ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

“ರೈತ” ಕನ್ನಡದವನಲ್ಲ ಮಾರಾಯ್ರೆ!

ಪಾ ವೆಂ ಆಚಾರ್ಯ ಅವರ "ಪದಾರ್ಥ ಚಿಂತಾಮಣಿ" ಪುಸ್ತಕದ ಬಗ್ಗೆ ಕೇಳಿಯೇ ಇರುತ್ತೀರಿ. ಕುತೂಹಲಕ್ಕೆಂದು ಅದರಲ್ಲಿ ಕಣ್ಣಾಡಿಸುತ್ತಿದ್ದಾಗ "ರೈತ" ಶಬ್ದ ಕುರಿತ ವಿವರಣೆ ಗಮನ ಸೆಳೆಯಿತು. ಸ್ವಾರಸ್ಯಕರವಾಗಿದೆ. * ರೈತ ಶಬ್ದ ನಮ್ಮಲ್ಲಿ ಇಂದು ಎಷ್ಟು ವ್ಯಾಪಕವಾಗಿದೆಯೆಂದರೆ, ಅದನ್ನು ಅಚ್ಚಕನ್ನಡವೆಂದೇ ಭ್ರಮಿಸುವ ಸಂಭವವಿದೆ. ಸಾಮಾನ್ಯವಾಗಿ...

read more
ಸವಕಲು ಮಾತುಗಳ ಒಂದು ಕಂತೆ

ನಾಲಿಗೆ ಸವೆಯುತ್ತೋ ಇಲ್ಲವೊ ಗೊತ್ತಿಲ್ಲ. ಮಾತುಗಳು ಸವಕಲಾಗೋದು ಮಾತ್ರ ನಿಜ. ಕಿವಿಗೆ ಹಿತವಾಗೋವರೆಗೆ ಮಾತ್ರವೇ ಮಾತಿಗೆ ಕಿಮ್ಮತ್ತು. ಇವತ್ತು ಹೇಳಿದ್ದನ್ನೇ ನಾಳೇನೂ ಹೇಳಿದ್ರೆ "ಹಾಡಿದ್ದೇ ಹಾಡೋ ಕಿಸ್ಬಾಯಿದಾಸ" ಅನ್ನೋ ಕಾಮೆಂಟು ಹುಟ್ಟುತ್ತೆ. ರೂಢಿಯಲ್ಲಿರೋ ಪಡೆನುಡಿಗಳ ಗತಿಯೂ ಇಷ್ಟೆ. ಪತ್ರಿಕೋದ್ಯಮವೂ ಸೇರಿದಂತೆ...

read more
ಯಾರಿಗಾಗಿ ಕಾಯುತಿರುವೆ, ಜೀವ ಜೀವವೆ…

"ರಾಗಿರೊಟ್ಟಿ" ಕಾಲಂ ಊರ್ಮಿಳೆ ಯಾಕೆ ಹೀಗಾಯ್ತು ಅಂತ ಗೊತ್ತಿಲ್ಲ. ದಿಢೀರನೆ ಕಾಲಿಂಗ್ ಬೆಲ್ ಸದ್ದಾಯ್ತು. ಎದ್ದು ಹೋಗಿ ಬಾಗಿಲು ತೆರೆದೆ. ಯಾರೂ ಅಂತ ಕೂಗಿದೆ. ಉಹುಂ ಯಾರೂ ಇಲ್ಲ. ಆಚೆ ಕತ್ತಲೋ ಕತ್ತಲು. ಟೈಂ ನೋಡ್ಕೊಂಡೆ ರಾತ್ರಿ ೨ ಗಂಟೆ. ಈ ಹೊತ್ತಲ್ಲಿ ಯಾರು ಬರ್ತಾರೆ? ಒಂದು ಕ್ಷಣ ಕಕ್ಕಾಬಿಕ್ಕಿಯಾದೆ. ಹಾಗಾದ್ರೆ ಕಾಲಿಂಗ್ ಬೆಲ್...

read more
ಬೆಂಗ್ಳೂರ್ ಮಾರ್ಕೆಟ್ಟಲ್ಲಿ ಮಸಿ ಮಾಯೆ!

ಪಂಪನ ಕಾವ್ಯದಲ್ಲಿ ಬೆಳ್ಳುಳ್ಳಿ ಪ್ರಸ್ತಾಪದ ಬಗ್ಗೆ ಬಿ ಜಿ ಎಲ್ ಸ್ವಾಮಿಯವರು ಬರೆದದ್ದನ್ನು ಹಿಂದೊಮ್ಮೆ ಇಲ್ಲಿ ಪ್ರಕಟಿಸಿದ್ದೆವು. ಸ್ವಾಮಿಯವರ ಅದೇ "ಸಸ್ಯ ಪುರಾಣ" ಪುಸ್ತಕದಲ್ಲಿ ಬಸವಣ್ಣನ ವಚನಗಳಲ್ಲಿ ಬರುವ ಸಸ್ಯ ಪ್ರಸ್ತಾಪದ ಬಗ್ಗೆಯೂ ಬರಹವಿದೆ. ಅದರ ಒಂದು ಸ್ವಾರಸ್ಯಕರ ಭಾಗ, ಅವಧಿ ಓದುಗರಿಗಾಗಿ. * * * "ಮಸಿಯ ಹುಸಿ ನೇರಲ...

read more
ಪ್ರೀತಿಯ ವೀಳ್ಯ!

ಮಾತಿಗೆ, ಚರ್ಚೆಗೆ ಎಲ್ಲಾ ಸೇರೋಣ ಅಂತಾ ಅವಧಿಯ ಆಸೆ. ಅದಕ್ಕಾಗೇ ಯಾಹೂ ಗ್ರೂಪ್ ಕ್ರಿಯೇಟ್ ಮಾಡಿದ್ದೇವೆ. "ಜಗುಲಿ" ಅಂತಾ ಹೆಸರಿಟ್ಟಿದ್ದೇವೆ. ಅವಧಿಯಲ್ಲಿನ ಬರಹಗಳನ್ನೇ ನೆಪವಾಗಿಟ್ಟುಕೊಂಡು ಚರ್ಚೆಯ ವಿಸ್ತಾರದಲ್ಲಿ ನಡೆಯೋಣ. ಹೀಗೆ ನಡೆವ ದಾರಿಯಲ್ಲಿ ಜೊತೆಗಿರೋಣ. ಸಂವಾದವನ್ನು ಸದಾ ಜಾರಿಯಲ್ಲಿಡೋಣ. ಅವಧಿಯ ಜಗುಲಿಗೆ...

read more
ಅಮ್ಮ ಆಗ್ಲಿಕ್ಕೆ ಹೆರಲೇಬೇಕಾ?

"ಹಂಗಾಮ"ದಿಂದ ಹೆಕ್ಕಿದ್ದು ಗಾನಾ ಜೋಯ್ಸ್ ಹೇಳ್ತಾರೆ ಎಲ್ಲರೂ. ಹೆಣ್ಣಿಗೆ ತಾಯ್ತನವೇ ಸಂಪೂರ್ಣತೆಯನ್ನ ತಂದುಕೊಡೋದು ಅಂತ. ಹೌದಲ್ಲಾ? ಮೊಲದ ಮರಿಯಂಥಾ ಮಗು (ಬಿಡು. ಹೆತ್ತೋರಿಗೆ ಹೆಗ್ಗಣ ಮುದ್ದು!), ಅದರ ಅಳು, ನಗು, ಉಚ್ಚೆ, ರಚ್ಚೆ, ಸ್ನಾನದ ಸಂಭ್ರಮ, ಲೋಬಾನದ ಘಮ, ಆಹಾ... ಅದರ ಸವಿಯೇ ಸವಿ. ನನ್ನದೂ ಒಂದು ಖ್ವಾಯಿಶಿತ್ತು....

read more
ಹೆಸರಿನಲ್ಲೇನಿದೆ ಬಿಡಿ!

ಕಿರಣ್ ಕುಮಾರ್ ಕೆ ಹೊಸದೊಂದು ಕಂಪನಿ ಹುಟ್ಟುಹಾಕುವಾಗ ಅಥವಾ ಹುಟ್ಟಿದ ಮಗುವಿಗೆ ಹೆಸರಿಡುವಾಗ ಹೆಸರುಗಳನ್ನು ಹುಡುಕುವವರ ಗೋಜು ನಿಮಗೆಲ್ಲಾ ಗೊತ್ತಿದ್ದೇ ಇರುತ್ತದೆ. ಅಷ್ಟರ ನಡುವೆಯೂ ಒಂದು ಹೆಸರನ್ನಂತೂ ಇಡಲೇ ಬೇಕಲ್ಲವೆ? ಈಗಾಗಲೇ ಜಗತ್ತಿನಲ್ಲಿ ಶ್ರೀಮಂತವಾಗಿರುವ ಕೆಲವೊಂದು ಕಂಪನಿಗಳ ಹೆಸರುಗಳು ಹುಟ್ಟಿದ ಕತೆಗಳೂ ರೋಚಕವಾಗಿಯೇ...

read more
“ನಾನೂ ದೊಂಬಿದಾಸ”

ಪ್ರೊ. ರಾಮದಾಸ್ ಅವರು ಹೋರಾಟದ ಹೊತ್ತಿನಲ್ಲಿ ಅದಕ್ಕೆ ಅದಮ್ಯವೆಂಬಂಥ ಬೆಂಬಲವಾಗಿ ಇರಿಸಿಕೊಂಡಿದ್ದು ತಾವು ಮತ್ತೆ ಮತ್ತೆ ಹಾದುಬಂದಿದ್ದ ಕಷ್ಟಗಳ ಅಗ್ನಿಕುಂಡವನ್ನೇ ಎಂದರೆ ತಪ್ಪಾಗದು. ಅವರು ತಮ್ಮ ಗತ ದಿನಗಳನ್ನು ನೆನಪಿಸಿಕೊಳ್ಳುವ ಬಗೆಯಲ್ಲಿ ತಮಾಷೆಯ ಲೇಪವಿರುತ್ತಿತ್ತು. ಕಷ್ಟವನ್ನು ದಕ್ಕಿಸಿಕೊಂಡ ಗಟ್ಟಿ ದನಿಯಿರುತ್ತಿತ್ತು....

read more
ಕಾಯಕದ ಸಹಜ ನಶೆ!

"ಗಾಳಿ ಬೆಳಕು" ಕಾಲಂ  ನಟರಾಜ್ ಹುಳಿಯಾರ್  ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಮಿತ್ರರೊಬ್ಬರು ಸಿಮ್ಲಾದಿಂದ ಫೋನ್ ಮಾಡಿದರು. "ಎಲ್ಲಿದ್ದೀರಿ" ಎಂದರೆ, "ಕಚೇರಿಯಲ್ಲಿದ್ದೇನೆ" ಎಂದರು. "ಕಚೇರಿಯಲ್ಲಿ? ಆಲ್ಕೋಹಾಲ್ ಆಶ್ರಯದಲ್ಲಿ?" ಎಂದೆ. "ಇಲ್ಲ ಮಾರಾಯ. ಬೆಳಗ್ಗೆ ಎಂಟೂವರೆಗೆ ಕೆಲಸ ಶುರುಮಾಡುತ್ತೇನೆ. ಹತ್ತು, ಹನ್ನೊಂದರ...

read more
“ಹ್ಯಾರಿ ಪಾಟರ್” ಎಂಬ ಕಿಂದರಿ ಜೋಗಿಯ ಹಿಂದೆ…

ಯಕ್ಷಿಣಿ ಕಥೆಗಳ ಲೋಕದಲ್ಲಿನ ವೈವಿಧ್ಯವನ್ನೇ ಅಳಿಸಿಹಾಕಿ, ಇಡೀ ಜಗತ್ತಿನ ಸಂವೇದನೆಯೇನೋ ಎಂಬಂತೆ ಹ್ಯಾರಿ ಪಾಟರ್ ವಿಲಕ್ಷಣ ರೀತಿಯಲ್ಲಿ ಆವರಿಸಿಕೊಂಡಿದ್ದಾನೆ. ಯಕ್ಷಿಣಿಗೆ ಸೋಲದ ನಮ್ಮ ಪುಟಾಣಿಗಳೆಲ್ಲ ಭಾರೀ ಗಾತ್ರದ ಹ್ಯಾರಿ ಪಾಟರ್ ಆವೃತ್ತಿಗಳನ್ನು ಮತ್ತೆ ಮತ್ತೆ ಓದಿಕೊಂಡುಬಿಟ್ಟಿದ್ದಾರೆ. ಇದೆಲ್ಲಾ ಹೇಗಾಯಿತು? ಹ್ಯಾರಿ ಪಾಟರ್...

read more
“ಆನುದೇವಾ…” ಮುಟ್ಟುಗೋಲು

ತೀವ್ರ ವಿವಾದ ಉಂಟುಮಾಡಿದ್ದ ಬಂಜಗೆರೆ ಜಯಪ್ರಕಾಶ್ ಅವರ "ಆನುದೇವಾ ಹೊರಗಣವನು" ಕೃತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಇಂದಿನ ಸಚಿವ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದೆ. ಸಮಾಜ ಸಂಘರ್ಷಕ್ಕೆ ಅವಕಾಶ ಮಾಡಿತೆಂಬ ಕಾರಣಕ್ಕಾಗಿ ಮುಟ್ಟುಗೋಲು ನಿರ್ಧಾರ ಕೈಗೊಂಡಿರುವುದಾಗಿ ಸರ್ಕಾರ ಹೇಳಿದೆ. ಕೃತಿಯಲ್ಲಿ ಬಸವಣ್ಣನ ಜಾತಿ...

read more
“ಬಸವಣ್ಣನಿಗೊಂದು ಪ್ರಿಂಟಿಂಗ್ ಪ್ರೆಸ್ ಬೇಕಿತ್ತು”

ಕಿ ರಂ ನಾಗರಾಜ  ಒಮ್ಮೆ ಲಂಕೇಶ್ ತುಂಬ ಗೆಲುವಿನ ಮೂಡ್ ನಲ್ಲಿ ಇದ್ದರು. ಬೇರೆ ಬೇರೆ ಮಾತುಗಳ ನಡುವೆ ನನ್ನನ್ನು "ಬಸವಣ್ಣನಿಗೆ ಏನು ಬೇಕಾಗಿತ್ತು ಗೊತ್ತೇನಯ್ಯ?" ಎಂದರು. ಅವರ ಪ್ರಶ್ನೆಯನ್ನೇ ನನ್ನ ಪ್ರಶ್ನೆ ಮಾಡಿಕೊಂಡು "ಏನು ಬೇಕಾಗಿತ್ತು ಹೇಳಿ ಸಾರ್" ಎಂದೆ. ದೀರ್ಘವಾಗಿ ಸಿಗರೇಟ್ ಎಳೆಯುತ್ತ "ನೋಡಯ್ಯ, ಬಸವಣ್ಣನಿಗೆ ಆ ಕಾಲಕ್ಕೇ...

read more
ಏನ ಹೇಳುವುದು ಕರುಣಾಳು ಮುನಿಸಿಗೆ…?

ನಿತ್ಯವೂ ಹೊಸ ಅಕ್ಷರಗಳ ಮಿಂಚಿನೊಂದಿಗೆ ಕಾಣಿಸಿಕೊಳ್ಳಬೇಕೆಂಬ ಅವಧಿಯ ಹಂಬಲಕ್ಕೆ ಕರುಣಾಳು ಮಾತ್ರವಲ್ಲ, ಇಂಟರ್ನೆಟ್ ಕೂಡ ಕೈಕೊಡುತ್ತಿದೆ. ಕಳೆದೆರಡು ದಿನಗಳಿಂದ ಇಂಟರ್ನೆಟ್ ಸಂಪರ್ಕವಿಲ್ಲದೆ ಪರದಾಡಿದ್ದಾಯಿತು. ನಾವು ಮತ್ತೆ ಮತ್ತೆ ಹೇಳಬಯಸುವುದು, ಅಪ್ ಡೇಟ್ ಆಗಿಲ್ಲವೆಂದರೆ, ಕರುಣಾಳು ಇಲ್ಲವೆ ಇಂಟರ್ನೆಟ್ ಕೈಕೊಟ್ಟಿದೆ ಎಂದೇ...

read more
ಈ ಜಗುಲಿಯಲ್ಲಿ ಸಂವಾದ ಜಾರಿಯಲ್ಲಿರಲಿ!

ಅವಧಿ ಹೊಂದಿರುವ ಪ್ರಮುಖ ಉದ್ದೇಶವೇ ಮಾತಿಗೆ ಜೊತೆಯಾಗೋಣ, ಚರ್ಚೆಗೆ ಜಗುಲಿ ಕಟ್ಟೋಣ ಅನ್ನೋದು. ನಿತ್ಯವೂ ಅವಧಿ ಅಪ್ ಡೇಟ್ ಆಗ್ತಿರೋದಕ್ಕೆ ಇರೋ ಕಾರಣವೇ ಅದು. ಅಷ್ಟೇ ಅಲ್ಲ, ಹಲವಾರು ಮಿತ್ರರಿಗೆ ನಾವು ನಿತ್ಯವೂ ಅಲರ್ಟ್ ಕಳುಹಿಸುವ ಉದ್ದೇಶ ಕೂಡ ಅದೇ. ಅಲ್ಲದೆ, ಅಪರಿಚಿತ ಮಿತ್ರರನ್ನೂ ಹುಡುಕಿಕೊಂಡು ಹೋಗುತ್ತೇವೆ. ಇದೆಲ್ಲವೂ ಅವಧಿಯ...

read more
ಹೀಗೊಬ್ಬ ಮತಾಂತರಿಯ “ಇಣುಕು”

ಅಮೆರಿಕಾ ಬಗ್ಗೆ ಸಿಗುವ ಪ್ರವಾಸ ಕಥನಗಳು ಹಲವು. ಹಾಗೆಯೇ ಅಮೆರಿಕಾ ಕುರಿತ ನೋಟಗಳೂ ಭಿನ್ನ. ವಸಂತರಾಜ್ ಎನ್ ಕೆ ಅವರ ಪ್ರವಾಸ ಕಥನ "ಅಮೆರಿಕಾದೊಳಗೊಂದು ಇಣುಕು" ಕೂಡ ಅಂಥ ಒಂದು. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಬಂದಿದೆ. ಅವಧಿ ಓದುಗರಿಗಾಗಿ ಅದರ ಒಂದು ಭಾಗವನ್ನು ಆಯ್ದು ಕೊಡಬೇಕೆಂದು ಅನ್ನಿಸಿತು. ಅದರಲ್ಲಿನ...

read more
ಅಮೆರಿಕಾದಲ್ಲಿ ಉಲ್ಟಾ ಪಲ್ಟಾ

ವಸಂತರಾಜ ಎನ್ ಕೆ ಇಲ್ಲಿ ಫುಟ್ ಬಾಲ್ ಅತ್ಯಂತ ಜನಪ್ರಿಯ ಮೂರು ಆಟಗಳಲ್ಲಿ ಒಂದು. ಇತರ ಎರಡು ಜನಪ್ರಿಯ ಆಟಗಳೆಂದರೆ ಬೇಸ್ ಬಾಲ್ ಮತ್ತು ವಾಲಿಬಾಲ್. ಆದರೆ ಈ ಫುಟ್ ಬಾಲ್ ನಮ್ಮ ಫುಟ್ ಬಾಲ್ ನಂತಲ್ಲ. ಮೊದಲನೆಯದಾಗಿ ಬಾಲು ದುಂಡಗಿಲ್ಲ, ತೆಂಗಿನಕಾಯಿ ಥರ ಇದೆ. ಫುಟ್ ಬಾಲೇ ಅಲ್ಲ ಅದು. ಯಾಕೆ ಹೇಳ್ದೆ ಅಂದರೆ ಫುಟ್ ಬಾಲ್ ನ ಅಮೆರಿಕದ...

read more
ಅಚ್ಚಾಗದ ಚಿತ್ರ; ಅಚ್ಚಾದ ವಿಚಿತ್ರ

ಟೈಂ ಪಾಸ್ ಕಡ್ಲೆಕಾಯ್ ಬೆರಳು ಹಾಕಿ ತಿರುಗಿಸ್ಬೋದು ಎಚ್ ಎಲ್ ನಾಗೇಗೌಡ ಅಂದ್ರೆ ಹುಲಿ ಇದ್ದಂಗೆ ಅಂತಾನೇ ಸುಮಾರು ಜನ ಅಂದ್ಕೊಂಡಿದಾರೆ. ಆದ್ರೆ ಅವರತ್ರ ಇದ್ದೋರಿಗೆ ಮಾತ್ರ ಗೊತ್ತು, ಸಿಕ್ಕಾಪಟ್ಟೆ ತಮಾಷೆ ಮನುಷ್ಯ ಅಂತಾ. ಒಂದ್ಸಲ ಗೌಡ್ರು ಫೋನ್ ತಿರುಗಿಸ್ತಾ ಕೂತಿದ್ರು. ಬಟನ್ ಫೋನ್ ಗಳು ಆಗ್ಲೇ ಎಲ್ಲಾ ಕಡೆ ಫೇಮಸ್ ಆಗಿತ್ತು....

read more
ಬದುಕು ಉಳಿಸಿಕೊಳ್ಳಲು ಚಡಪಡಿಸಿದ್ದಳಲ್ಲ, ಅವಳಿಗಾಗಿ…

"ಹಂಗಾಮ"ದಿಂದ ಹೆಕ್ಕಿದ್ದು  ವೆಂಕಟ್ರಮಣ ಗೌಡ ಮಹಾನಗರಿಯೊಂದರಲ್ಲಿನ ಸಂಜೆಯೊಂದು ಅದರ ನಿಗೂಢದ ಮಗ್ಗುಲೂ ಹೌದು. ಇಲ್ಲಿ ಸೂರ್ಯಾಸ್ತ, ಸೊಬಗಿಗಿಂತ ಹೆಚ್ಚಾಗಿ ನಿಷ್ಕರುಣಿ; ಮಾಧುರ್ಯಕ್ಕಿಂತ ಮಿಗಿಲಾಗಿ ದುಷ್ಟ ಪಿಪಾಸು. ಕಣ್ಣ ಕೋರೈಸುವ ಬೆಳಕಿನ ಅಂಚಿನಲ್ಲೆಲ್ಲೋ ಕ್ರೌರ್ಯವೊಂದು ಹೊಂಚಿರುವ, ಬಣ್ಣದಲ್ಲಿ ವಿಷವೊಸರುವ, ಆಮಿಷಗಳು...

read more
ಅಪರಾಧ, ಅನುಮಾನ ಮತ್ತು ಅವಮಾನ

"ಗಾಳಿ ಬೆಳಕು" ಕಾಲಂ  ನಟರಾಜ್ ಹುಳಿಯಾರ್ ಮೊನ್ನೆ ಸಂಜೆ ಐದೂ ಮೂವತ್ತರ ಹೊತ್ತಿಗೆ ಬೆಂಗಳೂರಿನ ರಸ್ತೆಯೊಂದರಲ್ಲಿ ಇಬ್ಬರು ತರುಣರು ಬೈಕೊಂದರಲ್ಲಿ ಹೋಗುತ್ತಿದ್ದರು. ಸವಾರನ ತಲೆಯಲ್ಲಿ ಹೆಲ್ಮೆಟ್ ಇರಲಿಲ್ಲ. ಹೊಯ್ಸಳ ಪೊಲೀಸರು ಈ ಬೈಕನ್ನು ನಿಲ್ಲಿಸಿದರು. ಹೊಯ್ಸಳ ಜೀಪಿನಲ್ಲಿ ಪಹರೆಯಲ್ಲಿರುವ ಪೊಲೀಸರ ವ್ಯಾಪ್ತಿಗೆ ಸಾಮಾನ್ಯವಾಗಿ ಈ...

read more

Pin It on Pinterest

Share This