ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ನೆರಳು ಗೆಳೆಯಾ..

ನಿನ್ನ ನೆರಳು

sarojini_padasalagiಸರೋಜಿನಿ  ಪಡಸಲಗಿ

hands2ಮುಸುಕಿರುವ  ಮಬ್ಬ ಕಳಚಿ ಹಿಂದೆ ನೋಡಲಾರೆಯಾ
ಅಲ್ಲಿಹಳು ಅವಳು ನಿನ್ನ ನೆರಳು  ನೀ ಇದನರಿಯೆಯಾ.

ಉಸಿರು ಉಸಿರಲ್ಲವಳು ನಿನ್ನ ಜೀವದಲ್ಲವಳು

ತೊರೆಯಲಹುದೇ ಆ ಉಸಿರು ಆ ಜೀವ ನೀ ಹೇಳು
ನೋಟ ನೋಟದಲ್ಲವಳು  ಪ್ರತಿ ಮಿಡಿತದಲ್ಲವಳು
ಆ ನೋಟ ಆ ಮಿಡಿತ ಇರಲಹುದೇ ಇರದವಳು
ಇರಲಹುದೇ ಇರದೇ ಅವಳು.

ಸರಿಯುತಿಹ ಸಮಯದ ಪ್ರತಿ ಬಡಿತ ಅವಳು
ಮನದುಂಬಿ ನಿಂದ ನೆನಪ ಬಂಧ ಅವಳು
ನುಡಿಯುತಿಹ ಜೀವರಾಗದ  ಶ್ರುತಿ ತಂತಿ ಅವಳು
ಸ್ವರದುಂಬೆ ಆ ರಾಗ ಅಲ್ಲಿಹಳು ತಿಳಿ ಅವಳು
ಅಲ್ಲಿಹಳು ತಿಳಿ ಅವಳು.

ಇನ್ನೇನು  ಹೇಳಲಿ  ತಿಳಿಯದಲ್ಲ ಗೆಳೆಯಾ
ನಿನ್ನ ಮನದ ನೋವು  ಅವಳೆದೆ ತುಂಬ ಬಲ್ಲೆಯಾ
ಹೃದಯದಾಳದಿಹುದವಳ ಕಂಬನಿ ಮುತ್ತು ಕಾಣೆಯಾ
ನೀನಿಲ್ಲದವಳಿಲ್ಲ ನಿನ್ನ ನೆರಳು  ಗೆಳೆಯಾ
ಅವಳು ನೆರಳು  ಗೆಳೆಯಾ.

‍ಲೇಖಕರು Admin

3 October, 2016

1 Comment

  1. Premalatha

    Splendid. Very nice
    Premalatha B

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading