ಮಿನಿ ಕತೆ 'ಒಂಟಿ ಹಕ್ಕಿ ಮತ್ತು ನಾನು'

ನಾಗರಾಜ್ ವಾಯ್ ಕಾಂಬಳೆ

ಅಂದು ಸಂಜೆ ವಾಯುವಿಹಾರಕ್ಕೆಂದು ನಮ್ಮೂರಿನ ನದಿ ತೀರಕ್ಕೆ ಹೋದೆ. ‘ಕೃಷ್ಣೆ’ ತನ್ನ ವಿಶಾಲ ಹೃದಯಹೊತ್ತು ಹರಿಯುತ್ತಿದ್ದಳು. ನದಿಯ ಸಣ್ಣ ಸಣ್ಣ ಅಲೆಗಳು ಒಂದೊಂದಾಗಿ ತೀರವನ್ನು ಸ್ಪರ್ಶಿಸುತ್ತಿದ್ದವು. ಅಬ್ಬಾ! ಆ ಸಂಜೆಯ ಎಕಾಂತದಲ್ಲಿ ಎನೋ ತನ್ಮಯತೆ ಇತ್ತು. ತಂಗಾಳಿ ಮೃದುವಾಗಿ ನನ್ನ ಅಪ್ಪಿಕೊಳುತ್ತಿತ್ತು. ಸುತ್ತಲೆಲ್ಲ ಹಚ್ಚ ಹಸಿರಿನ ಹೊದಿಕೆಯು ನಯನಗಳಿಗೆ ತಂಪು ನೀಡಿ ಸಹಕರಿಸಿತ್ತು. ಅಷ್ಟರಲ್ಲಿ ಪುಟ್ಟ ಹಕ್ಕಿಯೊಂದು ನನ್ನ ಪಕ್ಕವೇ ಬಂದು, ಚಿಂವ್ ಚಿಂವ್ ಎಂದು ಏನೋ ಪ್ರಶ್ನಿಸುವಂತೆ ಸಂಜ್ಞೆ ಮಾಡುತ್ತಿತ್ತು. ತುಂಬಾ ಕುತುಹಲ ಹುಟ್ಟಿಸಿತು ಅದರ ವರ್ತನೆ. ಏಕೋ ಈ ಪ್ರಶಾಂತ ಮನಸು ಅದನ್ನು ಮಾತನಾಡಿಸುವ ಸಾಹಸ ಮಾಡಿತು.
’ಏನು ನಿನ್ನ ಪ್ರಶ್ನೆ?’ ಎಂದೆ.
’ನಿನಗೆ ನನ್ನ ಹಾಗೆ ಹಾರಾಡಲು ಬರುವುದಿಲ್ಲವೇ?’ ಎಂದಿತು.
’ಇಲ್ಲ, ಏಕೆ?’ ಎಂದು ಮರುಪ್ರಶ್ನಿಸಿದೆ.

ನನಗೆ ಸಂಗಾತಿಗಳೇ ಇಲ್ಲ, ಎಲ್ಲರನ್ನೂ ಕಳೆದುಕೊಂಡಿದ್ದೇನೆ. ಈಗ ನಾನೊಂದು ಒಂಟಿ ಹಕ್ಕಿ ಎಂದಿತು ವಿಷಾದದಿಂದ. ಅದರ ಮಾತಿನೊಳಗಿನ ಅಳಲನ್ನು ಕಂಡು ನನ್ನ ಕಣ್ಣೀರು ಹಕ್ಕಿಯ ಕಾಣಲು ಹೊರಬರುತ್ತಿತ್ತು.
ಸ್ವಲ್ಪ ತಡೆದು, ನಿನಗೇಕೆ ಹಾರಾಡಲು ಬರುವುದಿಲ್ಲ ಎಂದು ಮತ್ತೆ ಪ್ರಶ್ನಿಸಿತು.
ನನಗೆ ನಿನ್ನ ಹಾಗೆ ರೆಕ್ಕೆಗಳಿಲ್ಲ ಎಂದೆ ನಿಧಾನವಾಗಿ.
ಅದೆಕೋ ಆ ಹಕ್ಕಿ ನನ್ನ ಮೇಲೆ ಕೋಪಗೊಂಡ ಹಾಗೆ ಒಂದು ಕ್ಷಣ ದುರುಗುಟ್ಟಿ ನೋಡಿತು. ನನಗೆ ಅದರ ಕೋಪದ ಹಿಂದಿನ ಸುಳಿವು ಅರ್ಥವಾಗಲಿಲ್ಲ. ಎರಡು ಸಲ ನೆಲವನ್ನು ಬಲವಾಗಿ ಕುಕ್ಕಿತು. ತನ್ನ ಮಾತಿನ ಶೈಲಿಯನ್ನು ತುಸು ಬದಲಿಸಿ ಹೇಳಿತು;
ಇಡೀ ಭೂಮಿಯನ್ನೇ ನುಂಗಿರುವ ನೀನು, ಇನ್ನು ರೆಕ್ಕೆಗಳಿದ್ದರೆ; ನಿನ್ನ ಕಬಂಧ ಬಾಹುಗಳಿಂದ ಆಕಾಶವನ್ನೂ ಸಹ ಕಬಳಿಸುತ್ತಿದ್ದೆ ಎಂದು ತನ್ನ ಶಕ್ತಿಯನ್ನೆಲ್ಲಾ ಹೊರಚೆಲ್ಲಿ ಹೇಳಿತು. ಆ ಮಾತುಗಳಲ್ಲಿ ಒಂಟಿತನದ ಕೊರಗಿತ್ತು. ತನ್ನ ಬಳಗವನ್ನು ಕಳೆದುಕೊಂಡ ವೇದನೆಯಿತ್ತು. ಮನುಷ್ಯನ ಕುಕೃತ್ಯದ ಸುಳಿವಿತ್ತು. ನಿಸರ್ಗದ ಮೇಲೆ ಮನುಷ್ಯ ಮಾಡುವ ದೌರ್ಜನ್ಯದ ಕುರುಹಿತ್ತು.
ನಿಲ್ಲು! ನಿಲ್ಲು! ಎಂದು ಕೂಗಿದೆ.
ನಿಧಾನವಾಗಿ ತನ್ನ ಹಗುರವಾದ ದೇಹದಲ್ಲಿ, ಹಿಡಿಸಲಾಗದ ವೇದನೆಯನ್ನು ಮೇಲೆತ್ತಿಕೊಂಡು ಹೋಯಿತು. ಇತ್ತ ತೀರಕ್ಕೆ ಬರುತ್ತಿದ್ದ ನದಿಯ ತೊರೆಗಳು ಒಂದೊಂದಾಗಿ ಹಿಂದೆ ಸರಿಯುತ್ತಿದ್ದವು.
 

‍ಲೇಖಕರು G

August 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: