ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬ್ರೇಕಿಂಗ್ ನ್ಯೂಸ್: ಎಚ್ ಎಸ್ ವಿ ಹಾಗೂ ಲಕ್ಕೂರು ಆನಂದ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಹಿರಿಯ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬಾಲ ಸಾಹಿತ್ಯ ಕೊಟ್ಟ ಕೊಡುಗೆ ಎಲ್ಲರಿಗೂ ಗೊತ್ತಿದೆ. ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಸಹಾ ಇವರು ಬಾಲ ಕೊಟ್ಟ ಕೊಡುಗೆಯನ್ನು ಗುರುತಿಸಿ ಬಾಲ ಸಾಹಿತ್ಯ ಪುರಸ್ಕಾರ ಘೋಷಿಸಿದೆ ಯುವ ಬರಹಗಾರ ಲಕೂರು ಸಿ ಆನಂದ ಅವರ 'ಬಟವಾಡೆಯಾಗದ ರಸೀತಿ' ಕವನ ಸಂಕಲನಕ್ಕೆ ಯುವ ಸಾಹಿತ್ಯ ಪ್ರಶಸ್ತಿ...

read more
ಸಂಧ್ಯಾರಾಣಿ ಕಾಲಂ : 'ಕೆಲವು ಸಲ ಮದುವೆಯ ಹೆದರಿಕೆ, ಕೆಲವು ಸಲ…'

ಒಂಟಿ ಬದುಕು ಬೈ Chance ಅಥವಾ ಬೈ Choice? ’ನಾನು ನಾಲ್ಕು ಸಲ ಇನ್ನೇನು ಮದುವೆ ಆಗೇ ಹೋಯಿತು ಅನ್ನುವವರೆಗೂ ಹೋಗಿದ್ದೆ, ಕಡೆಗಳಿಗೆಯಲ್ಲಿ ಹಿಂದೆ ಸರಿದುಬಿಟ್ಟೆ. ಹಾಗೆ ಹಿಂದೆ ಸರಿಯಲು ನನಗೆ ತಿಳಿಯದ ಅಜ್ಞಾತ ಭಯ ಸಹ ಒಂದು ಕಾರಣ’ ಈ ಮಾತನ್ನು ಮಾಮೂಲಿನವರು ಯಾರೋ ಹೇಳಿದ್ದರೆ ಓದಿ, ಪಾಪ ಅವನಿಗೆನು ಕಷ್ಟ ಇತ್ತೋ ಅಂದ್ಕೊಂಡು...

read more
'ಸುನಿಲನ ಪುಸ್ತಕಾ ಯಾಕ್ ಬರಲಿಲ್ಲಾ….???' – ಪ್ರಶಾಂತ್ ಆಡೂರ್ ಬರೀತಾರೆ

ಪ್ರಶಾಂತ್ ಆಡೂರ್ ಎರಡ ಸಾವಿರದ ಹದಿಮೂರು, ಅಗಸ್ಟ ೨೫, ರವಿವಾರ ಅಂದರ ನಾಳೆ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದ ಒಳಗ ನಮ್ಮ ವಸುಧೇಂದ್ರನ ಛಂದ ಪುಸ್ತಕದ ’ಮಾಯಾ ಕೋಲಾಹಲಾ’ ಪುಸ್ತಕ ಬಿಡುಗಡೆ ಸಮಾರಂಭ. ಈ ಕಥಾ ಸಂಕಲನ ಬರದವರು ಮೌನೇಶ ಬಡಿಗೇರ. ಈ ಬುಕ್ ಜೊತಿ ನಮ್ಮ facebook ಆತ್ಮೀಯ ಮಿತ್ರ ಸುನಿಲನ ಮೊದಲ translation ಬುಕ್ಕು...

read more
ಸಂಪು ಕಾಲಂ : ಡಾರ್ಕ್ ಅಂಡ್ ಲವ್ಲೀ ಟೂ…

ನಾನಾಗಿನ್ನೂ ಸಣ್ಣವಳು. ಮನೆಗೆ ಟಿವಿ ಬಂದ ಹೊಸತು. ಅದರಲ್ಲಿ ಬರುತ್ತಿದ್ದ ಕೆಲವೇ ಜಾಹೀರಾತುಗಳಲ್ಲಿ ಫೇರ್ ಅಂಡ್ ಲವ್ಲೀದು ಒಂದು. ವಯಸ್ಕ ತಂದೆ "ಕಾಶ್ ಮೇರ ಬೇಟಾ ಹೋ" ಎಂದು ಅಲವತ್ತುಕೊಳ್ಳುತ್ತಾನೆ. ಅದಕ್ಕೆ ಸೆಟೆದುನಿಂತ ಮಗಳು ಒಂದು ಫೇರ್ ಅಂಡ್ ಲವ್ಲೀ ಟ್ಯೂಬ್ ತಂದು ಹಚ್ಚುತ್ತಾಳೆ. ಅದರಿಂದ ಪವಾಡದಂತೆ ಪಡೆದ ಆಕೆಯ ಗೌರವರ್ಣ...

read more
’ಕುಡಿಯೊಡೆದ ಕನಸುಗಳಿಗೆ ನಾನು ತೊಟ್ಟಿಲು ತೂಗಿ…’ – ಶಾಂತಿ ಕೆ ಅಪ್ಪಣ್ಣ

ಶಾಂತಿ ಕೆ ಅಪ್ಪಣ್ಣ ಹೊರಟು ನಿಂತ ಆ ಘಳಿಗೆಯಲ್ಲಿ ಖಾಲಿ ಬಿಂದಿಗೆ ಮನಸು ... ತುಟಿಯ ಹೊಸ್ತಿಲಲಿ ನಿಂತ ಅಯಾಚಿತ ಬಿಕ್ಕು.... ಕಣ್ಣ ಬಟ್ಟಲಲಿ ಸದ್ದಿಲ್ಲದೇ ಇಂಗಿತ್ತು .. ಬಿಗುಮಾನದ ಕಣ್ಣ ಹನಿ   ಗುಲ್ಮೊಹರ್ ಮರದ ಅಡಿ ಚಪ್ಪರದಂತೆ ನೆರಳು .. ಹೆಣೆ ನಾಗರ ಜೋಡಿ.., ಬೆಸೆದ ಬೆರಳು .. ಗೌರಿಕೆರೆಯ ಮೌನದಂಡೆಯಲಿ ಮಾತಿಗಿಳಿದ...

read more
ರವಿಚಂದ್ರನ್ ಗೊಂದು ರೋಜಾ ಹೂವು..

ಸಂತೋಷ್ ಅನಂತಪುರ ಅದಾಗ ತಾನೇ ಹೈಸ್ಕೂಲ್ ಮೆಟ್ಟಲೇರಿದ ಸಮಯ. ಬಾಲ್ಯಾವಸ್ಥೆಯಿಂದ ಯೌವನಾವಸ್ಥೆಗೆ ಪ್ರವೇಶ ಮಾಡಿದ ಕ್ಷಣವದು. ಅದು ವಯಸ್ಸಿಗೆ ತಕ್ಕಂತೆ ಕನಸು ಕಾಣುವ ಪೌರ್ಣಮಿಯ ಕಾಲವೂ ಹೌದು! ಹಲವು ವಿಧದ ಕನಸುಗಳಿವೆ ಮತ್ತು ಅದರಲ್ಲಿ ವಿಷಯಾಧಾರಿತವಾದುದೂ ಇವೆ. ತ್ಯಾಗದ ಕನಸು, ವೈರಾಗ್ಯದ ಕನಸು, ಸಾಹಸದ ಕನಸು, ಪ್ರೀತಿಯ ಕನಸು,...

read more
ಅಹವಿ ಹಾಡು : ಗಾಂಧೀಜಿ, ಪರಮಹಂಸ, ಕಾಮ, ನಿಗ್ರಹ ಇತ್ಯಾದಿ…

ವಿಷಯ 1: ಮಹಾತ್ಮಾ ಗಾಂಧೀಜಿಗೆ ಮದುವೆಯಾದಾಗ 13 ವರ್ಷ ಕೂಡಾ ತುಂಬಿರಲಿಲ್ಲ ಮತ್ತು ಕಸ್ತೂರಬಾಗೆ ಆಗ ತಾನೇ 13 ತುಂಬಿತ್ತು. ಮದುವೆಯಾಗಿ ಒಂದೆರಡು ವರ್ಷಗಳ ನಂತರ ಅವರಿಗೂ ಮಕ್ಕಳಾದವು, ಮರಿಗಳಾದವು. ಅಲ್ಲಿಂದ ಮುಂದೆ ಗಾಂಧೀಜಿ 1906 ರಲ್ಲಿ ತಮ್ಮ 37 ನೆಯ ವಯಸ್ಸಿನಲ್ಲಿ ಬ್ರಹ್ಮಚರ್ಯ ಪಾಲಿಸುವ ವಚನ ತೊಟ್ಟುಬಿಟ್ಟರು. ಅಲ್ಲಿಗೆ ಅವರ...

read more
ಹಲ್ಮಿಡಿ ಶಾಸನ ದೊರೆತ ಗ್ರಾಮ ಇಂದು ಅನಾಥ…

ಮದನ್ ಗೌಡ ಕನ್ನಡದ ಮೊದಲ ಅಕ್ಷರ ಆರಂಭವಾದ ಹಲ್ಮಿಡಿ ಶಾಸನ ದೊರೆತ ಪುಟ್ಟ ಗ್ರಾಮ ಇಂದಿಗೂ ಅನಾಥವಾಗಿದೆ. 2003ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ಸಮಯದಲ್ಲಿ ಗ್ರಾಮದಲ್ಲಿ ಶಾಸನದ ಪ್ರತಿರೂಪದ ನೆನಪಿನ ಮಂಟಪ ನಿರ್ಮಿಸಲಾಗಿದೆ. ಅದಕ್ಕೆ ಅಂದಿನ ಸಚಿವರಾದ ಶ್ರೀಮತಿ ರಾಣಿ ಸತೀಶ್ ಮತ್ತು ಅಂದಿನ ಜಿಲ್ಲಾಧಿಕಾರಿ...

read more
’ನಮ್ಮ ಇಂದಿರೆ…’ – ವೇದಾ ಬರೀತಾರೆ

ವೇದಾ ನಮ್ಮ ಇಂದಿರೆ ಅತೀ ಸುಂದರಿ ಅಲ್ಲದಿದ್ದರೂ ಸರಳ ಉಡುಗೆಯ, ಸ್ನೇಹಪೂರ್ಣ ಕಣ್ಣುಗಳ, ಸ್ನಿಗ್ದನಗೆಯ ಮೆಲುಮಾತಿನ ಸರಳಸುಂದರಿ ಅಂಬೋದ್ರಲ್ಲಿ ಎರಡು ಮಾತಿಲ್ಲ, ಒಮ್ಮೆ ಅವಳನ್ನ ನೋಡಿದ್ರೆ ನೀವೆಲ್ರೂ ಈ ಮಾತನ್ನ ಒಪ್ಪೇ ಒಪ್ತೀರಾ ಅಂತ ನನ್ಗೊತ್ತು. ದೊಡ್ಡಮ್ಮ ಓರಿಗಾಮಿಯ ವಿನ್ಯಾಸ ಮಾಡುವುದರಲ್ಲಿ ಮಗ್ನರಾಗಿರುವುದು ಇಂದಿರೆಗೆ...

read more
’ಕಲ್ಲು ಕಲ್ಲಿನ ನಡುವೆ ಒಲ್ಲೆ ಎನ್ನದ ಜೀವ…’ – ವಿದ್ಯಾ ಕುಂದರಗಿ ಬರೀತಾರೆ

ರೊಟ್ಟಿ, ಅವಳು ಮತ್ತು ಹಾಡು ವಿದ್ಯಾ ಕುಂದರಗಿ ಜಟ್ಟಿ ತೊಡೆತಟ್ಟಲು....... ಗಜಗಮಿಸದ ಗಟ್ಟಿತನ ಗಟ್ಟಿಗಿತ್ತಿ ರಟ್ಟೆಯಲ್ಲಿರಬೇಕು. ಬಯಲ ಒಡಲಿನ ಹಸಿವೆಗೆ ಕಡಲ ಮೀನು,ಕಲ್ಪವೃಕ್ಷಫಲ, ಮಡು ನಿಂತ ನೀರಿನ ಭತ್ತಕ್ಕಿ ಅದ್ಯಾವ ಲೆಕ್ಕ? ಒಡಲ ಮೇಲಿನ ಒಂಟಿಮಳೆ ಹಣಿತಕ್ಕೆ ಗರ್ಭದಾಳದಿ ಘಮ್ಮನೆ ಅರಳುವ ಎರೆಮಣ್ಣು ಇಳುವರಿ ಈಯುವುದು ಜವ್ವಾರಿ...

read more
’ಮಣ್ಣ ಪಯಣ’ಕ್ಕೆ ಪ್ರಶಸ್ತಿಯ ಗರಿ

"Manna Payana" wins BEST SHORT FILM award at The Indian Independent Film Festival (TIIFF), which concluded recently in Bangalore. ಎಂ ಎಸ್ ಪ್ರಕಾಶ್ ಬಾಬು ಅವರ ಕಿರು ಚಿತ್ರ ’ಮಣ್ಣ ಪಯಣ’  The Indian Independent Film Festival ಗೆ ಆಯ್ಕೆಯಾಗಿ ಫ್ರೀಡಂ ಪಾರ್ಕ್ ನಲ್ಲಿಯ ಓವಲ್ ಥಿಯೇಟರ್ ನಲ್ಲಿ...

read more
ಇನ್ನು ಹತ್ತು ವರ್ಷಗಳಲ್ಲಿ ಫ್ರೆಂಚ್ ಗಿಂತ ಹೆಚ್ಚಾಗಿ ಕನ್ನಡ ಮಾತನಾಡುವವರಿರುತ್ತಾರೆ

ಒಂದು ಭಾಷೆಯ ಸಾವು ಆ ಜನ ಸಮುದಾಯದ ಸಂಸ್ಕೃತಿಯ ಸಾವು ಡಾ ಎಸ್ ಬಿ ಜೋಗುರ ಯಾವುದೇ ಒಂದು ಭಾಷೆಯ ಬೆಳವಣಿಗೆಯಲ್ಲಿ ತೊಡಕುಗಳಾಗಲಿ.. ಸಡಿಲಿಕೆಗಳಾಗಲೀ ಕೇವಲ ನೆಪ ಮಾತ್ರ. ಒಂದು ಭಾಷೆ ತನ್ನ ರಿಜಿಸ್ಟನ್ಸ್ ಮೂಲಕವೇ ಬದುಕಿ ಉಳಿಯುವ ಎಲ್ಲ ಸಾಮಥ್ರ್ಯಗಳನ್ನು ಅಂತರಂಗೀಕರಣಗೊಳಿಸಿಕೊಂಡಿರುತ್ತದೆ. ಆಯಾ ಕಾಲಮಾನದ ಅಗತ್ಯಗಳಿಗೆ ತಕ್ಕ ಹಾಗೆ...

read more
ಉಮಾರಾವ್ ಅವರಿಗೆ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ

ನಮ್ಮ ನಡುವಿನ ಲೇಖಕಿ ಉಮಾರಾವ್ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ ಸಂದಿದೆ. ಅವರ ಸಿಲೋನ್ ಸುಶೀಲ ಸಣ್ಣ ಕಥೆಗಳ ಸಂಗ್ರಹಕ್ಕೆ ಈ ಪ್ರಶಸ್ತಿ ಬಂದಿದೆ.  ಉಮಾರಾವ್ ಅವರಿಗೆ ಅವಧಿಯ...

read more
ಅಶೋಕ ಶೆಟ್ಟರ್ ಕಾಲಂ: ಜೆ ಎನ್ ಯು ಎಂಬ…

೧೮-೧೯ನೇ ಶತಮಾನದಲ್ಲಿ ಭಾರತದ ಇತಿಹಾಸ, ಸಂಸ್ಕೃತಿ, ಪರಂಪರೆ, ಧರ್ಮ, ಭಾಷೆ, ದರ್ಶನ, ಕಲೆ, ಸಾಹಿತ್ಯಗಳೇ ಮೊದಲಾದವುಗಳ ಗಂಭೀರ ಅಧ್ಯಯನಗಳಿಗೆ ಚಾಲನೆ ಕೊಟ್ಟ ಐರೋಪ್ಯರು,ಅದರಲ್ಲೂ ವಿಶೇಷವಾಗಿ ಆಂಗ್ಲರು, ಭಾರತೀಯ ಸಮಾಜದ ಕುರಿತು ನೆಲೆಯೂರಿಸಿದ ಒಂದು ಸ್ಥಿರಚಿತ್ರವೆಂದರೆ ಆರ್ಯರ ಆಗಮನ ಮೊದಲ್ಗೊಂಡು ಬ್ರಿಟಿಷರ ಆಗಮನದ ವರೆಗಿನ ತನ್ನ...

read more
'ಕೀನ್ಯಾದಲ್ಲಿ ನಮ್ಮ ಹ್ಯಾಪ್ಪಿ ಇಂಡಿಪೆಂಡೆನ್ಸ್ ಡೇ' – ಕುಮುದವಲ್ಲಿ ಅರುಣಮೂರ್ತಿ ಬರೀತಾರೆ

ಕುಮುದವಲ್ಲಿ ಅರುಣಮೂರ್ತಿ ನನಗೆ ಬುದ್ಧಿ ಬಂದಾಗಿನಿಂದ...ಯಾವತ್ತೂ ಆಗಸ್ಟ್ ೧೫ರ ನಮ್ಮ ಸ್ವತಂತ್ರ ಭಾರತದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ತಪ್ಪಿಸಿದ್ದೇ ಇಲ್ಲ. ನನ್ನ ದೇಶ, ನಮ್ಮ ಸಂಸ್ಕೃತಿ ಅಂದ್ರೆ ವಿಪರೀತ ಅಭಿಮಾನ ಇರಿಸಿಕೊಂಡವಳು. ಶಾಲೆಯಲ್ಲಿ, ಕಾಲೇಜಿನಲ್ಲಿ ನಾನು ಹಾಡುವ ದೇಶಭಕ್ತಿಗೀತೆಗಳು ವರ್ಲ್ಡ್ ಫೇಮಸ್ಸಾಗಿತ್ತು....

read more
ಹೈಕು ಜೊತೆ ಹೀಗೊಂದು ಸಂಜೆ

ತುಂಬಿದ ಕೊಡ ತುಳುಕುತ್ತಿದೆ... ವಿದ್ಯಾಶಂಕರ ಹರಪನಹಳ್ಳಿ ಭಾರತದಲ್ಲಿನ ಕಂದಾಚಾರ, ಡಂಭಾಚಾರದ ಪ್ರತಿಯಾಗಿ, ಪ್ರತಿಭಟನೆಯಾಗಿ ಹುಟ್ಟಿದ್ದು ಬೌದ್ಧ ಧರ್ಮ. ಮುಂದೆ ಧಮ್ಮ ಬೆಳೆದು ಚೀನ, ಜಪಾನ್, ಶ್ರೀಲಂಕಾ ಮೊದಲಾದ ದೇಶಗಳಿಗೆ ಹಬ್ಬಿತು. ಜಪಾನಿನಲ್ಲಿ ಸಂಸಂಸ್ಕೃತದ ಧ್ಯಾನ, ಚಾನ್ ಆಗಿ, ನಂತರ ಝೆನ್ ಆಗಿ, ಬೌದ್ಧ ಧಮ್ಮದ ಒಂದು ಶಾಖೆಯಾಗಿ...

read more

Pin It on Pinterest

Share This