ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾರುಣ್ಯದ ಒರತೆ…

ಸ್ವಭಾವ ಕೋಳಗುಂದ

ಕೊಟ್ಟಿಗೆಯ ಕರುವಿನ
ಕೂಗು ಕಾರುಣ್ಯದ ಒರತೆ

ಅವ್ವನ ಕೈತುತ್ತು
ಅಪ್ಪನ ಬೆವರ ಹನಿ
ಇವಳ ಅಪ್ಪುಗೆ
ಕಂದನ ಹೊಳೆವ ಕಣ್ಣು
ಕಾರುಣ್ಯದ ನಿಧಿ

ಕುಳ ಬಗೆದ ನೆಲ
ಹದಗೊಂದು ನುಂಗಿದ ಬೀಜ
ಕುಡಿಯೊಡೆದು ಎಲೆ
ತೆನೆದೂಗಿದ ಘಳಿಗೆ
ಕಾರುಣ್ಯದ ಪೈರು

ನೈವೇದ್ಯ ಮಾಡಿದ ಎಡೆ
ಜಂಗಮನ ಹಸಿವ ನೀಗಿದ
ಕ್ಷಣ ಕಾರುಣ್ಯದ ಸಾರ್ಥಕತೆ

ಬೊಚ್ಚು ಬಾಯಿಗಳ
ಕೋಲುಗೈಗಳು
ನಡುಗಿ ಭರವಸೆಯ ಬಿಗಿ
ಹಿಡಿದ ಧೈರ್ಯವೇ ಕಾರುಣ್ಯದ ಬೆಳಕು

ತೊದಲು ಕಂದನ
ಅಂಬೆಗಾಲಿನ ಪಯಣ
ಹೊಸಿಲು ದಾಟಿದ ಪರಿಯೇ
ಕಾರುಣ್ಯದ ನಡಿಗೆ

ಮಲ್ಲಿಗೆ ಮುಡಿದ ಮುಡಿ
ಪರಿಮಳವ ತೇಲಿಸಿ
ಮನೆಯಾಚೆಗೂ ಘಮ ಪಸರಿಸಿದ
ಪರಿಯೇ ಕಾರುಣ್ಯದ ಸಮಾನತೆ

ಕಾಲಗರ್ಭದ ಕಾಳನ ಕಾಲ ತುಳಿತಕ್ಕೆ
ಸಿಕ್ಕವನ ಕಣ್ಣೀರಿಗೆ ಕರಗಿ
ಮಿಡಿವ ಮನವೇ
ಕಾರುಣ್ಯದ ಚೇತನ.

‍ಲೇಖಕರು Admin

29 July, 2022

1 Comment

  1. prathibha nandakumar

    ಕವನ ಚೆನ್ನಾಗಿದೆ. ಒಂದು ಸಲಹೆ. ಮೊದಲಿನಿಂದ ಕಟ್ಟುತ್ತಾ ಬಂದ ಬಂಧ ಕೊನೆಯಲ್ಲಿ ಮತ್ತೆ ಹಿಂತಿರುಗಿ ಸ್ವಲ್ಪ ತಡವರಿಸಿದೆ. ಇವನ್ನು ಮೇಲಕ್ಕೆ ಬದಲಿಸಿದರೆ ಹೇಗೆ?

    ಕೊಟ್ಟಿಗೆಯ ಕರುವಿನ
    ಕೂಗು ಕಾರುಣ್ಯದ ಒರತೆ

    ಅವ್ವನ ಕೈತುತ್ತು
    ಅಪ್ಪನ ಬೆವರ ಹನಿ
    ಇವಳ ಅಪ್ಪುಗೆ
    ಕಂದನ ಹೊಳೆವ ಕಣ್ಣು
    ಕಾರುಣ್ಯದ ನಿಧಿ

    ತೊದಲು ಕಂದನ
    ಅಂಬೆಗಾಲಿನ ಪಯಣ
    ಹೊಸಿಲು ದಾಟಿದ ಪರಿಯೇ
    ಕಾರುಣ್ಯದ ನಡಿಗೆ

    ಮಲ್ಲಿಗೆ ಮುಡಿದ ಮುಡಿ
    ಪರಿಮಳವ ತೇಲಿಸಿ
    ಮನೆಯಾಚೆಗೂ ಘಮ ಪಸರಿಸಿದ
    ಪರಿಯೇ ಕಾರುಣ್ಯದ ಸಮಾನತೆ

    ಕುಳ ಬಗೆದ ನೆಲ
    ಹದಗೊಂದು ನುಂಗಿದ ಬೀಜ
    ಕುಡಿಯೊಡೆದು ಎಲೆ
    ತೆನೆದೂಗಿದ ಘಳಿಗೆ
    ಕಾರುಣ್ಯದ ಪೈರು

    ನೈವೇದ್ಯ ಮಾಡಿದ ಎಡೆ
    ಜಂಗಮನ ಹಸಿವ ನೀಗಿದ
    ಕ್ಷಣ ಕಾರುಣ್ಯದ ಸಾರ್ಥಕತೆ

    ಬೊಚ್ಚು ಬಾಯಿಗಳ
    ಕೋಲುಗೈಗಳು
    ನಡುಗಿ ಭರವಸೆಯ ಬಿಗಿ
    ಹಿಡಿದ ಧೈರ್ಯವೇ ಕಾರುಣ್ಯದ ಬೆಳಕು

    ಕಾಲಗರ್ಭದ ಕಾಳನ ಕಾಲ ತುಳಿತಕ್ಕೆ
    ಸಿಕ್ಕವನ ಕಣ್ಣೀರಿಗೆ ಕರಗಿ
    ಮಿಡಿವ ಮನವೇ
    ಕಾರುಣ್ಯದ ಚೇತನ.

    **

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading