ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿರುಬೆರಳ ಹಿಡಿದು ನಡೆದ..

ನಾನು ಅವನು

ರೇಖಾ ಭಟ್ ಹೊನ್ನಗದ್ದೆ

ಒಣಗಿ ನಿಂತಿದ್ದೇನೆ ಎಂದೆ
ಆತ ಬಿಸಿಯುಸಿರು ಚೆಲ್ಲಿದ
ಬಯಕೆ ಕೊಂಬೆ ತುಂಬೆಲ್ಲ
ಹೂ ಚಿಗುರು

ತರೆಗೆಲೆಗಳ ಮೇಲೆ ತಿರುಗಾಡಿ
ಬೇಸರ ಎಂದೆ
ಪಾದಗಳಿಗೆ ತುಟಿಯೊತ್ತಿದ
ಕನಸ ಹಾದಿ ತುಂಬಾ ಹಸುರ ಹಾಸು

ನನಗೆ ತೀರದ ದಾಹ ಎಂದೆ
ಆತ ನೆತ್ತಿ ಚುಂಬಿಸಿದ
ಹೃದಯದಲಿ ಹುಟ್ಟಿತೊಂದು
ಸಿಹಿ ಕಡಲು

ನನಗೆ  ಭಯ ಎಂದೆ
ಕಿರುಬೆರಳ ಹಿಡಿದು ನಡೆದ
ಎದುರಾದವರು ಹಾರೈಸಿದರು

ನನಗೆ ಇನ್ನೇನೊ ಬೇಕು ಅಂದೆ
ಆತ ನನ್ನ ನನಗೆ ನೀಡಿದ
ಅಂದಿನಿಂದ ನಾನು
ಅವನಿಗಾಗಿ ಬದುಕಿದೆ

‍ಲೇಖಕರು avadhi

26 April, 2020

3 Comments

  1. Nagraj Harapanahalli.karwar

    ಚೆಂದ ಕವಿತೆ…

  2. ತಮ್ಮಣ್ಣ ಬೀಗಾತ

    ಚನ್ನಾಗಿದೆ

  3. nagaraj hegde

    chennagide….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading