ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚಂದ್ರಕಾಂತ ವಡ್ಡು ಹೊಸ ಕವಿತೆ: ಬೆಂಕಿ-ಬೆಳಕು
ಚಂದ್ರಕಾಂತ ವಡ್ಡು ---- ಅಂದು-ಕೊಂಡಿದ್ದೆ ನಂದೇ ದೀಪ ನಂದಾ ದೀಪ ಹೊರಳಿದ ಎಲ್ಲ ಕಡೆ ಕಿರಣ ಪಡೆ ಅದೆಷ್ಟೋ ಅರಿವು ಚಲನೆಯ ಚೆಲುವು ಹಾರಿ ಮರಳಿದರೆ ಉರಿಯ ಮಡಿಲಿಗೆ ಚಟಪಟ ಚಟಪಟ ಸುಡುಸುಡು ಕಾವು ಬೆಂಕಿಗೆ ಆಹುತಿ ಬೇಕೇಬೇಕೇ? ಬೆಳಕಿನ ಹುಳುವೇ ಆಗಬೇಕೇ? ಚಿಕ್ಕ ಪುಚ್ಚಕ್ಕೆ ಅದೆಷ್ಟು ಕೆಚ್ಚು ಬಿಚ್ಚಬಾರದಿತ್ತು ರೆಕ್ಕೆ...
ಸಂತೋಷ್ ಚೊಕ್ಕಾಡಿ ಜೊತೆ ಲೋಕೇಶ್ ಮೊಸಳೆ ಪಟ್ಟಾಂಗ
ಲೋಕೇಶ್ ಮೊಸಳೆ ----- ಸಂತೋಷ್ ಚೊಕ್ಕಾಡಿ ನಮ್ಮ ನಡುವಿನ ಕ್ರಿಯಾಶೀಲ ಸೃಜನಾತ್ಮಕ ಕವಿ.ಇನ್ನೂ ಬಿಡುಗಡೆಯಾಗದ ( ಬಿಡುಗಡೆಯ ಹಂಗು ಕವಿತೆ ಗಳಿಗೆ ಬೇಕೆ…? ಬರೆದಂದೆ ನನ್ನೊಳಗೆ ಬಿಡುಗಡೆ ಆಗಿರುತ್ತವೆ ಎನ್ನುವ ಚೊಕ್ಕಾಡಿ ) "ಅರ್ಥವಿದೆಯೇ ವಿದಾಯಕ್ಕೆ " ಕವಿತಾ ಸಂಕಲನ ಕುರಿತು 'ಸಿಕಾಡ' ನಾದದ ಒಂದು ಸಂಜೆ ಬಿಯರ್ ನೊಂದಿಗೆ ಹರಟೆ...
ಸವಿತಾ ನಾಗಭೂಷಣ ಹೊಸ ಕವಿತೆ- ಕರಗಿತೆ ತಮ?
ಸವಿತಾ ನಾಗಭೂಷಣ ---- ನಿಮಗೆ ಮದುವೆ ಆಗಿದೆಯೆ? ಇಲ್ಲ... ಸಾರಿ! ಪರವಾಗಿಲ್ಲ... ಈ ಪ್ರಶ್ನೆ.. ಕೇಳಿರುವರು ಹಲವು ಬಾರಿ ಅಷ್ಟೇ ಸಲ ಹೇಳಿರುವೆನು ಸಾರಿ ಸಾರಿ.... ನೋಡಿ... ನಾನು ಒಬ್ಬರನ್ನು ಇಷ್ಟಪಟ್ಟಿದ್ದೆ ನನ್ನ ತಂದೆ ಅಂದರು.... ನೀನವರ ಮದುವೆಯಾದರೆ ನಿನ್ನ ಮಕ್ಕಳು ಕಷ್ಟಕ್ಕೆ ಸಿಲುಕಿಕೊಳ್ಳುವರು ಅವರನ್ನು ಬೇರೆಯವರು...
ಬಿ ಎಂ ಬಶೀರ್ ಹೊಸ ಕವಿತೆ- ದೀಪಾವಳಿಯ ದಿನ
ಬಶೀರ್ ಬಿ.ಎಂ. ----- ದೀಪಾವಳಿಯ ದಿನ ಮನೆಬಾಗಿಲಲ್ಲಿ ಎರಡು ಹಣತೆಗಳನ್ನು ಹಚ್ಚಿಟ್ಟೆ ಈದ್ ನ ದಿನ ಖೀರ್ ಮಾಡಿ ನೆರೆ ಮನೆಗಳಿಗೆಲ್ಲ ಹಂಚಿ ಬಿಟ್ಟೆ ಕ್ರಿಸ್ ಮಸ್ ದಿನ ನಕ್ಷತ್ರವೊಂದನ್ನು ಹೆಬ್ಬಾಗಿಲಲ್ಲಿ ತೂಗು ಬಿಟ್ಟೆ ಯಾರೋ ಕೇಳಿದರು "ನಿಮ್ಮ ಧರ್ಮ ಯಾವುದು ?" ದೀಪಾವಳಿಯ ಹಣತೆ ಈದ್ ನ ಖೀರ್ ಕ್ರಿಸ್ಮಸ್ ನ ನಕ್ಷತ್ರ ನನ್ನ ಧರ್ಮ...
ನಂದಿನಿ ಹೆದ್ದುರ್ಗ ಹೊಸ ಕವಿತೆ- ‘ಮಳೆ ಬಂತಾ’
ನಂದಿನಿ ಹೆದ್ದುರ್ಗ ---- 'ಮಳೆ ಬಂತಾ' ಮಾತಿನ ಆರಂಭಕ್ಕೆ ಎಲ್ಲರೂ ಬಳಸುವ ಮಾಮೂಲಿ ಪ್ರಶ್ನೆಯನ್ನೇ ಕೇಳುವುದು ನಾವು ನಾನೊಂದು ಕೊಂಕು ನುಡಿಯಲಿ ಎನ್ನುವ ಬೆಟ್ಟದಷ್ಟು ಆಸೆಯಲ್ಲಿರುವ ಅವನು ನೀನಿದ್ದ ಕಡೆ ಮಳೆ ಬೆಳೆ ಕ್ಷೇಮ ಸೌಖ್ಯಗಳು ಇರಲೇಬೇಕಲ್ಲವೆ ಎನ್ನಲಿ ಎನ್ನುವ ನಿರೀಕ್ಷೆಯಲ್ಲಿ ನಾನು ಮಾತು ಮುಂದುವರೆಸುತ್ತೇವೆ...
ಬಂತು ಗಿರಿಧರ್ ಖಾಸನೀಸರ ‘ಎಲ್ಲಿಂದಲೋ ಹಾರಿ ಬಂದು’
ಕರ್ನಾಟಕದ ಮಹತ್ವದ ಕಲಾ ವಿಮರ್ಶಕರಾದ ಗಿರಿಧರ್ ಖಾಸನೀಸ್ ಅವರ ಮೊದಲ ಕೃತಿ ಹೊರ ಬಂದಿದೆ. ಎಲ್ಲಿಂದಲೋ ಹಾರಿಬಂದು ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ಈ ಕೃತಿಗೆ ಹಿರಿಯ ವಿಮರ್ಶಕರು-ಓದುಗರು ಬರೆದ ಮಾತುಗಳು ಇಲ್ಲಿವೆ- ಗಿರಿಧರ್ ಖಾಸನೀಸರ ‘ಎಲ್ಲಿಂದಲೋ ಹಾರಿ ಬಂದು’ ಸಂಕಲನ ನನ್ನ ಪ್ರಕಾರ ಒಂದು ಅಪೂರ್ವ ಕೊಡುಗೆ. ಕನ್ನಡ...
ಶ್ರೀನಿವಾಸ ಪ್ರಭು ಅಂಕಣ: ಹಿರಿಯರೆನಿಸಿಕೊಂಡವರ ಸಣ್ಣತನ
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಎರಡು ರಷ್ಯನ್ ಕವಿತೆಗಳು
ರಷ್ಯನ್ ಕವಿ ರುಬ್ತ್ಸೋವ್‌ನ ಎರಡು ಕವಿತೆಗಳು ಮೂಲ ರಷ್ಯನ್ ಕವಿತೆಗಳ ಆಂಗ್ಲ ಓದಿನ ಅನುವಾದ: ಗೀತೋಸ್ಮಿ ---- ಕವಿತೆ- ಒಂದು ಎಷ್ಟೊಂದು ಪರಿಶುಭ್ರವಾಗಿದ್ದವು ಅವು! ನಸುಕಿನ ಇಬ್ಬನಿಯಲಿ ತೊಯ್ದು ತರಿವವನ ನಿರ್ದಯ ಅಲಗು ತೆನೆಯೊಂದಿಗೆ ಆ ಹೊಳಪನ್ನು ಮುರಿವವರೆಗೂ.. “ಹೇಳುವೆಯ, ಯಾವ ಹೂಗಳಿವು?”- ನಾ ಕೇಳಿದೆ; ತುಂಬ ದಿನಗಳವರೆಗೆ...
ಮಹಮ್ಮದ್ ರಫೀಕ್ ಹೊಸ ಕವಿತೆ- ಗೆರೆಗಳು
ಮಹಮ್ಮದ್ ರಫೀಕ್ ಕೊಟ್ಟೂರು ------ ಅವನ ಕ್ಯಾನ್ವಾಸಿನ ತುಂಬಾ ಗೆರೆಗಳು ನೀಳವಾದವು ಅದರ ಮಗ್ಗುಲು ಡೊಂಕಾದವು ಚಿಕ್ಕ ದೊಡ್ಡ ಗೆರೆಗಳು ಅಕ್ಕಪಕ್ಕ ಕೈಯ ಬ್ರಷ್ ಹಿಡಿದು ಬಣ್ಣದೊಳದ್ದಿ ಅವನೇ ಹೇಳಿದ ನೀಳವಾದದವು ಪುರುಷನಂತಿವೆ ಡೊಂಕಾದವು ಹೆಣ್ಣಿನಂತೆ ಕಾಣುತ್ತವೆ ಅಲ್ಲವೇ? ಅದೇಕೆ ಹಾಗೆ? ನಾನೆಂದೆ ಬಳ್ಳಿಯಂತೆ ಡೊಂಕು ಸೌಂದರ್ಯವೆಂದ,...
ಫಾತಿಮಾ ರಲಿಯಾ ಹೊಸ ಕವಿತೆ- ರೊಟ್ಟಿಯಂಥಾ ಕವಿತೆ
ಫಾತಿಮಾ ರಲಿಯಾ ---- ಹಾಳೆಯಿಂದ ಎದ್ದು ಬಂದ ಸುಡು ಸುಡು ರೊಟ್ಟಿಯಂಥಾ ಕವಿತೆ ನನ್ನೊಂದಿಗೆ ಮಾತಿಗಿಳಿದಿತ್ತು ಯಾವ ರೈತ ಬೆಳೆದ ಅಕ್ಕಿಯ ರೊಟ್ಟಿಯೋ! ಯಾವ ಕಾವಲಿಯ ಒಡಲ ಸಿಟ್ಟೋ! ಯಾವ ಮಹಾ ತಾಯಿಯ ಕಣ್ಣೀರೋ! ರೊಟ್ಟಿ ಅಲ್ಲಲ್ಲಿ ತುಸು ನಲುಗಿದಂತೆ ಕಾಣುತ್ತಿತ್ತು ಹಾಳೆಯಿಂದ ಅಂಗೈಗೆ ಅಲ್ಲಿಂದ ಹೃದಯಕ್ಕೆ ಹೃದಯದಿಂದ ಮೆದುಳಿಗೆ...
ಸಮುದಾಯದ ‘ತುಘಲಕ್’ ಹೀಗೆ ಸಿದ್ಧವಾಯ್ತು..
ಶ್ರೀಪಾದ ಭಟ್ -----ಉತ್ತಮ ಸಾಹಿತ್ಯಕೃತಿಗಳು ಯಾವತ್ತೂ ವರ್ತಮಾನದ ಅಗತ್ಯಕ್ಕೆ ಅನುವಾಗುವಂತೆ ರೂಪಾಂತರಿಸಿಕೊಳ್ಳಲು ಸಾಕಷ್ಟು ಅವಕಾಶವನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುತ್ತವೆ. ತುಘಲಕ್ ಅದಕ್ಕೆ ಒಂದು ಉತ್ತಮ ಸಾಕ್ಷಿ. ರಂಗಶಂಕರ ಯುವ ರಂಗನಿರ್ದೇಶಕರುಗಳಿಂದ ಕಾರ್ನಾಡರನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ಮರುನಿರೂಪಿಸಲು...
ಶೋಭಾ ಹಿರೇಕೈ ಗಡಿಯೂರಿನ ನೆನಪು- ಕೊನೆಯದಾಗಿ ಉಡಿ ತುಂಬಿದ್ದು ಈ ಕನ್ನಡದ ಮಗಳಿಗೇ…
2 ಶೋಭಾ ಹಿರೇಕೈ ಕಂಡ್ರಾಜಿ. ಈ ಲೇಖನದ ಮೊದಲ ಭಾಗ - ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು… ನವಂಬರ್ ಅಂದರೆ ಕನ್ನಡದ ಮಾಸ. ಅದರ ಜೊತೆಗೆ ನನಗೋ ಎಡಬಿಡದೆ ಮರಾಠಿಯದ್ದೇ ದ್ಯಾಸ. ನೆನೆಯದಿರಲಿ ಹೇಗೆ ಆ ಮರಾಠಿ ಊರಲ್ಲಿ ಈ ಮಲೆನಾಡಿನ ಮಗಳಿಗೆ ತೋರಿದ ಗೌರವ, ಅಕ್ಕರೆ, ವಾತ್ಸಲ್ಯ ಪ್ರೀತಿಗಳನ್ನು. ಹೇಗೆ ನೆನೆಯದೇ ಇರಲಿ ಆ...
ಶ್ರೀನಿಧಿ ಎಚ್ ವಿ ಹೊಸ ಕವಿತೆ- ಪೂತನಿ ಸಂತಾನ
ಶ್ರೀನಿಧಿ ಎಚ್ ವಿ ----- ಬಂದಳಿಕೆಗಳಿಗೆಲ್ಲ ಬಂದಿದೆ ಜೀವ ಹೊಸದೇನಲ್ಲ, ಇದೆ ಅವರ ಸ್ವಭಾವ ಅರಿಯದ ಕಂದಮ್ಮಗಳಿಗೆ ವಿಷಪ್ರಾಶನ ಸಂಸ್ಕೃತಿ ಸಂಹಿತೆ ಹೇಳುತಿವೆ ಪೂತನಿ ಸಂತಾನ ಅಶೋಕ ಲಾಂಛನದ ಸಿಂಹಗಳು ತಾವೆಂಬಾ ಭ್ರಮೆಯಲ್ಲಿ, ಹೇಳುತ್ತಿವೆ ಸುಳ್ಳನ್ನು ಜೋರು ದನಿಯಲ್ಲಿ. ತಮ್ಮ ಮುತ್ತಾತನ ಹೆಸರು ಗೊತ್ತಿಲ್ಲದವರೆಲ್ಲ ಈಗ ಇತಿಹಾಸ...
ಜಿತೇಂದ್ರ ಬೇದೂರು ಹೊಸ ಕವಿತೆ – ರಂಗಸ್ಥಳದಲ್ಲಿ
ಜಿತೇಂದ್ರ ಬೇದೂರು -----ಪರದೆ ಸರಿಯುವ ಮೊದಲೇತೊಳೆದು ಹೋಗಿದೆ ಬಣ್ಣ,ಆಟ ಮುಗಿಯುವ ಮೊದಲುತೆರೆಯಬಹುದೇ ಕಣ್ಣ? ತೊಗಲು ಗೊಂಬೆಯ ಸೂತ್ರದ ತುದಿಯ ಹಿಡಿದವರಾರು?ಯಾರು ಬರೆದಿಹ ಕತೆಯೋ, ಎಷ್ಟು ಗೋಜಲು,ಪಾತ್ರಗಳು ಬದಲಾಗಿ, ಅಂಕಗಳು ಕಳೆದವು,ಅರ್ಥವಾದುದು ಎಷ್ಟು?,ಯಾವ ಮಜಲು?! ಅವನ ವೇಷದ ಮೋಹ, ಇವನಿಗೆಇವನ ಪಾತ್ರದ ಬಯಕೆ, ಅವನ...
ನಮಸ್ಕಾರ ದಾರದಹಳ್ಳಿ ಬದುಕಿಗೆ… ನೆನಪಿಗೆ…
ಲೋಕೇಶ್ ಮೊಸಳೆ ---- ಡಿ ಬಿ ಚಂದ್ರೇಗೌಡ ( ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ ) ಅವರೊಂದಿಗೆ ನನಗೆ ಭಾವಾನಾತ್ಮಕ ಸಂಭಂದಗಳಿವೆ. ಅಪ್ಪ ದಾರದಹಳ್ಳಿಯ ಸರ್ಕಾರಿ ಶಾಲೆಯ ಮೇಷ್ಟರಾಗಿದ್ದರು. ಚಂದ್ರೇಗೌಡರ ಅಣ್ಣ ಡಿ ಬಿ ಬಿಳಿಗೌಡರು ಆ ಶಾಲೆಯ ಮುಖ್ಯ ಶಿಕ್ಷಕ , ಹೀಗಾಗಿ ನಮ್ಮ ಅವರ ಮನೆಯ ಒಡನಾಟ…. ನನ್ನ ಬಾಲ್ಯದಲ್ಲಿ ಆವರ ಮನೆಗೆ ಆಟವಾಡಲು...
ಗೋಪಾಲ ತ್ರಾಸಿ ಓದಿದ ‘ಹೆಣ್ಣಾಲದ ಮರ’
ಗೋಪಾಲ ತ್ರಾಸಿ ---- ಇದು ಕವಿ ಸುಮತಿ ಕೃಷ್ಣಮೂರ್ತಿಯವರ ಚೊಚ್ಚಲ ಕವನ ಸಂಕಲನ. “ಬೊಗಸೆಯಷ್ಟು ಬಾನು ಮಾತ್ರ ನನಗೆ ಬೇಕಿದೆ/ಅಲ್ಲಿ ನಾನು ಕನಸ ಬೀಜ ಬಿತ್ತಬೇಕಿದೆ” ಎಂದು ಕನಸುಗಾರ್ತಿ ಕವಿ ಈ ಸಂಕಲನದಲ್ಲಿ ಅದಮ್ಯ ಜೀವನಪ್ರೀತಿಯನ್ನು ಬಿಂಬಿಸುವ ಅನೇಕ ಕವಿತೆಗಳನ್ನು ನೀಡಿದ್ದಾರೆ. ಸಂಕಲನದ ಶೀರ್ಷಿಕೆಯೇ ಆಕರ್ಷಕ ಹಾಗು...
ಮನ ಗೆದ್ದ ‘ಚಾರು ವಸಂತ’
ಚಿತ್ತಬಿತ್ತಿಯೊಳಗೆ ಚಿಂತನೆಗಳನ್ನು ಒರೆಗೆ ಹಚ್ಚಿದ 'ಚಾರು ವಸಂತ' ಶಶಿರಾಜ್ ರಾವ್ ಕಾವೂರು ಚಿತ್ರಗಳು: ರವಿ, ಮಾನಸ ಸ್ಟುಡಿಯೊ, ಮೂಡಬಿದಿರೆ ---- ಪ್ರಾಚೀನ ಕಥಾನಕವನ್ನು ದೇಸಿ ಶೈಲಿಯಲ್ಲಿ 2003 ರಲ್ಲಿ ಬರೆದು, ಲೋಕಾರ್ಪಣೆ ಮಾಡಿದ್ದ ಡಾ.ಹಂಪನಾ ಅವರಿಗೆ ಈ ಕಾವ್ಯ ನಾಟಕವಾದರೆ ಬಹಳ ಜನರನ್ನು ತಲುಪುತ್ತದೆ ಎಂಬ ಯೋಚನೆಯಿತ್ತು. ಆ...
ಸಾರಿ ನನ್ನ ಸ್ಟಾಪ್ ಬಂತು ಇಳಿಯುತ್ತೇನೆ bye…!
ವಿಶಾಲ ಮ್ಯಾಸರ್ ------ ತಿಳಿಗೇಡಿ ಟ್ರೈನಿನ ಫ್ಯಾನಿಗೆ ಎರೆಡು ಲೇಸುಗಳನ್ನು ಇಳಿಬಿಟ್ಟು ಬೂಟು ನೇತು ಹಾಕಿದ್ದರೆ ಅದು ಕವಿತೆ ಅಲ್ಲ ಅಂತ ವಾದಿಸುತ್ತೀರಿ ಅದು ನಿಮ್ಮ ಮೂರ್ಖತನವಷ್ಟೆ ಈ ಜನರಲ್ ಬೋಗಿಯ ಮಂದಿ ಯಾವಾಗಲೂ ಎಚ್ಚರವೇ ಇದ್ದು ಊರು ಬರುವ ಗಂಟ ತಪಸ್ಸಿಗೆ ನಿಂತಿರುತ್ತಾರೆ ಎಂದುಕೊಂಡರೆ ಅದು ನಿಮ್ಮ ಮೂರ್ಖತನವಷ್ಟೆ...
ಶಾಂತಿ ಬಯಸಿ…
ಸವಿತಾ ನಾಗಭೂಷಣ -------------- ಶಾಂತಿ ಬಯಸುವವರೆಲ್ಲ ಸಭೆ ಸೇರಿದರು ಶವದ ಪೆಟ್ಟಿಗೆಗಳ ಮೇಲೆ ಕುಳಿತು ಮಾತನಾಡಿದರು ಹಾರೈಸುತ್ತಿತ್ತು -------------- ಲೋಕವೆಲ್ಲ ಹತವಾದ ಮೇಲೆ ಗತವಾದ ಮೇಲೆ ತೊಟ್ಟಿಲೊಂದು ತಾನೆ ತೂಗುತ್ತಿತ್ತು ದಿನದ ಮೊದಲ ಎಳೆಯ ಸೂರ್ಯ ಕಿರಣ ಬೆಚ್ಚಗಿಟ್ಟು ಬದುಕು ಹಾರೈಸುತಿತ್ತು ವಿಜಯ ಸ್ತಂಭ ---------...
ಸರಳವಾಗಿದ್ದು ಸುಖವಾಗಿ ಓದಿಸಿಕೊಳ್ಳುವ ‘ಮಂದಾರ ರಾಮಾಯಣ’
ಪಾರ್ವತಿ ಜಿ ಐತಾಳ್ ---- ಉಡುಪಿಯ ಅಜ್ಜರಕಾಡಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ.ನಿಕೇತನಾ ತುಳು ಸಾಹಿತ್ಯದ ಕುರಿತು ಬಹಳಷ್ಟು ಅಧ್ಯಯನ -ಚಿಂತನೆಗಳನ್ನು ನಡೆಸಿ ಕನ್ನಡದಲ್ಲಿ ಅದರ ಕುರಿತು ಬರೆದವರು. ಲಿಪಿ ಇದ್ದುಕೊಂಡೂ ಅದು ಮರೆವಿನ ಗರ್ಭದೊಳಗೆ ಅಡಗಿ ಕುಳಿತು ಕೊಂಡಿದ್ದರಿಂದ ಲಿಖಿತ ರೂಪದ...
ನಾಟಕ ನೋಡಿ ಹೃದಯ ತುಂಬಿ ಬಂತು
ನಿವೇದಿತಾ ಎಚ್ ----- ಇದೀಗ ತಾನೆ ರಾಜ್ಯೋತ್ಸವದ ಆಚರಣೆ ಮುಗಿದಿದೆ, ಕರ್ನಾಟಕ ಎಂಬ ನಾಮಕರಣದ ಸುವರ್ಣ ಸಂಭ್ರಮ ವರ್ಷಪೂರ್ತಿ ನಡೆಯಲು ತಯಾರಿ ಭರ್ಜರಿಯಾಗಿಯೇ ನಡೆದಿದೆ. ರಾಜ್ಯೋತ್ಸವ ಎಂದ ತಕ್ಷಣ ನವೆಂಬರ್ ಬಂದ ತಕ್ಷಣ ನಮ್ಮ ಕನ್ನಡ ಪ್ರೀತಿ ಮುನ್ನೆಲೆಗೆ ಬಂದು ಸಾಕಷ್ಟು ಚರ್ಚೆಗಳಿಗೆ ವೇದಿಕೆ ಒದಗಿಸಲು ಸಿದ್ಧರಾಗಿ...





















