– ಎಚ್ ಕೆ ಶರತ್
ಭಾಷೆ ಸಂವಹನ ಮಾಧ್ಯಮವೆಂಬುದು ನಮ್ಮೆಲ್ಲರ ಸಾಮಾನ್ಯ ತಿಳುವಳಿಕೆ. ನಮಗನಿಸಿದ್ದನ್ನು ಬೇರೆಯವರ ಕಿವಿಗಾಕಲು ನಮಗೆ ಮಾತು ಬೇಕು. ಆ ಮಾತಿಗೊಂದು ಭಾಷೆ ಇರಲೇಬೇಕೆಂಬುದು ಕಡ್ಡಾಯವಲ್ಲದಿದ್ದರೂ, ಮೌನ ಮತ್ತು ಸಂಕೇತಗಳ ಮೂಲಕ ನಡೆಸುವ ಸಂವಹನಕ್ಕಿಂತ ಮಾತು ಬಳಸಿ ಸುಲಭವಾಗಿ ಕಮ್ಯುನಿಕೇಟ್ ಮಾಡಬಹುದೆಂಬುದು ನಮ್ಮ ಅನುಭವದಿಂದ ಕಂಡುಕೊಂಡಿರುವ ಸಂಗತಿ.
ಮಾತಾಡುವುದು ಬೇರೆಯವರಿಗೆ ಏನನ್ನೋ ಹೇಳಬೇಕೆಂಬ ಸಲುವಾಗಿಯೇ ಆದರೂ, ನಾವು ಹೇಳುವುದು ಯಾರನ್ನು ತಲುಪಬೇಕು, ಯಾರ್ಯಾರಿಗೆ ಅರ್ಥವಾಗಬೇಕೆಂಬ ಆಧಾರದಲ್ಲಿ ಭಾಷೆ ಪ್ರಯೋಗಕ್ಕೊಳಪಡುತ್ತಿದೆ. ಆಲ್ ಇನ್ ಒನ್ ಸಾಧನವಾಗಿರುವ ಮೊಬೈಲು ಎಲ್ಲರ ಕೈ ಸೇರಿದ ನಂತರ ಕೆಲ ಭಾಷೆಗಳು ಅದರಲ್ಲೂ ಮುಖ್ಯವಾಗಿ ಇಂಗ್ಲಿಷು ಗಣನೀಯ ಪ್ರಮಾಣದಲ್ಲಿ ಸ್ಲಿಮ್ ಆಗುತ್ತಿದೆ. ಈ ಸ್ಲಿಮ್ಮಾಗುವಿಕೆ ಮಾತಿನಲ್ಲಿ ಹೆಚ್ಚು ಗೋಚರವಾಗದಿದ್ದರೂ ಮೊಬೈಲಿನಲ್ಲಿ ಟೈಪಿಸುವಾಗ ತನ್ನೆಲ್ಲ ಮೂಲಗುಣ ಕಳೆದುಕೊಂಡು ಭಾಷೆಯೊಂದು ಮೂಳೆ ಮಾನವನಂತಾಗುತ್ತದೆ. ಘಜಡಿಜ ಚಿಡಿಜ ಥಿಠಣ ಹೋಗಿ ತಿಡಿಣ ಆಗಿ, ಐಠತಜ ಙಠಣ ಬದಲು ಐಗ ಪ್ರಯೋಗ ಶುರುವಾಗಿ ಹಲವು ವರ್ಷಗಳೇ ಉರುಳಿವೆಯಾದರೂ, ಈಗೀಗ ಈ ರೀತಿಯ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಘಚಿಣ ಬದಲು ತಿಣ, ಣಣಠಿಜಗೆ ಣಠಿಜ ಹೀಗೆ ಬರಹ ರೂಪಕ್ಕಿಳಿಯುವಾಗ ಪದಗಳು ಒಂದಷ್ಟು ಅಕ್ಷರಗಳನ್ನು ಕಳೆದುಕೊಂಡು ಸ್ಲಿಮ್ ಆಗುತ್ತಿವೆ. ಟೈಪಿಸುವಲ್ಲಿ ವ್ಯಯವಾಗುವ ಸಮಯ ಮತ್ತು ಶ್ರಮದ ಉಳಿತಾಯಕ್ಕಾಗಿ ಹುಟ್ಟಿಕೊಂಡ ಈ ಪ್ರಯೋಗವು ಇಂದು ಇಂಗ್ಲಿಷು ಬರೆಯುವ ಮತ್ತೊಂದು ಪರಿಯಾಗಿಯೂ ಬೆಳೆದುಬಿಟ್ಟಿದೆ. ಪ್ರೀತಿಸಿದ ಹುಡುಗ ಅಥವಾ ಹುಡುಗಿ ತನ್ನ ಪ್ರೇಮಿಗೆ ಪ್ರಪೋಸ್ ಮಾಡುವಾಗ ಐಠತಜ ಙಠಣ ಹೇಳುವ ಬದಲಿಗೆ ಐಗ(ಐಲು) ಹೇಳಿದರೆ ಮಿಸ್ಕಮ್ಯುನಿಕೇಟ್ ಆಗುವ ಸಾಧ್ಯತೆ ತೀರಾ ಕಡಿಮೆ. ಯಾಕಂದ್ರೆ ಸ್ಲಿಮ್ ಭಾಷೆ ಇಂದಿನ ಯುವ ಪೀಳಿಗೆಗೆ ಸುಲಭವಾಗಿ ಅರ್ಥವಾಗುತ್ತದೆ ಮತ್ತು ಅದು ತಾನೆ ತಾನಾಗಿ ತನಗೊಂದು ನಿದರ್ಿಷ್ಟ ಸ್ವರೂಪ ಪಡೆದುಕೊಳ್ಳುತ್ತ ಮುನ್ನುಗ್ಗುತ್ತಿದೆ.
ಒಂದು ಪದ ಅಥವಾ ವಾಕ್ಯವೊಂದನ್ನು ಸಂಕ್ಷಿಪ್ತ ರೂಪದಲ್ಲಿ ಬಳಸುವಾಗ ಎಲ್ಲರೂ ಒಂದೇ ವಿಧಾನ ಅನುಸರಿಸುವುದಿಲ್ಲವಾದರೂ, ಹೆಚ್ಚು ಸಂಕ್ಷಿಪ್ತಗೊಂಡರೂ ಎಲ್ಲರಿಗೂ ಅರ್ಥವಾಗುವಂತಹ ಪ್ರಯೋಗ ಎಲ್ಲರ ಗಮನಕ್ಕೆ ಬಂದ ನಂತರ ಎಲ್ಲರಿಂದಲೂ ಬಳಸಲ್ಪಡುತ್ತದೆ.

ಕೆಲವೊಮ್ಮೆ ನಾವು ಹೇಳುವುದು ಕೆಲವರಿಗೆ ಮಾತ್ರ ಅರ್ಥವಾಗಿ ಉಳಿದವರಿಗೆ ಅರ್ಥವಾಗದಂತಿರಬೇಕು. ಮೊಬೈಲುಗಳಲ್ಲಿನ ಮೆಸೇಜುಗಳನ್ನು ಅಪ್ಪ-ಅಮ್ಮನೂ ನೋಡಬಲ್ಲವರಾಗಿರುವ ಇಂದಿನ ಟೆಕ್ನೋಸ್ಯಾವಿ ಯುಗದಲ್ಲಿ, ಪ್ರೇಮಿಗಳು ಪೀಕಲಾಟ ಅನುಭವಿಸುವುದೇ ಮೊಬೈಲ್ನಲ್ಲಿ ಸಿಕ್ಕಿಬಿದ್ದಾಗ. ಹುಡುಗನೊಬ್ಬ ತನ್ನ ಪ್ರೇಯಸಿಗೆ ಐಠತಜ ಙಠಣ ಹೇಳಲು ಐಗ ಅಂತ ಮೆಸೇಜು ಟೈಪಿಸಿ ಸೆಂಡ್ ಮಾಡಿದಾಗ, ಅದನ್ನು ಅವಳಲ್ಲದೆ ಅವರಪ್ಪ ಅಮ್ಮ ಗಮನಿಸಿದರೂ ತೊಂದರೆ ಕಟ್ಟಿಟ್ಟಬುತ್ತಿ. ಈ ರೀತಿಯ ಪೇಚಾಟದಿಂದ ಪಾರಾಗುವ ಸಲುವಾಗಿಯೇ ಕೋಡ್ ವಡರ್್ಗಳು ಚಾಲ್ತಿಗೆ ಬರುತ್ತವೆ. ಮೊದಮೊದಲಿಗೆ ಐಗ ಬಳಸುತ್ತಿದ್ದ ಹುಡುಗ ಈಗ ತನ್ನ ಗಲರ್್ಫ್ರೆಂಡ್ಗೆ ಪ್ರೀತಿ ಹೇಳಲು ಗಐ ಅನ್ನುತ್ತಾನೆ. ಬೇರೆಯವರು ಇದೇನಪ್ಪಾ ಗಐ ಅಂದ್ರೆ? ಹುಳಿನಾ ಅಥವಾ ಹುಲಿನಾ? ಅಂತೆಲ್ಲ ಯೋಚಿಸಬಹುದು. ಆದ್ರೆ ಆ ಹುಡುಗಿಗೆ ಮಾತ್ರ ಅದು ಐ ಲವ್ ಯು ಎಂಬುದು ಅರ್ಥವಾಗುತ್ತದೆ. ಜಗದ ನಡುವಿದ್ದೂ ಮುಕ್ತವಾಗಿ ಅಥವಾ ಪೋಲಿ ಪೋಲಿಯಾಗಿ ಇಲ್ಲ ಸೀಕ್ರೆಟ್ ಆಗಿ ಮಾತಾಡಲು ಈ ರೀತಿಯ ಪ್ರಯೋಗಗಳು ಅನುವು ಮಾಡಿಕೊಡುತ್ತವೆ.
ಹಿರಿಯರಿಗೆ ಈ ಜಮಾನದ ಹುಡುಗ-ಹುಡುಗಿಯರು ಆಡುವ ಎಷ್ಟೋ ಮಾತುಗಳು ಕಿವಿಗೆ ಬಿದ್ದರೂ ಸರಿಯಾಗಿ ಅರ್ಥವಾಗುವುದಿಲ್ಲ. ಉದಾಹರಣೆಗೆ, ಅವ್ನು ಅಕಾಲಿ ಕಣೋ ಅಂತ ಯಾರೋ ಒಬ್ಬನ ಬಗ್ಗೆ ಇನ್ನೊಬ್ಬ ಹೇಳುತ್ತಿದ್ದರೆ ಅದರರ್ಥ ಏನೆಂಬುದು ಎಷ್ಟು ಜನಕ್ಕೆ ತಿಳಿಯುತ್ತದೆ. ಡಿಕ್ಷನರಿ ತೆರೆದು ನೋಡಿದರೆ ಆ ಪದವೇ ಇರುವುದಿಲ್ಲ. ಇದ್ದರೂ ಅದರ ನಿಜ ಅರ್ಥ ಅದರಲ್ಲಿರುವುದಾಗಿರಲ್ಲ. ಅಷ್ಟಕ್ಕೂ ‘ಅಕಾಲಿ’ ಅಂದ್ರೆ ‘ತುಕಾಲಿ’ ಅಂತ. ಈ ‘ತುಕಾಲಿ’ ಅಂದ್ರೆ ಏನು ಅನ್ನೋ ಪ್ರಶ್ನೆ ನಿಮ್ಮೊಳಗೆ ಮೂಡಿರುವುದು ನಿಜವೇ ಆದರೆ ನೀವು ಹಿರಿಯರ ಗುಂಪಿಗೆ ಸೇರಲೇಬೇಕಾಗುತ್ತದೆ. ಕಾಲೇಜು ಕಾರಿಡಾರುಗಳಲ್ಲಿ ಯಾರೋ ಲೆಕ್ಚರರ್ಗೆ ಹುಡುಗರು, ಅವ್ನು ಅಕಾಲಿ ಕಣೋ ಅಂತಿದ್ದಾರೆ ಅಂತಂದ್ರೆ, ಕೆಲಸಕ್ಕೆ ಬಾರದ, ಏನೂ ತಿಳಿದುಕೊಳ್ಳದ, ಸರಿಯಾಗಿ ಪಾಠ ಮಾಡದ ಓತ್ಲಾ ಗಿರಾಕಿ ಅಂತರ್ಥ.
ಈಗಿನ ಹುಡುಗರ ನಡುವೆ ತುಂಬಾ ಜನಪ್ರಿಯವಾಗಿರುವ ಮತ್ತೊಂದು ಪದ ‘ಕೂಳೆ’. ಗ್ರಾಮೀಣ ಹಿನ್ನೆಲೆಯುಳ್ಳವರಿಗೆ ಕೂಳೆ ಅಂದ ಕೂಡಲೇ ನೆನಪಾಗುವುದು ಮರದ ಚೂರು. ಆದರೆ ಈ ‘ಕೂಳೆ’ ಅದಲ್ಲ. ಯಾರೋ ಒಬ್ಬ ಎಲ್ಲರೆದುರು ಸ್ಕೋಪ್ ತಗೊಳ್ಳೋಕೆ ತಿಕ್ಕಲನಂತಾಡುತ್ತಿದ್ದರೆ, ‘ಕೂಳೆ ಮಾಡಿದ್ದು ಸಾಕು ಮುಚ್ಕಂಡಿರಪ್ಪ’ ಅನ್ನೋ ಮಾತು ಗೆಳೆಯರ ಬಾಯಿಂದ ಹೊರ ಬೀಳುತ್ತದೆ. ಈ ರೀತಿಯ ಲೆಕ್ಕವಿಲ್ಲದಷ್ಟು ಪದಗಳು ಈ ಜಮಾನದ ಹುಡುಗ-ಹುಡುಗಿಯರ ನಡುವೆ ಚಾಲ್ತಿಯಲ್ಲಿವೆ.
ಇಂಗ್ಲಿಷ್ ಪದಗಳು ಸಂಕ್ಷಿಪ್ತ ರೂಪದಲ್ಲಿ ಚಾಲ್ತಿಗೆ ಬಂದಂತೆ ಕನ್ನಡದ ಪದ ಅಥವಾ ವಾಕ್ಯವೊಂದು ಟ್ರಿಮ್ ಆಗಿ ಸ್ಲಿಮ್ ಆಗುವುದು ಅಪರೂಪ. ನಾವು ಗಮನಿಸಿರುವಂತೆ ‘ಪುಟ ತಿರುಗಿಸಿ ನೋಡಿ’ ಬದಲಿಗೆ ‘ಪು.ತಿ.ನೋ.’ ಎಂದು ಬಳಸುವುದು ಜನಪ್ರಿಯ ಪ್ರಯೋಗ. ಇದೇ ರೀತಿಯ ಸಾಕಷ್ಟು ಪ್ರಯೋಗಗಳು ಇಂಗ್ಲಿಷಿನಲ್ಲಿವೆ. ಕಟಜಚಿಜ ಣಣಡಿಟಿ ಠತಜಡಿ(ಕ.ಖಿ.ಔ.), ತಿಣ ಡಿಜಠಿಜಛಿಣ ಣಠ(ತಿ.ಡಿ.ಣ.), ಣಚಿಣ (.ಜ.) ಕೆಲ ಉದಾಹರಣೆಗಳು.
ದೈನಂದಿನ ಮಾತುಕತೆಯಲ್ಲಿ, ಮೆಸೇಜು ಟೈಪಿಸುವಿಕೆಯಲ್ಲಿ ಬಳಸುವ ಭಾಷಾ ಪ್ರಯೋಗಗಳನ್ನು ಅಪ್ಪಿತಪ್ಪಿ ಏನಾದ್ರೂ ಎಕ್ಸಾಮ್ ಆನ್ಸರ್ಶೀಟುಗಳ ಮೇಲಿಳಿಸಿದರೆ ಯಡವಟ್ಟಾಗುವುದು ಗ್ಯಾರಂಟಿ. ತಿ.ಡಿ.ಣ., .ಜ., ಕ.ಖಿ.ಔ. ಬಳಕೆಗೆ ಅವಕಾಶವಿದೆಯಾದರೂ, ಥಿಠಣ ಬದಲಿಗೆ ಣ , ಚಿಡಿಜ ಬದಲಿಗೆ ಡಿ ಬರೆದರೆ ಆನ್ಸರ್ಶೀಟ್ ಕರೆಕ್ಷನ್ ಮಾಡುವವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಚಿಕ್ಕವರಿದ್ದಾಗ ನಮಗೆ ಅರ್ಥವಾಗದಂತೆ ಮಾತಾಡಲು ದೊಡ್ಡವರು ‘ಪ’ ಭಾಷೆ ಬಳಸುತ್ತಿದ್ದರು. ‘ಇವ್ನಿಗೆ ನಾವೇಳೋದು ಅರ್ಥ ಆಗ್ಬಾದರ್ು’ ಅನ್ನೋದು ‘ಪ’ ಭಾಷೆಯಲ್ಲಿ ‘ಇಪಿವ್ನಿಗೆ ನಪಾವು ಹೆಪೇಳೆಪೋದು ಅಪರ್ಥ ಅಪಾಬ್ಗಪಾದರ್ು’ ಅಂತಾಗೋದು. ಮೊದಮೊದಲಿಗೆ ಇವ್ರೇನಪ್ಪಾ ಏನೇನೋ ಮಾತಾಡ್ಕಳ್ತಿದ್ದಾರೆ ಅನ್ಸೋದು. ಬರ್ತಾ ಬರ್ತಾ ನಾವೂ ಈ ‘ಪ’ ಭಾಷೆಯಲ್ಲಿ ಪಂಟ್ರಾಗೋದ್ವಿ.
ಅಂದು ಚಿಕ್ಕವರಿಗೆ ಅರ್ಥವಾಗದಂತೆ ಮಾತಾಡಲು ದೊಡ್ಡವರು ‘ಪ’ ಭಾಷೆಯ ಮೊರೆ ಹೋಗ್ತಿದ್ರು. ಆದ್ರೆ ಇಂದು ದೊಡ್ಡವರಿಗೆ ಅರ್ಥವಾಗದಂತೆ ಮಾತಾಡಲು ಈ ಜಮಾನದ ಹುಡುಗ-ಹುಡುಗಿಯರು ಕನ್ನಡ, ಕಂಗ್ಲಿಷು, ಇಂಗ್ಲಿಷಿನಲ್ಲೇ ನಾನಾ ಪ್ರಯೋಗಗಳನ್ನು ಮಾಡುತ್ತಿದ್ದಾರೆ.
ಕಾಲ ಸರಿದಂತೆ ಭಾಷೆಯೊಂದು ಬಾಗುತ್ತ, ಬಳುಕುತ್ತಾ ಬೆಂಡಾಗುವುದು ಸಹಜವೇ ಆದರೂ ಅದರ ಒಳಿತು-ಕೆಡುಕುಗಳ ಕುರಿತು ಭಾಷಾ ವಿದ್ವಾಂಸರು ಮಂಡಿಸುವ ಅಭಿಪ್ರಾಯಗಳಿಗೆ ಎಲ್ಲರೂ ಕಿವಿಗೊಡಬೇಕಿದೆ.






0 Comments