ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾವು ಮಾಧ್ಯಮಗಳಿಗೂ ಋಣಿಯಾಗಿರಬೇಕು..

ಅವಧಿಯಲ್ಲಿ ನಿನ್ನೆ ಡಾ.ಲಕ್ಷ್ಮಣ. ವಿ. ಎ ಬರೆದ 'ಟಿ ಆರ್ ಪಿ ಬೆನ್ನು ಹತ್ತಿ..' ಲೇಖನಕ್ಕೆ ಪ್ರತಿಕ್ರಿಯೆ. ಚರ್ಚೆಗೆ ಸ್ವಾಗತ  ಕೆ.ವಿ.ತಿರುಮಲೇಶ್ ಮಾಧ್ಯಮಗಳನ್ನು ವಿಮರ್ಶಿಸಿ, ಇತರ ಎಲ್ಲಾ ಕ್ಷೇತ್ರಗಳನ್ನು ವಿಮರ್ಶಿಸುವಂತೆ. ಆದರೆ ಒಂದು ವಿಷಯವನ್ನು ಮರೆಯಬೇಡಿ: ಮಾಧ್ಯಮಗಳಿಲ್ಲದೆ ಇರುತ್ತಿದ್ದರೆ ನಾವಿನ್ನೂ ಅಂಧ ಯುಗದಲ್ಲಿ...

read more
ಕಾಜಾಣವೂ.. ಚೆಗೆವಾರನೂ..

ಕ್ರೇಜಿ ದೇವರಾಜ್. ಎಲ್   ಅವರವರ ಭಾವ ಮತ್ತು ಭಕುತಿಗೆ ಬಿಟ್ಟಿದ್ದು ಚಿಕ್ಕವಯಸ್ಸಿನಿಂದಾಗಲಿಂದಲೂ ಗೋಡೆ ಮೇಲೆ ಚಿತ್ರಕಂಡಾಗ ಅದನ್ನು ನನ್ನ ಗೋಡೆ ಮೇಲೆ ಬರೆಯಬೇಕು ಅನ್ನಿಸುತ್ತಿತ್ತು. ಯಾರವನು.? ಎಂಬುದೇ ಗೊತ್ತಿರಲಿಲ್ಲ. ಚಿತ್ರ ಅಷ್ಟೇ ನನಗೆ ಇಷ್ಟವಾಗುತ್ತಿತ್ತು. ಬರೆಯೋಕೆ ಮೂಡ್ ಇರುತ್ತಿರಲಿಲ್ಲ. ಕೊನೆಗೂ ಮೊನ್ನೆ ಎರಡು...

read more
ನನ್ನ ಪ್ರೀತಿಯನ್ನು ನಾನೇ ಹೊತ್ತು ತಿರುಗುತ್ತಿದ್ದೇನೆ..

ಪ್ರೀತಿ ದೇವರು... ದೀಪ್ತಿ ಭದ್ರಾವತಿ ಯಾರಿಗೂ ಬೇಡದ ನನ್ನ ಪ್ರೀತಿಯನ್ನು ನಾನೇ ಹೊತ್ತು ತಿರುಗುತ್ತಿದ್ದೇನೆ... ಮಣ ಭಾರ, ಋಣ ಭಾರ ಸುತ್ತಿಕೊಂಡ ಕಾಂಕ್ರೀಟಿನ ಕನಸು ಬೆನ್ನ ಮೂಳೆಯ ಕಣ್ಣ ನೂಲನು ಚುಚ್ಚಿ ನೋಯಿಸುತಿದೆ. ಥತ್! ಯಾರಿಗೆ ಬೇಕಿತ್ತು ಪ್ರೀತಿಸುವ ಉಪರಾಟೆ ಮುಚ್ಚಿದ ಬಾಗಿಲ ಎದುರು ದೀಪ ಹಚ್ಚಿಡುವ ಗಮಟು ಖಯಾಲು? ಎತ್ತಿ...

read more
ನಿನ್ನ ಅಹಂಕಾರವನ್ನು ಝಾಡಿಸಿ ಬಾ..

ರೇಣುಕಾ ನಿಡಗುಂದಿ ಜ್ಞಾನಪೀಠ ಪುರಸ್ಕೃತ ಲೇಖಕಿ ಮಹಾಶ್ವೇತಾದೇವಿ ಅವರ ಒಂದು ಸುಂದರ ಕವಿತೆ ನಿಮ್ಮ ಓದಿಗಾಗಿ... ಬಂದೆಯಾ ನೀನು ತೆರೆದಿದೆ ಬಾಗಿಲು , ಒಳಗೆ ಬಾ. ಸ್ವಲ್ಪ ನಿಲ್ಲು ಹೊಸಿಲ ಬಳಿ ಕಾಲೊರೆಸು ತಟ್ಟಿದೆ ನಿನ್ನ ಅಹಂಕಾರವನ್ನು ಝಾಡಿಸಿ ಬಾ. ಮಧುಮಾಲತಿ ಮಾಳಿಗೆವರೆಗೂ ಹಬ್ಬಿದೆ ನಿನ್ನ ಸಿಟ್ಟನ್ನೆಲ್ಲ ಅಲ್ಲೇ ಸುರಿದು ಬಾ....

read more
ಅಯ್ಯಯ್ಯ.. ಎಂಚ ಪೊರ್ಲಾಂಡ್!

ರಾಜಾರಾಂ ತಲ್ಲೂರ ಎಂತೆಂತಹ ಹುಲಿಗಳು… ನೋಡಿ. ಇದು ಜವಾರಿ ಹುಲಿ ಟೀಮ್. ತಮಾಷೆ ಎಂದರೆ, ಎದುರು ಮನೆ ಹಣ್ಣಿನ ಮರಗಳಿಗೆ ಕಲ್ಲು ಹೊಡೆಯಲು ಬಂದು ಯಾವತ್ತೂ ನನ್ನ ಕೈಗೆ ಸಿಕ್ಕಿಹಾಕಿಕೊಳ್ಳುವ ಈ ಮಕ್ಕಳ ದಂಡು, ಚೌತಿ ನೆಪದಲ್ಲಿ ನನ್ನೊಟ್ಟಿಗೆ ರಾಜಿ ಪಂಚಾತಿಕೆಗೆ ಬಂದಿತ್ತು. ಬಿಜಾಪುರ, ಧಾರವಾಡ ಕಡೆಯ ಕಾರ್ಮಿಕರ ಕಾಲನಿಯ ಮಕ್ಕಳಿವರು....

read more
ಟಿ ಆರ್ ಪಿ ಬೆನ್ನು ಹತ್ತಿ..

ಡಾ.ಲಕ್ಷ್ಮಣ. ವಿ. ಎ ವಿದ್ಯುನ್ಮಾನ ಮಾಧ್ಯಮ, ಮೈ ಮನ ಉನ್ಮಾದಗೊಳಿಸುವ ಮಾಧ್ಯಮ. ಸುದ್ದಿಯಾಗಬೇಕಿರುವುದು ಇಲ್ಲಿ ಸುದ್ದಿಯಾಗುವುದಿಲ್ಲ, ನ್ಯಾಯಾಂಗದ ತೀರ್ಪು ಬರುವ ಮುಂಚೆಯೇ ಇಲ್ಲಿ ಆರೋಪಿಗೆ ಸುದ್ದಿ ಮಾಧ್ಯಮಗಳು ಶಿಕ್ಷೆ ಕೊಟ್ಟಿರುತ್ತವೆ. ಸತ್ಯಾಸತ್ಯತೆಗಳು ಬಯಲಾಗುವ ಹೊತ್ತಿನಲ್ಲಿಯೇ ಎಷ್ಟೆಲ್ಲಾ ಆವಾಂತರಗಳು...

read more
ರಾಜ್ 'ಕ್ಲಿಕ್'

ರೇಣುಕಾ ಮಂಜುನಾಥ್ ಬ್ಯಾಂಕಿನಲ್ಲಿದ್ದಾಗ ಒಮ್ಮೆ ನನ್ನ ಪಕ್ಕದಲ್ಲಿ ಕನ್ನಡಾಭಿಮಾನಿ ಸಹೋದ್ಯೋಗಿಯೊಬ್ಬರು ಕುಳಿತಿದ್ದರು. ಅವರೊಡನೆ ಹರಟುವಾಗೆಲ್ಲಾ ರಾಜ್ ಕುಮಾರ್ ವಿಷಯ ಬರ್ತಿತ್ತು. ನಾನೊಮ್ಮೆ "ನೀವೇನೇ ಹೇಳಿ, ರಾಜ್ ಕುಮಾರ್ ತುಂಬಾ ಲಕ್ಕಿ" ಅಂದೆ. ಅದಕ್ಕವರು, "ನೀವೊಳ್ಳೆ ಮಾತೇಳಿದ್ರಿ..! ಅವ್ರಲ್ಲ ಲಕ್ಕಿ, ಪಾರ್ವತಮ್ನೋರು.."...

read more
ಎರಡು ಹಾಡುಗಳ ನಡುವೆ 'ಅವಳು'

ಮಂಜುನಾಥ್ ಕಾಮತ್ "ನಿಜವಾಗಿಯೂ ಕಲಿಸ್ತೀರಾ ?" ಹೌದಮ್ಮ ನಿಜವಾಗಿಯೂ ಕಲಿಸ್ತೇನೆ. "ಮನೆಯಲ್ಲಿ ಬಯ್ಯಲ್ವ ನಿಮಗೆ ?" ಇಲ್ಲನ. ಮನೆಯಲ್ಲಿ ನನಗೆ ಯಾವುದಕ್ಕೂ ಬೇಡ ಅನ್ನಲ್ಲ. "ಯೂ ಆರ್  ರಿಯಲೀ ಗ್ರೇಟ್" ಅದ್ರಲ್ಲೇನು ಗ್ರೇಟು ? ನನ್ನ ಮಗಳಿಗೆ ಕಲಿಸಬೇಕು ಅಂತ ಕನಸಿದ್ದೆಲ್ಲವನ್ನೂ ಹೆಂಡತಿಗೇ ಕಲಿಸುವ ಅವಕಾಶ ಸಿಗುತ್ತಿದೆಯಲ್ವ, ಅದ್ಕೆ...

read more
ಮದನಿಕೆಗೊಂದು ಬಿನ್ನವತ್ತಳೆ

ಜಯಶ್ರೀ ದೇಶಪಾಂಡೆ  ಮುನಿಸಿಕೊಂಡೆಯಾ ಮುಗುದೆ ? ಅತ್ತ ಮೊಗದಿರುವಿಕೊಂಡೆಯಾ ? ಮನದ ಮಾತಿಗೆ ಕವುಚಿ ಮೌನದ ಗವಸು, ನಿಶ್ಶಬ್ದದ ಮೂಕದೆರೆಯಲಿ ಶಿಲೆಯಾಗಿ ಸ್ಥಿರಳಾದೆಯಾ ? ಬಿಟ್ಟುಬಿಡು ತರಳೆ ಗಳಿತ-ಫಲಿತಗಳ, ಮರೆತುಬಿಡು ಮನದ ಕ್ಷತಿ. ತಿರುಗೊಮ್ಮೆ ಇತ್ತ, ನಿನ್ನ ಕಮಲವದನದೊಳಡಗಿರುವ ಭಾವವೇನೆಂಬ ಹೊಳಹು  ಹೊರ ಚೆಲ್ಲಿಬಿಡೊಮ್ಮೆ... ರಂಭೆ...

read more
ಪಥಿಕನ ಹಾಡು

ಶುಭಾ. ಎ. ಆರ್ ಕತ್ತಲೆದುಂಬಿದ ಹಾದಿಗಳ ಸವೆಸಿದಾಗ ಪಟಪಟಿಸಿದ ರೆಕ್ಕೆ ಸದ್ದಿಗೆ ಬೆಚ್ಚಿ ಕಣ್ಮುಚ್ಚಿದ ಹೊತ್ತು ಎಲ್ಲೋ ಮಿನುಗುವ ದೀಪ ಉಲಿಯುತ್ತದೆ ನಾನಿರುವೆ. ಯಾರಿಗೆ ಗೊತ್ತಿಲ್ಲ ದೂರದ ಬೆಟ್ಟ ನುಣ್ಣಗೆ, ಕಲ್ಲು ಮುಳ್ಳುಗಳ ಹಾಯ್ದು ಕುರುಚಲು ಪೊದೆಗಳ ತರಿದು ನೆತ್ತರು ಬಸಿವ ಪಾದವೂರಿದಾಗ ಶಿಖರವೂ ತಲೆ ಬಾಗುತ್ತದೆ....

read more
ಜೋಗಿಗೆ ಸಿಕ್ಕ..

ಜೋಗಿ  ಕುಡುಕರೆಂದರೆ ನನಗೆ ಮೆಚ್ಚುಗೆ, ಅಕ್ಕರೆ. ಕುಡಿಯುತ್ತಾರೆ ಅನ್ನುವ ಕಾರಣಕ್ಕಲ್ಲ ಕುಡಿದಂತಿರುತ್ತಾರಲ್ಲ, ಅದಕ್ಕೆ. ದುಡಿಯುತ್ತಲೇ ಇರುವವರು ಕುಡಿಯದೇ ಸಾಯುತ್ತಾರಲ್ಲ, ಅವರ ಬಗ್ಗೆ ಅನುಕಂಪ, ಹತಾಶೆ. ಕುಡುಕರು ಉದಾರಿಗಳಾಗಿರುತ್ತಾರೆ ಅನ್ನುವುದಕ್ಕಲ್ಲ. ಮಿಕ್ಕವರಂತೆ ಅವರು ದಾರಿಯ ಚಿಂತೆ ಮಾಡುವುದಿಲ್ಲ. ಸವೆದ ದಾರಿಯೆಂದರೆ...

read more
ಈವತ್ತೇ ಬೆಳಗ್ಗೆ ಬಂದು ತಲೆ ಮೇಲೆ ಬಿತ್ತಾ?

ರಾಜಾರಾಂ ತಲ್ಲೂರು ಸಿಕ್ಕವರಿಗೆ ಸೀರುಂಡೆ ರಾಜಕೀಯ ಇದು. ಕಳೆದ ಐದು ವರ್ಷಗಳಿಂದೀಚೆಗೆ ನೀರಿಗಾಗಿ ಜಗಳಗಳು ನಮ್ಮ ಬದುಕನ್ನು ಆಕ್ರಮಿಸಿಕೊಳ್ಳುತ್ತಿರುವ ವೇಗ ಮತ್ತು ಪ್ರಮಾಣಗಳನ್ನು ಕಂಡರೆ, ಈ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಪ್ಲಾನಿಂಗ್, ತಯಾರಿಗಳೆಲ್ಲ ಎಲ್ಲಿವೆ, ಅವೆಲ್ಲಾ ನಿಜಕ್ಕೂ ಇವೆಯಾ ಎಂಬ ಸಂಶಯ ಬರುತ್ತಿದೆ. ಒಂದು...

read more
ದಂಡುಪಾಳ್ಯದಲ್ಲೊಂದು ದಿನ..

ಕಲ್ಲೆತ್ತಿ ಬಂದರು. ಮತ್ತೆ ಹೂವಂತಾದರು ಪತ್ರಿಕೋದ್ಯಮ ವೃತ್ತಿಯಲ್ಲಿ ನಾವು ಭೇಟಿಯಾಗುವ ಜನರು ವಿಭಿನ್ನ, ಕೆಲವರು ಪ್ರಚಾರಕ್ಕಾಗಿ ಹಪಹಪಿಸುತ್ತಿದ್ದರೆ ಇನ್ನು ಕೆಲವರು ಮುಖ ಕಾಣಬಾರದೆಂದು ದೂರ ಓಡುವವರು. ಇನ್ನು ಕೆಲವರು ನಿಮ್ಮಿಂದ ಏನು ಆಗೋಲ್ಲ ಸುಮ್ಮನೆ ಯಾಕೆ ಸಮಯ ವ್ಯರ್ಥ ಮಾಡ್ತೀರಿ ಎಂದು ದಬಾಯಿಸುವವರು ಇದ್ದಾರೆ. ಹೀಗೆ...

read more
ಅವಳ ನಿನ್ನೆಗಳಲ್ಲಿ..

ರೇಣುಕಾ ನಿಡಗುಂದಿ ಅವಳ ನಿನ್ನೆಗಳಲ್ಲಿ ಒಬ್ಬನೇ ಪುರುಷನಿರಲಿಲ್ಲ.. ಅನೇಕರಿದ್ದರು. ಬಂದ ಹಾಗೇ ಎದ್ದೂ ನಡೆದರು. ಮತ್ತೆ ಆಕೆ ಒಬ್ಬಂಟಿ. ಹಲವಾರು ಪುರುಷರು .. ಹಲವಾರು ಸಂಬಂಧಗಳು ಇದ್ದವೆಂದೇ ಆಕೆಯನ್ನು ಯಾರೂ ಒಪ್ಪಿಕೊಳ್ಳಲಿಲ್ಲ. ಎಲ್ಲ ರೀತಿಯ ಅವಮಾನಗಳನ್ನೂ.. ನಿರಾಕರಣೆಯನ್ನೂ ಸಹಿಸಬೇಕಾಯ್ತು. ಎಲ್ಲ ಹೆಣ್ಣಿನಂತೆ ಆಕೆಗೂ...

read more
ಪಿ ಎಂ ಆಫೀಸಿನ ಫಿಜಿಷಿಯನ್ನೂ.

'ಲಂಕೇಶ'ರ "ಗುಣಮುಖ" ನಾಟಕವೂ, ಪ್ರೈಮ್ ಮಿನಿಸ್ಟರ್ ಆಫೀಸಿನ ಫಿಜಿಷಿಯನ್ನೂ... ನೋಡಿದ ನಾಟಕ - ಗುಣಮುಖ ಶಿವಕುಮಾರ್ ಮಾವಲಿ " ನಾನು ದೇಹ ಕ್ಕೆ ಮದ್ದು ಕೊಡುವ ಹಕೀಮನೇ ಹೊರತು, ದೇಶಕ್ಕೆ ಮದ್ದು ಕೊಡುವವನಲ್ಲ" ಎನ್ನುತ್ತಲೇ ದೆಶವನ್ನಾಳುವ ಚಕ್ರವರ್ತಿ ಹೇಗಿರಬೇಕು ಎಂದು ಮಾರ್ಮಿಕವಾಗಿ ಹೇಳುತ್ತಾನೆ "ನಾದಿರ್ ಷಾ" ನ 'ಸನ್ನಿ'ಯನ್ನು...

read more
ಅವರು ಇನ್ನಿಲ್ಲ ಅನ್ನೋ ಸುದ್ದಿ..

ಸುಧನ್ವ ದೇರಾಜೆ  ಶಾಕ್..ಈ ಪದದ ನಿಜವಾದ ಅರ್ಥ ತಿಳಿಯೋದಕ್ಕೆ ಹೀಗೆಲ್ಲಾ ಆಗಬೇಕಾ? ಅವರು ಇನ್ನಿಲ್ಲ ಅನ್ನೋ ಸುದ್ದಿ ಕೊಟ್ಟ ಅರ್ಥ ಇದು. ‘ಇನ್ನಿಲ್ಲ’ ಅನ್ನೋ ಪದದ ಜತೆಗೆ ಆ ಹೆಸರನ್ನು ಟೈಪಿಸುವುದಕ್ಕೂ ಮನಸ್ಸೊಲ್ಲದು. ಗಂಗಾಧರ ಬೆಳ್ಳಾರೆ. ಅವರ ಜತೆಗಿನ ಮೊತ್ತಮೊದಲ ನೆನಪಿದು-ಕಿರಿಯ ಪ್ರಾಥಮಿಕ ಶಾಲೆ ದೇರಾಜೆಯಲ್ಲಿ ಓದುತ್ತಿದ್ದ...

read more
ಕಾಯದಿರು ಬಾಲೆ, ಇನ್ನೆಲ್ಲ ನಿನ್ನ ಲೀಲೆ..

ಬಿ.ಸುರೇಶ ಕಾಯುತಿಹಳು ನೀಳವೇಣಿ ಕಂಭಕ್ಕೊರಗಿ, ಅಂವ ಬರುವನೋ ಬಾರನೋ ಎಂದು ಕೊರಗಿ. "ಮೆಚ್ಚಿಸ ಬೇಕಿದ್ದರೆ ಅವನನ್ನ ಉಡಬೇಕು ಹೊಕ್ಕಳು ಕಾಣುವಂತೆ ಸೀರೆಯನ್ನ! ಮುಡಿಯಬೇಕು ಮೂಲೋಕ ಘಮಿಸುವಂತೆ ತುರುಬುತುಂಬ ಹೂವನ್ನ!" ಹಾಗಂದಿದ್ದ ಗೆಳತಿಯ ಮಾತನ್ನ ಮೀರದೆ ಅಲಂಕೃತಳಾಗಿದ್ದಾಳೆ ಕಾಯುತ್ತ ಅವನ ಹಾದಿಯನ್ನ... ಶತಮಾನದ ಲೆಕ್ಕವಾಯಿತಾಗಲೇ...

read more
ನೀಲಾಂಬರಿ

ಬಿ ವಿ ಉಮಾಕಾಂತ ಸಾಲುಕoಬದ ಹಾದಿಯಲ್ಲಿ ನಗುಮೊಗದಿ ಕಾದಿರುವ ಚೆoದೊಳ್ಳೆ ಚೆಲುವೆ, ನೀಯಾರೆ ? ಕೈಯಲ್ಲಿ ಆರತಿಯೆ ಬoದವರಿಗೆ ಒಲವಿನೋಲೆಯೆ ಇನಿಯನಿಗೆ, ನೀ ಹೇಳೆ ? ನಾಬಲ್ಲೆ ಮದನಿಕೆ ನೀ ಸುoದರಿ ಕಾಮನ ಕೃತಿ, ಮದನ ಮoಜರಿ ಕೇಶ ಶೈಲದಿoದಿಳಿದ ಹೆರಳು, ಅದೇನು ಕೇಶವೆ ? ಮದನಪಾಶ, ತರಳೆ ಹೆಣೆಹೆಣೆದ ಜಡೆಯು ಬಿಗಿಕಟ್ಟು ಬ್ರೋಚುನಾಗರು...

read more
ಜಡೆ ನೋಡು, ನಡು ನೋಡು..

ದೇವ-ಶಿಲ್ಪಿ ಸತ್ಯಕಾಮ ಶರ್ಮಾ ಕಾಸರಗೋಡು  ಇರಬಹುದು ಸುಂದರ ಕಂಗಳಿಗೆ ನೋಡುಗರ ಮರೆಮಾಚಿದೆ ಹಿಂದಿರುವ ಬೆವರ ಹಾರ ಕಂಬನಿಗಳಿಬ್ಬನಿ ಪುರುಷ ಮಣಿಗಳಾದ ಹರುಷ ಕ್ಷಣಗಳು ಉಳಿಪೆಟ್ಟುಗಳಿಗೆ ಚಿಮ್ಮಿ ಚಿಮ್ಮಿ ಕಂಗಳಲಿ ಕಣ್ಮರೆಯಾದ ಕಲ್ಲು ಚೂರು ಪಾರು ಒಂದಿಷ್ಟು ಧೂಳು ಬರಿಕಲ್ಲು ಹಲವರಿಗೆ ಕರುಣಿಸಿದ ಕೂಳು ಶಿಲ್ಪಿಯನು ಹೊರಗಿಟ್ಟೆ ಶಿಲ್ಪವನು...

read more
ಈ ಕರೆ ಮೊರೆ ಕೇಳಿ ಬಾರೇ..

ನಿವೇದನೆ ವನಿತಾ ಸತೀಶ  ನೀ ಮುಡಿದ ಹೂಗಳೇ ಕಲ್ಲಾಗಿ ಹೆಣೆದ ನಾಗರ ಜಡೆಯ ಎಳೆಗಳೇ ಸುರುಳಿಯಾಗಿ ಬೆನ್ನ ಹಿಂದೆ  ಜೀವನ ಭಾರ ಸ್ಥಿರವಾಗಿ ಕಲ್ಲಾಗಿ ನಿಂತೆಯಾ ಗೆಳತಿ ! ಅಂಗಾಂಗ ಸಿಂಗರಿಸಿ ಆಭರಣ ತೊಡಿಸಿ ನಲಿವು ಒಲವು ಹುಡುಕಾಟ ! ಬದುಕು ಬರೆದ ಬವಣೆ ಕೇಳದೆ ಹೋದ ಕೆತ್ತಿ ನಿನ್ನ ಕಲೆಗಾರ ಭಾವನೆಗಳ ಬೆಳಗಿ ಇಲ್ಲದ ಸಲ್ಲದ ಕಾಮ ಕೆರಳಿ...

read more
ಕಲ್ಲು ಕರಗುವ ಸಮಯ

ಸರಯೂ ಕಾದಿರುವೆ ನಿನಗಾಗಿ ಓ ನನ್ನ ಒಲವೆ ಚಡಪಡಿಸುತಿದೆ ಮನವು ಈ ಮುನಿಸು ತರವೇ   ಕಳೆದ ದಿನಗಳ ನೆನಪು ಇಹವು ನೂರಾರು ಒಂದಷ್ಟು ಕಹಿಯುಂಟು ಸಿಹಿ ಪಾಲೆ ಜೋರು ಮನ ಬಯಸುತಿದೆ ನಿನ್ನ ಸಾನಿಧ್ಯವನ್ನೆ ಮುನಿಸು ತೋರದೆ ನೀ ಬಳಿಗೆ ಬಾರೊಮ್ಮೆ . ಜಡೆ ಬಿಲ್ಲೆ ನಾಗರವು ಮುತ್ತುಗಳ ಜೊತೆಗೆ ನೆನಪುಗಳ ಜಡೆಯೊಂದ ಹೆಣೆದಿರುವೆ ವ್ಯಥೆಗೆ...

read more

Pin It on Pinterest

Share This