’ದಟ್ ಈಸ್ ರವಿಚ೦ದ್ರನ್’ – ವಿನಾಯಕರಾಮ ಕಲಗಾರು

-ವಿನಾಯಕರಾಮ ಕಲಗಾರು

  ನನ್ನ ವೃತ್ತಿ ಬದುಕಿನ ಪತ್ರಿಕೋದ್ಯಮದಲ್ಲಿ ಮಾಡಿದ ಮೊದಲನೇ ಮತ್ತು ಕೊನೆಯ ಘೋರ ತಪ್ಪು ಏನು ಗೊತ್ತಾ? ಪ್ರೀತಿಯ ರವಿ ಸರ್ ಅವರ ಕಾಲು ಎಳೆದಿದ್ದು. ಅದು ಟಾಟಾ ಬಿರ್ಲಾ ಎಂಬ ಸಿನಿಮಾ ಬಿಡುಗಡೆಯಾದ ಸಮಯ. ರವಿಚಂದ್ರನ್ ಇಂಥ ಪಾತ್ರಗಳನ್ನೆಲ್ಲಾ ಯಾಕಾದರೂ ಒಪ್ಪಿಕೊಳ್ಳುತ್ತಾರಪ್ಪಾ ಎಂಬ ನೋವು ವಿಮರ್ಶೆ ಬರೆಯುವಾಗ ನನ್ನ ಕೈಯಿಂದ ಅಂಥದ್ದೊಂದು ತಪ್ಪು ಮಾಡಿಸಿಬಿಟ್ಟಿತ್ತು. ಯಾವ ರವಿಚಂದ್ರನ್ ಸಿನಿಮಾಗಳೆಂದರೆ ಚೆಡ್ಡಿ ಸಿಕ್ಕಿಸಿಕೊಂಡು ಟೆಂಟ್ ಕಡೆಗೆ ಓಡುತ್ತಿದ್ದೆವೋ ಅದೇ ರವಿಚಂದ್ರನ್ನಾ ಇದು ಎನ್ನುವ ಮಟ್ಟಕ್ಕೆ ಟಾಟಾ ಬಿರ್ಲಾ ಸಿನಿಮಾದಲ್ಲಿ ರವಿ ಕಾಣಿಸಿಕೊಂಡಿದ್ದರು. ಸಿನಿಮಾ ನೋಡಿ ಹೊರಬಂದವನೇ ಅದು ಏನು ಅನ್ನಿಸಿತೋ ಸಿನಿಮಾಗೆ ಚೆನ್ನಾಗಿ ಬೈದು ಬರೆದುಬಿಟ್ಟೆ. ರವಿ ಸರ್ ಬಗ್ಗೆ ‘ಕ್ರೇಜಿ ಸ್ಟಾರ್ ಅಲ್ಲ, ಕೇಜಿ ಸ್ಟಾರ್’ ಎಂದು ಗೀಚಿಬಿಟ್ಟೆ… ಅದು ಜನಪ್ರಿಯ ದಿನಪತ್ರಿಕೆಯಲ್ಲಿ ಪ್ರಕಟವಾಗಿಬಿಟ್ಟಿತು… ಅದೇ ಕೊನೆ ನೋಡಿ. ಅಂದಿನಿಂದ ಇಂದಿನವರೆಗೂ ಇಂಥ ಬ್ಯಾಡ್ ಟೇಸ್ಟ್ ಪದಗಳನ್ನು ಬರೆಯುವುದೇ ಇಲ್ಲ ಎಂಬ ನಿರ್ಧಾರಕ್ಕೆ ಬಂದುಬಿಟ್ಟೆ. ಹಾಗೆ ಮಾಡಲು ಕಾರಣವಿತ್ತು. ಅದೇ ವಿಮರ್ಶೆ ಬರೆದ ವಾರದ ಅಂತರದಲ್ಲೇ ರವಿ ಸರ್ ಸಿಕ್ಕಿದ್ದರು. “ಏನಪ್ಪಾ.. ಏನೋ ಬಿಂದಾಸ್ ಆಗಿ ಬರೆದಿದೀಯಂತೆ? ನಾನ್ ಏನೇ ಮಾಡಿದ್ರೂ ಯೋಚ್ನೆ ಮಾಡಿನೇ ಮಾಡೋದಪ್ಪಾ.. ಕಮೀಟ್ ಮೆಂಟ್ಸ್ ಇದ್ದಾಗ ಎಲ್ಲಾ ಥರದ ಪಾತ್ರಾನೂ ಒಪ್ಪಿಕೊಳ್ಳಬೇಕಾಗುತ್ತೆ ಕಣೋ…’ ರವಿ ಸರ್ ನನ್ನ ಮುಂದೆ ನಿಂತು ಅಂದು ಅಷ್ಟು ಹೇಳಿದ್ದೇ ಲಾಸ್ಟು… ರವಿ ಸಾರ್ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಅಲ್ಲಿ ಏನು ನಡೆಯುತ್ತಿತ್ತೋ ಗೊತ್ತಿಲ್ಲ! ಅಂದಿನಿಂದ ಇಂದಿನವರೆಗೂ ರವಿ ಸರ್ ಟಚ್ಚಲ್ಲಿದ್ದಾರೆ. ಅದಕ್ಕೂ ಮುಂಚೆ ಹಠವಾದಿ ಟೈಮಿನಲ್ಲಿ ಪರಿಚಯವಾದ ಅವರ ಆತ್ಮೀಯತೆಯಲ್ಲಿ ಬಿಲ್ಲೆಯಷ್ಟೂ ಬದಲಾವಣೆ ಆಗಿಲ್ಲ. ನನ್ನ ಪರ್ಸನಲ್ ನಂಬರಿನಿಂದ ಮಾಡಿದರೆ ಮಾತ್ರ ರಿಸೀವ್ ಮಾಡುತ್ತಾರೆ. ಬಿಡುವಿದ್ದರೆ ಮಾತನಾಡುತ್ತಾರೆ! ದಟ್ ಈಸ್ ರವಿಚಂದ್ರನ್….  ]]>

‍ಲೇಖಕರು G

March 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: