ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಜನಾ ಗಾಂವ್ಕರ್ ಕವಿತೆ- ಬಾ ಗೆಳೆಯ

ಅಂಜನಾ ಗಾಂವ್ಕರ್

ನೀಲಿಯಾಗೋಣ ಬಾ ಗೆಳೆಯ,
ಮುಸ್ಸಂಜೆಯ ಬಾನಂತೆ,
ತಿಳಿಯಾಗೋಣ ಬಾ ಗೆಳೆಯ,
ಹರಿವ ತೊರೆ ನೀರಂತೆ,
ಸಂಭ್ರಮಿಸೋಣ ಬಾ ಗೆಳೆಯ,
ಈ ದಿನ ನಮ್ಮದೆಂಬಂತೆ,

ಮುಗಿಲ ಬಣ್ಣ ಕೆಂಪಾಗಬಹುದು,
ಸಿಡಿಲಿನ ಆರ್ಭಟದಿ ಕಪ್ಪಾಗಬಹುದು
ಮಿಂಚಿನ ಸಂಚಲನದಿ ಹೊನ್ನಂತೆ
ಹೊಳೆಯಬಹುದು, ಇಲ್ಲಾ
ಮಳೆಯಾಗಿ ಭೋರ್ಗರೆಯಬಹುದು.

ಹಸಿರಾಗೋಣ ಬಾ ಗೆಳೆಯ,
ಬತ್ತಿದ ಬಯಕೆ ಚಿಗುರುವಂತೆ.
ಒಂದಾಗೋಣ ಬಾ ಗೆಳೆಯ,
ನಮ್ಮೊಳು ಬಣ್ಣದ ಬೇಧವಿಲ್ಲದಂತೆ.

ಕೂತೆದ್ದು ಹೊರಡುವಾಗ ಬಾನಿಗೆ,
ಕೆಂಪಿಲ್ಲ, ಕಪ್ಪಿಲ್ಲ, ನೀಲಿಯ ತಂಪಿಲ್ಲ,
ತಿಳಿಯಾಗದೆ, ತಿಳಿಯಲಾಗದೆ
ಎಲ್ಲವ ಬಿಟ್ಟು ಹೊರಟಾಗ ಇರುವುದು
ಮುಗಿಲತ್ತ ನೋಟ,
ಸುರುಳಿ ಹೊಗೆಯ ಹಾರಾಟ.

‍ಲೇಖಕರು Avadhi

6 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading