ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇನ್ನೂ ಎಷ್ಟು ದಿನ?

ಚೈತ್ರಾ ಶಿವಯೋಗಿಮಠ

ತಣ್ಣಗೆ ಸಣ್ಣಗೆ ಇನ್ನೂ
ಹಾಡುತ್ತಲೇ ಇದ್ದಾಳೆ
ಸೋಗೆಯ ನಡುವೆ
ಹಣಿಕುವ ಸೂರ್ಯರಶ್ಮಿಯ ಸ್ನಾನ,
ಇಬ್ಬನಿಯ ಪಾನ.

ಅಲಂಕಾರಕ್ಕೆ ಬೇಕೆಂದಷ್ಟು
ವಿಧ ವಿಧದ ಪುಷ್ಪರಾಶಿ
ಮನರಂಜನೆಗೆ, ಏಳು ಬಣ್ಣದ
ಗರಿಯ ಸೋಗೆಯ ನರ್ತನ
ಯಾರ ಅಡ್ಡಿ ಆತಂಕಗಳಿಲ್ಲ!

ಒಂದು ಸಣ್ಣ ಭಯವ
ಹೊಗಿಸಿ, ಕಂಗಾಲಾಗಿಸಿ
ಕಂಗೆಡಿಸಿ ತಾನು ಮಾತ್ರ
ನಿರಾತಂಕವಾಗಿ ಆನಂದವಾಗಿದ್ದಾಳೆ!

ಎಲ್ಲವೂ ಸರಿಯೇ
ಸದಾ ದುಡಿಯುವವಳಿಗೆ
ಅವಳಿಗಾಗಿ ಕೊಂಚ ಸಮಯ
ಇರುವುದೂ ಸರಿಯೇ!

ಇನ್ನೂ ಅದೆಷ್ಟು ದಿನ ಹೀಗೆ
ಎಲ್ಲರನ್ನು ಕೂಡಿಹಾಕಿ ಅಂಜಿಸುವಳು?
ಅವರದೇನು ಭರವಸೆ? ಇಷ್ಟೆಲ್ಲಾ ಹೆದರಿಸಿ
ಬೆದರಿಸಿದರೂ ಕಾರ್ಯಾವಾಸಿಗಳಂತೆ ಆಣೆ
ಪ್ರಮಾಣ ಹಾಕಿ ಇನ್ನೆಂದೂ
ನೋಯಿಸುವುದಿಲ್ಲವೆಂದರೂ
ನಂಬಿಕೆಯಿಲ್ಲ ಅವಳಿಗೆ.

ಇಷ್ಟೆಲ್ಲ ಆದಮೇಲೆಯಾದರೂ
ಅವಳ ಮೇಲಿನ ದೌರ್ಜನ್ಯ
ನಿಲ್ಲಿಸಿ, ಅವಳನ್ನ ಪ್ರೀತಿಸಿದರೆ
ಬಹುಶಃ ಅವಳು,
ಪ್ರಶಾಂತಳಾಗೆ ಉಳಿಯಬಹುದು
ಪ್ರೀತಿಯನ್ನು ಮಾತ್ರ ತೋರಬಹುದು!

‍ಲೇಖಕರು avadhi

26 April, 2020

8 Comments

  1. T S SHRAVANA KUMARI

    ನಿಜ ಚೈತ್ರಾ, ಪ್ರಕೃತಿಯ ಮೇಲಿನ ದೌರ್ಜನ್ಯ ಕೊನೆಗಾಣಲೇ ಬೇಕು. ಸುಂದರವಾದ ಸಾಲುಗಳಲ್ಲಿ ಹೇಳಿದ್ದೀಯಾ

    • ಚೈತ್ರಾ ಶಿವಯೋಗಿಮಠ

      ಧನ್ಯವಾದಗಳು ಮ್ಯಾಮ್

  2. venki s

    ಓಹ್ !!! ಎಷ್ಟು ಸುಂದರ ಸಾಲುಗಳು, ಚೈತ್ರ ಅವರೇ !!!5

    • ಚೈತ್ರಾ ಶಿವಯೋಗಿಮಠ

      ಧನ್ಯವಾದಗಳು ವೆಂಕಿ ಸರ್

  3. Nagraj Harapanahalli.karwar

    ಭೂಮಿ…ಹೆಣ್ಣು….ಸೋಗೆಯ‌ ನರ್ತನ…
    ಅದ್ಭುತ ಗುಟ್ಟಿನೊಂದಿಗೆ ಕವಿತೆ ಗೆಲ್ಲುತ್ತದೆ…..

    ಲೌಲಿ ಕವಿತೆ…

    • ಚೈತ್ರಾ ಶಿವಯೋಗಿಮಠ

      ಧನ್ಯವಾದಗಳು ಸರ್

  4. Uttam

    Super

    • ಚೈತ್ರಾ ಶಿವಯೋಗಿಮಠ

      ಧನ್ಯವಾದಗಳು ಉತ್ತಮ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading