ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು-ಇವಳು-ನಾನು-ಪ್ರೇಮಿಗಳು..

ಸಿದ್ದು

ಪ್ರೀತಿಗಾಗಿ ನಾ ಕೊಟ್ಟ..
ಆ ಕೆಂಪು ಗುಲಾಬಿ
ಇನ್ನೂ ಇದೆ;ಅವಳ ಜಡಿಯಲ್ಲಿ
ಆದರೆ ಆದಲ್ಲ, ಬೇರೆ
ಅದರ ನೆನಪಿಗಾಗಿ ಮಾತ್ರ
ಅದೇ ಕೆಂಪು ಗುಲಾಬಿ!
 
ನನಗಾಗಿ ಆಕೆ ಕೊಟ್ಟ..
ಆ ಮುಗ್ಧ ಪ್ರೀತಿ
ಇನ್ನೂ ಇದೆ; ಇವಳ ಹೃದಯದಲ್ಲಿ
ಆದರೆ ಅವಳಿಲ್ಲ, ಇವಳಿದ್ದಾಳೆ
ಪ್ರೀತಿ ಮಾತ್ರ ಅದೇ!

ಆ ಮಧುರ ನೆನಪು
ಇನ್ನೂ ಇದೆ;ನನ್ನ ಕಣ್ಣುಗಳಲ್ಲಿ
ಆದರೆ ಅವಳಿಲ್ಲ, ದಿನಗಳು
ಮಾತ್ರ ಅದನ್ನು ನೆನಪಿಸಲು
ಒಂದು ವರ್ಷವೂ ಮಿಸ್ ಮಾಡಿಲ್ಲ!
 
ಪ್ರೀತಿಗಾಗಿ ಸಾಯಲು
ಇನ್ನೂ ಇದ್ದಾರೆ ; ಅನೇಕ ‘ಮಮತಾಜರು’
ಆದರೆ ಅವರ ನೆನಪಿಗಾಗಿ
‘ತಾಜ್ ಮಹಲ್’ ಕಟ್ಟಿಸಲು
ಇಂದಿಲ್ಲ ‘ಷಹಜಹಾನ’ ನಂಥ ಸುಲ್ತಾನರು!
 
 

‍ಲೇಖಕರು G

21 February, 2015

3 Comments

  1. mmshaik

    nice very nice sir..

  2. Anonymous

    Rohini Satya says:
    jeevanadalli ene badalaavaneyaadaroo preetiyu haage ulidirutte endu heluva nimma kavana chennagide.

  3. Manjula gh

    Nice sir
    Thank u

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading