‘ಹಿಂದುತ್ವ’ಕ್ಕೆ ಸುಪ್ರೀಂ ಕೋರ್ಟಿನ ವ್ಯಾಖ್ಯೆ

rajaram tallur low res profile

ರಾಜಾರಾಂ ತಲ್ಲೂರು

ಅಕ್ಟೋಬರ್ 25ರಂದು ಏಳು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್  ಸಂವಿಧಾನ ಪೀಠವು ‘ಹಿಂದುತ್ವ’ಕ್ಕೆ ತನ್ನದೇ ಪೀಠವೊಂದು 20 ವರ್ಷಗಳ ಹಿಂದೆ ಕೊಟ್ಟಿದ್ದ ವ್ಯಾಖ್ಯೆಯನ್ನು ಮರುಪರಿಶೀಲಿಸಲು ನಿರಾಕರಿಸಿದೆ.

1987-89 ರ ಸುಮಾರಿಗೆ ದೇಶದ ರಾಜಕಾರಣದೊಳಗೆ  ಧರ್ಮದ ಹೆಸರಲ್ಲಿ ಪಾಲ್ಗೊಳ್ಳುವಿಕೆ ಬಿರುಸಾಗಿ ಆರಂಭಗೊಂಡಿದ್ದ  ಕಾಲದಲ್ಲಿ, ಚುನಾವಣಾ ಭಾಷಣಗಳಲ್ಲಿ ಧರ್ಮದ ಹೆಸರಿನಲ್ಲಿ ಮತ ಯಾಚಿಸಿದ ಕುರಿತಾದ ಸುಮಾರು 11 ಪ್ರಕರಣಗಳಲ್ಲಿ ಅಪೀಲು ಅರ್ಜಿಗಳನ್ನು avadhi-column-tallur-verti- low res- cropಆಲಿಸಿದ ಸುಪ್ರೀಂ ಕೋರ್ಟಿನ ಅಂದಿನ ನ್ಯಾಯಮೂರ್ತಿ ಜಗದೀಶ್ ಶರನ್ ವರ್ಮಾ ಅವರು ನೀಡಿದ ತೀರ್ಪುಗಳಲ್ಲಿ ಒಂದು ಪ್ರಕರಣದ ತೀರ್ಪಿನಲ್ಲಿ ‘ಹಿಂದುತ್ವ’ದ ವ್ಯಾಖ್ಯೆಯ ಕುರಿತು ಸವಿಸ್ತಾರವಾಗಿಚರ್ಚಿಸಿದ್ದಾರೆ.

ಅದಾದ ಬಳಿಕ ಮುಂದೆ ಅಯೋಧ್ಯಾ ವಿವಾದ ತಾರಕಕ್ಕೇರಿದಲ್ಲಿಂದ ಇಲ್ಲಿಯ ತನಕ ದೇಶದ ರಾಜಕಾರಣ-ಧರ್ಮದ ವ್ಯಾಖ್ಯೆಗಳಲ್ಲಿ ಬಹಳ ಬದಲಾವಣೆಗಳಾಗಿವೆ ಎಂಬುದು ಎಲ್ಲರ ಗಮನಕ್ಕೂ ಬಂದಿದೆ. ಆ ಹಿನ್ನೆಲೆಯಲ್ಲಿ ನ್ಯಾ| ಜೆ. ಎಸ್. ವರ್ಮಾಅವರ 11-12-1995ರ ತೀರ್ಪಿನಲ್ಲಿ ಹಿಂದುತ್ವದ ಬಗ್ಗೆ ನೀಡಿರುವ ವ್ಯಾಖ್ಯಾನ ಬಹಳ ಮಹತ್ವದ್ದೆನಿಸುತ್ತದೆ. ಅದು ಇಂದಿಗೂ ಊರ್ಜಿತ ಎಂಬ ಸುಪ್ರೀಂ ಕೋರ್ಟಿನ ಅಭಿಪ್ರಾಯದ ಹಿನ್ನೆಲೆಯಲ್ಲಿ ದೇಶದ ರಾಜಕಾರಣ ನಡೆದುಬಂದ ಹಾದಿಯನ್ನುಪುನರವಲೋಕಿಸುವುದೂ ಅಗತ್ಯವಿದೆ.

ಡಾ. ರಮೇಶ್ ಯಶವಂತ್ ಪ್ರಭೂ v/s ಶ್ರೀ ಪ್ರಭಾಕರ್ ಕಾಶೀನಾಥ್ ಕುಂಟೆ ಮತ್ತು ಇತರರು ಹಾಗೂ ಬಾಳಾ ಠಾಕರೆ v/s  ಶ್ರೀ ಪ್ರಭಾಕರ್ ಕಾಶೀನಾಥ್ ಕುಂಟೆ ಮತ್ತು ಇತರರು ಪ್ರಕರಣದ ಸಿವಿಲ್ ಅಪೀಲು ಸಂಖ್ಯೆ 2835 of 1989 ಗಳಿಗೆಒಟ್ಟಾಗಿ ಸುಪ್ರೀಂ ಕೋರ್ಟು ನೀಡಿರುವ ತೀರ್ಪು ಇದು.

ಮಹಾರಾಷ್ಟ್ರ ವಿಧಾನಸಭೆಗೆ 1987 ಡಿಸೆಂಬರ್ 13 ರಂದು ಚುನಾವಣೆ ನಡೆದಿತ್ತು. ಆ ಚುನಾವಣೆಗೆ ವಿಲೇಪಾರ್ಲೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಾ. ರಮೇಶ್ ಯಶವಂತ್ ಪ್ರಭೂ ಅವರ ಪರವಾಗಿ ಬಾಳಾ ಠಾಕರೆ ಅವರು 29-11-1987ರಂದುಪಾರ್ಲೆಯಲ್ಲಿ, 9-12-1987ರಂದು ಖಾರ್ ದಂಡಾ ಶಂಕರ ದೇವಸ್ಥಾನದ ಬಳಿ ಮತ್ತು 10-12-1987ರಂದು ಪಶ್ಚಿಮ ವಿಲೇ ಪಾರ್ಲೆಯ ಜಲ್ತಾರಣ್ ಮೈದಾನದಲ್ಲಿ ಮಾಡಿದ ಚುನವಣಾ ಭಾಷಣಗಳಲ್ಲಿ ಧರ್ಮಾಧರಿತವಾಗಿ ಮತ ಯಾಚಿಸಿದ್ದರುಎಂದು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.

ಆ ದಾವೆಗೆ ನ್ಯಾ|ವರ್ಮಾ ಅವರು ನೀಡಿದ 34 ಪುಟಗಳ ತೀರ್ಪಿನಲ್ಲಿ ಹಿಂದುತ್ವದ ಬಗ್ಗೆ ವಿವರವಾಗಿ ಚರ್ಚಿಸಿ, ಹಿಂದುತ್ವ ಒಂದು ಜೀವನಕ್ರಮ ಎಂದು ತೀರ್ಮಾನ ನೀಡಿದ್ದರು. ತೀರ್ಪಿನಲ್ಲಿ, ಹಿಂದುತ್ವದ ಚರ್ಚೆಗೆ ಸಂಬಂಧಿಸಿದ ಭಾಗವನ್ನು ಇಲ್ಲಿಭಾಷಾಂತರಿಸಿ ನೀಡಲಾಗಿದೆ.

ತೀರ್ಪಿನ ಭಾಷಾಂತರಿತ ಭಾಗ:

… ಮುಂದಿನ ವಾದಾಂಶ ‘ಹಿಂದುತ್ವ’ ಮತ್ತು ‘ಹಿಂದೂಯಿಸಂ’ ನ ಅರ್ಥಕ್ಕೆ ಸಂಬಂಧಿಸಿ ಮತ್ತು ಈ ಶಬ್ದಗಳನ್ನು ಚುನಾವಣೆ ಭಾಷಣಗಳ ಸಂದರ್ಭದಲ್ಲಿ ಬಳಸುವ ಕುರಿತಾದದ್ದಾಗಿದೆ. ನಾವು ಈಗಾಗಲೇ ಜನಪ್ರಾತಿಧ್ಯ ಕಾಯಿದೆಯ 123ನೇಸೆಕ್ಷನ್ನಿನ ಉಪವಿಧಿ (3)ರ ಅರ್ಥವನ್ನು ಮತ್ತು ಅದರ ಕಾರ್ಯವ್ಯಾಪ್ತಿಯ ಮಿತಿಗಳನ್ನು ಹೇಳಿದ್ದೇವೆ. ಈ (ಆಕ್ಷೇಪವಿರುವ) ಶಬ್ದಗಳನ್ನು ಬಳಸಲಾಗಿರುವ ಯಾವುದೇ ಭಾಷಣವನ್ನು, ಅವುಗಳ ಅರ್ಥ ಏನೇ ಇರಲಿ, ಆ ಭಾಷಣದಲ್ಲಿ ಒಬ್ಬ ಅಭ್ಯರ್ಥಿಹಿಂದೂ ಆಗಿರುವನೆಂಬ ನೆಲೆಯಲ್ಲಿ ಅಥವಾ ಆತನ ಧರ್ಮದ ಕಾರಣದಿಂದಾಗಿ ಆತನಿಗೆ ಮತ ನೀಡದಂತೆ ಅಂದರೆ, ಆತ ಹಿಂದೂ ಅಲ್ಲ ಎಂದು, ಮನವಿ ಮಾಡಲಾಗಿದೆ ಎಂದು ಅರ್ಥೈಸಿಕೊಳ್ಳುವಂತಿದ್ದರೆ ಮಾತ್ರ ಆ ಭಾಷಣವು  123ನೇ ವಿಧಿಯಉಪವಿಧಿ (3)ರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ನೇರವಾಗಿ ಹೇಳಬಹುದು. ಒಂದು ಚುನಾವಣಾ ಭಾಷಣದಲ್ಲಿ ಯಾವುದೇ ಧರ್ಮದ ಹೆಸರನ್ನು ಹೇಳಿದ ಮಾತ್ರಕ್ಕೆ ಅದು  123ನೇ ವಿಧಿಯ ಉಪವಿಧಿ (3) ಮತ್ತು /ಅಥವಾ (3A)  ಗಳ ವ್ಯಾಪ್ತಿಗೆಬರವುದಿಲ್ಲ ಎಂದು ನಾವು ಸೂಚಿಸಿದ್ದೇವೆ, ಯಾಕೆಂದರೆ ಸೆಕ್ಯುಲರಿಸಂ ಬಗ್ಗೆ ಹೇಳುವಾಗ ಅಥವಾ ಯಾವುದೇ ರಾಜಕೀಯ ಪಕ್ಷ ಇನ್ನೊಂದು ಧಾರ್ಮಿಕ ಗುಂಪಿನ ಬಗ್ಗೆ ತಾರತಮ್ಯ ಮಾಡುತ್ತಿದೆ ಎಂದು ಟೀಕಿಸುವಾಗ ಅಥವಾ ಭಾರತೀಯಸಂಸ್ಕ್ರತಿಯ ಸಂರಕ್ಷಣೆಯ ಬಗ್ಗೆ ಮಾತನಾಡುವಾಗ ಧರ್ಮದ ಪ್ರಸ್ತಾಪ ಬರಬಹುದು. ಸಾರರೂಪದಲ್ಲಿ ಹೇಳಬೇಕೆಂದರೆ, ‘ಹಿಂದುತ್ವ’ ಅಥವಾ ‘ಹಿಂದೂಯಿಸಂ’ ಅಥವಾ ಯಾವುದೇ ಧರ್ಮದ ಹೆಸರನ್ನು ಚುನಾವಣಾ ಭಾಷಣವೊಂದರಲ್ಲಿ ಬಳಸಿದಮಾತ್ರಕ್ಕೆ ಅದು  123ನೇ ವಿಧಿಯ ಉಪವಿಧಿ (3) ಮತ್ತು /ಅಥವಾ (3A)  ಗಳ ವ್ಯಾಪ್ತಿಗೆ ಬರವುದಿಲ್ಲ. ಬರಬೇಕೆಂದಿದ್ದರೆ, ಮೇಲೆ ಸೂಚಿಸಿದ ಬೇರೆ ಅಂಶಗಳೂ ಆ ಭಾಷಣದಲ್ಲಿ ಇರಬೇಕು.  ಆ ಭಾಷಣವನ್ನು ಯಾರನ್ನುದ್ದೇಶಿಸಿ ಮಾಡಲಾಗಿದೆ,ಅದರ ಅರ್ಥವೇನು, ಆ ಅರ್ಥವನ್ನು ಹೇಗೆ ಪರಿಭಾವಿಸಬಹುದು ಮತ್ತು ಅದನ್ನು ಕೇಳುಗರು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದನ್ನೂ ನೋಡುವುದು ಅಗತ್ಯವಿದೆ. ಈ ಶಬ್ದಗಳನ್ನು ಚುನಾವಣಾ ಭಾಷಣಗಳಲ್ಲಿ ಬಳಸಿದಾಗ, ಅವುಅಸಂಗತವೆಂದು ಪರಿಗಣಿಸಬಾರದು.

ಎರಡೂ ಪಕ್ಷಗಳು ವಾದದ ವೇಳೆ ‘ಹಿಂದುತ್ವ’ ಮತ್ತು ‘ಹಿಂದೂಯಿಸಂ’ ನ್ನು ಹಲವಾರು ಬರವಣಿಗೆಗಳನ್ನು ಉದಾಹರಿಸುವ ಮೂಲಕ ಒಂದೇರೀತಿಯಾಗಿ ಉದ್ಧರಿಸಿವೆ. ವಕೀಲ ಶ್ರೀ. ಜೇಠ್ಮಲಾನಿ ಅವರು ಈ ಶಬ್ದಗಳು ಹೊಂದಿರುವ ಹಲವುಅರ್ಥಗಳನ್ನು ಸೂಚಿಸಿದರು ಮತ್ತು ‘ಹಿಂದುತ್ವ’ ಎಂಬ ಶಬ್ದ  ಹಿಂದೂಸ್ಥಾನ ಅಂದರೆ, ಇಂಡಿಯಾ ಎಂಬ ಭೌಗೋಳಿಕ ವಿಭಾಗವನ್ನಾಧರಿಸಿದ ಭಾರತೀಯ ಸಂಸ್ಕ್ರತಿಗೆ ಸಂಬಂಧಿಸಿದೆ ಎಂದು ಹೇಳಿದರು.     ಇನ್ನೊಂದೆಡೆ ವಕೀಲ ಶ್ರೀ ಅಶೋಕ್ದೇಸಾಯಿ ಅವರು ಚುನಾವಣಾ ಭಾಷಣಗಳಲ್ಲಿ ಬಳಸಲಾದ ‘ಹಿಂದುತ್ವ’ ಎಂಬ ಶಬ್ದವು ಹಿಂದೂ ಧರ್ಮದ ಮೇಲೆ ಒತ್ತು ನೀಡುತ್ತದೆಯೇ ಹೊರತು ಭಾರತವು ಹಿಂದೂಸ್ಥಾನವೂ ಹೌದು ಎಂಬ ಬಗ್ಗೆಯಾಗಲೀ ಮತ್ತು ಭಾರತೀಯ ಸಂಸ್ಕ್ರತಿಗೆಸಂಬಂಧಿಸಿದ್ದೆಂಬ ಬಗ್ಗೆಯಾಗಲೀ ಯಾವುದೇ ಸಂಬಂಧ ಹೊಂದಿಲ್ಲ ಎಂದು ವಾದಿಸಿದರು.

ಸಂವಿಧಾನ ಪೀಠವು  Sastri Yagnapurushadji  and Others vs.  Muldas Bhudardas  Vaishya and  Another, 1966 (3) SCR 242 ಪ್ರಕರಣದಲ್ಲಿ ಹೀಗೆ ಹೇಳಿದೆ : “ಹಿಂದೂಗಳು ಯಾರು ಮತ್ತು ಹಿಂದೂ ಧರ್ಮದ ಸ್ಥೂಲಸ್ವರೂಪ ಏನು ಎಂಬುದನ್ನು ವಿಚಾರಿಸುವುದು ಎರಡು ಪಕ್ಷಗಳ ನಡುವಿನ ಈ ದಾವೆಯಲ್ಲಿ ನಾವು ಮಾಡಬೇಕಾದ ಮೊದಲ ಕೆಲಸವಾಗಿದೆ.  “ಹಿಂದೂ” ಶಬ್ದದ ಚರಿತ್ರೆ ಮತ್ತು ಹುಟ್ಟಿನ ಶೋಧ (etymology)ದ ಕುರಿತು ಭಾರತತಜ್ನರಲ್ಲಿಏಕಾಭಿಪ್ರಾಯ ಇಲ್ಲ; ಆದರೆ, ವಿದ್ವಾಂಸರು ಸಾಮಾನ್ಯವಾಗಿ ಒಪ್ಪಿರುವಂತೆ, “ಹಿಂದೂ” ಪದವು ಪಂಜಾಬದಿಂದ ಹರಿಯುವ, ಇಂಡಸ್ ಎಂದೂ ಕರೆಯಲಾಗುವ ಸಿಂಧೂ ನದಿಯಿಂದ ವ್ಯುತ್ಪತ್ತಿಯಾಗಿದೆ. “ಆರ್ಯನ್ ಜನಾಂಗದ ಆ ಸಮುದಾಯ”ಎಂದು ಉಲ್ಲೇಖಿಸುವ ಮೊನಿಯರ್ ವಿಲಿಯಮ್ಸ್ “ಮಧ್ಯ ಏಷ್ಯಾದಿಂದ ಬೆಟ್ಟಗಳನ್ನು ದಾಟಿ, ಭಾರತಕ್ಕೆ ವಲಸೆ ಬಂದು, ಮೊದಲಿಗೆ ಸಿಂಧೂ ನದಿಯ (ಈಗ ಇಂಡಸ್ ಎಂದು ಕರೆಯಲಾಗುತ್ತದೆ) ತಟದ ಆಸುಪಾಸಿನ ಜಿಲ್ಲೆಗಳಲ್ಲಿ ನೆಲೆಯಾಯಿತು.ಪರ್ಷಿಯನ್ನರು ಈ ಶಬ್ದವನ್ನು ಹಿಂದೂ ಎಂದು ಉಚ್ಛರಿಸುತ್ತಿದ್ದರು ಮತ್ತು ತಮ್ಮ ಆರ್ಯನ್ ಸಹೋದರರನ್ನು ಹಿಂದೂಗಳೆಂದು ಕರೆದರು. ಹೆಚ್ಚಿನಂಶ ಇಂಡಿಯಾದ ಬಗ್ಗೆ ಮೊದಲ ಬಾರಿಗೆ ಪರ್ಷಿಯನ್ನರಿಂದ ಕೇಳಿ ತಿಳಿದ ಗ್ರೀಕರು, ಉಸಿರಿನ ಜೊತೆಉಚ್ಛರಿಸಲು ಸುಲಭವಾಗುವಂತೆ ಹಿಂದೂಗಳನ್ನು “ಇಂದೋಯಿ” ಎಂದು ಕರೆದರು” (“ಹಿಂದೂಯಿಸಂ” ಮೋನಿಯರ್ ವಿಲಿಯಮ್ಸ್ p.1).             The Encyclopedia  of  Religion  and     Ethics,   Vol.    VI,  “ಹಿಂದೂಯಿಸಂ”ನ್ನು ಭಾರತೀಯ ಚಕ್ರಾಧಿಪತ್ಯದ (p. 686) ಹಾಲೀ ಇರುವ ಬಹುಸಂಖ್ಯಾತ ಜನಸಮುದಾಯ ಅನುಸರಿಸುವ ಧರ್ಮದ ಹೆಸರು ಎಂದಿದೆ.     ಡಾ| ರಾಧಾಕ್ರಷ್ಣನ್ ಅವರು ಕಂಡಂತೆ; “ಹಿಂದೂ ನಾಗರಿಕತೆಯನ್ನು ಹಾಗೇಕೆಕರೆಯಲಾಗುತ್ತದೆ ಎಂದರೆ, ಅದರ ಆದಿಪುರುಷರು ಅಥವಾ ಅದರ ಮೂಲ ಆಚರಣಕಾರರು ಸಿಂಧೂ (ಇಂಡಸ್) ನದಿಯ ತಟವಿದ್ದ ಉತ್ತರ-ಪಶ್ಚಿಮದ ಗಡಿನಾಡು ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ನೆಲೆಸಿದ್ದರು. ಇದನ್ನು ಹಿಂದೂ ಪುರಾತನಬರಹಗಳಲ್ಲಿ ಭಾರತದ ಚರಿತ್ರೆಯ ವೇದಕಾಲ ಎಂದು ಗುರುತಿಸಲಾಗುವ ಸಮಯದಲ್ಲಿ ಚಾಲ್ತಿ ಇದ್ದ ವೇದಗಳಲ್ಲಿ ಹಳೆಯದಾದ ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ. ಸಿಂಧೂ ನದಿಯ ಭಾರತದ ದಂಡೆಯ ಮೇಲೆ ವಾಸವಿದ್ದವರನ್ನು ಪರ್ಷಿಯನ್ನರುಮತ್ತು ಆ ಬಳಿಕ ಪಶ್ಚಾತ್ಯ ಆಕ್ರಮಣಕಾರರು ಹಿಂದೂ ಎಂದು ಕರೆದರು.”   (“The  Hindu   View  of   Life”    Dr. Radhakrishnan,  p.12).   “ಹಿಂದೂ” ಶಬ್ದದ ಹುಟ್ಟು ಇದು.

A worker at a jewellery showroom displays gold idols of Hindu elephant god Ganesh (L) and Hindu goddess Lakshmi in Kolkata August 30, 2013. REUTERS/Rupak De Chowdhuri/Files

A worker at a jewellery showroom displays gold idols of Hindu elephant god Ganesh (L) and Hindu goddess Lakshmi in Kolkata August 30, 2013. REUTERS/Rupak De Chowdhuri/Files

ಹಿಂದೂ ಧರ್ಮದ ಬಗ್ಗೆ ಯೋಚಿಸುವಾಗ, ಹಿಂದೂ ಧರ್ಮವನ್ನು ವ್ಯಾಖ್ಯಾನಿಸುವುದು ಅಥವಾ ಸಮರ್ಪಕವಾಗಿ ವಿವರಿಸುವುದು ಅಸಾಧ್ಯವಲ್ಲವಾದರೂ ಕಷ್ಟ. ಬೇರೆ ಧರ್ಮಗಳಲ್ಲಿರುವಂತೆ ಹಿಂದೂ ಧರ್ಮದಲ್ಲಿ ಒಬ್ಬ ಪ್ರವಾದಿ ಇಲ್ಲ; ಒಂದು ದೇವರಆರಾಧನೆ ಇಲ್ಲ; ಯಾವುದೇ ಒಂದು ನೀತಿ ಸಂಹಿತೆ ಇಲ್ಲ; ಅದು ಒಂದು ನಿರ್ದಿಷ್ಟ ತತ್ವಸಿದ್ಧಾಂತವನ್ನು ನಂಬುವುದಿಲ್ಲ; ಯಾವುದೋ ಒಂದು ಧಾರ್ಮಿಕ ವಿಧಿ ವಿಧಾನವನ್ನು ಅನುಸರಿಸುವುದಿಲ್ಲ; ವಾಸ್ತವದಲ್ಲಿ ಅದು ಯಾವುದೇ ಒಂದು ಧರ್ಮದಅಥವಾ ಜನಾಂಗದ ನಿರ್ಧಿಷ್ಟ ಸಾಂಪ್ರದಾಯಿಕ ಲಕ್ಷಣಗಳನ್ನು ಹೊಂದಿಯೇ ಇಲ್ಲ. ಅದನ್ನು ಸ್ಥೂಲವಾಗಿ ಒಂದು ಜೀವನಪದ್ಧತಿ ಎನ್ನಬಹುದೇ ಹೊರತು ಅದಕ್ಕಿಂತ ಹೆಚ್ಚೇನನ್ನೂ ಹೇಳಲಾಗದು.

….ಡಾ. ರಾಧಾಕ್ರಷ್ಣನ್ ಅವರ ಪ್ರಕಾರ ‘ಹಿಂದೂ’ ಎಂಬುದು ಮೂಲತಃ ಒಂದು ಭೌಗೋಳಿಕ ವ್ಯಾಪ್ತಿಯೇ ಹೊರತು ಜನಾಂಗ ವಿಶಿಷ್ಟ ಪದವಲ್ಲ. ಅದು ಒಂದು ಸುವ್ಯಾಖ್ಯಾನಿತ ಭೌಗೋಳಿಕ ಪರಿಸರದಲ್ಲಿ ವಾಸವನ್ನಷ್ಟೇ ಸೂಚಿಸುತ್ತದೆ.    ಬುಡಕಟ್ಟುಗಳವರು, ಮೂಲನಿವಾಸಿಗಳು ಮತ್ತು ಅರೆನಾಗರಿಕ ಜನರು, ಸುಸಂಸ್ಕ್ರತ ದ್ರಾವಿಡರು ಮತ್ತು ವೇದಿಕ್ ಆರ್ಯನ್ನರು ಎಲ್ಲರೂ ಹಿಂದೂಗಳಾಗಿದ್ದರು ಮತ್ತು ಒಂದೇ ತಾಯಿಯ ಮಕ್ಕಳಾಗಿದ್ದರು. ಭಾರತದಲ್ಲಿ ಬದುಕುತ್ತಿರುವ ಎಲ್ಲ ಸ್ತ್ರೀಪುರುಷರು ವಿಭಿನ್ನ ಸಮುದಾಯಗಳಿಗೆ ಸೇರಿದವರು, ವಿಭಿನ್ನ ದೇವರುಗಳನ್ನು ಆರಾಧಿಸುತ್ತಿದ್ದರು, ಮತ್ತು ವಿಭಿನ್ನ ಸಂಪ್ರದಾಯಗಳನ್ನು ಆಚರಿಸುತ್ತಿದ್ದರು ಎಂಬುದನ್ನು ಹಿಂದೂ ಬುದ್ಧಿಜೀವಿಗಳು ಗುರುತಿಸಿದ್ದರು (ಕೂರ್ಮಪುರಾಣ)  (Ibid p. 12).

ಮೊನಿಯರ್ ವಿಲಿಯಮ್ಸ್ ಕಂಡುಕೊಂಡಂತೆ  “ಹಿಂದೂಯಿಸಂ ಎಂಬುದು ಬರಿಯ ಬ್ರಾಹ್ಮಣಿಕೆಯನ್ನು ಆಧರಿಸಿದ ದೈವನಂಬಿಕೆ ಅಲ್ಲ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಜನಾಂಗಗಳ ಸಂಕೀರ್ಣವಾದ ಜಿಡುಕನ್ನೂ ಮತ್ತು ಕ್ರಮೇಣ ಅದುಸಂಗ್ರಹಿಸಿಕೊಂಡು ಬಂದ ನಂಬಿಕೆಗಳನ್ನು ಅದು ಶೋಧಕ್ಕಾಗಿ ನಮ್ಮೆದುರು ಪ್ರಸ್ತುತಪಡಿಸುತ್ತದೆ, ಇದನ್ನು ನಾವು ಗಂಗಾನದಿಯ ವೈಶಾಲ್ಯಕ್ಕೆ ಹೋಲಿಸಬಹುದೇನೋ, ಯಾಕೆಂದರೆ ಅದು ಹಲವು ಉಪನದಿಗಳು, ತೊರೆಗಳ ಸವಿಸ್ತಾರಸಂಗಮವಾಗಿದೆ…    ಹಿಂದೂ ಧರ್ಮವು ಹಿಂದೂಗಳ ಸಮಗ್ರತೆಯ ಗುಣಲಕ್ಷಣದ ಪ್ರತಿಬಿಂಬವಾಗಿದೆ, ಅದು ಏಕ ವ್ಯಕ್ತಿ ಅಲ್ಲ. ಅದು ಅನೇಕ. ವಿಶ್ವವ್ಯಾಪಿ ಗ್ರಾಹ್ಯತೆ ಅದಕ್ಕೆ ಆಧಾರ. ಅದು ಸತತವಾಗಿ ಸನ್ನಿವೇಶಗಳಿಗೆ ತನ್ನನ್ನುಹೊಂದಿಸಿಕೊಳ್ಳುವ ಗುರಿಯನ್ನು ಸಾಧಿಸುತ್ತಾ ಬಂದಿದೆ, ಮತ್ತು ಮೂರು ಸಾವಿರ ವರ್ಷಗಳಿಗೂ ಮಿಕ್ಕಿ ಕಾಲ ಈ ಹೊಂದಿಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಬಂದಿದೆ. ಅದು ಮೊದಲು ಹುಟ್ಟಿದ ಬಳಿಕ ಪ್ರತಿಯೊಂದುಜನಾಂಗದಿಂದಲೂ ಸ್ವಲ್ಪವನ್ನಾದರೂ ಸ್ವೀಕರಿಸಿ, ನುಂಗಿ, ಜೀರ್ಣಿಸಿಕೊಂಡು, ಅರ್ಥೈಸಿಕೊಳ್ಳುತ್ತಾ ಬಂದಿದೆ “.  (“Religious Thought & Life     in India” by Monier Williams, p. 57).         ಯಾವುದೇ ಒಂದುಗುರುತಿಸಲಾಗಿರುವ ಧರ್ಮ ಅಥವಾ ಧಾರ್ಮಿಕ ಜನಾಂಗಕ್ಕೆ ಅನ್ವಯಿಸಬಹುದಾದ ಯಾವತ್ತೂ ತಪಾಸಣಾ ಪರಿಕರಗಳನ್ನು ಹಿಂದೂ ಧರ್ಮದ ಸಮಸ್ಯೆಗಳಿಗೆ ಅಳವಡಿಸಿನೋಡುವುದು ಪರ್ಯಾಪ್ತವೆನ್ನಿಸುವುದಿಲ್ಲ. ಸಾಮಾನ್ಯವಾಗಿಗುರುತಿಸಲಾಗುವ ಯಾವುದೇ ಧರ್ಮ ಅಥವಾ ಧಾರ್ಮಿಕ ಜನಾಂಗ ಒಂದಿಷ್ಟು ತಾತ್ವಿಕ ನೆಲೆಗಟ್ಟುಗಳು ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿರುತ್ತದೆ. ಈ ರೀತಿಯ ತಪಾಸಣೆ ಹಿಂದೂ ಧರ್ಮಕ್ಕೆ ಅನ್ವಯವಾಗುತ್ತದೆಯೆ? ಈ ಪ್ರಶ್ನೆಗೆಉತ್ತರಿಸುವಾಗ ನಾವು ಭಾರತೀಯ ತತ್ವಶಾಸ್ತ್ರದ ಬಗ್ಗೆ ಡಾ ರಾಧಾಕ್ರಷ್ಣನ್ ಅವರು ಕಂಡುಕೊಂಡಿರುವ ವಿಚಾರಗಳನ್ನು ಆಧರಿಸಬೇಕಾಗುತ್ತದೆ. (“Indian     Philosophy” by  Dr. Radhakrishnan,  Vol.     I, pp.  22-23). ಪ್ರಾಚೀನಭಾರತದಲ್ಲಿ ಬೇರೆ ದೇಶಗಳಲ್ಲಿರುವಂತೆ ತತ್ವಶಾಸ್ತ್ರವು ಬೇರಾವುದೋ ವಿಜ್ನಾನಕ್ಕೆ ಅಥವ ಕಲೆಗೆ ಹೆಚ್ಚುವರಿ ಭಾಗವಾಗಿರಲಿಲ್ಲ, ಬದಲಾಗಿ ಸ್ವತಂತ್ರವಾದ ಮತ್ತು ಪ್ರಮುಖವಾದ ಭಾಗವಾಗಿತ್ತು

. ….. “ಶತ ಶತಮಾನಗಳ ಚರಿತ್ರೆಯಲ್ಲಿ,   ಡಾ. ರಾಧಾಕ್ರಷ್ಣನ್ ಅವರ ಪ್ರಕಾರ, “ಭಾರತ ಹಾದುಬಂದಿರುವ ಎಲ್ಲ ಸನ್ನಿವೇಶಗಳಲ್ಲಿ, ಒಂದು ಗಮನಾರ್ಹ ಗುರುತು ಎದ್ದುಕಾಣುತ್ತದೆ.  ಕಡುನಂಬಿಕೆ ಇಟ್ಟಿರುವ ಕೆಲವು ಮಾನಸಿಕ ವೈಶಿಷ್ಟ್ಯಗಳೇಅದರ ವಿಶೇಷ ಸಂಸ್ಕ್ರತಿ, ಮತ್ತು ಭವಿಷ್ಯದಲ್ಲೂ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡಿರುವ ತನಕ ಅದು ಭಾರತೀಯರ ಗುಣಲಕ್ಷಣದ ವಿಶಿಷ್ಟ ಗುರುತಾಗಿ ಉಳಿಯಲಿದೆ”. ಭಾರತೀಯ ಜ್ನಾನದ ಚರಿತ್ರೆಯನ್ನು ಕಂಡಾಗ ಸ್ಪಷ್ಟವಾಗಿ ಹೊರಹೊಮ್ಮುವಒಂದು ವಿಚಾರವೆಂದರೆ, ಹಿಂದೂ ಧರ್ಮದ ಅಭಿವ್ರದ್ಧಿ ಯಾವತ್ತಿಗೂ ಸತ್ಯಕ್ಕೆ ಹಲವು ಮುಖಗಳು ಎಂಬ ಎಚ್ಚರಿಕೆಯನ್ನು ಆಧರಿಸಿದ ಅವಿರತ ಸತ್ಯಶೋಧದಿಂದ ಪ್ರೇರಿತವಾಗಿತ್ತು. ಸತ್ಯ ಒಂದೇ, ಆದರೆ ವಿದ್ವಾಂಸರು ಅದನ್ನು ವಿಭಿನ್ನವಾಗಿವಿವರಿಸಬಲ್ಲರು. (..)

cartoon communalಭಾರತೀಯ ಮನಸ್ಸು ಶತಶತಮಾನಗಳಿಂದ ಯಾವತ್ತೂ ಸತತವಾಗಿ ದೇವರ ಸ್ವರೂಪ ಮತ್ತು ಬದುಕಿನ ಅಂತ್ಯದಲ್ಲಿ ಆತ್ಮ ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ, ಜೀವಾತ್ಮ ಮತ್ತು ಪರಮಾತ್ಮದ ಬಗ್ಗೆ ಯೋಚಿಸುತ್ತಾ ಬಂದಿದೆ.  ಡಾರಾಧಾಕ್ರಷ್ಣನ್ ಅವರ ಪ್ರಕಾರ “ ನಾವು ಈ ವೈವಿಧ್ಯಮಯ ಅಭಿಪ್ರಾಯಗಳ ಸಾರವನ್ನು ಗ್ರಹಿಸಿದರೆ, ಭಾರತೀಯ ಯೋಚನೆಗಳ ಮೂಲ ಸ್ಪೂರ್ತಿ ಸಾಮಾನ್ಯವಾಗಿ ಇರುವುದು ಬದುಕು ಮತ್ತು ನಿಸರ್ಗವನ್ನು ಗ್ರಹಿಸುವ ಮತ್ತು ಅವೆರಡೂ ಒಂದೇಎಂಬ ವಿಶೇಷ ಲಕ್ಷಣದಲ್ಲಿ. ಇದು ಮೇಲುನೋಟಕ್ಕೆ ಸರಳವೆನ್ನಿಸಿದರೂ, ಸಜೀವವಾಗಿ ಹಲವು ವಿಧಗಳಲ್ಲಿ ವ್ಯಕ್ತವಾಗುತ್ತದೆ, ಪರಸ್ಪರ ತೀರಾ ವೈರುಧ್ಯಗಳೊಂದಿಗೂ ಅದು ವ್ಯಕ್ತಗೊಳ್ಳಬಲ್ಲುದು  “. (..)

…..  ಸಹಜವಾಗಿಯೇ, ಹಿಂದೂ ಧರ್ಮವು ಬಹಳ ಆರಂಭದಿಂದಲೇ ಸತ್ಯ ಎಂಬುದು  ಹಲವು ಮುಖಗಳನ್ನು ಮತ್ತು ಹಲವು ನೋಟಗಳಲ್ಲಿ ಹಲವು ಅಂಶಗಳನ್ನು ಅದು ಹೊಂದಿದೆ, ಅದನ್ನು ಯಾರೂ ಪರಿಪೂರ್ಣವಾಗಿ ವಿವರಿಸುವುದು ಕಷ್ಟಎಂದು ಅರಿತಿತ್ತು.  ಈ ಜ್ನಾನದ ಕಾರಣದಿಂದಾಗಿ ಸಹಜವಾಗಿಯೇ ಹಿಂದೂಧರ್ಮದಲ್ಲಿ ಸಹನೆ, ಅರ್ಥೈಸಿಕೊಳ್ಳುವ ಮನಸ್ಸು ಮತ್ತು ಎದುರಾಳಿಯ ದ್ರಷ್ಟಿಕೋನವನ್ನು ಕೇಳಿತಿಳಿದುಕೊಳ್ಳುವ ಸ್ಫೂರ್ತಿ ಇತ್ತು. ಹಾಗಾಗಿಯೇ ಭಾರತದಲ್ಲಿ ಪ್ರಮುಖತಾತ್ವಿಕತೆಗಳ ಕುರಿತಾಗಿ ಹೊರಹೊಮ್ಮಿರುವ ಹಲವು ದ್ರಷ್ಟಿಕೋನಗಳನ್ನು ಒಂದೇ ಮರದ ಹಲವು ಕವಲುಗಳು ಎಂಬುದಾಗಿ ಪರಿಭಾವಿಸಲಾಗುತ್ತದೆ.      ಅಡ್ಡಹಾದಿಗಳು ಮತ್ತು ಕಾಣದ ತಿರುವುಗಳು ಸತ್ಯದ ಅರಿವಿನ ಮುಖ್ಯರಸ್ತೆಯಲ್ಲಿ ಹೇಗೋಸೇರಿಕೊಂಡುಬಿಡುತ್ತಿದ್ದವು .”  (..)  ಹಿಂದೂ ತಾತ್ವಿಕತೆಯನ್ನು ಸ್ಥೂಲವಾಗಿ ನೋಡಿದಾಗ, ಅಲ್ಲಿ ಯಾವುದೇ ಸಿದ್ಧಾಂತವನ್ನು ನಂಬಿಕೆಗೆ ವಿರುದ್ಧವಾದುದೆಂದು ದೂರ ಇರಿಸುವುದಾಗಲೀ ಅಥವಾ ತಿರಸ್ಕರಿಸುವುದಾಗಲೀ ಸಾಧ್ಯವಿಲ್ಲ ಎಂಬುದುಅರಿವಾಗುತ್ತದೆ.

xxx                 xxx              xxx

ಹಿಂದೂ ಧರ್ಮವನ್ನು ಮತ್ತು ತತ್ವಶಾಸ್ತ್ರವನ್ನು ಗಮನಿಸಿದಾಗ, ಅಲ್ಲಿ ಕಾಲಕಾಲಕ್ಕೆ ಸನ್ಯಾಸಿಗಳು ಮತ್ತು ಧರ್ಮ ಸುಧಾರಕರು ಹಿಂದೂ ಯೋಚನೆಗಳು ಮತ್ತು ಆಚರಣೆಗಳಲ್ಲಿದ್ದ ಭ್ರಷ್ಟ ಮತ್ತು ಮೂಢನಂಬಿಕೆಗಳನ್ನು ತೊಡೆದುಹಾಕಲುಪ್ರಯತ್ನಿಸಿದ್ದು ಕಂಡುಬರುತ್ತದೆ ಮತ್ತು ಅದು ಹಿಂದೂಗಳಲ್ಲಿ ವಿಭಿನ್ನ ಧರ್ಮ ಪಂಥಗಳನ್ನು ಸ್ರಷ್ಟಿಸಿತು. ಬುದ್ಧನಿಂದ  ಬೌದ್ಧ ಧರ್ಮ, ಮಹಾವೀರನಿಂದ ಜೈನಧರ್ಮ,     ಬಸವಣ್ಣನಿಂದ ಲಿಂಗಾಯತ ಧರ್ಮ, ಜ್ನಾನೇಶ್ವರ ಮತ್ತು ತುಕಾರಾಮರಿಂದವಾರಕಾರಿ ಪಂಥ, ಗುರುನಾನಕರಿಂದ ಸಿಖ್ಖಧರ್ಮ, ದಯಾನಂದರಿಂದ ಆರ್ಯಸಮಾಜ, ಚೈತನ್ಯರಿಂದ ಭಕ್ತಿಪಂಥ; ಮತ್ತು ರಾಮಕ್ರಷ್ಣರು ಹಾಗೂ ವಿವೇಕಾನಂದರ  ಬೋಧನೆಗಳ ಮೂಲಕ ಹಿಂದೂಧರ್ಮ ಅತ್ಯಂತ ಆಕರ್ಷಕ, ಪ್ರಗತಿಪರ ಮತ್ತುಚಲನಶೀಲ ರೂಪ ಪಡೆಯಿತು. ನಾವು ಈ ಸಂತರು ಮತ್ತು ಸುಧಾರಕರ ಬೋಧನೆಗಳನ್ನು ಅಧ್ಯಯನ ಮಾಡಿದರೆ, ಅವರ ದ್ರಷ್ಟಿಕೋನಗಳಲ್ಲಿರುವ ಸವಿಸ್ತಾರವಾದ ಹರಹು ನಮ್ಮ ಅರಿವಿಗೆ ಬರುತ್ತದೆ; ಆದರೆ ಮೂಲದಲ್ಲಿ ಈ ಎಲ್ಲವೈವಿಧ್ಯತೆಗಳನ್ನು ಜೋಡಿಸುವ ಒಂದು ತೆಳ್ಳಗಿನ, ವಿವರಿಸಲಾಗದ ಬಂಧವೂ ಇದ್ದು, ಆ ಬಂಧವೇ ಈ ಎಲ್ಲ ವೈವಿಧ್ಯಗಳನ್ನು ಹಿಂದೂ ಧರ್ಮದ ಸ್ಥೂಲವೂ ಮತ್ತು ಪ್ರಗತಿಪರವೂ ಆದ ಕಟ್ಟಿನೊಳಗಿರಿಸುತ್ತದೆ.

xxx                 xxx              xxx

…. ಹಿಂದೂ ಧರ್ಮದ ಈ ಸ್ಥೂಲ ಸ್ವರೂಪವನ್ನು ಟಾಯ್ನಬೀ ಸ್ಪಷ್ಟವಾಗಿ ವಿವರಿಸುವುದು ಗಮನಾರ್ಹವಾಗಿದೆ.       ಟಾಯ್ನಬೀಯ ಪ್ರಕಾರ:  ” ಸಾಮಾಜಿಕ ಆಚರಣೆಗಳ ತಳಹದಿಯಿಂದ ಬೌದ್ಧಿಕ ತಳಹದಿಗೆ ನಾವು ಹಾದು ಬರುವಾಗ,ಹಿಂದೂಯಿಸಂ ಕೂಡ ದಕ್ಷಿಣ ಪಶ್ಚಿಮ ಏಷ್ಯಾದ ಗುಂಪುಗಳ ಧರ್ಮ ಮತ್ತು ಸಿದ್ಧಾಂತಗಳೊಂದಿಗೆ ಹೋಲಿಕೆಯಾಗುತ್ತದೆ.  ಇದಕ್ಕೆ ವ್ಯತಿರಿಕ್ತವಾಗಿ ಹಿಂದೂಯಿಸಂ ಪಾಶ್ಚಿಮಾತ್ಯ ಜಗತ್ತಿನ ಕ್ರಿಸ್ತಪೂರ್ವ, ಇಸ್ಲಾಂಪೂರ್ವ ಧರ್ಮಗಳಂತಹದೇಹೊರನೋಟವನ್ನೂ ಹೊಂದಿದೆ. ಅವುಗಳಂತೆಯೇ ಸತ್ಯಕ್ಕೆ ಮತ್ತು ಮೋಕ್ಷಕ್ಕೆ ಒಂದಕ್ಕಿಂತ ಹೆಚ್ಚು ಹಾದಿಗಳಿವೆ ಎಂಬುದನ್ನೂ ಹಿಂದೂಯಿಸಂ ಒಪ್ಪುತ್ತದೆ. ಈ ವಿಭಿನ್ನ ಹಾದಿಗಳು ಪರಸ್ಪರ ತಾಳೆಯಾಗುವುದು ಮಾತ್ರವಲ್ಲದೇ ಪರಸ್ಪರಪೂರಕವಾಗಿಯೂ ಇವೆ ” (“The     present-Day   Experiment    in   Western     Civilisation” by Toynbee, pp. 48-49).

ನಮ್ಮ ಸಂವಿಧಾನ ನಿರ್ಮಾಪಕರಿಗೆ ಈ ಹಿಂದೂ ಧರ್ಮದ ವಿಸ್ತಾರವಾದ ಮತ್ತು ಸಮಗ್ರವಾದ ಗುಣಲಕ್ಷಣಗಳ ಸಂಪೂರ್ಣ ಅರಿವಿತ್ತು; ಹಾಗಾಗಿ ಧರ್ಮದ ಆಚರಣೆಯನ್ನು ಮೂಲಭೂತ ಹಕ್ಕನ್ನಾಗಿ ಖಚಿತಪಡಿಸುವುದರ ಜೊತೆಗೆ  ಆರ್ಟಿಕಲ್25ಕ್ಕೆವಿವರಣೆ  II ನಿಯಮ (2)ರ ಉಪನಿಯಮ (b) ಯಲ್ಲಿ ಬಹಳ ಸ್ಪಷ್ಟವಾಗಿ “ಹಿಂದೂಗಳು ಎಂದರೆ ಅದರಲ್ಲಿ ಸಿಖ್ಖರು, ಜೈನರು, ಅಥವಾ ಬೌದ್ಧರು ಸೇರಿರುತ್ತಾರೆ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳನ್ನೂ ಇದೇರೀತಿಯಲ್ಲಿಪರಿಭಾವಿಸಬೇಕು.”   ಎಂದಿದೆ  (emphasis supplied)     (ಪುಟಗಳು 259-266)

ಮುಂದೆ, ಸಂವಿಧಾನ ಪೀಠವೊಂದರ ತೀರ್ಪಿನಲ್ಲಿ Commr.  of Wealth Tax,  Madras &  Ors. vs. Late R. Sridharan by L. Rs., (1976) Supp.  SCR 478, ‘ಹಿಂದೂಯಿಸಂ’ ಎಂಬುದನ್ನು ಅದೇರೀತಿಯಾಗಿಅರ್ಥಮಾಡಿಕೊಳ್ಳಲಾಗಿದ್ದು, ಹೀಗೆ ಹೇಳಲಾಗಿದೆ;          “….ಹಿಂದೂಯಿಸಂ ತನ್ನಲ್ಲಿ ಹಲವು ನಂಬಿಕೆಗಳನ್ನು, ವಿಧಿಗಳನ್ನು, ಆಚರಣೆಗಳನ್ನು, ಮತ್ತು ಆರಾಧನೆಗಳನ್ನು ಒಳಗೊಂಡಿರುವುದರಿಂದ ‘ಹಿಂದೂ’ ಎಂಬ ಶಬ್ದವನ್ನು ನಿಖರವಾಗಿವ್ಯಾಖ್ಯಾನಿಸುವುದು ಕಷ್ಟ ಎಂಬುದು ಸಾಮಾನ್ಯ ತಿಳಿವಳಿಕೆ.  “ಹಿಂದೂ” ಶಬ್ದ ಹೇಗೆ ಹುಟ್ಟಿತೆಂಬ ಬಗ್ಗೆ ಚಾರಿತ್ರಿಕ ಮತ್ತು ವ್ಯುತ್ಪತ್ತಿ ಶಾಸ್ತ್ರಕ್ಕನುಗುಣವಾಗಿ ಮುಖ್ಯನ್ಯಾಯಮೂರ್ತಿಗಳಾದ ಗಜೇಂದ್ರಗಢ್ಕರ್   Shastri Yagnapurushdasji & Ors.     v.  Muldas  Bhundardas  Vaishya  &  Anr.     (A.I.R. 1966 S.C. 1119) ಪ್ರಕರಣದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ .

ವೆಬ್ ಸ್ಟರ್ ನ ಮೂರನೇ ಅಂತಾರಾಷ್ಟ್ರೀಯ ಇಂಗ್ಲಿಷ್ ಡಿಕ್ಷನರಿ ವಿಸ್ತ್ರತ ಆವ್ರತ್ತಿಯಲ್ಲಿ, ಹಿಂದೂಯಿಸಂನ್ನು ಈ ರೀತಿಯಾಗಿ ವ್ಯಾಖ್ಯಾನಿಸಲಾಗಿದೆ : “ಭಾರತೀಯ ಉಪಖಂಡಕ್ಕೆ ಸೀಮಿತವಾಗಿರುವ ಸಂಕೀರ್ಣವಾದ ಸಾಮಾಜಿಕ, ಸಾಂಸ್ಕೃತಿಕಮತ್ತು ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳನ್ನು ವಿಕಸಿಸಿಕೊಂಡಿರುವ ಮತ್ತು ಜಾತಿ ವ್ಯವಸ್ಥೆಯಿಂದ ಗುರುತಾಗಿರುವ, ಎಲ್ಲ ರೂಪ ಮತ್ತು ಸಿದ್ಧಾಂತಗಳನ್ನು ಏಕರೂಪಿ ಆತ್ಮ ಎಂದು ನಂಬಿರುವ, ಸತ್ಯ, ಮೋಕ್ಷ ಮತ್ತು ಕರ್ಮಯೋಗಗಳಲ್ಲಿನಂಬಿಕೆ ಇರಿಸಿರುವ, ಜನ್ಮ ಮತ್ತು ಪುನರ್ಜನ್ಮಗಳ ಸರಣಿಯಿಂದ ಬಿಡುಗಡೆ ಪಡೆಯಲು ಜ್ಞಾನದ ಹಾದಿ ಮತ್ತು ಭಕ್ತಿಯ ಹಾದಿಯನ್ನು ಅನುಸರಿಸುವ; ಜೀವನ ವಿಧಾನ ಮತ್ತು ಯೋಚನಾ ರೂಪವೇ ಹಿಂದೂ.”

ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ  (15ನೇ ಆವೃತ್ತಿ)ಯಲ್ಲಿ, ‘ಹಿಂದೂಯಿಸಂ’ನ್ನು ಹೀಗೆ ಅರ್ಥೈಸಲಾಗಿದೆ “ಹಿಂದೂ ನಾಗರಿಕತೆ (ಮೂಲತಃ ಇಂಡಸ್ ನದಿ ತಟದ ವಾಸಿಗಳು).  ಅದು ಇಂಡಿಯನ್ ನಾಗರಿಕತೆ 2000 ವರ್ಷಗಳ ಇತಿಹಾಸಹೊಂದಿರುವುದನ್ನು ಗುರುತಿಸುತ್ತದೆ,     ಅಲ್ಲಿಂದ ಅದು ಕ್ರಮೇಣ ಕ್ರಿಸ್ತಪೂರ್ವ 2ನೇ ಮಿಲೆನ್ನಿಯಂನ ಅಂತ್ಯದಲ್ಲಿ ಭಾರತದಲ್ಲಿ ನೆಲೆಸಿದ ಇಂಡೋ-ಯುರೋಪಿಯನ್ ಜನಸಮುದಾಯಗಳ ಧರ್ಮವಾಗಿದ್ದ ವೇದಗಳಿಂದ ವಿಕಸನಗೊಂಡಿದೆ.     ಅದುಬಹಳ ವೈವಿಧ್ಯಮಯವಾದ ಬಹುತ್ವವನ್ನು ಏಕಸೂತ್ರದಲ್ಲಿ ಬಂಧಿಸುವುದರಿಂದ, ಹಿಂದೂಯಿಸಂ ಎಂಬುದು ಬಹಳ ಸಂಕೀರ್ಣವಾದ ಸಾತತ್ಯ ಸಹಿತ ಪೂರ್ಣತೆಯಿಂದ ಕೂಡಿದ್ದು, ಅದು ಇಡಿಯ ಬದುಕನ್ನು ಆವರಿಸುವುದರಿಂದ, ಅದರಲ್ಲಿಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ ಮತ್ತು ಕಲಾತ್ಮಕ ಅಂಶಗಳಿವೆ. ಧರ್ಮವಾಗಿ ಹಿಂದೂಯಿಸಂ ಒಂದು ಸಂಪೂರ್ಣವಾಗಿ ವೈವಿಧ್ಯಮಯವಾದ  ನಂಬಿಕೆಗಳು, ಪಂಥಗಳು ಮತ್ತು ಜೀವನ ವಿಧಾನಗಳ ಬಹುಬಣಗಳನ್ನು ಹೊಂದಿರುವಒಂದು ಗುಂಪು…. ತಾತ್ವಿಕವಾಗಿ, ಹಿಂದೂಯಿಸಂ ಎಲ್ಲ ವಿಧದ ನಂಬಿಕೆಗಳು ಮತ್ತು ಆರಾಧನೆಗಳನ್ನು, ಅವುಗಳಲ್ಲಿ ಆಯ್ಕೆ ಅಥವಾ ತೆಗೆದುಹಾಕುವಿಕೆ ಇಲ್ಲದೆ ಒಳಗೊಂಡಿರುತ್ತದೆ. ಹಿಂದೂ ತನ್ನ ದೇವರನ್ನು, ಅದು ಯಾವುದೇರೂಪವಾಗಿರಬಹುದು, ಎಲ್ಲ ರೂಪಗಳಲ್ಲಿ ಗೌರವಿಸಬಹುದು, ಮತ್ತು ಅವರು ನಂಬಿಕೆಯಿಂದ ಸಹನಶೀಲರು, ಇತರರನ್ನೂ ಸಹನಶೀಲರಾಗಿ ಇರಿಸುತ್ತಾರೆ, ಇತರರನ್ನು – ಅಂದರೆ ಹಿಂದೂಗಳು ಮತ್ತು ಹಿಂದೂಯೇತರರು – ಅವರು ಯಾವುದೇಜನಾಂಗ, ಆರಾಧನಾ ವಿಧಾನಗಳನ್ನು ಪಾಲಿಸುತ್ತಾರೋ ಅದನ್ನು ಅವರಿಗೇ ಬಿಡುತ್ತಾರೆ.  ಒಬ್ಬ ಹಿಂದೂ ತಾನು ಹಿಂದೂ ಆಗಿದ್ದುಕೊಂಡೇ ಹಿಂದೂಯೇತರ ಧರ್ಮವನ್ನು ಅಪ್ಪಿಕೊಳ್ಳಬಹುದು, ಮತ್ತು ಅವರು ಸತ್ಯ-ಸುಳ್ಳುಗಳನ್ನು ಅನುಭವಜನ್ಯವಾಗಿ  ವಿವೇಚಿಸಬಲ್ಲವರಾಗಿರುವುದರಿಂದ ಮತ್ತು ಬೇರೆ ವಿಧದ ಆರಾಧನೆಗಳನ್ನು, ವಿಲಕ್ಷಣವಾದ ದೇವರುಗಳನ್ನು  ಗೌರವಿಸಬಲ್ಲವರಾದ್ದರಿಂದ,  ಮತ್ತು ವೈವಿಧ್ಯಮಯ ನಂಬಿಕೆಗಳನ್ನು ತಪ್ಪು ಅಥವಾ ಆಕ್ಷೇಪಾರ್ಹ ಅನ್ನುವ saffronಬದಲುಅಪೂರ್ಣವಾಗಿರಬಹುದೆಂದು ನಂಬುವುದರಿಂದ, ಅವರು ಉನ್ನತ ದೈವೀ ಶಕ್ತಿಗಳು ಮನುಷ್ಯ ಕುಲದ ಹಾಗೂ ಲೋಕಕಲ್ಯಾಣಕ್ಕಾಗಿ ಪರಸ್ಪರ ಪೂರಕವಾಗಿ ವರ್ತಿಸುತ್ತವೆ ಎಂದು ನಂಬುತ್ತಾರೆ. ಕೆಲವು ಧಾರ್ಮಿಕ ಯೋಚನೆಗಳು ಅಂತಿಮವಾಗಿಪರಸ್ಪರ ಒಪ್ಪಿಗೆಯಾಗುವ ಸ್ಥಿತಿಯಲ್ಲಿರುವುದಿಲ್ಲ ಎಂದು ಪರಿಗಣಿತವಾಗುತ್ತವೆ. ಧರ್ಮವು ಮೂಲದಲ್ಲಿ ದೇವರ ಇರುವಿಕೆ ಅಥವಾ ಇಲ್ಲದಿರುವಿಕೆಯನ್ನು ಅಥವಾ ಒಂದು ಇಲ್ಲವೇ ಹಲವು ದೇವರು ಎಂಬ ನಂಬಿಕೆಯನ್ನು ಆಧರಿಸಿರುವುದಿಲ್ಲ. ಧಾರ್ಮಿಕ ಸತ್ಯವು ಎಲ್ಲ ಶಾಬ್ಧಿಕ ವ್ಯಾಖ್ಯಾನಗಳನ್ನು ಮೀರಿ ನಿಲ್ಲುವುದರಿಂದ, ಆದನ್ನೇ ಅಂತಿಮ ಎಂದು ಗ್ರಹಿಸಲಾಗುವುದಿಲ್ಲ. ಹಾಗಾಗಿ ಹಿಂದೂಯಿಸಂ ಎಂಬುದು ಒಂದು ನಾಗರಿಕತೆಯೂ ಹೌದು ಮತ್ತು ಹಲವು ಧರ್ಮಬಣಗಳ ಗುಂಪೂಹೌದಾಗಿದ್ದು, ಅದಕ್ಕೆ ಆರಂಭವಾಗಲೀ, ಸ್ಥಾಪಕರಾಗಲೀ, ಕೇಂದ್ರ ಅಧಿಕಾರಿಯಾಗಲೀ, ಅಧಿಕಾರ ಸ್ಥರಗಳಾಗಲೀ ಅಥವಾ ಸಂಘಟನೆಯಾಗಲೀ ಇಲ್ಲ. ಹಿಂದೂಯಿಸಂ ನ್ನು ನಿರ್ದಿಷ್ಟವಾಗಿ  ವ್ಯಾಖ್ಯಾನಿಸುವ ಯಾವುದೇ ಪ್ರಯತ್ನವೂ ಈತನಕಸಮಾಧಾನಕರವಾಗಿಲ್ಲ, ಯಾಕೆಂದರೆ ಹಿಂದೂಯಿಸಂ ಬಗ್ಗೆ ಕೆಲಸಮಾಡಿರುವ ಅತ್ಯುತ್ತಮ ವಿದ್ವಾಂಸರೂ, ಹಿಂದೂಗಳೂ ಸೇರಿದಂತೆ, ಪೂರ್ಣವೊಂದರ ವಿಭಿನ್ನ ಮಗ್ಗುಲುಗಳ ಬಗ್ಗೆ ಮಾತ್ರ ಚರ್ಚಿಸಿದ್ದಾರೆ”.

ತನ್ನ ಪ್ರಸಿದ್ಧ ಪುಸ್ತಕ “ಗೀತಾರಹಸ್ಯ” ದಲ್ಲಿ ಬಿ.ಜಿ.ತಿಲಕರು ಹಿಂದೂಧರ್ಮಕ್ಕೆ ಈ ಕೆಳಗಿನ ವಿವರಣೆಯನ್ನು ನೀಡಿದ್ದಾರೆ.: “ವೇದಗಳನ್ನು ಗೌರವದಿಂದ ಒಪ್ಪಿಕೊಳ್ಳುವುದು; ಮೋಕ್ಷಕ್ಕೆ ಸಾಧನಗಳು ಮತ್ತು ಹಾದಿಗಳು ವೈವಿಧ್ಯಮಯ ಎಂಬವಾಸ್ತವವನ್ನು ಗುರುತಿಸುವುದು; ಆರಾಧಿಸಬೇಕಾದ ದೇವರುಗಳ ಸಂಖ್ಯೆ ದೊಡ್ಡದಿದೆ ಎಂಬ ಸತ್ಯವನ್ನು ಅರಿತುಕೊಳ್ಳುವುದು, ಇದು ಖಂಡಿತವಾಗಿಯೂ ಹಿಂದೂಧರ್ಮದ ವಿಶಿಷ್ಟ ಗುರುತು “.

Bhagwan  Koer  v.  J.C.  Bose  &     Ors., (1904 ILR 31 Cal. 11), ಪ್ರಕರಣದಲ್ಲಿ ಹಿಂದೂ ಧರ್ಮವನ್ನು ಹಿಗ್ಗಬಹುದಾದ ಮತ್ತು ವೈವಿಧ್ಯಮಯ ಅಂಶಗಳನ್ನು ಒಳಗೊಳ್ಳಬಹುದಾದ ಧರ್ಮ ಎಂದು ಹೇಳಲಾಗಿದೆ. ಹಿಂದೂ ಧಾರ್ಮಿಕನಂಬಿಕೆಗಳ ಅಧ್ಯಯನವು ಬಹುತ್ವ ಮತ್ತು ಸಹನಶೀಲತೆಗಳ ಮೂರ್ತರೂಪವಾಗಿದ್ದು, ಆರಾಧನೆಯಲ್ಲಿ ಖಾಸಗಿತನಕ್ಕೆ ಇಲ್ಲಿ ಅಪರಿಮಿತ ಸ್ವಾತಂತ್ರ್ಯವಿದೆ…..

ಧರ್ಮದ ಹರಹು ಇಷ್ಟು ಅಗಾಧವಾಗಿರುವಾಗ, ಅದು ತನ್ನ ವ್ಯಾಪ್ತಿಯೊಳಗೆ ಹಿಂದೂಧರ್ಮ ಎಂಬ ಬಹಳ ತಿಳಿ ಸಮಾನತೆಯ ನಂಬಿಕೆಯೆಂಬ ತಳಹದಿಯನ್ನು ಬಿಟ್ಟರೆ ಸಂಪೂರ್ಣವಾಗಿ ವಿಭಿನ್ನ ದ್ರಷ್ಟಿಕೋನಗಳವರನ್ನು ಹೊಂದಿರುವುದುಅಚ್ಚರಿಯೇನಲ್ಲ.”    (emphasis supplied)   (481-482 ಪುಟಗಳಲ್ಲಿ)

ಈ ಸಾಂವಿಧಾನಿಕ ಪೀಠಗಳ ತೀರ್ಮಾನಗಳು, ಸವಿವರ ಚರ್ಚೆಯ ಬಳಿಕ, ಸೂಚಿಸುವುದೆಂದರೆ ‘ಹಿಂದೂ’, ‘ಹಿಂದುತ್ವ’ ಮತ್ತು ‘ಹಿಂದೂಯಿಸಂ’ ಶಬ್ದಗಳಿಗೆ ಯಾವುದೇ ಖಚಿತವಾದ ಅರ್ಥವನ್ನು ನೀಡುವುದು ಕಷ್ಟ; ಮತ್ತು ಅಸಂಗತವಾದಯಾವುದೇ ಅರ್ಥವೂ ಅದನ್ನು ಭಾರತೀಯ ಸಂಸ್ಕ್ರತಿ ಹಾಗೂ ಪರಂಪರೆಗಳಿಂದ ಹೊರತಾದ ಕೇವಲ ಧರ್ಮಕ್ಕೆ ಮಿತಿಗೊಳಿಸಲು ಸಾಧ್ಯವಾಗುವುದಿಲ್ಲ.   ‘ಹಿಂದುತ್ವ’ ಎಂಬ ಶಬ್ದವು ಈ ಉಪಖಂಡದ ಜನರ ಜೀವನವಿಧಾನಕ್ಕೆ ಹೆಚ್ಚುಸಂಬಂಧಿತವಾದುದಾಗಿದೆ ಎಂದೂ ಅದು ಸೂಚಿಸಿದೆ. ಈ ತೀರ್ಪುಗಳ ಹಿನ್ನೆಲೆಯಲ್ಲಿ, ಮೇಲ್ನೋಟಕ್ಕೆ ‘ಹಿಂದುತ್ವ’ ಅಥವಾ ‘ಹಿಂದೂಯಿಸಂ’ ಎಂಬ ಶಬ್ದವನ್ನು ಅದರ ಅಸಂಗತ ನೆಲೆಯಲ್ಲಿ ಸಂಕುಚಿತವಾದ ಹಿಂದೂ ಧಾರ್ಮಿಕಮೂಲಭೂತವಾದಕ್ಕೆ ಸಮೀಕರಿಸುವುದನ್ನು,  ಅಥವಾ ಜನಪ್ರಾತಿನಿಧ್ಯ ಕಾಯದೆಯ ಸೆಕ್ಷನ್ 123ರ ಅಡಿ ಉಪವಿಧಿ (3) ಮತ್ತು/ಅಥವಾ (3A) ಯಲ್ಲಿ ಹೇಳಲಾಗಿರುವ ನಿಷೇಧಗಳ ಜೊತೆ ಪರಿಗಣಿಸುವುದನ್ನು ಒಪ್ಪಲು ಕಷ್ಟವಾಗುತ್ತದೆ    Bharucha, J.  in Dr.  M. Ismail  Faruqui and  Ors. etc. etc. Vs.  Union of  India &  Ors. etc.,  1994 (6)  SCC  360, (ಅಯೋಧ್ಯಾ ಪ್ರಕರಣ),ದಲ್ಲಿ ನ್ಯಾಯಮೂರ್ತಿ ಜೆ. ಬರೂಚಾ ಅವರು ತಮ್ಮ ಹಾಗೂ ನ್ಯಾ|ಜೆ. ಅಹ್ಮಾದಿ(ಅವರ ಅವಧಿಯಲ್ಲಿ) ಅವರ ಪ್ರತ್ಯೇಕ ಅಭಿಪ್ರಾಯಗಳಲ್ಲಿ ಹೀಗೆನ್ನುತ್ತಾರೆ.:     “….ಹಿಂದೂಯಿಸಂ ಎಂಬುದು ಒಂದು ಸಹನಶೀಲ ನಂಬಿಕೆ. ಅದು ಇಸ್ಲಾಂ, ಕ್ರೈಸ್ತ, ಜೊರಾಸ್ಟ್ರಿಯನ್, ಜುದಾಯಿಸಂ, ಬುದ್ಧಿಸಂ, ಜೈನಿಸಂ ಮತ್ತು ಸಿಖ್ಖಿಸಂ ಗಳನ್ನುಈನೆಲದಲ್ಲಿ ನೆಲೆಗೊಳ್ಳಲು ಅವಕಾಶ ಮಾಡಿಕೊಟ್ಟಿದೆ….”      ( ಪುಟ 442 )     ಸಾಮಾನ್ಯವಾಗಿ, ಹಿಂದುತ್ವವನ್ನು ಜೀವನ ವಿಧಾನ ಅಥವ ಒಂದು ಮನೋಸ್ಥಿತಿ ಎಂದು ಅರ್ಥೈಸಿಕೊಳ್ಳಬೇಕೇ ಹೊರತು ಧಾರ್ಮಿಕ ಹಿಂದೂ ಮೂಲಭೂತವಾದಜೊತೆ ಸಮೀಕರಿಸಿ ನೋಡಬಾರದು ಎಂದು ಮೌಲಾನ ವಹಿಯುದ್ದೀನ್ ಖಾನ್ (1994)  ತಮ್ಮ ಪುಸ್ತಕ “Indian Muslims –  The Need  For  A  Positive  Outlook”  ದಲ್ಲಿ ಹೇಳಿದ್ದಾರೆ.

“ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಪರಿಹರಿಸುವ ವೇಳೆ ತಂತ್ರವಾಗಿ, ಸ್ವಲ್ಪ ಬೇರೆ ಶಬ್ದಗಳಲ್ಲಿ ಹೇಳಲಾಗಿದೆಯಾದರೂ, ಹೇಳಿದ್ದು ಹಿಂದುತ್ವ ಅಥವಾ ಭಾರತಿಯೀಕರಣದ ಬಗ್ಗೆ. ಈ ತಂತ್ರದ ಗುರಿ, ಸಾರರೂಪದಲ್ಲಿ ಹೇಳಬೇಕೆಂದರೆ,ದೇಶದಲ್ಲಿ ಸಹಜೀವನ ನಡೆಸುತ್ತಿರುವ ವಿಭಿನ್ನ ಸಂಸ್ಕ್ರತಿಗಳ ಭಿನ್ನತೆಗಳನ್ನು ತೆಗೆದುಹಾಕಿ ಒಂದು ಸಮಸಂಸ್ಕ್ರತಿಯನ್ನು ಅಭಿವ್ರದ್ಧಿಪಡಿಸುವುದು. ಕೋಮುಸೌಹಾರ್ದ ಮತ್ತು ರಾಷ್ಟ್ರೀಯ ಐಕ್ಯತೆಗಳಿಗೆ ಇದೇ ಹಾದಿ ಅನ್ನಿಸಿದೆ. ಇದುಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತರುತ್ತದೆಂದು ಯೋಚಿಸಲಾಗಿತ್ತು.”  ( ಪುಟ 19 )

‘ಹಿಂದುತ್ವ’ವನ್ನು ‘ಭಾರತಿಯೀಕರಣಕ್ಕೆ ಸಮಾನಾಂತರವಾದ ಶಬ್ದವನ್ನಾಗಿ ಬಳಸಲಾಗಿತ್ತೆಂದು ಈ ಅಭಿಪ್ರಾಯ ಸೂಚಿಸುತ್ತದೆ.  ಅಂದರೆ, ದೇಶದಲ್ಲಿ ಸಹಜೀವನ ನಡೆಸುತ್ತಿರುವ ವಿಭಿನ್ನ ಸಂಸ್ಕ್ರತಿಗಳ ಭಿನ್ನತೆಗಳನ್ನು ತೆಗೆದುಹಾಕಿ ಒಂದುಸಮಸಂಸ್ಕ್ರತಿಯನ್ನು ಅಭಿವ್ರದ್ಧಿಪಡಿಸುವುದು.

Kultar  Singh vs.  Mukhtiar Singh, 1964 (7) SCR 790, ಪ್ರಕರಣದಲ್ಲಿ ಸಂವಿಧಾನಪೀಠವು  ಸೆಕ್ಷನ್ 123ರ ಅಡಿ ಉಪವಿಧಿ (3) ರ ಅರ್ಥವನ್ನು ಈ ತಿದ್ದುಪಡಿಗೆ ಮೊದಲು ಹೀಗೆ ಅರ್ಥೈಸಿದೆ.  ಅಲ್ಲಿ ಪ್ರಶ್ನೆ ಇದ್ದದ್ದು ಒಂದು ಪೋಸ್ಟರಿನಲ್ಲಿಅಭ್ಯರ್ಥಿಗೆ ಧರ್ಮದ ಆಧಾರದಲ್ಲಿ ಮತವನ್ನು ಕೇಳಲಾಗಿತ್ತೇ ಎಂದು; ಮತ್ತು ಪೋಸ್ಟರಿನಲ್ಲಿದ್ದ ‘ಪಂಥ’ ಎಂಬ ಶಬ್ದ ಆ ನಿಟ್ಟಿನಲ್ಲಿ ಗಮನಾರ್ಹವಾಗಿತ್ತೇ ಎಂಬುದು.ಅದಕ್ಕೆ ಹೀಗೆ ತೀರ್ಪು ನೀಡಲಾಗಿತ್ತು: “ಒಬ್ಬ ಅಭ್ಯರ್ಥಿ ತನ್ನ ಎದುರು ಪಕ್ಷದಅಭ್ಯರ್ಥಿ ತನ್ನದೇ ಧರ್ಮದವರಾಗಿದ್ದರೂ ಕೂಡ ತನ್ನ ಧರ್ಮದ ಆಧಾರದ ಮೇಲೆ ಮತ ಯಾಚಿಸಿ ಸೆಕ್ಷನ್123(3)  ಅಡಿ ಭ್ರಷ್ಟ ಆಚರಣೆ ಮಾಡಬಹುದೆಂಬುದು ಸತ್ಯ.  ಉದಾಹರಣೆಗೆ, ಒಬ್ಬ ಸಿಖ್ ಅಭ್ಯರ್ಥಿ ತನಗೆ ಓಟು ನೀಡಿ ಎಂದು ಅಪೀಲುಮಾಡುವಾಗ, ಅವರ ಹೆಸರಿನಲ್ಲೇ  ಅವರು ಸಿಖ್ ಎಂಬುದು ಇರುವುದರಿಂದ, ಅವರು ಸಿಖ್ಖಿಸಂ ನಂಬಿಕೆಗಳನ್ನು ಹೊಂದಿರದಿದ್ದರೂ, ನಾಸ್ತಿಕರಾಗಿದ್ದರೂ, ಸಿಖ್ ಧರ್ಮದ ವ್ಯಾಪ್ತಿಯ್ದ ಹೊರಗಿದ್ದರೆ, ಅದು ಸೆಕ್ಷನ್123(3)  ಅಡಿ ಭ್ರಷ್ಟ ಆಚರಣೆಅನ್ನಿಸುತ್ತದೆ, ಹಾಗಾಗಿ ನಾವು ಸೆಕ್ಷನ್123(3)  ಇಲ್ಲಿ ಲಾಗೂ ಆಗುವುದಿಲ್ಲ ಎಂದು ಹೇಳುವಂತಿಲ್ಲ ಯಾಕೆಂದರೆ ಇಲ್ಲಿ ಅಪೀಲುದಾರರು ಮತ್ತು ಪ್ರತಿವಾದಿಗಳಿಬ್ಬರೂ ಸಿಖ್ಖರು…

ಭ್ರಷ್ಟ ಆಚರಣೆಯ ಬಗ್ಗೆ ಸೆಕ್ಷನ್123(3)  ಅಡಿ ಹೇಳಲಾಗಿರುವುದು ದೇಶದ ಜಾತ್ಯತೀತ ಪ್ರಜಾಸತ್ತೆಗೆ  ಪೂರಕವಾದಂತಹ ಆರೋಗ್ಯಕರ ಮತ್ತು ಗೌರವದಾಯಿ ಅಂಶವಾಗಿದೆ.

ನಮ್ಮ ಪ್ರಜಾತಾಂತ್ರಿಕ ಪ್ರಕ್ರಿಯೆಗಳು ಯಶಸ್ವಿಯಾಗಲು ನಮ್ಮ ಸಂಸತ್ತಿನ ಮತ್ತು ಬೇರೆ ಶಾಸಕಾಂಗಗಳ ಚುನಾವಣೆಗಳು ಧರ್ಮ, ಜನಾಂಗ, ಜಾತಿ, ಸಮುದಾಯ, ಅಥವಾ ಭಾಷೆಯಂತಹ ಅನಾರೋಗ್ಯಕರ ಪ್ರಭಾವದಿಂದಮುಕ್ತವಾಗಿರಬೇಕಾದದ್ದು ಬಹಳ ಮುಖ್ಯ. ಇಂತಹ ಅಂಶಗಳಿಗೆ ಚುನಾವಣಾ ಪ್ರಚಾರಗಳಲ್ಲಿ ಅವಕಾಶ ಕೊಟ್ಟರೆ, ಅವು ಪ್ರಜಾಸತ್ತಾತ್ಮಕ ಬದುಕಿನ ಜಾತ್ಯತೀತ ವಾತಾವರಣವನ್ನು ಹಾಳುಗೆಡಹುತ್ತವೆ, ಹಾಗಾಗಿ ಸೆಕ್ಷನ್123(3)  ಈ ಅನಪೇಕ್ಷಿತಬೆಳವಣಿಗೆಗಳನ್ನು ತಡೆಯುವ ಶಕ್ತಿ ಹೊಂದಿದೆ. ಈ ಅಂಶಗಳ ಹೆಸರಿನಲ್ಲಿ ಯಾವುದೇ ಅಭ್ಯರ್ಥಿ ತನ್ನ ಅಭ್ಯರ್ಥನಕ್ಕೆ ಮತಯಾಚಿಸಿದರೆ ಅದು ಭ್ರಷ್ಟ ಆಚರಣೆಯಾಗುತ್ತದೆ ಮತ್ತು ಆ ಅಭ್ಯರ್ಥಿಯ ಆಯ್ಕೆ ತಿರಸ್ಕ್ರತವಾಗಬೇಕಾಗುತ್ತದೆ…

%e0%b2%85-%e0%b2%a6%e0%b2%bf%e0%b2%a8-%e0%b2%a8%e0%b3%8d%e0%b2%af%e0%b2%be-%e0%b2%b5%e0%b2%b0%e0%b3%8d%e0%b2%ae%e0%b2%be-%e0%b2%85%e0%b2%b5%e0%b2%b0%e0%b3%81-%e0%b2%a4%e0%b2%bf%e0%b2%b0%e0%b3%8d

‍ಲೇಖಕರು Admin

October 27, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: