ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಹಂಬಲಿಸಿದ ಯಾರಿಗೂ ದೊರೆಯದ ಹುಚ್ಚು' – ಹರವು ಸ್ಫೂರ್ತಿಗೌಡ ಕವಿತೆ

ಒಂದೊಂದು ಹುಚ್ಚು.. ಹರವು ಸ್ಫೂರ್ತಿಗೌಡ ಹುಚ್ಚರ ಸಂತೇಲಿ ಪ್ರೀತಿ ಹಂಬಲವು ಹುಚ್ಚೇ ಎಲ್ಲರಲ್ಲಿ ಒಂದಾಗುವ ನನ್ನದು ಹುಚ್ಚೇ ಗಿಡ ಬಳಿ ಮರ ಹಕ್ಕಿ-ಪಿಕ್ಕಿಗಳಿಗೂ ಹುಚ್ಚು ವಿಜಯನಗರ ಸಿರಿ-ಹೊಯ್ಸಳ ಕಲೆಗೂ ಹುಚ್ಚು ನದಿಯಾಗಿ ಒಡಲಲ್ಲಿ ಹರಿದೆ ದಾಹದ ಹುಚ್ಚಿಗೆ ಕಥೆಯಾಗಿ ದೀಪಗಳಿಂದರಳಿದೆ ಕನಸಿನ ಹುಚ್ಚಿಗೆ ಹಾಡಾಗಿ ಮೆರವಣಿಗೆ ಬಂದೆ...

read more
ಹೀಗಿತ್ತು ವಾರ್ತಾಭಾರತಿ ಓದುಗರ ಸಮಾವೇಶ

ನಿನ್ನೆ ಪುರಭವನದಲ್ಲಿ ನಡೆದ 'ವಾರ್ತಾಭಾರತಿ' ೧೧ ನೇ ವರ್ಷದ ಓದುಗರ ಸಮಾವೇಶ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, 'ಹಿಂದೂ' ಪತ್ರಿಕೆಯ ನಿಕಟಪೂರ್ವ ಸಂಪಾದಕರಾದ ಎನ್ ರಾಮ್, ದೇವನೂರು ಮಹಾದೇವ, ಅನಂತಮೂರ್ತಿ ಮತ್ತು ಹಲವಾರು ಸಮಾನ ಮನಸ್ಕರು ಭಾಗವಹಿಸಿದ್ದ ಸಮಾವೇಶದ ಚಿತ್ರಗಳು ಇಲ್ಲಿವೆ : ಚಿತ್ರಗಳನ್ನು ದೊಡ್ಡದಾಗಿ ನೋಡಲು...

read more
ಜುಗಾರಿ ಕ್ರಾಸ್ ನಲ್ಲಿ ಜೋಗಿ ಪ್ರಶ್ನೆ – 'ಇದರಲ್ಲಿ ಲಿಟರೇಚರ್ ಎಲ್ಲಿದೆ'

ಬೆಂಗಳೂರಿನಲ್ಲಿ ಲಿಟರೇಚರ್ ಫೆಸ್ಟಿವಲ್ ಆರಂಭಗೊಂಡಿದೆ. ಅದು ಇಲ್ಲಿನ ನೆಲವನ್ನು, ಸಂಸ್ಕೃತಿಯನ್ನು, ಸಾಹಿತ್ಯವನ್ನು ಪ್ರತಿನಿಧಿಸುತ್ತಿದೆಯೆ ಎಂಬುದು ಜೋಗಿಯವರ ಪ್ರಶ್ನೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತ. ಜೋಗಿ ಬೆಂಗಳೂರು ಲಿಟರೇಚರ್ ಫೆಸ್ಟಿವಲ್.. ಇದರಲ್ಲಿ ಬೆಂಗಳೂರು ಎಲ್ಲಿದೆ.. ಲಿಟರೇಚರ್ ಎಲ್ಲಿದೆ......

read more
ವಿನಯ್ ಕುಮಾರ್ ಕಾಲಂ : ಸತ್ಯಜಿತ್ ರೇ ಏನಂತಾರೋ ಗೊತ್ತಿಲ್ಲ!

ಶೂನ್ಯ ಹನಿ - ೧ ಒಮ್ಮೆ ಸತ್ಯಜಿತ್ ರೇ ಹೀಗೆ ಹೇಳಿದ್ದರು : ಸಿನಿಮಾ ಸಮಾಜವನ್ನು ಬದಲಾವಣೆ ಮಾಡುತ್ತದೆಂದು ನಾನು ನಂಬುವುದಿಲ್ಲ ನಾನು ಮೂರು ಘಟನೆಗಳಿಗೆ ಮುಖಾಮುಖಿಯಾದೆ. ಒಂದು ಏಳೆಂಟು ವರುಷಗಳ ಹಿಂದೆ ಇರಬೇಕು. ನಾನಾಗ ಪಿ.ಇ.ಎಸ್. ಪದವಿ ಕಾಲೇಜಿನಲ್ಲಿ ಓದುತ್ತಿದ್ದೆ. ಮಂಡ್ಯ ಫಿಲಂ ಸೊಸೈಟಿಯ ವತಿಯಿಂದ ಅಭಿನವ ಭಾರತಿ...

read more
’ಸ೦ದರ್ಶನ’ – ಸಣ್ಣ ಕಥೆ

ಕಥೆ ಗುರುರಾಜ ಕೊಡ್ಕಣಿ ಪ್ರಕಾಶ್ ಹೊರಟಿರಾ ಇ೦ಟರ್ವ್ಯೂ ಗೆ ..? ’ಎ೦ದು ಕೇಳಿದರು ಬಾಸ್ ಪ್ರಕಾಶನಿಗೆ. ’ಯಸ್ ಬಾಸ್,ಆನ ದಿ ವೆ’ ಎ೦ದ ಪ್ರಕಾಶ ,ಬೈಕಿನ ಪಕ್ಕೆಗೊ೦ದು ಒದೆಯುತ್ತಾ... ’ಓಕೆ .ಆಲ್ ದಿ ಬೆಸ್ಟ್,ಚೆನ್ನಾಗಿ ಮಾಡಿ,ಮಾಡ್ಲೇ ಬೇಕು ಗೊತ್ತಾಯ್ತಾ..’? ಎ೦ದರು ಬಾಸ್. ’ಡೆಫಿನೆಟ್ಲಿ ಬಾಸ್,ಚಿ೦ತೆನೇ ಬೇಡ ನಮ್ಮ ಪೇಪರಿನ ಬೆಸ್ಟ್...

read more
ಶನಿವಾರಕ್ಕೊಂದು ಮಕ್ಕಳ ಪದ್ಯ

ಮಣ್ಣಿನ ಮೇಲೆ ಮಣ್ಣನು ಇಟ್ಟು ಕೃಷ್ಣಮೂರ್ತಿ ಬಿಳಿಗೆರೆ ಮಣ್ಣಿನ ಮೇಲೆ ಮಣ್ಣನು ಇಟ್ಟು ಮಣ್ಣಿನ ಮನೆಯ ಕಟ್ಟೋದ್ ಬಿಟ್ಟು ಮರಳಿನ ಬಾಗಿಲು ಇಕ್ಕೋದ್ ಬಿಟ್ಟು ಮರಳಿ ಮನೆಗೆ ಹೋಗೋದ್ ಬಿಟ್ಟು   ಹೂವಿನ ಮೇಲೆ ಹೂವನ್ನಿಟ್ಟು ಹೂವಿನ ಮನೆಯ ಕಟ್ಟೋದ್ ಬಿಟ್ಟು ಜೇನಿನ ಬಾಗಿಲು ಇಕ್ಕೋದ್ ಬಿಟ್ಟು ದುಂಬಿ ಕರಕೊಂಡ್ ಬರೋದ್ ಬಿಟ್ಟು ನೀರಿನ...

read more
ಕೆ ಪಿ ಮೃತ್ಯಂಜಯ ಅವರಿಗೆ 2013 ರ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ

ಕಾವ್ಯವನ್ನು ಉಸಿರಾಗಿಸಿಕೊಂಡಿದ್ದ ಕವಯಿತ್ರಿ ವಿಭಾ ನೆನಪಿನಲ್ಲಿ ಲಡಾಯಿ ಪ್ರಕಾಶನ ನಡೆಸುವ 2013 ರ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಕೆ ಪಿ ಮೃತ್ಯಂಜಯ ಅವರ 'ನನ್ನ ಶಬ್ಧ ನಿನ್ನಲಿ ಬಂದು' ಹಸ್ತಪ್ರತಿ ಕವನ ಸಂಕಲನಕ್ಕೆ ದೊರೆತಿದೆ. ಪ್ರಶಸ್ತಿಯು 5000 ರೂ ನಗದು ಮತ್ತು ಪಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪಡೆದ ಕೃತಿಯನ್ನು ಲಡಾಯಿ...

read more
ಸಂಧ್ಯಾರಾಣಿ ಕಾಲಂ : ಈಗ ಅನಂತ್ ನಾಗ್ Vs ಅನಂತ್ ನಾಗ್!

  ತೆರೆಯ ಮೇಲೆ ಆತ ಬಂದರೆ ಸಾಕು, ದಿಲೀಪ್ ಕುಮಾರ್ ನ ’ಉಡೆ ಜಬ್ ಜಬ್ ಜುಲ್ಫೆ ತೇರೆ, ಕಂವಾರಿಯೋಂಕ ದಿಲ್ ಮಚ್ ಲೇ’! ಹೌದು, ರೇಶ್ಮೆಗಿಂತಲೂ ನಾಜೂಕಾಗಿದ್ದ, ಹಣೆಯ ಮೇಲೆ ಸಮುದ್ರದ ತೆರೆಯಂತೆ ಬೀಳುತ್ತಿದ್ದ ತಲೆಗೂದಲನ್ನು ಆತ ಬೆರಳುಗಳಿಂದ ಹಿಂದಕ್ಕೊತ್ತಿ ಕೂರಿಸುತ್ತಿದ್ದರೆ ಡಿಟ್ಟೋ ಈ ಹಾಡು ನೆನಪಾಗುತ್ತಿತ್ತು! ಇವನ ಜೇನು...

read more
ಸಂಪು ಕಾಲಂ : ನಮ್ಮ ಟೂರಿಂಗ್ ಟೈಮ್

ಬೆಳಗ್ಗೆ ಆಫೀಸಿಗೆ ಓಡು, ತಡವಾಗಿ ಮನೆಗೆ ಬಂದು ಏನೋ ತಿಂದು ಮಲಗು ಎಂಬಂತಹ ಇಂದಿನ ಯುವಜನತೆಯ ದೈನಂದಿನ ಜೀವನವನ್ನು ಚಾಚೂ ತಪ್ಪದೆ ಪ್ರತಿನಿಧಿಸುತ್ತಿರುವವರು ನಾವು ದಂಪತಿಗಳು. ಇಂತಹ ಸಂದರ್ಭದಲ್ಲಿ ನಮಗೆ ಒಂದು ಬ್ರೇಕ್ ಸಿಗಲಿ ಎಂದೋ ಏನೋ ನನ್ನ ಅತ್ತೆ ಒಂದು ಪ್ರಪೋಸಲ್ ನಮ್ಮ ಮುಂದಿಟ್ಟರು. ಅದೇನೆಂದರೆ, ಹತ್ತು ದಿನಗಳ ಕಾಲ...

read more
ಬುದ್ದ ಎಂದರೆ…

ಹಂದಲಗೆರೆ ಗಿರೀಶ್ ಬುದ್ದನ ಮೌನ ಕುರಿತು ಜಗದ ತುಂಬಾ... ಮಾತು ಮಾತು ಮಾತು ೨ ಬರೀ ಬೆಳದಿಂಗಳು ಅವನ ಮುಗುಳು ನಗೆಯಿಂದ ಬುದ್ದ ಪೂರ್ಣಿಮೆ ೩ ಬುದ್ದ ಎಂದರೆ ಮೌನದ ಮೊತ್ತ ಸತ್ಯದ ಕೀಲಿ ಕೈ ೪ ನಿನ್ನ ಧ್ಯಾನ ಮನಸ್ಸಿನ ಸ್ನಾನ ೫ ಒಂದು ಹುಣ್ಣಿಮೆಯ ಬೆಳಕಹೀರಿ ಇನ್ನೂ ಬೆಳಗುತ್ತಲೇ ಇರುವೆ ಚಂದಿರನ ಅಂಗಳಕ್ಕಿಳಿದು ಬಂದರೂ.. ಕತ್ತಲೆ...

read more
…ನಿನ್ನ ಕೆನ್ನೆಯ ಗುಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡ್ಕೋಬೇಕಾಗಿದೆ

ಮೊಳಕೆ ಮತ್ತು ಇತರ ಕತೆಗಳು ಬಿ ಎಂ ಬಶೀರ್ ಗುಜರಿ ಅಂಗಡಿ ರಾಜಕೀಯ ಅದೊಂದು ರಾಜಕಾರಣಿಗಳ ಕುಟುಂಬ. ಒಂದು ದಿನ ಯಾರೋ ಕೇಳಿದರು ‘‘ಅಪ್ಪ ಮನೆಯಲ್ಲಿ ಇದ್ದಾರ...’’ ಮಗ ತಕ್ಷಣ ಹೇಳಿದ ‘‘ಇಲ್ಲ ಅಂತ ಹೇಳಲು ಹೇಳಿದ್ದಾರೆ. ಆದರೆ ಅವರು ಒಳಗೆ ಇದ್ದಾರೆ’’ ‘‘ಅದ್ಯಾಕಪ್ಪ ಮಗನಾಗಿಯೂ ಅಪ್ಪನ ವಿರುದ್ಧ ಹೇಳುತ್ತಿದ್ದೀಯ?’’ ‘‘ನಾನು...

read more
ಅಹವಿ ಹಾಡು : ವೆಂಟಿಲೇಟರ್ ಅನ್ನುವ emotional blackmailer ….

ಈಗೀಗ ಒಂದಿಷ್ಟು ವರ್ಷಗಳಲ್ಲಿ ಜಗತ್ತು ಯಾವ ಪರಿ ಆತುರಕ್ಕೆ ಬಿದ್ದು ಮುಂದೆ ಓಡುತ್ತಿದೆ ಅಲ್ಲವಾ? ವಿಜ್ಞಾನ ಮತ್ತು ತಂತ್ರಜ್ಞಾನಗಳು ದಿನಬೆಳಗಾದರೆ ಒಂದೊಂದು ಆವಿಷ್ಕಾರವನ್ನು ನಮ್ಮೆದುರು ತಂದು ಹರವುತ್ತಿದೆ ನೆನ್ನೆಗೆ ಮೊನ್ನೆಯೆನ್ನುವುದು outdated, ಇವತ್ತಿಗೆ ನೆನ್ನೆಯೇ outdated ಅನ್ನಿಸುವಷ್ಟು ಬೆರಗು ಮೂಡಿಸುತ್ತದೆ...

read more
ಸಂವರ್ತ 'ಸಾಹಿಲ್' ಕವಿತೆಗಳು ಇಲ್ಲಿವೆ..

ಸಂವರ್ತ 'ಸಾಹಿಲ್' ಎಂದೋ ಬರೆದ (ಅಥವಾ ಬರೆಯಲು ಪ್ರಯತ್ನಿಸಿದ) ಕನ್ನಡ ಕವಿತೆಗಳು ಇಂದು ಕೈಗೆ ಸಿಕ್ಕವು. ಸುಮ್ನೆ ಇರ್ಲಿ ಅಂತ ಹಂಚಿಕೊಳ್ಳುತ್ತಾ ಇದ್ದೆನೆ... ರಕ್ತ ಚೆಲ್ಲದ ಹಿಂಸೆ ಗುಂಡಿನ ಸದ್ದು ಎಲ್ಲೂ ಕೇಳಲಿಲ್ಲ ಸಂತೆಯಲಿ ವ್ಯಾಪಾರ ಮುಂದುವರಿದಿದೆ   ಹೊಗೆ ಆಡುವುದು ಎಲ್ಲೂ ಕಂಡು ಬರಲಿಲ್ಲ ಬೃಂದಾವನದಿ ವಸಂತ ಕುಣಿದಾಡಿದೆ...

read more

Pin It on Pinterest

Share This