ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿರಣ ವಲ್ಲೇಪುರೆ ಕವಿತೆ – ಮೌನ…

ಕಿರಣ ವಲ್ಲೇಪುರೆ

ಮೌನ ಏನೂ ಇಲ್ಲ; ಅಲ್ಲ
ಮೌನದಲ್ಲಿದೆ ಎಲ್ಲ!

ಪ್ರಶ್ನೆ ಇದೆ, ಉತ್ತರ ಇದೆ
ಸಮಸ್ಯೆ ಇದೆ, ಪರಿಹಾರ ಇದೆ
ಮೌನ ಏನೂ ಇಲ್ಲ; ಅಲ್ಲ
ಮೌನದಲ್ಲಿದೆ ಎಲ್ಲ!

ಆತಂಕ ಇದೆ, ಸ್ಥೈರ್ಯ ಇದೆ
ಸೋಲು ಇದೆ, ಗೆಲುವು ಇದೆ
ಮೌನ ಏನೂ ಇಲ್ಲ; ಅಲ್ಲ
ಮೌನದಲ್ಲಿದೆ ಎಲ್ಲ!

ಪ್ರೀತಿ ಇದೆ, ದ್ವೇಷ ಇದೆ
ದಡ್ಡತನ ಇದೆ, ಜಾಣತನ ಇದೆ
ಮೌನ ಏನೂ ಇಲ್ಲ; ಅಲ್ಲ
ಮೌನದಲ್ಲಿದೆ ಎಲ್ಲ!

ನೋವು ಇದೆ, ನಲಿವು ಇದೆ
ಬದುಕು ಇದೆ, ಸಾವು ಇದೆ
ಮೌನ ಏನೂ ಇಲ್ಲ; ಅಲ್ಲ
ಮೌನದಲ್ಲಿದೆ ಎಲ್ಲ!

ಅರಿತವರಿಗೆ ಇದೆ
ಅರಿಯದವರಿಗೆ ಇಲ್ಲ
ಮೌನ ಏನೂ ಇಲ್ಲ; ಅಲ್ಲ
ಮೌನದಲ್ಲಿದೆ ಎಲ್ಲ!

‍ಲೇಖಕರು Admin

21 January, 2022

1 Comment

  1. Bhimarao

    ಒಂದು ಉತ್ತಮ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading