ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಿಬದ್ಧ ಜೀವನ..

ಹರೀಶ್ ಎಸ್ ಸಿಂಗ್ರೀಹಳ್ಳಿ

ಸಾಯಬಹುದು ಆನಂದದಿಂದ!
ನೋಯಲಾಗದು ಎಂದರಾದೀತೆ!

ನೀವು ದೇಹಕ್ಕೆ ಬೆಂಕಿ ಇಟ್ಟು
ಕೇಕೆ ಹಾಕಿದರೂ
ನನ್ನ ಎದೆಯ ದೀಪ
ನಿಮ್ಮ ಮನೆ ಬೆಳಗಲಿ!
ಏಕೆಂದರೆ
ನನ್ನದೆಂಬುದು ಏನಿಲ್ಲ
ನಾನು ನಿಮ್ಮೊಳಗೊಬ್ಬ!

ಪ್ರಶ್ನೆಗಳಿಗೆ ಉತ್ತರ ಸಿಗುವುದು
ಬದುಕಲ್ಲ?
ಉತ್ತರಗಳೆ ಪ್ರಶ್ನೆಯಾಗಿ ನಿಂತಾಗ
ಪ್ರೀತಿಯಿಂದ ಅಪ್ಪಿಕೊಂಡು
ದರ್ಶಿಸುವುದು ಬದುಕು!

ಪ್ರೀತಿಸುವುದೆಂದರೆ ದ್ವೇಷಿಸುವಷ್ಟು
ಸುಲಭವಲ್ಲ!
ಹೀಗೆ ಇದೊಂದು ಅಪೂರ್ಣ ಕವಿತೆ
ಬರಿಗಣ್ಣಿಗೆ..‌…

‍ಲೇಖಕರು Avadhi

24 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading