ಕ್ಲಿಕ್ ಆಯ್ತು ಕವಿತೆ: ಬೇಕಲ್ಲವೇ ಮಂದ ಬೆಳಕು!

naa-divakarನಾ ದಿವಾಕರ
ದೂರ ದಿಗಂತದಲ್ಲೊಂದು
ಪ್ರಣತಿ !
ಪ್ರಣತಿಯೋ ಉರಿವ
ಒಡಲೋ ಅಗ್ನಿ ಶಿಖೆಯೋ
ಕಂಗಳಿಗೆಟಕುವ ಸತ್ಯ
ಕೈಗೆಟುಕದಲ್ಲವೇ ;
ರವಿಯ ನಿದ್ರಾವಸ್ಥೆಯಲಿ
ಶಶಿಯ ಸರಸ ಸಲ್ಲಾಪ
ಜಲಗಾಮಿನಿಯೊಡನೆ
ಬೇಕಲ್ಲವೇ ಮಂದ
ಬೆಳಕು !
 
ಬಿಂಬ ಪ್ರತಿಬಿಂಬಗಳ
ಸುಪ್ತ ಭಾವಗಳಿಗೆ
ನಿಸರ್ಗವೇ ಮಡಿಲು ;
ಅದೇನು ಆಕ್ರೋಶದ
ಉರಿಯೊ ಮನ
ತಣಿಸುವ ಪರಿಯೋ ?
ತಂಪೆರೆವ ಹೊತ್ತಿನಲಿ
ಒಂಟಿಕಾಲಿನ ತಪಸ್ಸು
ಅಗ್ನಿಯ ಹಂಬಲವೋ
ಮಂದಸ್ಮಿತ ಗಂಗೆಯ
ಬಂಧನವೋ
ಹಿಂಬದಿಯ ಕೆಂಬೆಳಕಿನಲಿ
ಎಲ್ಲವೂ ನಿಗೂಢ !
 
ತೇಲುವ ದೋಣಿಗೆ
ಅಂಬಿಗನ ಹಂಗೇಕೆ
ಮುಳುಗುವ ತೆಪ್ಪಕೆ
ನೀರಿನ ಹಂಗೇಕೆ
ಕೆನ್ನಾಲಿಗೆಯ ಪಯಣ
ಭುವಿಯ ಅಣಕಿಸುವಂತಿದೆ ;
ಚಲನಶೀಲ
ಮನಸುಗಳು
ಬೆದರಿ ತೆಪ್ಪಗಾಗಿರಲು
ತೆಪ್ಪೋತ್ಸವವೇಕೆ ?
 
ಬಿಂಬ ಪ್ರತಿಬಿಂಬಗಳ
ನಡುವೆ ತಥ್ಯ ಮಿಥ್ಯದ
ನಡುವೆ ಮನಸು
ಹೊಯ್ದಾಡುತಿದೆ
ಸಾಂತ್ವನವ  ಅರಸಿ ;
ಎತ್ತ ಸಾಗುವುದು
ಏನ ಕಾಣುವುದು
ಪ್ರಶ್ನೆಗಳೇ ಹರಿಗೋಲು
ಮುಂದಣ ಪಯಣಕೆ.

‍ಲೇಖಕರು Admin

October 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: