ್ಲೇ ಆ ಮಹಾವಟವೃಕ್ಷ, ಅದರ ಹರೆಯದಲ್ಲಿ ಗೋವಿಂದ ಕೊಳಲನೂದುತ್ತ, ಕೇಳಬಹುದಾಗಿತ್ತು ಬಗೆಬಗೆಯ ಹಕ್ಕಿಗಳ ಒಡಲಿನುಲಿ, ನಾಡಿಮಿಡಿತ.     ಯಾಕತ್ರಿ ಅನುವವರಿಗೇನು ಹೇಳುವುದು? ಉಪಮೆ-ಅಲಂಕಾರ ಬಿಟ್ಟು ಹೇಳುವುದಾದರೆ ಮಳೆ ಬಂದಾಗ ನೀಡಿದ್ದು ಇದೇ ತಲೆಯ ಮೇಲೊಂದು ಸೂರು. ಮೆಟ್ಟಲುಗಳನ್ನೇರಿ ಹೋದವರಿಗಂತೂ ಅದು ಅವರದೇ ಬಾನಂಗಳ! ಚತುರ್ವಿಧದ ರಸ್ತೆಗಳೂ ಸಂಧಿಸುವ ಒಂದು ಸಾರ್ವಜನಿಕ ಸ್ಥಳ ಪ್ರತಿಯೊಬ್ಬರ ಖಾಸಗಿ ಭಾಗವಾದದ್ದೊಂದು ಪವಾಡ!     ಏನು ಬೇಸರವೋ ಈ ನಡುಗಡ್ಡೆಗೆ, ನೀರಿಕಿಳಿದವನೆ ಬಲ್ಲ! ಅಮುಕಿ ಹಿಡಿದವೆ ಬಾಯಿಯೇ ದೇಹವಾಗಿರುವ ಮಕರಾಕ್ಷ ಬಳಗ? ಎಲ್ಲಿ ಹುಡುಕುವುದಿನ್ನೆಲ್ಲಿ ತಡಕಾಡುವುದು ಆ ಹಸಿರು ಹೊಲ ಬಿದಿರು ಮೆಳೆ ಕೊಳಲ? ತಂತಮ್ಮ ತಾರೆಗಳ ಕೂಡೆ ಪಿಸುನುಡಿಯ ಆಡಗೊಟ್ಟವರ?    ]]>

‍ಲೇಖಕರು G

7 March, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading