ಹುಚ್ಚರಾಯಪ್ಪನ ನಿದ್ರಾಸನ

ಎಚ್ ಜಿ ಮಳಗಿ

ಇತ್ತೀಚೆಗೆ ನಮ್ಮ ಬಡಾವಣೆಯಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದರಿಂದ ಬೇಜಾರಾಗಿ ಹೋಗಿತ್ತು. ನಮ್ಮ ವಾರ್ಡನ ಸ್ವಚ್ಛತೆಯ ಹೊಣೆ ಹೊತ್ತಿದ್ದ ಗುತ್ತಿಗೆದಾರನಿಗೆ ಫೋನ್ ಮಾಡಿ ಮಾಡಿ ಸಾಕಾಗಿತ್ತು. ಪೌರಕಾರ್ಮಿಕರು ಒಂದು ದಿನ ಬಂದರೆ ವಾರ ಬರುತ್ತಿರಲಿಲ್ಲ. ಬಂದವರೂ ಸೊಂಟ ಬೆನ್ನು ನೋವಿರುವವರೇ. ಬಗ್ಗಿ ಕಸಗುಡಿಸಲೂ ಸೋಮಾರಿತನ. ಅಲ್ಲಿಯ ಕಸ ತಂದು ಇಲ್ಲಿ ಹಾಕಿ ಇಲ್ಲಿಯದನ್ನು ಅಲ್ಲಿ ಹಾಕಿ ಹೋಗುತ್ತಿದ್ದರು. ಈ ಹಂದಿ ಹಿಡಿಯುವವರೂ ಅಷ್ಟೇ ಆ ವಾಡರ್ಿನ ಪ್ರೆಗ್ನೆಂಟ್ ಹಂದಿಗಳನ್ನ ಇಲ್ಲಿ ತಂದು ಇಲ್ಲಿಯ ಸಂಸಾರಗಳನ್ನ ಎತ್ತಿಕೊಂಡು ಹೋಗುತ್ತಿದ್ದರು. ಕೇಳಿದರೆ ರೌಡಿಸಂ ತೋರಿಸುತ್ತಿದ್ದರು. ಅವರ ಬೆದರಿಕೆಯನ್ನು ‘ಸಭ್ಯ’ತನವೆಂದುಕೊಳ್ಳುವ ನಮ್ಮ ಬಡಾವಣೆಯವರು ಮೌನವಾಗಿದ್ದರು. ಆದರೆ ಹೊಸ ಮೇಯರ್ ಸಾಹೇಬರು ನಗರ ಸ್ವಚ್ಛತೆಯನ್ನು ಕದಡುತ್ತಿರುವ ಹಂದಿ ನಿರ್ಮೂಲನೆಗಾಗಿ ‘ಪಿಗ್ ಕ್ಯಾಚಿಂಗ್ ಮೂವ್ಮೆಂಟ್’ ಹಮ್ಮಿಕೊಂಡಿದ್ದು ನಾಗರೀಕರಲ್ಲಿ ಸ್ವಲ್ಪ ಸಮಾಧಾನ ತಂದಿತ್ತು. ಆದರೂ ನಮ್ಮ ಏರಿಯಾದ ಖಾಲೀ ನಿವೇಶನಗಳನ್ನು ‘ನರ್ಸಿಂಗ್ ಹೋಮ್’ ಮಾಡಿಕೊಂಡಿರುವ ವರಾಹ ಸಂಸಾರಗಳ ರಾತ್ರಿ ಜಗಳ ತಾರಕಕ್ಕೇರುತ್ತದೆ.
‘ತಲೀ ಎಷ್ಟ್ ಬೆಳದದ ಹೋಗಿ ತಲೀ ಮಾಡಿಸ್ಕೊಂಡಾದ್ರೂ ಬರ್ರಿ!’ ಅಂತ ನನ್ನ ಹೆಂಡತಿ ಬೆಳಿಗ್ಗಿನಿಂದಲೇ ಗಂಟು ಬಿದ್ದಿದ್ದಳು. ಅದೂ ಆತು ಬಡಾವಣೆಯ ಸ್ವಚ್ಛತೆಯ ಸಮಸ್ಯೆಯನ್ನು ನಮ್ಮ ವಾರ್ಡನ ಪುರಪಿತ ಹುಚ್ರಾಯನಿಗೆ ಹೇಳಿ ಬಂದಂತೆಯೂ ಆಯಿತೆಂದು ಹೊರಟೆ.
ಎರಡು ದಿನದ ಮಳೆಗೆ ಮೊನ್ನೆ ತಾನೇ ಮುಚ್ಚಿದ್ದ ರಸ್ತೆಯ ಗುಂಡಿಗಳು ಯಥಾಪ್ರಕಾರ ಮತ್ತಷ್ಟು ದೊಡ್ಡದಾಗಿ ಬಾಯಿಬಿಟ್ಟಿದ್ದವು. ಮಳೆಯ ನೀರಿನಿಂದ ತುಂಬಿದ್ದ ಅವುಗಳ ನಡುವೆ ಕುಂಟಾಬಿಲ್ಲೆ ಆಡುತ್ತ ಇವರು ಡಾಂಬರು ಮಿಕ್ಸ ಮಾಡುತ್ತಾರೋ ಅಥವಾ ಇದ್ದಲಿಯ ಪುಡಿಯನ್ನು ಬೆರೆಸುತ್ತಾರೋ ಎನ್ನುವ ಜಿಜ್ಞಾಸೆಯಲ್ಲಿ ಹಾಗೂಹೀಗೂ ಸಲೂನ್ ತಲುಪಿದೆ.
ಅಪರೂಪಕ್ಕೆಂಬಂತೆ ಸಲೂನ್ ಖಾಲೀ ಇತ್ತು. ‘ಸಣ್ಣ ಮಾಡಿಬಿಡು ಮಾರಾಯಾ!’ ಅಂತ ಖುರ್ಚಿ ಮೇಲೆ ಕೂತು ಹೇಳಿದೆ.
‘ಭಾಳ್ ಸಣ್ಣ ಮಾಡೀರ ನಿಮ್ ಮಾರೀಗ ಛೆಂದ್ ಕಾಣ್ಸೂದಿಲ್ಲ ಸಾಹೆಬ್ರ’ ಅಂತ ಅವನು ಅಂದದ್ದು ಕೇಳಿ,
‘ನೋಡಪಾ, ನನ್ನ ಹೆಣ್ತೀಗ ಕಾಣಸ್ಲಾರದ್ದ ಛೇಂದನ ಮಾರಿ ನಿಂಗ್ ಕಾಣಸ್ತು ಏನಂತೀಪಾ!’ ಅಂತ ಅಂದು ನಕ್ಕೆ. ಅದನ್ನು ಕೇಳಿ ಅವನ ಸಲೂನ್ಗೆ ಪುಗಸೆಟ್ಟೆ ಪೇಪರ್ ಓದಲು ಬಂದಿದ್ದ ಒಂದಿಬ್ಬರು ಬೊಚ್ಚು ಬಾಯಿಯ ವೃದ್ಧರು ತಮ್ಮ ಬೋಳು ತಲೆಯ ಮೇಲೆ ಕೈಯ್ಯಾಡಿಸಿಕೊಂಡು, ‘ಕರೆಕ್ಟಾಗಿ ಹೇಳಿದ್ರಿ ಸಾಹೆಬ್ರ್ರ! ನಮ್ಮನ್ಯಾಗೂ ಸೇಮ್ ಸ್ಟೋರಿ ನೋಡ್ರಿ’ ಅಂತ ಕಿಸಕ್ಕೆಂದರು. ಎಂದಿನಂತೆ ಹಾಗೂ ಹೀಗೂ ಅವನು ಕಷ್ಟಪಟ್ಟು ಹತ್ತಾರು ಆ್ಯಂಗಲ್ನಲ್ಲಿ ನಿಂತು ನೋಡಿ ನೋಡಿ ತಲೆಯ ಹಿಂದಿನ ಅರ್ಧ ಚಂದ್ರಾಕೃತಿಯ ಹುಣ್ಣಿಮೆಯ ಕೂದಲನ್ನು ನುಣ್ಣಗೆ ಮಾಡಿ ಮುಗಿಸಿದ. ಕಟ್ಟಿಂಗ್ ಬೇಗನೇ ಮುಗಿದದ್ದರಿಂದ ಅಲ್ಲಿಯೇ ಇದ್ದ ನಮ್ಮ ಅಡ್ಡಮನೆ ಹುಚ್ಚುರಾಯನನ್ನು ಮಾತನಾಡಿಸಿ ಬಡಾವಣೆಯ ವರಾಹ ಮೂಷಿಕ ಮೇಷ ವೃಷಭ ಸಮಸ್ಯೆಯನ್ನು ಹೇಳಿ ಹೋಗೋಣವೆನ್ನಿಸಿ ಅವನ ಮನೆಯತ್ತ ಹೆಜ್ಜೆ ಹಾಕಿದೆ.

ಎಂದೂ ಇಲ್ಲದಂತೆ ಇಂದು ನಮ್ಮ ಹುಚ್ಚರಾಯ ಮನೆಯ ಮಾಳಿಗೆಯ ಮೇಲೆ ಪ್ರಾಣಾಯಾಮ ಯೋಗಾಸನ ಮಾಡುತ್ತಿದ್ದಾನೆಂದು ಅವನ ಹೆಂಡತಿ ಭ್ರಮರಾಂಬ ಹೇಳಿದ್ದನ್ನು ಕೇಳಿ ಸೋಜಿಗವಾಗಿ ಮಹಡಿಯ ಮೇಲೆ ಹೋದೆ. ನಮ್ಮ ಹುಚ್ಚರಾಯ ಶೀಸರ್ಾಸನ ಹಾಕುವ ಕಸರತ್ತು ನಡೆಸಿದ್ದ.
‘ಏನು ಮಾಡ್ಲಿಕತ್ತೀಯೋ ಹುಚ್ರಾಯಾ? ಇದ್ಯಾವಾಗ್ಲಿಂದ ಸುರು ಮಾಡ್ಕೊಂಡೀ?’ ಅಂತ ಮೇಲೆ ಹೋಗುತ್ತ ಅವನನ್ನು ಕೇಳಿದೆ. ನನ್ನ ಮಾತನ್ನು ಕೇಳಿ ಅವನು ಕತ್ತು ತಿರುಗಿಸುತ್ತಿದ್ದಂತೇ ಆಯ ತಪ್ಪಿ ಧೊಪ್ಪೆಂದು ಕೇಳಗೆ ಬಿದ್ದ. ನನಗೆ ನಗು ತಡೆಯಲಾಗಲಿಲ್ಲ. ನನ್ನ ನಗುವಿಗೆ ಅವನೂ ದನಿಗೂಡಿಸಿ ನಗುತ್ತ ಕೂತುಕೊಂಡು, ‘ಓ ಸೇಸಣ್ಣ ಮೇಸ್ಟ್ರು! ಬರ್ರಿ ಗುರುವೇ’ ಅಂತ ಕರೆದು ಕುಚರ್ಿ ಮೇಲೆ ಕೂತು ನನ್ನ ಪ್ರಶ್ನಾರ್ಥಕ ಮುಖ ಮುದ್ರೆಯಲ್ಲಿಯ ಪ್ರಶ್ನೆಯನ್ನು ಕಂಡು, ‘ಊಂ ಗುರುವೇ! ನಮ್ಮ ಮಟದ ಯೋಗಾ ಮೇಸ್ಟ್ರು ಒಂದೀಟು ಆಸನಾ ಏಳಿ ಕೊಟ್ಟು ಅಬ್ಯಾಸ ಮಾಡಂತ ಅಚ್ಚಿ ಓಗ್ಯಾರೆ’ ಅಂತ ಹೇಳಿದ.
‘ಎಲ್ಲಾ ಬಿಟ್ಟು ಈಗ್ಯಾಕ ಈ ಆಸನದ್ದ ಹುಚ್ಚು ಹಿಡೀತು ನಿಂಗ?’ ನನ್ನ ಸಹಜ ಪ್ರಶ್ನೆಯು ಅವನ ಮುಖದಲ್ಲಿ ಬೇಸರದ ಗೆರೆ ಮೂಡಿಸಿತು.
‘ಏನ್ ಸಾ! ಎಲ್ಲಾ ಗೊತ್ತಿದ್ರೂನೂವೇ ಇಂತಾ ಕೊಚ್ಚೆನ್ ಆಕ್ತೀರಲ್ಲಾ’
‘ಅಲೆಲೆ ನಂಗೇನ ಗೊತ್ತದನೋ ಮಾರಾಯಾ? ನಾನೂ ಊರಾಗಿಲರ್ಿಲ್ಲಿಲ್ಲಾ. ನಿನ್ನೇನ ಬಂದೀನೀ? ನಂಗೇನ ಗೊತ್ತಪಾ ನಿಮ್ಮೂರ್ ಸಮಾಚಾರಾ?’
‘ಏಯ್ ತಗೀರಿ ಸಾ! ಯಾಕ್ ಸಾ ಅಂಗಂತೀರೀ? ಇದು ನಿಮ್ಮೂರೇಯಾ. ನಾವೇ ಓಟ್ಸೈಡರ್ರು’
‘ಅಂಧಾಂಗ ಹುಚ್ರಾಯಾ, ಮನ್ನೆ ನಮ್ ಸಿಟಿ ಕೇಬಲ್ನ್ಯಾಗ ನೀ ನಗರಸಭೆ ಬಜೆಟ್ ಮೀಟಿಂನ್ಯಾಗ ನಿದ್ದೀ ಹೊಡೀತಿದ್ದನ್ನ ತೋಸರ್ಿದ್ರಲ್ಲೋ, ಅಲ್ಲೋ ಕಡೀ ಪಕ್ಷ ಹಂತಾ ಜಾಗಾದಾಗಾರೂ ನಿದ್ದೀ ಹೊಡೀಬಾರ್ದಪಾ. ನಿಂಗಷ್ಟೂ ಕಾಮನ್ಸೆನ್ಸ್ ಬ್ಯಾಡನೋ ಮಾರಾಯಾ. ನಿನ್ನೇನೂ ಹಂಗ ಯಾವ್ದೋ ಹುಡ್ಗಾ ಬೋರ್ವೆಲ್ನಯಾಗ ಬಿದ್ದು, ಇಡೀ ಸಭೆ ಅದರಮ್ಯಾಲ ಚಚರ್ಾ ಮಾಡೂವಾಗ್ಲೂ ನೀ ಜೋರ ಗೊರಕೀ ಹೊಡೀತಿದ್ದೆಪಾ. ಎಲ್ಲಾ ಟಿವಿಯೌರ ಕ್ಯಾಮರಾ ನಿನ್ನ ಮಾರೀಮ್ಯಾಲ ಬಿಟ್ಟಿದ್ರು. ನನ್ ಹೆಂಡ್ತಿ, ನೋಡ್ರಿ ನಿಮ್ ಸಿಸ್ಯಾ ಹೆಂಗ ಚಚರ್ೆ ಮಾಡ್ಲಿಕತ್ಯಾನಂತ ಹಂಗಸೀದ್ಲು. ನಂಗ ಖಜೀಲನ್ನಿಸ್ತಪಾ!’ ಅಂತ ಅವನ ನಿದ್ರಾ ಪ್ರಸಂಗವನ್ನು ಆಕ್ಷೇಪಿಸಿದೆ.
ನನ್ನ ಮಾತಿಗೆ ಅವನು ಕೂತಲ್ಲಿಂದಲೇ ಮುಜುಗರದಿಂದ ನುಲಿದಾಡಿದ. ನಂತರ ಇದ್ದಕ್ಕಿದ್ದಂತೆ ಗಂಭೀರನಾಗಿ, ‘ಅದೆಲ್ಲಾ ಸುಳ್ಳು ಸಾ! ಯಾರೂ ಮಾಡದ್ದನ್ನ ಮಾ ಏನಾರಾ ಮಾಡ್ತೀನಾ ಸಾ? ಎಂತೆಂತೌರು ಎಲ್ಲೆಲ್ಲೋ ಅಂಗೇ ನಿದ್ರೆ ಮಾಡೋದನ್ನ ನೀವು ನೋಡಿಲ್ಲವರಾ? ಇದೆಲ್ಲಾ ಈ ಇರೋದ ಪಕ್ಸದೌರು ನಾ ಪೇಮಸ್ ಆಗಿದ್ದನ್ನ ಸಇಸಿಕೊಳ್ಳದೇ ನನ್ ಇರುದ್ದ ಇಂತಾ ಪಾಪಗೆಂಡಾ ಮಾಡಾಕೆ ಅತ್ತೌರೆ ಸಾ! ಸಾ ದಿಟವಾಗ್ನೂವೇ ನಾ ನಿದ್ದೆ ಮಾಡೋನಲ್ಲಾ ಸಾ! ನಂ ಮಆನಗರ ಸಬೆಯನ್ನ ಇಂಟೆಲ್ನಾಸಲ್ ಮಾಡೋ ಬಗ್ಗೆ ಅಂಗೇ ಇಚಾರಾ ಮಾಡ್ತಿತ್ತೀನಿ ಸಾ! ಅದ್ಯಾವ್ದೋ ಸ್ಮಾಲ್ಟ ಸಿಟಿ ಮಾಡೋಕೆ ಇಚಾರಾ ಮಾಡಾಕೆ ಸುರು ಅಚ್ಗೊಂಡೌರೆ ನಂ ಸಾಏಬ್ರು, ಒಳ್ಳೇ ಐಡೀರಿಯಾ ಕೊಡೋ ಉಚ್ರಾಯಾ ಅಂತ ವರಾತೆ ಬ್ಯಾರೆ ಅಚ್ಗೊಂಡೌನೆ ನನ್ ಫೆಂಡ್ರು. ಅದೇ ಯೋಚ್ನೆ ಮಾಡ್ತಿರ್ಬೇಕಾರೆ ಈ ಟೀವಿ ಬಡ್ಡೀಐದಗೋಳು ಇದ್ನೇ ಮಆ ಸಾದ್ನೇ ಅನ್ನೋರಂಗೆ, ನಾ ನಿದ್ದೆ ಮಾಡ್ತೀನಿ ಅನ್ನೌರ ತರ…! ಅಂತಾದ್ರಾಗೆ ಬಡ್ಡೀ ಮಗಂದ ಯಾವ್ದೋ ಐನಾತಿ ಟೇಮ್ನಲ್ಲಿ ಅಂಗೇ ಕಣ್ಣ ಕೂಡ್ದಾಂಗಾಗ್ತೈತ್ರೆ ಸಾ!’ ಅಂತ ತನ್ನ ನಿದ್ರಾ ಚಿಂತನೆಯನ್ನು ಹರಿಸಿದ.
‘ಅದಿರ್ಲಿ ಈಗ ಏನ್ ಇದ್ದಕ್ಕಿದ್ದಂತೆ ಗಜಂ ನಿಲ್ಲೋ ಪ್ರಯತ್ನ ನಡಸೀ?’ ಅವನಿಂದ ನಿಜ ಹೊರಡಿಸುವ ಅಸ್ತ್ರಗಳನ್ನ ಒಂದೊಂದಾಗಿ ಹೊರ ತೆಗೆದೆ.
‘ಊ ಸಾ! ನೀವೇಳ್ದಾಂಗೆ ಯಾಕೋ ಇತ್ತಿತ್ಲಾಗೆ ಒಂಚೂರು ನಿದ್ದೆ ಜಾಸ್ತಿ ಆಗಿದೇ ಅನ್ನಿ! ರಾತ್ರಿಯೆಲ್ಲಾ ಸಿಟಿ ಇಂಪ್ಲೂಮೆಂಟ್ ಏಚ್ನೆಗಳಿಂದ ನಿದ್ದೆ ಇಲ್ದೇ ಆಸ್ಗೇನಲ್ಲೇ ಒಳ್ಳಾಡ್ತಾ ಮನಗಿತ್ತೀನಿ. ಬೆಳಗಾಗ್ತಿದ್ದಂತೆ ಮಆಜನರ ಪ್ಲೊಬ್ಲೆಮ್ಗಳನ್ನ ಕೇಳ್ತಾ ಕುಂತಿತರ್ೀನಿ. ಆಗ್ನೂ ನಿದ್ದೆ ಇಲ್ಲಾ.
‘ಊಟದ್ ತಟ್ಟೆ ಮುಂದೆ ಕುಂತ್ಗೊಂಡ್ ಅಂಗೇ ನಿದ್ದೆ ಮಾಡ್ತಿತರ್ಾನೆ ಸಾಏಬ್ರೆ! ನಿನ್ನೆ ಐನೋರು ಏಳಿದ್ದ ಎದೆಂತಾದ್ದೋ ವಕ್ರಾಸನ ಆಕ್ಲಿಕ್ಕೋಗಿ ಎಲ್ಡೂ ಕೈ ಕತ್ನ್ಯಾಗೆ ಸಿಕ್ಕಾಕಿಸ್ಗೊಂಡಿದ್ದ’ ಅಂತ ಅವನ ಹೆಂಡತಿ ಚಹಾ ಕಪ್ಪಿನೊಂದಿಗೆ ಮೇಲೆ ಬಂದಳು. ಅವನು ತನ್ನ ಪಾಲಿನ ಕಪ್ಪನ್ನು ಎತ್ಗೊಂಡು ಒಂದ್ ಗುಟುಕು ಚಹಾ ಕುಡ್ದು ಮುಖ ಕಿವುಚಿದ! ನಾನು ಅಚ್ಚರಿಯಿಂದ ಅವನನ್ನು ಅವನ ಹೆಂಡತಿಯನ್ನು ನೋಡಿ ನನ್ನ ಚಹಾ ಕುಡಿದೆ. ಚೆನ್ನಾಗಿಯೇ ಇತ್ತು. ಏನು ಅನ್ನುವಂತೆ ಅವರಿಬ್ಬರ ಮುಖ ನೋಡಿದೆ.
‘ನಂ ಮಟದ ಐನೋರು ಚಾದಾಗೆ ಬೆಳ್ಳುಳ್ಳಿ ಆಕ್ಕೊಂಡ್ ಕುಡೀ ಅಂದೌರೆ!’ ಅಂದ್ಲು. ಚಹಾದಲ್ಲಿ ಬೆಳ್ಳುಳ್ಳಿ ಎಂಬ ಕಾನ್ಸೆಪ್ಟ್ ಕೇಳಿಯೇ ನನಗೆ ಓಕರಿಕೆ ಬಂತು. ಚಹಾ ಗುಟುಕು ಗಂಟಲಲ್ಲಿಳಿಯದೇ ನೆತ್ತಿಗೆ ಹತ್ತಿ ಕೆಮ್ಮು ಬಂತು.
‘ಆಂ ಆಂ ಉಸಾರು ಸಾ!’ ಅಂತ ಎಚ್ಚರಿಸಿದ ಅವಳು ‘ಅಂಗೇ ಅಳೇ ಎಕ್ಕಡ ನಾಕ ದಿನಾ ಕೊಳೆತ ನೀರುಳ್ಳಿ ಚೀಲ್ದಾಗೆ ಇಟ್ಟು ಅವನ್ನ ಮೆಟ್ಗೊಂಡ್ ಓಗಾಕೆ…!’
‘ಏಯ್ ಏಯ್ ಉಚ್ಚಿ! ಏನಾರಾ ಉಚ್ಚುಚ್ಚಾರಾ ಮಾತಾಡ್ಬ್ಯಾಡ! ಇಬ್ಳಾರು ಇಂಗೆ ಮಾತಾಡೊದನ್ನ ಮೇಸ್ಟ್ರು ಅದ್ನೇ ದಿಟಾ ಅನ್ಕೊಂಡಾರು!’ ಅಂತ ಅವಳ ಮೇಲೆ ರೇಗಿ, ನನ್ನತ್ತ ತಿರುಗಿ ಯಥಾಪ್ರಕಾರ ಮೇಕೆಯ ‘ಕೆ ಕೆ’ ಕೆನೆತವನ್ನು ತನ್ನ ಎಂದಿನ ಸಪ್ತವರ್ಣದ ದಂತಗಳೊಂದಿಗೆ ಪ್ರದಶರ್ಿಸಿ, ‘ಅಂಗೇನ್ ಇಲ್ಲಾ ಗುರುವೇ. ಪಂಚಮೀ ಅಬ್ಬಕ್ಕೆ ಇವ್ಳಿಗೆ ಒಸಾ ಸೀರೆ ಕೊಡಸ್ನಿಲ್ಲ ಅಂತ ಇರೋದ ಪಕ್ಸಗಳೌರಂಗೆ ಏನೇನೋ ರೀಲ್ ಬಿಡ್ತಾಳೆ ಸಾ!’ ಅಂತ ಅಂದರೂ, ಅವನಿಗೆ ಈ ಉಪಾಯಗಳನ್ನು ಹೇಳಿದ ಆ ಮಟದ ಐನೋರಿಗೆ ಪದ್ಮಶ್ರೀ ಪ್ರಶಸ್ತೀನೇ ಕೊಡ್ಬೇಕು ಅಂತ ನನಗೆ ಅನ್ನಿಸಿದ್ದು ಸುಳ್ಳಲ್ಲ.
‘ಅಸ್ಟೇ ಅಲ್ಲಾ ಸಾಏಬ್ರೆ! ಇವನ ಬಳ್ಳೋಳ್ಳಿ ಡರಿಕೀಗೆ, ಎಕ್ಕಡದ ಸ್ಮೆಲ್ಗೆ ಮಗ್ಲ ಕುಂತೌರು ನಾಕ ಬಾಸರ್ಿ ನಿದ್ದೆಯಿಂದ ಎಬ್ಬಸ್ತಾರಂತ ಏಳೌರೆ!’ ಅಂತ ಭ್ರಮರಾಂಬ ಎಕ್ಸಪರ್ಟ ಓಪಿನಿಯನ್ ಪಾಸ್ ಮಾಡಿ ಅವನನ್ನು ನೋಡಿ ಕಿಸಕ್ಕೆಂದು ನಕ್ಕು ಕೆಳಗಿಳಿದು ಹೋದಳು.
ನಾನು ಸ್ವಲ್ಪ ಹೊತ್ತು ಸುಧಾರಿಸಿಕೊಂಡು, ‘ಹೂಂ ನೀ ಹೇಳು ಹುಚ್ರಾಯಾ, ಈಗ್ಯಾಕ ಗಜಂ ನಿಲ್ಲಿಕ್ಕ ಹೊಂಟೀ?’ ಅಂದೆ. ಅವನು ಗಂಭೀರ ವದನನಾಗಿ ಶೀಸರ್ಾಸನಕ್ಕೆ ಬರೆದ ಹೊಸ ವ್ಯಾಖ್ಯಾನ ಹೇಳಿದ್ದನ್ನು ಕೇಳಿ ನಾನು ಯಥಾಪ್ರಕಾರ ಅವನ ಇಂಗ್ಲಿಷ್ನಲ್ಲಿಯೇ ಹೇಳೋದಾದ್ರೆ ‘ಟನ್ ಒಡ್ದೆ!’
‘ಏನಿಲ್ಲಾ ಸಾ! ಐನೋರ್ ಏಳಿದ್ರು, ಇಂಗಿಂಗೆ ತಲೆ ಅಡಿ ಮಾಡಿ ಲಿವರ್ಸ ಆಸ್ನಾ ಆಕಿದ್ರೆ ಕೆಳಗಿಳಿದು ಓಗೋ ಒಳ್ಳೇ ಇಚಾರಗಳು, ಐಡೀರಿಯಾಗಳು ಮೇಲೇರಿ ಬಂದು ತಲೆಬುಲ್ಡೆಯಲ್ಲಿ ಟೋರ್ ಆಕ್ತಾವಂತೆ. ಆವಾಗ ಇರೋದಿಗಳು ಕೇಳೋ ಕ್ವಚ್ಚೆನ್ಗಳಿಗೆ ನಾ ಕೊಡೋ ಉತ್ರಕ್ಕೆ ಅಂಗೇ ಎಲ್ಡೂ ಮುಚ್ಗೊಂಡ್ ಮಕಾಡೆ ಮನೀಕೋತ್ತಾರಂತೆ ಸಾ!’ ಅಂದ.

‍ಲೇಖಕರು G

August 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: