ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಐಯ್ ಜಯ್ಯೋ ಸಾವರೇ…

ಗಿರಿಜಾ ಶಾಸ್ತ್ರಿ

ನಿನ್ನೆ ಬೆಳಗಿನಿಂದ ಈ ಹಾಡು ಕಾಡುತ್ತಿತ್ತು. ಇದನ್ನು ನನ್ನದೇ ಮಾತುಗಳಲ್ಲಿ ಬರೆಯುವ ಮನಸ್ಸಾಯಿತು. (ಐಯ್ ಜಯ್ಯೋ ಸಾವರೇ… ಕುಮಾರಗಂಧರ್ವ ಅವರ ರಚನೆಯನ್ನಲಾದ ಈ ಹಾಡಿನ : ಮೂಲ ಮಧ್ಯಪ್ರದೇಶದ ಜಾನಪದಗೀತೆ ಎನ್ನಲಾಗುತ್ತದೆ. ಹಾಡು: ಪ್ರಭಾ ಅತ್ರೆ, ಮಾಂಜ್ ಖಮಾಚ್ ರಾಗ)

ಅರಬ್ಬಿ ಕಡಲಿನ ಹಿನ್ನೀರು
ಕಿನಾರೆಯ ಬಳಿ
ಎತ್ತರದ ಮಹಡಿಯ ಮೇಲೆ
ನನ್ನ ಮನೆ
ಒಮ್ಮೆ ಬಂದು ಹೋಗು ಸುಮ್ಮನೆ.
ಊರಿಗೆ ಹೊಸಬಳು
ನೀರಿಗೆ ಹೋದಾಗ ನಿನ್ನದೇ ಮಾತು
ಊರೆಲ್ಲ ಪರಿಮಳ ಗಂಧ
ತೇಯುತ್ತೇನೆ ಕೊರಡು ಕಲ್ಲಮೇಲೆ
ನಿನ್ನ ಕಂಡವಳಲ್ಲ
ಕೇಳು ಮಾತುಗಳು
ತೂಗು ಬಿದ್ದಿವೆ ಕಿವಿಗೆ
ಬೆಂಡೋಲೆ ಝುಮಕಿಗಳು

ಒಂದೊಂದೇ ಹೂ ಹೆಕ್ಕಿ
ಮಾಲೆ ಕಟ್ಟುತ್ತಿದ್ದೇನೆ
ಮೈಯ ಮೇಲೆ
ಪರಂಪರೆಯ ಬರೆಗಳು
ಬೊಕ್ಕೆಗಳೆದ್ದಿವೆ
ಕಾಲುಕಟ್ಟಿವೆ ಕಂಬಕ್ಕೆ
ಮನಸ್ಸು ಎಲ್ಲೂ ಇರಬಹುದಲ್ಲ
ಎತ್ತರದ ಮಹಡಿಯ ಮೇಲೆ
ನನ್ನ ಮನೆ
ಒಮ್ಮೆ ಬಂದು ಹೋಗು ಸುಮ್ಮನೆ

‍ಲೇಖಕರು Admin

9 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading