ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಾಗಿಲು ಸದ್ದಾಗುತ್ತಿದೆ, ಹಸುವಾ, ಹುಲಿಯಾ? – ಜಿ ಪಿ ಬಸವರಾಜು ಸಣ್ಣಕಥೆ

ಜಿ ಪಿ ಬಸವರಾಜು ನಮ್ಮ ಹಿತ್ತಲಿನ ಆಚೆಗೆ ಹುಲಿಯೊಂದು ಹಸುವನ್ನು ಹಿಡಿದುಬಿಟ್ಟಿತ್ತು. ಆ ಚಿತ್ರ ಎಷ್ಟು ಸ್ಪಷ್ಟವಾಗಿತ್ತೆಂದರೆ, ಹಸುವಿನ ಕತ್ತನ್ನು ಮುರಿದಿದ್ದ ಹುಲಿ ಅದರ ರಕ್ತವನ್ನು ಕುಡಿದು ಮಾಂಸವನ್ನು ತಿನ್ನುತ್ತಿತ್ತು. ಹುಲಿಯ ಮೂತಿಯೆಲ್ಲ ರಕ್ಕಮಯವಾಗಿತ್ತು. ಅದು ಅತ್ತ ಇತ್ತ ನೋಡುತ್ತ ತನ್ನ ಭೋಜನವನ್ನು ಸವಿಯುತ್ತಿತ್ತು....

read more
ಅಪ್ಪಾ ನಾನು ಹದಿನೇಳನೇ RANKಉ!

ಡಾ ಕೃಷ್ಣಮೂರ್ತಿ ಡಿ ಟಿ " ಅಪ್ಪಾ ನಾನು ಹದಿನೇಳನೇ RANKಉ !!!! " ಈಗೀಗ ತಂದೆ ತಾಯಂದಿರು L.K.G.ಯಿಂದಲೇ ತಮ್ಮ ಮಕ್ಕಳ RANK ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ !!!!! ಎಲ್ಲಾ ಮಕ್ಕಳೂ ಫಸ್ಟ್ RANKಏ ಬರಬೇಕೆಂದರೆ ಹೇಗೆ ಸಾಧ್ಯ!!!!? ಇದು ಸುಮಾರು ಇಪ್ಪತ್ತು ವರುಷಗಳ ಕೆಳಗೆ ನಡೆದ ಘಟನೆ. ನಾನು ನನ್ನ ಸ್ನೇಹಿತನ ಮನೆಗೆ...

read more
ಅಮ್ಮ, ಅಪ್ಪ ಒಳ್ಳೆಯವರು ಅಲ್ವಾ ?

ಶಾರದ ನಾಯಕ್ ಜನ ಬೀದಿಗಿಳಿದಿದ್ದಾರೆ. ನಾಳೆ ನಿಮ್ಮ ಮನೆಯ ಹೆಣ್ಣುಮಕ್ಕಳು, ಮಕ್ಕಳ ಮೇಲೂ ಈ ರೀತಿ ಆಗಬಹುದು. ಯಾವುದೇ ಗ್ಯಾರಂಟಿ ಇಲ್ಲ. ಸಮಾಜದಲ್ಲಿ ದುಷ್ಟರ ಮೇಲುಗೈಯಾಗುತ್ತಿದೆ. ಈ ಹೋರಾಟ ತೀವ್ರ ಸ್ವರೂಪ ಪಡೆಯಬೇಕು. ನೀವು ಬಿಜಿಯಾಗಿದ್ದರೂ ಸಹ ಅರ್ಧ ದಿನ ಈ ಹೋರಾಟದೊಂದಿಗೆ ಕೈಜೋಡಿಸಿ. ಬೆಚ್ಚಗಿನ ಮನೆಯಲ್ಲಿ, ಎಸಿ ರೂಮಿನಲ್ಲಿ....

read more
’ಬಿಕ್ಕುವ ನಿಟ್ಟುಸಿರು, ನಗುವ ಕಲಾಕೃತಿ’ – ರೂಪಾ ಹಾಸನ್ ಕವಿತೆ

ಕಲಾಕೃತಿ ರೂಪ ಹಾಸನ   ಮುಚ್ಚಿಡುವುದಾಗದಿದ್ದಾಗ ಬಿಕರಿಗಿಡಬಹುದಷ್ಟೆ ಬೀದಿಯಲ್ಲಿ ಅಳೆದು ತೂಗಿ ಏರಿಳಿಯುವ ತಕ್ಕಡಿ ಬೆಲೆಕಟ್ಟುತ್ತಾರೆ ಯಾರೋ ಕೂಗುತ್ತಾರೆ ಹರಾಜು ಮತ್ತಿನ್ಯಾರೋ ಪ್ರದರ್ಶನಕ್ಕಿಡುತ್ತಾರೆ ಕಟ್ಟು ಹಾಕಿಸಿ ಮಗದೊಬ್ಬರು ಕೈಯಿಂದ ಕೈಗಳ ದಾಟಿ ಇದುವರೆಗೆ ಮುಚ್ಚಿಟ್ಟ ದುಬಾರಿ ನಿಟ್ಟುಸಿರುಗಳು ನೇತುಬಿದ್ದಿವೆಯೀಗ...

read more
ಟೈಮ್ ಪಾಸ್ ಕಡ್ಲೆ ಕಾಯ್ : ಹುಚ್ರಾಯಪ್ಪನ ಸರ್ವೀಸ್ ಟ್ಯಾಕ್ಸ!

ಎಚ್.ಜಿ.ಮಳಗಿ 'ಇಲ್ನೋಡ್ರಿ ಪೇಪರ್ನ್ಯಾಗ ಏನ್ ಬರದಾರಂತ?' ಅಂತ ಅಪರೂಪಕ್ಕೆಂಬಂತೆ ನನ್ನ ಪತ್ನಿ ಪೇಪರ್ ಓದುತ್ತಿದ್ದವಳು ಟಿವಿಯಲ್ಲಿ ದೂರದ ಘಾನಾ ದೇಶದ ಪಾರ್ಲಿಮೆಂಟಿನಲ್ಲಿ ಟ್ಯಾಕ್ಸ್ ಏರಿಕೆಯ ಕುರಿತು ನಡೆದ ಚರ್ಚೆಯು ಹೊಡೆದಾಕ್ಕೆ ತಿರುಗಿದ್ದನ್ನು ತೋರಿಸುತ್ತಿದ್ದುದನ್ನು ಕುತೂಹಲದಿಂದ ನೋಡುತ್ತ ಕೂತಿದ್ದ ನನ್ನ ಗಮನವನ್ನು...

read more
’ಆತ ಇಲ್ಲದಿದ್ದರೆ, ಕಳೆದು ಹೋದರೆ…’ – ನೆಲ್ಸನ್ ನೆನಪಿನಲ್ಲಿ ಜಿ ಎನ್ ಮೋಹನ್ ಬರೆದ ಕವನ

ಇಂದು ನೆಲ್ಸನ್ ಮಂಡೇಲಾ ಅವರ ಜನ್ಮದಿನ. ಅವರ ನೆನಪಿನಲ್ಲಿ ... *** ನೆಲ್ಸನ್ ಮಂಡೇಲಾ ಅವರನ್ನು ನೆನೆಯುತ್ತಾ - ಜಿ ಎನ್ ಮೋಹನ್ ಅವರ ಎರಡು ಕವಿತೆಗಳು ಈ ಪಾಟಿ ನಾಡಿನಲ್ಲಿ... ದೂರದ ಬೆಟ್ಟದ ಮೇಲೆ ಒಬ್ಬ ಪುಟ್ಟ ಹುಡುಗ. ಹೆಸರು ನೆಲ್ಸನ್ ಹಾಡುಗಳು ಎದೆಯೊಳಗೆ, ಮಾತಿನಲಿ ವಜ್ರಗಳು. ತುಟಿ ಬಿರಿದು ನಕ್ಕರೆ ನೂರು ಲೋಕ. ಸುತ್ತ ಹಸಿರು...

read more
'ಹಾಗಾದರೆ ನಮ್ಮಲ್ಲಿ ಮೇಲ್ವರ್ಗ, ಮಧ್ಯಮ ಕೆಳವರ್ಗದ ಯಾವ ಸ್ತ್ರೀ ಸುರಕ್ಷಿತ?' – ನಯನಾ

ನಯನಾ ಯು  ಭಿಡೆ ಆಹಾ!, ಕಾಲ್ಚೆ೦ಡಿನಾಟದ ಅದ್ಭುತ ಪ೦ದ್ಯಗಳು. ಕ್ರಿಕೆಟ್ಟಿನ ಬಗ್ಗೆ ಮಾತ್ರ ತಿಳಿದಿರುವ ನನ್ನ೦ಥವರಿಗೆ ಸ್ವಲ್ಪ ಈ ಆಟದ ಪರಿಯನ್ನೂ ತಿಳಿದುಕೊಳ್ಳುವ೦ತಾಯಿತು. ಮುಖ್ಯವಾಗಿ ತಿಳಿದಿದ್ದೆ೦ದರೆ,ಯಾರು ಯಾರಿಗೆ ಎಷ್ಟರಮಟ್ಟಿಗೆ ತುಳಿದರು, ಒದೆದರು, ತಳ್ಳಿದರು, ಬೀಳಿಸಿದರು, ಕಚ್ಚಿದರು ಇತ್ಯಾದಿ. ಮೊನ್ನೆ ಒ೦ದು...

read more
ಖ್ಯಾತ ಗಣಿತಜ್ಞ ರಾಮಾನುಜನ್ ಬದುಕನ್ನು ಆಧರಿಸಿದ ಚಲನಚಿತ್ರ

ಬಿ ಎಂ ಬಶೀರ್ ಇತ್ತೀಚಿಗೆ ನನಗೆ ಖುಷಿ ಕೊಟ್ಟ, ನನ್ನನ್ನು ತಟ್ಟಿದ ಚಿತ್ರಗಳು ೧. ದೃಶ್ಯಂ -ಮಲಯಾಳಂ ೨. ಒಗ್ಗರಣೆ - ಕನ್ನಡ ೩. ಬೆಂಗಳೂರು ಡೇಸ್ -ಮಲಯಾಳಂ ೪. ಡಾನ್ ಆಫ್ ದ ಪ್ಲಾನೆಟ್ ಆಫ್ ದ ಏಪ್ಸ್ -ಇಂಗ್ಲಿಶ್ ಅಂದ ಹಾಗೆ ವಿಶ್ವದ ಖ್ಯಾತ ಭಾರತೀಯ ಗಣಿತಜ್ಞ ರಾಮಾನುಜನ್ ಬದುಕನ್ನು ಆಧರಿಸಿ ತಮಿಳಿನಲ್ಲಿ "ರಾಮಾನುಜನ್" ಹೆಸರಲ್ಲೇ...

read more
’ಗೊಜ್ಜವಲಕ್ಕಿ ತೊಗೊಂಡ, ಕಾರ್ಯಕ್ರಮ ಯಶಸ್ವಿ ಮಾಡಿಕೊಡಿ’ ಅಂತಾರೆ ಪ್ರಶಾಂತ್ ಆಡೂರ್

ಆತ್ಮೀಯರೇ, ಈ ಗೊಜ್ಜವಲಕ್ಕಿ ಪುಸ್ತಕ ಇದೇ ದಿನಾಂಕ ೨೦ರಂದು ಬೆಂಗಳೂರಿನ ಉದಯಭಾನು ಕಲಾ ಸಂಘ, ಗವಿಪುರ ಸಾಲು ಛತ್ರಗಳ ಎದರು, ರಾಮಕೃಷ್ಣ ಆಶ್ರಮದ ಹಿಂಭಾಗ, ಕೆಂಪೆಗೌಡ ನಗರ, ಬೆಂಗಳೂರನಲ್ಲಿ ಸರಿಯಾಗಿ ೧೦.೦೦ಕ್ಕೆಬಿಡುಗಡೆಯಾಗಲಿದೆ...ದಯವಿಟ್ಟು ತಾವು ಈ ಕಾರ್ಯಕ್ರಮಕ್ಕ ಸಹಕುಟಂಬ ಪರಿವಾರ ಸಹಿತ ಬರ್ರಿ. ಈ ಪುಸ್ತಕವನ್ನ ’ಛಂದ’ಪುಸ್ತಕದ...

read more
ಕುದಿವ ದೇಹದ ಭೋರ್ಗರೆತ, ಉರಿದು ಹೋಯ್ತು ಒಡಲ ಕೆಂಡ

ಸಿಡಿದ ನಿಹಾರಿಕೆಯ ಶಾಪ - ರಘುನಂದನ ಹೆಗಡೆ, ಗಿರಣೀಮನೆ ಕಾಯ ಹಿಂಡುವ ಕಾಯಕ ಬಯಕೆ ಸುಡು ಮೋಹ ಮಾಯಕ ದೇಹ ಉರಿವ ಕಡು ಕೆಂಡ ತಣಿಯ ಬಂದವರೆಷ್ಟು ಹಣಿದು ಹೋದವರೆಷ್ಟು ಬಯಕೆ ಬೆಂಕಿ ತಣಿಯೆ ಹಿಂಡಿ ಎಸೆದ ಬದುಕು ಕಾಯ ಕಾಯ್ವ ಮಾಯೆ ಒಳ ಹೊರಗೆ ಸುಡು ಜ್ವಾಲೆ ಅರೆ ಬಿರಿದ ಗುಹೆಯಲ್ಲಿ ಸರ್ಪ ಚೀತ್ಕಾರದ ನರಳಾಟ ನಿಶೆ ರಾತ್ರಿಯ ನಶ್ವರದಲ್ಲಿ...

read more
ಕೌನ್ಸಿಲಿಂಗ್… ಬದುಕು ಬದಲಿಸಬಹುದೇ?

ಶ್ರೀದೇವಿ ಕೆರೆಮನೆ ಎಲ್ಲೇ ಹೋಗಿದ್ದೆ? ಪತ್ತೆನೇ ಇರಲಿಲ್ಲ.. ಆತ್ಮೀಯ ಗೆಳತಿಯೊಬ್ಬಳು ಬಹುದಿನಗಳ ನಂತರ ಫೋನಾಯಿಸಿದ್ದಳು. ನನ್ನ ಮಾತು ಮುಗಿಯುವ ಮೊದಲೇ ಅವಳು ನಿಧಾನವಾಗಿ ಕೌನ್ಸಿಲಿಂಗ್ ಹೊಗಿದ್ದೆ ಅಂದಳು. ಆಗಷ್ಟೇ ವರ್ಗಾವಣೆ ಕೌನ್ಸಲಿಂಗ್ ಮುಗಿಸಿ ಬಂದಿದ್ದ ನನಗೆ ಅದೇ ಧ್ಯಾನ. ಯಾವ ಸ್ಕೂಲ್ ಸಿಕ್ತು? ನಾನು ತುಂಬಾ ಮಾಮೂಲಿಯಾಗಿ...

read more
ಕಾವೇರಿ ಬರೆದ ಸಣ್ಣ ಕಥೆ ’ಲಚ್ಚಿ’

ಕಾವೇರಿ ಎಸ್ ಎಸ್ ಚಳಿಗೆ ಹಾಸಿದ ಹಾಸಿಗೆಯನ್ನೂ ಎಳೆದುಕೊಂಡು ಬಟ್ಟೆಯ ಗಂಟಿನಂತೆ ಮುದುಡಿಕೊಂಡು ಮಲಗಿದ್ದ ಲಚ್ಚಿಗೆ 'ಲಚ್ಚಿ... ಲಚ್ಚಿ... ಎದ್ಹೇಳೆ' ಅಂತ ನಾಗಮ್ಮ ಕೂಗಿದ್ದು ಕನಸಲ್ಲಿರಬೇಕೆಂದು ಮತ್ತೆ ಸುರುಳಿಕೊಂಡು ಮಗ್ಗಲು ಬದಲಾಯಿಸಿದಳು. ನಾಗಮ್ಮ ಸಿಟ್ಟಿನಿಂದ, 'ಎದ್ದಾಳ್ತಿಯೋ ಇಲ್ವೋ? ಬತ್ತೀನಿ ತಡಿ' ಅಂತ ಅಂದ ಕೂಡ್ಲೆ,...

read more
ಕೀಚಕ ಸಾಮ್ರಾಜ್ಯವಾಗಿ ಬದಲಾಗುತ್ತಿದೆಯೇ ಭಾರತ?

ಲಕ್ಷ್ಮೀಶ ಜೆ ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾ’ ಎಂಬ ಮಾತು ಸಂಸ್ಕೃತದಲ್ಲಿದೆ.ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬುದು ಇದರ ಅರ್ಥ.ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹೆಚ್ಚಾಗಿ ಹಿಂದೂ ಧರ್ಮದಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ.ಅನಾದಿ ಕಾಲದಿಂದಲೂ...

read more

Pin It on Pinterest

Share This