swiggy ಸೇವೆ ನಿಲ್ಲಿಸಿ ಮುಷ್ಕರ..

 

 

 

 

ರವಿ ಅರೇಹಳ್ಳಿ 

 

 

 

ಇವತ್ತು ಸಹಕಾರನಗರದಲ್ಲಿ swiggy app ಹೆಸರಿನ ಟೀಷರ್ಟ್ ಹಾಕಿದ್ದ ನೂರಾರು ಹುಡುಗರು ಒಂದೆಡೆ ಸೇರಿದ್ದರು. ಕುತೂಹಲವಾಗಿ ಯಾಕೆಂದು ವಿಚಾರಿಸಿದೆ.

ಇದುವರೆಗೂ ಒಂದು ಊಟದ ಡೆಲಿವರಿಗೆ ಕೊಡುತ್ತಿದ್ದ 40 ರೂಪಾಯಿಯನ್ನು 30 ರೂಪಾಯಿಗೆ ಇಳಿಸಿದ್ದಾರೆ. ಇದಲ್ಲದೆ ಒಂದು ದಿನದಲ್ಲಿ 15 ಕ್ಕಿಂತ ಹೆಚ್ಚು ಡೆಲಿವರಿ ಮಾಡಿದವರಿಗೆ ಕೊಡಲಾಗುತ್ತಿದ್ದ ಬೋನಸ್ ಕಡಿತ ಮಾಡಲು ಕಂಪನಿ ತಯಾರಿ ಮಾಡುತ್ತಿದೆ. ಈ ಕಾರಣದಿಂದ ಇವತ್ತು ಬೆಂಗಳೂರಿನ ಹಲವೆಡೆ swiggy ಸೇವೆ ನಿಲ್ಲಿಸಿ ಮುಷ್ಕರ ಹೂಡಿದ್ದೇವೆ ಎಂದರು. ಹಲವು ಭಾಗಗಳಲ್ಲಿ swiggy ಸೇವೆ ವ್ಯತ್ಯಯವಾಗಿರುವುದಾಗಿ ಹೇಳಿಕೊಂಡರು.

ಇದಲ್ಲದೆ ಪೀಕ್ ಅವರ್ ಟೈಮಲ್ಲಿ ಊಟ, ತಿಂಡಿ ಕೊಡುವಾಗ ಉಂಟಾಗುವ ಒತ್ತಡ, ಅದರಿಂದಾಗುವ ಅಪಘಾತಗಳು ಇವಾವುದಕ್ಕೂ ಕಂಪನಿ ಜವಾಬ್ದಾರಿಯಾಗುವುದಿಲ್ಲ ಎಂದು ಅಳಲು ತೋಡಿಕೊಂಡರು.

Swiggy ಯಂತಹ appಗಳ ನರನಾಡಿಯೇ ಇಂತಹ ಆಸೆ ಕಂಗಳಿನ ಬೈಕ್ ಓಡಿಸುವ ಹುಡುಗರು. ಒಂದು ಸಾಫ್ಟ್ವೇರು, ಒಂದಷ್ಟು ಮಾರಾಟ ತಂತ್ರವನ್ನಿಟ್ಟುಕೊಂಡು ಇಂತಹ ಕಂಪನಿಗಳು ಹತ್ತಾರು ಕೋಟಿ ವ್ಯವಹಾರ ಮಾಡುತ್ತವೆ. ಹೋಟೆಲುಗಳಿಂದ 25% ಗೂ ಮಿಕ್ಕಿ ಕಮಿಷನ್ ಪಡೆದು, ಗ್ರಾಹಕರ ಮೇಲೂ ಡೆಲಿವರಿ ಶುಲ್ಕ ವಿಧಿಸುತ್ತವೆ. ಈ ಹುಡುಗರಿಗೆ ಸ್ಟ್ರೈಕು, ಯೂನಿಯನ್ ಎಲ್ಲಾ ಹೊಸದು. ಹೆಚ್ಚು ಕೆಲಸ ಮಾಡಿ ಹೆಚ್ಚು ದುಡಿಯುವ ಹುಮ್ಮಸ್ಸು. ಬಹುತೇಕರು ಸ್ಥಳೀಯ ಕನ್ನಡಿಗರು.

ಗ್ರಾಹಕರಿಗೆ ವಿಧಿಸುವ ಶುಲ್ಕವನ್ನಷ್ಟೇ ನಮಗೆ ಕೊಡಲಿ. ಹೋಟೆಲಿನವರ ಕಮಿಷನ್ನು ಕಂಪನಿ ಇಟ್ಟುಕೊಳ್ಳಲಿ ಎನ್ನುವುದು ಇವರ ಆಗ್ರಹ. ಅದು ನ್ಯಾಯಯುತವೂ ಆಗಿದೆ. ಮುಂದಿನ ಬಾರಿ swiggy ಬಳಸುವಾಗ ಈ ಹುಡುಗರ ಒತ್ತಾಯಕ್ಕೆ ನಿಮ್ಮ ಸಹಮತ ಸೇರಿಸಿ ಕಂಪನಿಯವರಿಗೆ ಒಂದು feedback ಹಾಕಿ.

‍ಲೇಖಕರು avadhi

November 30, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: