ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂಥಾ ಮೂರ್ಖರಯ್ಯ ನಾವು!

ಸರ್ದಾರ್ ಎಂ ತನಾಝ್

ಎಂಥಾ ಮೂರ್ಖರಯ್ಯ ನಾವು ಇದ್ದ ಗಿಡ ಮರವ ಕಡಿದು
ಕಾಂಕ್ರೀಟ್ ನಾಡ ಕಟ್ಟಿ
ಉಸಿರು ಕಟ್ಟಿಸಿಕೊಂಡೆವಲ್ಲ ನಾವು ನೀವು

ಎಂಥಾ ಮೂರ್ಖರಯ್ಯ ನಾವು
ಕೃಷಿ ಭೂಮಿ ತುಂಡರಿಸಿ
ಸೈಟ್/ಲೇಔಟ್ ಮಾಡಿ
ಅನ್ನದ ಮೇಲೆ ಚಪ್ಪಡಿ ಎಳೆದುಕೊಂಡೆವಲ್ಲ ನಾವು ನೀವು

ಎಂಥಾ ಮೂರ್ಖರಯ್ಯ ನಾವು
ಇರುವುದೊಂದೇ ಕೆಂಪು ರಕ್ತ ನಮ್ಮೆಲ್ಲರಲ್ಲಿ
ಆದರೂ ನೀ ಅವ ಇವ ನೆಂದು ಗುಂಪು ಮಾಡಿ
ವಿಶ್ವಮಾನವತಾವಾದ ಕಳೆದುಕೊಂಡೆವಲ್ಲ ನಾವು ನೀವು

ಎಂಥಾ ಮೂರ್ಖರಯ್ಯ ನಾವು
ಮಾನವ ಜನಾಂಗ ಕಂಡ ಕ್ರೂರ ಪಿಡುಗಿನ
ಈ ಸಂಧಿಗ್ಧ ಪರಿಸ್ಥಿತಿಯಲ್ಲೂ
ಬೆಡ್ ಆಕ್ಸಿಜನ್ ಗಾಗಿ ಪರಿತಪಿಸುತ್ತಿದ್ದೇವಲ್ಲ ನಾವು ನೀವು

ಭೂಲೋಕದಲ್ಲೇ ಜಾಣ ಜೀವಿಗಳಾಗಿರುವ ನಾವು
ಟೊಂಕ ಕಟ್ಟಿ ನಿಲ್ಲದಿರಲು ಪರಿತಪಿಸುತ್ತಿರುವ ಪ್ರತೀ ಜೀವ ಉಳಿಸಲು  
ಮೂರ್ಖರಾಗಿಬಿಡುವೆವು! 

‍ಲೇಖಕರು Admin

12 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading