ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಡಲು ತನ್ನೊಳಗೆ ಅಡಗಿರುವ ಮುತ್ತು ಹವಳಗಳನ್ನೆಂದೂ…’ – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ


ಕಡಲ ದಂಡೆಯ ಮೇಲೆ
ತರೇಹವಾರಿ ಆಕಾರದ, ಬಣ್ಣ ಬಣ್ಣದ
ಶಂಕು ಚಿಪ್ಪುಗಳು
ಬೇಪಾರಯಾಗಿ ಬಿದ್ದಿವೆ
ದಂಡೆಯಲ್ಲಿ ನಡೆವವರ
ಕಾಲು ಚುಚ್ಚುತ್ತ, ಕಣ್ಣು ಕಿಸುರುತ್ತ
ಆಸಕ್ತಿ ಮೂಡಿಸುತ್ತ, ಆಸೆ ಕೆರಳಿಸುತ್ತ
 
ಅದೇ ಕಡಲು ತನ್ನೊಳಗೆ ಅಡಗಿರುವ
ಮುತ್ತಿಲು ಹವಳಗಳನ್ನೆಂದೂ
ದಂಡೆಯಲ್ಲಿ ಅನಾಥವಾಗಿ ಸುರಿಯುವುದಿಲ್ಲ
ಸುನಾಮಿ ಅಬ್ಬರಿಸಿದರೂ
ಬಿರುಗಾಳಿ ಅಪ್ಪಳಿಸಿದರೂ
ಕಡಲಿನಾಳದ ಸಂಪತ್ತು ಹೊರಬರುವುದಿಲ್ಲ
 
ನಾವು ಮಾತ್ರ
ದಂಡೆಯಲ್ಲಿ ಬಿದ್ದ ಚಿಪ್ಪುಗಳನ್ನು
ಆಸೆಪಟ್ಟು ಆರಿಸಿಕೊಳ್ಳುತ್ತ
ಮಾಲೆ ಮಾಡುತ್ತ ಸಂಭ್ರಮಿಸುತ್ತಿದ್ದೇವೆ
 

‍ಲೇಖಕರು G

27 November, 2014

3 Comments

  1. CHALAM

    ಅದೇ ಕಡಲು ತನ್ನೊಳಗೆ ಅಡಗಿರುವ
    ಮುತ್ತಿಲು ಹವಳಗಳನ್ನೆಂದೂ
    ದಂಡೆಯಲ್ಲಿ ಅನಾಥವಾಗಿ ಸುರಿಯುವುದಿಲ್ಲ
    NICE…

  2. mmshaik

    uttama kavana…

  3. Renuka

    Mam nimma kavana tumba channagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading