ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಿ ಎಸ್ ಭೀಮರಾಯ ಓದಿದ ‘ಅನಾದ’
ಸಿ ಎಸ್ ಭೀಮರಾಯ ಕನ್ನಡದ ಪ್ರಮುಖ ಕವಿ, ವಿಮರ್ಶಕ ಮತ್ತು ಲೇಖಕರಲ್ಲಿ ಒಬ್ಬರಾಗಿರುವ ಡಾ. ರಾಜಶೇಖರ ಮಠಪತಿ (ರಾಗಂ) ಅನೇಕ ವರ್ಷಗಳಿಂದ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಗಳನ್ನು ಮಾಡಿಕೊಂಡು ಬಂದವರು. ಈವರೆಗೆ ಅವರು ಕನ್ನಡ ಮತ್ತು ಇಂಗ್ಲಿಷ್-ಈ ಎರಡೂ ಭಾಷೆಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ....
ಸಂಘಮಿತ್ರೆ ನಾಗರಘಟ್ಟ ಕವಿತೆ- ತೆರೆಯಲಿ ಅವಳ ಸ್ಮೃತಿ…
ಸಂಘಮಿತ್ರೆ ನಾಗರಘಟ್ಟ ಇದೇ ಕಣ್ಣುಗಳುಅವನನ್ನೂ - ಆ ಬಣ್ಣದಜಿಂಕೆಯನ್ನು ಅರಸಿದ್ದುಮತ್ತೊಬ್ಬನ್ನ ಕಣ್ಣನ್ನುಮನಸ್ಸನ್ನು ಕೆಣಕಿದ್ದುಇದೇ ಕಣ್ಣಿನ ಅಂಚುನಗು-ಅಳುವೆಂಬಕಂದಮ್ಮಗಳ ಹಡೆದುತೂಗಿ ಲಾಲಿಸಿ ಬೆಳೆಸಿದ್ದುಆದರೂ ಅವನು ಮಾತ್ರಈ ಕಣ್ಣನ್ನು-ಅದರೊಳಗಿನನಿಷ್ಠಾವಂತ ಒಲವನ್ನುಗಮನಿಸಲು ಆಗದೆಅವಳು ಹಡೆದಅವನದೇ ನಗು,ಅಳುವನ್ನು...
ಲಕ್ಷ್ಮಣ ವಿ ಎ ಕಥೆ- ಕಾವೇರಪ್ಪ ಕೇರಾಫ್ ಡೋರ್ ನಂ 468..
ಡಾ ಲಕ್ಷ್ಮಣ ವಿ ಎ ಕಗ್ಗಲೀಪುರ ಅರ್ಕಾವತಿ ಲೇಔಟಿನ ನಂ 468 "ಸುರಗಿ" ಎಂಬ ಕಾವೇರಪ್ಪನವರ ಮನೆಯ ಡೂಪ್ಲೆಕ್ಸ್ ಮೇಲಿನ ಮಹಡಿಯ ಲೈಟುಗಳು ಮಧ್ಯರಾತ್ರಿಯಾದರೂ ಉರಿಯತ್ತಿದ್ದವು. ಕಾವೇರಪ್ಪ ಈ ಬೆಳಕಿನಲ್ಲೇ ಸುಟ್ಟು ಹೋಗುವ ಪತಂಗದ ಹಾಗೆ ಪಲ್ಲಂಗಿನ ಒಂಟಿ ಹಾಸಿಗೆಯ ಮೇಲೆ ಹೊರಳಾಡುತ್ತ ನಿದ್ದೆ ಬಾರದೆ ಒಂದರ ಮೇಲೊಂದು ಸಿಗರೇಟು...
ಚೈತನ್ಯದ ಕುರುಹು : ಹಾವೇರಿಯ ಕೆಇಬಿ ಕಾರ್ಮಿಕ ಸ್ಮಾರಕ..
ಸತೀಶ ಕುಲಕರ್ಣಿ ಸುಡುಸುಡುವ ಹಗಲು, ಅಬ್ಬರದ ಚುನಾವಣಾ ದಿನಗಳ ನಡುವೆ ಈ ಬಾರಿಯ ಕಾರ್ಮಿಕ ದಿನಾಚರಣೆ (ಮೇ 1) ಬಂದಿದೆ. ಹಾವೇರಿ ಕೆ.ಇ.ಬಿ ಕಛೇರಿಯ ಆವರಣದಲ್ಲಿ ಹೀಗೊಂದು ಕಾರ್ಮಿಕ ಸ್ಮಾರಕವಿದೆ. ದುಡಿಯುವವರ ಕಾಯಕಕ್ಕೆ ಕೊಡುವ ಗೌರವ ಸಂಕೇತವಾಗಿ ಕಂಗೊಳಿಸುತ್ತಿದೆ. ಇಪ್ಪತ್ತೆರಡು ವರ್ಷಗಳ ಹಿಂದೆ (06 -08 -2001) ನಿರ್ಮಾಣಗೊಂಡ...
ನೂತನ ದೋಶೆಟ್ಟಿ ಕವಿತೆ- ಬೋಳು ಹಣೆ..
ನೂತನ ದೋಶೆಟ್ಟಿ ಆ ಈವ್ ಗೂಆಕೆಯ ಮಗಳಿಗೂ ಇದ್ದದ್ದು ಸಹಜ ಬೋಳು ಹಣೆಯೇಈವ್, ಆಡಮ್, ಅವರ ಮಗಳುಸಂಚರಿಸಿದ್ದ ಕಾಡುಗಳೆಲ್ಲ ಹಸಿರು ತುಂಬಿದ ಬಸುರಿಯರಾದರೂ ಅವರ ಹಣೆಯಿರಲಿ, ದೇಹವೂ ಬೋಳು. ಅವರುಟ್ಟ ಮೊದಲ ಉಡುಗೆಯ ಹೆತ್ತ ಬಳ್ಳಿಹುಯಿಲೆಬ್ಬಿಸಲಿಲ್ಲ ತಾನು ಬೋಳಾದೆನೆಂದುಅವರು ಕಡಿದು ಕಟ್ಟಿದ ಮನೆಯೆದುರು ನಿಂತ ಅದೇ ಮರವೂ...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಏನಪ್ಪ, ಅಂತಹ ಆಸೆ?
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
Pic by Dimpy Bhalotia
ಮೈಸೂರಿನಲ್ಲಿ ‘ಅರಣ್ಯಕಾಂಡ’ ಮರುಪ್ರದರ್ಶನ..
ವಾಲ್ಮೀಕಿ ರಾಮಾಯಣ ಆಧಾರಿತ ಸರಣಿಯ ಎರಡನೇ ಭಾಗ 'ಅರಣ್ಯಕಾಂಡ' ನಾಟಕದ ಮರುಪ್ರದರ್ಶನ ನವೋದಯ ಅರ್ಪಿಸುವ ವಾಲ್ಮೀಕಿ ರಾಮಾಯಣ ಆಧಾರಿತ ಸರಣಿಯ ಎರಡನೇ ಭಾಗ 'ಅರಣ್ಯಕಾಂಡ' ನಾಟಕದ ಮರುಪ್ರದರ್ಶನ ಏಪ್ರಿಲ್ 30ರ ಭಾನುವಾರ ಸಂಜೆ ೭ಕ್ಕೆ ಕಲಾಮಂದಿರ ಆವರಣದ ಕಿರುರಂಗಮದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಹಿರಿಯ ರಂಗಕರ್ಮಿ ಪ್ರಸನ್ನ ಅವರು ಈ...
ಎಚ್ ಗೋಪಾಲಕೃಷ್ಣ ಕವಿತೆ- ಅರವತ್ತರ ಚಲುವೆ…
ಎಚ್ ಗೋಪಾಲಕೃಷ್ಣ ಅರವತ್ತರ ಚಲುವೆಹಾದು ಹೋದರೆ ನಿಂತು ಮತ್ತೊಮ್ಮೆ ನೋಡಬೇಕುಒಂದು ಕಾಲದಲ್ಲಿ ಮೊಳದುದ್ದ ಇದ್ದ ಜಡೆವಿಶಾಲವಾಗಿ ಹರಡಿರುವ ಕೂದಲುಎತ್ತರದ ಬಾಗದ ನಿಲುವುಮುಗಿಲುದ್ದ ನಿಂತ ನಿಲುವುಗುಂಡು ಸೌಂದರ್ಯ ತುಂಬಿದ ಮುಖದೊಡ್ಡ ಹಣೆಯ ರೂಪಸಿನಕ್ಕರೆ ಮಿಂಚುವ ಬಿಳಿಯ ದಾಳಿಂಬೆಮನ್ಮಥನ ರತಿದೇವಿ ಕಾಮದರಗಿಣಿಅಂದು ಅವಳು ಇಪ್ಪತ್ತರ...
ಹೆಚ್ ಶಾಂತಾರಾಮ್ ಪ್ರಶಸ್ತಿಗೆ ಕಾದಂಬರಿ ಆಹ್ವಾನ…
ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ.ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರ ಭಂಡಾಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ ಕಾದಂಬರಿಗಳನ್ನು ಪರಿಗಣಿಸಲಿದ್ದು, ೨೦೨೧ರಿಂದ ೨೦೨೨ರ ಅವಧಿಯಲ್ಲಿ ಮೊದಲ...
ಕಪ್ಪಣ್ಣ ಅಂಗಳದಲ್ಲಿ ‘ಅವಳ ಕಾಗದ’
ರವೀಂದ್ರನಾಥ್ ಟ್ಯಾಗೋರ್ ಅವರ ಕಥೆಗಳಾಧಾರಿತ ಏಕವ್ಯಕ್ತಿ ರಂಗಪ್ರಯೋಗ 'ಅವಳ ಕಾಗದ' ಈ ಹೊತ್ತಿಗೆ ತನ್ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಕಪ್ಪಣ್ಣ ಅಂಗಳದ ಸಹಯೋಗದೊಂದಿಗೆ ಪ್ರಸ್ತುತಪಡಿಸುತ್ತಿದೆ, ರವೀಂದ್ರ ಟ್ಯಾಗೋರ್ ಅವರ ಕೆಲವು ಕಥೆಗಳಾಧಾರಿತ ನಾಟಕ, 'ಅವಳ ಕಾಗದ. ಮುಂಬಯಿ ಕನ್ನಡ ರಂಗಭೂಮಿಯ ಖ್ಯಾತ ಅಭಿನೇತ್ರಿ ಅಹಲ್ಯಾ...
ಪಿ ಪಿ ಉಪಾಧ್ಯ ಕವಿತೆ- ಬಾಳ್ವೆಯೊಂದು ಕನಸು…
ಪಿ ಪಿ ಉಪಾಧ್ಯ ಕೇಳಿರಿ… ಕೇಳಿರಿ…ಗಮನವಿಟ್ಟು ಕೇಳಿರಿಹಿರಿಯರು ಹೇಳುವ ಮಾತನ್ನುಕಿರಿಯರು ಕೇಳುವ ಪ್ರಶ್ನೆಯನುಗೆಳೆಯರು ಕೊಡುವ ಸಲಹೆಯನು… ಬದುಕೆಂದರೆ…ಬಲು ಬೆಲೆ ಬಾಳುವ ಬಾಳುನೋಡಿಕೊಳ್ಳಿ ಅದೆಂದಿಗೂ ನಶಿಸದಂತೆಬದುಕೆ೦ದರೆ ಬಲು ಬಳಕೆಯ ವಸ್ತುಕಾಯ್ದುಕೊಳ್ಳಿ ಅದನೆಂದೂ ಕೆಡದಿರುವಂತೆಇದು ಅವರೆಲ್ಲರೂ ಹೇಳುವ ಮಾತುಬದುಕಿಡೀ ನೀವು ಕೇಳುವ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಲೆ…ಲೆ…ಲೇ… ಲೇ… ಲೇಹ್…ಲಡಾಖ್ -ಭಾಗ- 3…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಪ್ನ ‘ಅವಧಿ’ ಟಾಪ್ ಟೆನ್
ಗೀತಾ ಜಿ ಹೆಗಡೆ ಕಲ್ಮನೆ ಕವಿತೆ- ಆಹಾ! ಮಣ್ಣ ಘಮಲು…
ಗೀತಾ ಜಿ ಹೆಗಡೆ ಮೊದಲ ಮಳೆಯ ಆಗಮನಕೆಮನಸ್ಸು ಕೊಂಚ ತಲ್ಲಣಒಂದಷ್ಟು ಖುಷಿಮಗದೊಂದಷ್ಟು ಗಡಿಬಿಡಿಬಢಾರ್ ಬಾಗಿಲು ಬಡಿದ ಸೌಂಡ್“ಅಯ್ಯೋ! ದೇವರೆ ಎಂತಾತು?”ಬಡಕ್ಕನೆ ಎದ್ದು ಹೋಗೋ ಅವಸರದಲ್ಲಿತಡವರಿಸಿದ ಬೆಕ್ಕುಮ್ಯಾವ್ ಅಂದಾಗಪಾಪ! ಎಂದ್ಯಾರಿಗೆ ಹೇಳಲಿಬೆಕ್ಕಿಗಾ ಬಾಗಿಲಿಗಾ?ಚಿಲಕ ಜಡಿದ ಮನಸ್ಸು ಕಿಸಕ್ಕೆಂದಾಗಓಹೋ, ಇದಕಿನ್ನೂ ಭಯಂಕರ...
‘ಈ ಹೊತ್ತಿಗೆ’ಯಲ್ಲಿ ಸಾರಾ ಅಬೂಬಕ್ಕರ್ ಅವರ ಸಾಹಿತ್ಯ ಕುರಿತ ಚರ್ಚೆ..
ದಿನಾಂಕ 30 ಎಪ್ರಿಲ್ 2023ರಂದು, ಸಂಜೆ 5.00 ಗಂಟೆಗೆ ಜೆಪಿ ನಗರದ ೧ನೇ ಫೇಸಲ್ಲಿರುವ ಕಪ್ಪಣ್ಣ ಅಂಗಳದಲ್ಲಿ, ಈ ಹೊತ್ತಿಗೆಯು, ಸಾಹಿತ್ಯ ಅಕಾಡೆಮಿ, ಹೊಸ ದೆಹಲಿ ಇವರ ಸಹಯೋಗದೊಂದಿಗೆ ಇತ್ತೀಚಿಗೆ ನಮ್ಮನ್ನಗಲಿದ ನಾಡೋಜ ಸಾರಾ ಅಬೂಬಕ್ಕರ್ ಅವರ ಸಾಹಿತ್ಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬಿ ಟಿ ಲಲಿತಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ...
ತೇಜಸ್ವಿ ಸತ್ತ ದಿನ..
ಗಿರಿಧರ್ ಖಾಸನೀಸ್ ದೇವರ ಮೇಲೆ ಆಣೆ. ತೇಜಸ್ವಿಗೂ ನನಗೂ ಯಾವ ಸಂಬಂಧವೂ ಇಲ್ಲ. ನಾನು ಅವರನ್ನು ನೋಡಿಲ್ಲ. ಅವರ ಪುಸ್ತಕ ಓದಿಲ್ಲ. ಅವರು ಮಾತಾಡಿದ್ದು ಕೇಳಿಲ್ಲ. ಶಾಲೆಯಲ್ಲಿ ಅವರ ಭಾವಚಿತ್ರ ನೋಡಿದ್ದೇನೆ ಅಷ್ಟೇ. ಹುಟ್ಟಿದ ಆರು ತಿಂಗಳಿಗೇ ಅನಾಥನಾದೋನು ನಾನು. ಯಾರೋ ಪುಣ್ಯಾತ್ಮರು ಮದುವೆಯಾಗಿ ಆರು ವರುಷವಾದರೂ ಮಕ್ಕಳಾಗದ ದೂರದ...
ಶ್ರೀಲಂಕಾದಲ್ಲಿ ಭಾರತೀಯ ಸಿನಿಮಾ ಕಾರ್ಯಾಗಾರ..
ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್ ಹಮ್ಮಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರ ಉತ್ಸವದ ಅಂಗವಾಗಿ ಚಲನಚಿತ್ರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕೊಲಂಬೊದಲ್ಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದಲ್ಲಿ ( ಐ ಸಿ ಸಿ ಆರ್ ) ನಲ್ಲಿ ಶ್ರೀಲಂಕಾದ ಸಿನೆಮಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ...
ಅಂತಾರಾಷ್ಟ್ರೀಯ ನೃತ್ಯದಿನ ಲಾವಣಿಯ ಲಾವಣ್ಯವತಿಯರನ್ನು ಸ್ಮರಿಸುತ್ತಾ…
ಮಮತಾ ರಾವ್ ಲಾವಣಿ ಮಹಾರಾಷ್ಟ್ರದ ಒಂದು ನೃತ್ಯ ಪ್ರಾಕಾರ. ಲಾವಣ್ಯವತಿಯರು ಮಾಡುವ ನೃತ್ಯ ಪ್ರಾಕಾರವೆಂದೇ ಇದಕ್ಕೆ ಲಾವಣಿ ಎನ್ನಲಾಗುತ್ತದೆ. ಒಂಬತ್ತು ಮೊಳದ ಜರಿತಾರಿ ಪೈಠಣಿ ಸೀರೆಯುಟ್ಟು, ಎತ್ತಿಕಟ್ಟಿದ ತುರುಬಿಗೆ ಘಮಘಮಿಸುವ ಮಲ್ಲಿಗೆಯ ಮಾಲೆ, ಕೈತುಂಬ ಕಿಣಕಿಣ ಸದ್ದುಗೈಯುವ ರಂಗುರಂಗಿನ ಬಳೆಗಳು, ಕೊರಳಲ್ಲಿ ಕಿವಿಗಳಲ್ಲಿ...
ಸದಾಶಿವ್ ಸೊರಟೂರು ಕಥಾ ಅಂಕಣ- ಇನ್ಬಾಕ್ಷಿನಿಂದ ಕದ್ದು ನೋಡಿದ ಸಾಲು…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Pic by Philip Hayfield





















