ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಂಪು ಕಾಲಂ : ಅವ್ಯವಸ್ಥೆಯೇ ವ್ಯವಸ್ಥೆ!

"ನೀನು ಬಹುಬೇಗ ತುಂಬಾ ಹೆಸರು ಮಾಡಬೇಕಾ? ಹಾಗಾದರೆ ಯಾರನ್ನಾದರೂ ಪಬ್ಲಿಕ್ ನಲ್ಲಿ ಬೈದು ಬಿಡು, ಅವಾಚ್ಯವಾಗಿ, ಅಥವಾ, ಒಂದು ಕೆಟ್ಟ ಕೆಲಸ ಮಾಡು!", ಎನ್ನುತ್ತಾ ಗೊಳ್ ಎಂದು ಅವಾ ನಕ್ಕು ಬಿಟ್ಟ. ನಕ್ಕು, ನಿಟ್ಟುಸಿರಿಟ್ಟು ಮುಂದೆ ನಡೆದಾಗಿತ್ತು. ನಾನಿನ್ನೂ ಅಲ್ಲೇ ನಿಂತು ಬಿಟ್ಟಿದ್ದೆ. ಕೆಟ್ಟ ಕೆಲಸ ಮಾಡು ಎಂದರೇನು? ಹಾಗಾದರೂ ಮಾಡಿ...

read more
'ಕುಡುಕ ಪ್ರಿನ್ಸಿಪಾಲ್ ಹಾಗೂ ನನ್ನ ಹಾಸ್ಟೇಲ್ ಬದುಕು' – ಚಿತ್ರಾ ಸಂತೋಷ್

ಚಿತ್ರಾ ಸಂತೋಷ್ ನಿನ್ನೆ ಟೀವಿಗಳಲ್ಲಿ ಒಂದು ಸುದ್ದಿ ನೋಡಿದೆ. ಆನೇಕಲ್ ನ ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ (ಹೆಣ್ಣುಮಕ್ಕಳದು) ಪ್ರಿನ್ಸಿಪಾಲ್ ಪಾರ್ಟಿ ಮಾಡುತ್ತಿರುವುದು. ದೊಡ್ಡ ದೊಡ್ಡ ಬಾಟಲ್ ಗಳು, ಗ್ಲಾಸು ತುಂಬಾ ಮದ್ಯ ಕುಡಿದುಕೊಂಡು, ಜೊತೆಗೆ ಗೆಳೆಯರ ಡ್ಯಾನ್ಸ್.... ಥೂ! ಅಸಹ್ಯ ಅನಿಸಿಬಿಟ್ಟಿತು. ಜೊತೆಗೆ, ಆ ಕುಡುಕ...

read more
'ಬಾನ ಖಾಲಿತನವ ಆಹ್ವಾನಿಸುತ್ತಾ…' – ನಳಿನಾ

ದಂಡೆ ದೋಣಿಯ ಅಳಲು - ನಳಿನಾ ಸಮುದ್ರದ ಎದೆಯ ಏರಿಳಿತಕ್ಕೆ ಧಸಕ್ಕನೆ ಸಿಕ್ಕಿ ಮೂಲೆಗುಂಪಾದ ಮೀನು ಮೂತಿಯ ದೋಣಿಯ ಬೆಕ್ಕಸ ಬೆರಗಾದ ಕಣ್ಣಿನ ಕತೆಯೊಳಗಣ ದಣಿಯ ನೆನಪಿನ ಗೆರೆಗಳು ಹೇಳುವುದು ನೂರು ವ್ಯಥೆ.   ನೂರಾರು ವರ್ಷಗಳ ಹಿಂದೆ ತಯಾರಾಗಿ ಭರತವರ್ಷದ ಬಾವುಟದ ಬಣ್ಣದೊಳು ನಳನಳಿಸುತ್ತಾ, ಮೆರೆದ ದೋಣಿಗೂ ಒಂದು ಮನಸ್ಸಿದೆ. ತನ್ನ...

read more
’ನಾವು & ಬೋದಿಲೇರ್’ – ರಾಜೇಂದ್ರ ಪ್ರಸಾದ್

ರಾಜೇಂದ್ರ ಪ್ರಸಾದ್ ಥಟ್ಟನೆ ಎಲ್ಲರೂ ಕೇಳುವ ಪ್ರಶ್ನೆ , ಬೋದಿಲೇರ್ ನಮಗ್ಯಾಕೆ ಬೇಕು? ಅವನನ್ನ ಯಾಕೆ ಓದ್ಬೇಕು ? ನಮ್ಮಲ್ಲಿ ಯಾರು ಇಲ್ಲವೇನು ? ಇತ್ಯಾದಿಗಳು.. ನನಗನಿಸುವುದು ಬೋದಿಲೇರ್ ನಿಗೆ ಇದ್ದ ನೋವು, ಹತಾಶೆ, ಕಾಮ, ಒಲವು, ಸಾಲ ಎಲ್ಲಾ ನಮಗೂ ಇವೆ.. ಅವುಗಳ ನಡುವೆ ಅವನ್ನೇ ಕಾವ್ಯದ ಪರಿಕರಗಳನ್ನಾಗಿಸಿಕೊಂಡು ಕಾವ್ಯದ...

read more
ಶೋಧಿಸುವ ಕಯಾಲಿಗೆ ಬಿದ್ದವರು, ಪ್ರೀತಿಯನ್ನೇ ಕಳೆದುಕೊಂಡರು…

ಶಶಿಕಾಂತ ಯಡಹಳ್ಳಿ ಚಿಕ್ಕವನಾಗಿದ್ದಾಗ ನನಗೆ ಗುರಿ ಇತ್ತು ದಾರಿ ಗೊತ್ತಿರಲಿಲ್ಲ. ಈಗ ದೊಡ್ಡವನಾಗಿದ್ದೇನೆ ದಾರಿ ಸಿಕ್ಕಿದೆ ಗುರಿ ಮರೆತಿದೆ. * * * ಪರಿಚಿತ ಸ್ನೇಹಿತರ ಅಪರಿಚಿತ ಮುಖಗಳು ಒಟ್ಟಿಗೆ ಕಾಣುವುದಿಲ್ಲ. ಕಾಲನ ಓಟದಲ್ಲಿ ಮುಖವಾಡ ಕಳಚಿ ಬಿದ್ದಂತೆಲ್ಲಾ ಸಂಬಂಧಗಳು ಉಳಿಯುವುದಿಲ್ಲ. * * * ಇತ್ತೀಚೆಗೆ ಮೆಟ್ರೋ ಸಿಟಿಯಲ್ಲಿ...

read more
ಮಣ್ಣೆತ್ತಿನ ಅಮವಾಸ್ಯೆ : ಮಳೆ ಬೆಳೆ ಚೆನ್ನಾಗಿ ಆಗಲೆಂದು ಕೃಷಿಕರು ಬೇಡಿಕೊಳ್ಳುವ ಹಬ್ಬ

- ಡಾ ಪ್ರಕಾಶ ಗ ಖಾಡೆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಮುಂಗಾರಿನ ಆರಂಭದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ .ಕಾರ ಹುಣ್ಣಿವೆ ನಂತರ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ,ಮಣ್ಣು ಒಕ್ಕಲು ಮಕ್ಕಳಿಗೆ ಅತ್ಯಂತ ಪವಿತ್ರವಾದುದು.ವಷರ್ಾರಂಭದಿಂದ ಐದು...

read more
ಸಂಧ್ಯಾರಾಣಿ ಕಾಲಂ : ಇದು ದುಃಖವನ್ನು ಹುಗಿದಿಟ್ಟು ಹೂ ಗಿಡ ಬೆಳಸಿದವರ ಕಥೆ

ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣವಾದುದನ್ನು ಸಾಧಿಸಿದ ಭಾರತದ 12 ಪ್ರಖ್ಯಾತ ಮಹಿಳೆಯರು (ನೀರಾ ದೇಸಾಯಿ, ಶಾರದಾಮೋನಿ, ರಾಮೇಶ್ವರಿ ವರ್ಮ, ಕ್ಯಾಥಿ ಶ್ರೀಧರ್, ಕೊಯ್ಲಿ ರಾಯ್, ಇಳಾ ಭಟ್, ಸುತಾಪ ಚಕ್ರವರ್ತಿ, ಶಾಂತಾ ರಾಮೇಶ್ವರ ರಾವ್, ಮೀನಾಕ್ಷಿ ಮುಖರ್ಜಿ, ಅಬ್ಬೂರಿ ಛಾಯಾದೇವಿ, ರುಕ್ಮಿಣಿ ಪಾರ್ಥ ಸಾರಥಿ, ಜಯಲಕ್ಷ್ಮಿ ನಾರಾಯಣ್)...

read more
’ಲಂಕೇಶಪ್ಪ ಅವ್ನ ನೋಡಿ ಕಲಿ’ ಅಂದ್ರಂತೆ ಬೇಂದ್ರೆ ಅಜ್ಜ

ಚಿದಂಬರ ನರೇಂದ್ರ ಹಿಂದೊಮ್ಮೆ ಧಾರವಾಡದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯಲ್ಲಿ ಒಂದು ಕವಿಗೋಷ್ಟಿ ನಡಯಿತಂತೆ. ನವ್ಯದ ಪ್ರಖರ ಕವಿಗಳಾದ ರಾಮಚಂದ್ರ ಶರ್ಮ ಮತ್ತು ಲಂಕೇಶ್, ಬೇಂದ್ರೆಯವರ ಸಮ್ಮುಖದಲ್ಲಿ ಕವನ ವಾಚನ ಮಾಡ್ತಾರೆ. ಕವಿಗೋಷ್ಟಿ ಮುಗಿದ ನಂತರ ಬೇಂದ್ರೆಯವರು, ಶರ್ಮ ಮತ್ತು ಲಂಕೇಶ್ ರನ್ನು ಕರೆದು ಹೀಗೆ ಪ್ರತಿಕ್ರಯಿಸುತ್ತಾರೆ....

read more
'ಬಹುಶಃ ಹಳಸಿದ ವಾಸನೆ ಕೋಣೆಯ ಹೊರಗೂ ಇದೆ…'

ಜಾನ್ ಸುಂಟಿಕೊಪ್ಪ ಇಗೋ... ಬದುಕಿನ ಕೋಣೆಯೊಳಗೆ ವಸ್ತುಗಳು ಬದಲಾಗುತ್ತಿಲ್ಲ . ಹಸಿದ ಕಿಟಕಿಗಳ ದಾಹಕ್ಕೆ ಕಣ್ಣ ತಂಪಾಗಿಸಲು ಪ್ರಯತ್ನಿಸುತ್ತೇನೆ ಆದರೆ ಚಿಲಕಗಳ ಸದ್ದು ಇನ್ನೂ ಬದಲಾಗಿಲ್ಲ   ಆ ಮೇಜು ಕುರ್ಚಿಯ ಸ಼ಂಬಂಧ ಇನ್ನೂ ಹಾಗೆಯೇ ಇದೆ ಕೆಲವೊಮ್ಮೆ ಹತ್ತಿರ ಕೆಲವೊಮ್ಮೆ ದೂರ ಇವುಗಳ ನಡುವೆ ಅಕ್ಷರಗಳ ಸೇತುವೆ ಪೋಣಿಸುತಿರುವೆ...

read more
’ಪ್ರತಿಯೊಬ್ಬ ಛಾಯಾಗ್ರಾಹಕನು ಒಮ್ಮೆ ಓದಬೇಕಾದ ಪುಸ್ತಕ ಇದು’ – ಶಿವು ಹೇಳ್ತಾರೆ

ಶಿವು ಕಾಳಯ್ಯ ಒಮ್ಮೆ ಓದಿನೋಡಿ ತುಂಬಾ ಇಷ್ಟವಾಗುತ್ತದೆ! ಜಯಪ್ರಕಾಶ್ ನಾರಾಯಣ್ ನಿರೂಪಣೆಯ ಖ್ಯಾತ ಛಾಯಾಗ್ರಾಹಕ ಕೆ.ಜಿ ಸೋಮಶೇಖರ್ರವರ "ನನ್ನ ಬದುಕು ನನ್ನ ಫೋಟೊಗ್ರಫಿ" ಪುಸ್ತಕವನ್ನು ಈಗ ತಾನೆ ಓದಿ ಮುಗಿಸಿದೆ. ಟಿ.ಎಸ್.ಸತ್ಯನ್ರವರ ಕಾಲಕ್ಕೆ ಕನ್ನಡಿ ಪುಸ್ತಕದ ನಂತರ ಅಂತದ್ದೇ ಒಂದು ಫೋಟೊಗ್ರಫಿ, ಅದರ ಪರಿಶ್ರಮ, ಅದರ ಬಗೆಗಿನ...

read more
'ಅವಸಾನದತ್ತ ಇರಾಕ್' – ನಾ ದಿವಾಕರ್ ಬರೀತಾರೆ

ನಾ ದಿವಾಕರ್ ಸಂಪನ್ಮೂಲಗಳಿಗಾಗಿ ನಡೆಯುವ ಸಮರವನ್ನು ನಾಗರೀಕತೆಯ ಸಂಘರ್ಷ ಎಂದು ಬಿಂಬಿಸಲಾಗುತ್ತದೆ. ಮಾನವ ಜಗತ್ತಿನ ಒಳಿತಿಗಾಗಿ ದುಷ್ಟ ಶಕ್ತಿಗಳನ್ನು ಮಣಿಸುವ ಒಂದು ತಂತ್ರವನ್ನಾಗಿ ಸಮರವನ್ನು ಬಿಂಬಿಸಲಾಗುತ್ತದೆ. ಈ ನಿಮಿತ್ತ ಪುರಾಣಗಳಲ್ಲಿ ಬಿಂಬಿಸುವಂತೆ ಕೆಲವು ಸಂಪತ್ತಿನ ತೊಟ್ಟಿಲುಗಳ ಸರದಾರರನ್ನು ಅಸುರಾದಿ ದುಷ್ಟ...

read more
'ಎಚ್ಚರ ಮೈಮರೆವುಗಳ ಮಧ್ಯೆ' – ರೂಪ ಹಾಸನ

ರೂಪ ಹಾಸನ ಅದು ರೈಲಿನಲ್ಲಿ ರಾತ್ರಿ ಪ್ರಯಾಣದ ದಿನ. ಮಧ್ಯ ರಾತ್ರಿ ಕಳೆದ ನಂತರ ಯಾವುದೋ ಸ್ಟೇಷನ್ನಿನಲ್ಲಿ ಎಳೆ ಕಂದಮ್ಮನನ್ನು ಎತ್ತಿಕೊಂಡು ದಂಪತಿಗಳು ರೈಲೇರಿದರು. ಮೊದಲೆ ಕಾದಿರಿಸಿದ್ದ ಸೀಟಿನಲ್ಲಿ ಮಲಗಲು ಸಿದ್ಧತೆ ನಡೆಸಿದ್ದರು. ತಾಯಿ ತನ್ನ ಪಕ್ಕದಲ್ಲೇ ಸೀಟಿನ ಮೇಲೆ ಮಗುವಿಗೆ ಮಲಗಲು ಅನುವು ಮಾಡಿ ತಾನೂ ಮಲಗಿದಳು. ಮತ್ತೆ ರೈಲು...

read more
ಈ ರಾಘವನ್ ಕುರಿತ ’ಸಂಪಾದಕರ ಸಂಪಾದಕ’ ಬಗ್ಗೆ ಒಂದಿಷ್ಟು

ಮಾಗಬೇಕಾದ ಪತ್ರಕರ್ತರು ಓದಬೇಕಾದ ಬರಹಗುಚ್ಛ ಸಹ್ಯಾದ್ರಿ ನಾಗರಾಜ್ ಅಲಿಖಿತ ('ವಿಜಯ ಕರ್ನಾಟಕ'ದ ಸಂಪಾದಕರಾಗಿದ್ದ ಈ ರಾಘವನ್ ಕುರಿತ ನೆನಪುಗಳ ಮಿಡಿತ 'ಸಂಪಾದಕರ ಸಂಪಾದಕ' ಪುಸ್ತಕದ ಬಗೆಗೆ ನನ್ನೊಳಗೆ ಬೆಳೆದ ನಾಕು ಮಾತು) ಪತ್ರಿಕೆ, ಪತ್ರಿಕೆಗಿಂತಲೂ ದೊಡ್ಡದಾದ ಪತ್ರಿಕಾವೃತ್ತಿ ಪತ್ರಕರ್ತರಿಂದ ನಿಜವಾಗಿಯೂ ಏನನ್ನು ಬಯಸುತ್ತದೆಂದು...

read more
ಪ್ರಜ್ಞಾ ಶಾಸ್ತ್ರಿ ಮೆಚ್ಚಿದ ಕೆ ಸಚ್ಚಿದಾನಂದನ್ ಕವಿತೆ

ಪ್ರಜ್ಞಾ ಶಾಸ್ತ್ರಿ ನನ್ನಜ್ಜಿಗೆ ತಲೆ ಕೆಟ್ಟಿತ್ತು. ಅವಳ ಹುಚ್ಚು ದಿನೇ ದಿನೇ ಬೆಳೆದು, ಹಣ್ಣಾಗಿ, ಸಾವಾದಾಗ, ನನ್ನ ಮಾವ, ಮಹಾ ಜಿಪುಣ, ಅವಳನ್ನ ಹುಲ್ಲೊಳಗೆ ಸುತ್ತಿ ನಮ್ಮ ಸ್ಟೋರ್ ರೂಮಿನೊಳಗಿಟ್ಟ. ನನ್ನಜ್ಜಿ ಅಲ್ಲೇ ಒಣಗಿ, ಬಿರಿದು, ಅವಳ ಬೀಜಗಳು ಕಿಟಕಿಯಿಂದಾಚೆ ಹಾರಿ ಹೋದವು. ಸೂರ್ಯ ಬಂದ ಆಮೇಲೆ ಮಳೆ ಅದರೊಳಗೊಂದು ಬೀಜ...

read more

Pin It on Pinterest

Share This