ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹುಚ್ಚರಾಯಪ್ಪನ ನಿದ್ರಾಸನ

ಎಚ್ ಜಿ ಮಳಗಿ ಇತ್ತೀಚೆಗೆ ನಮ್ಮ ಬಡಾವಣೆಯಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದರಿಂದ ಬೇಜಾರಾಗಿ ಹೋಗಿತ್ತು. ನಮ್ಮ ವಾರ್ಡನ ಸ್ವಚ್ಛತೆಯ ಹೊಣೆ ಹೊತ್ತಿದ್ದ ಗುತ್ತಿಗೆದಾರನಿಗೆ ಫೋನ್ ಮಾಡಿ ಮಾಡಿ ಸಾಕಾಗಿತ್ತು. ಪೌರಕಾರ್ಮಿಕರು ಒಂದು ದಿನ ಬಂದರೆ ವಾರ ಬರುತ್ತಿರಲಿಲ್ಲ. ಬಂದವರೂ ಸೊಂಟ ಬೆನ್ನು ನೋವಿರುವವರೇ. ಬಗ್ಗಿ ಕಸಗುಡಿಸಲೂ...

read more
ಕಲಾದೇಗುಲದಲ್ಲಿ ಇಂದು ’ಕಾನೂರು ಹೆಗ್ಗಡತಿ’

ಕಲಾವೇದಿಕೆ ಟ್ರಸ್ಟ್ ’ಮಾಸದ ಸಿನಿಮಾ’ಮಾಲಿಕೆಯಡಿ, ೯ ನೇ ತಾರೀಕು ಶನಿವಾರ, ಸಂಜೆ ೬-೩೦ ಕ್ಕೆ ’ಕಾನೂರು ಹೆಗ್ಗಡತಿ ’ ಚಿತ್ರ ಪ್ರದರ್ಶನ ಏರ್ಪಡಿಸಿದೆ. ಸ್ಥಳ : ’ಕಲಾದೇಗುಲ’ ನಂ : ೮೮೦ ಈಸ್ಟ್, ೩ ’ಬಿ’ ಮುಖ್ಯ ರಸ್ತೆ, ವಿಜಯನಗರ ಎರಡನೆ ಹಂತ, ಬೆಂಗಳೂರು ೫೬೦ ೧೦೪. (ಆರ್ ಪಿ ಸಿ ಲೇ ಔಟ್ ಕಾಫೀ ಡೇ ಹತ್ತಿರ)...

read more
ಸಂಧ್ಯಾರಾಣಿ ಕಾಲಂ : ಎಲ್ಲರಿಗೂ ಸಲ್ಲುವವರು ಯಾಕೆ ಯಾರೊಬ್ಬರಿಗೂ ಸೇರುವುದಿಲ್ಲ?

  ತುಂಬಾ ಹಿಂದೆ ಒಂದು ಕಥೆ ಕೇಳಿದ್ದೆ, ಕಥೆ ಅಂದ್ರೆ ಕಥೆ, ತಮಾಶೆ ಅಂದ್ರೆ ತಮಾಶೆ. ಒಂದ್ಸಲ ಅಮರ್, ಅಕ್ಬರ್, ಆಂಥೋನಿ ಹಡಗಿನಲ್ಲಿ ಹೋಗ್ತಾ ಇದ್ರಂತೆ. ಇದ್ದಕ್ಕಿದ್ದಂತೆ ನದಿಯಲ್ಲಿ ಪ್ರವಾಹ ಬಂತಂತೆ. ಅಕ್ಬರ್ ತನ್ನ ದೇವರನ್ನು ಪ್ರಾರ್ಥನೆ ಮಾಡಿದನಂತೆ, ದೇವರು ಬಂದು ಅವನನ್ನು ಕಾಪಾಡಿದನಂತೆ, ಆಂಥೋನಿ ಕೂಗಿದನಂತೆ, ಅವನ ದೇವರು...

read more
ಅಪರಾತ್ರಿಯಲ್ಲೊಂದು ಪ್ರಯಾಣ – ಜಯಶ್ರೀ ಭಟ್

ಜಯಶ್ರೀ ಭಟ್ ದೇಶದಾದ್ಯಂತ ಅತ್ಯಾಚಾರ ಎಂಬ ಪದ ಮೈಮೇಲೆ ಸಿಡುಬಿನ ಗುಳ್ಳೆಗಳೆದ್ದಂತೆ ಹಬ್ಬುತ್ತಿರುವ ಈ ದುರ್ಭರ ದಿನಗಳಲ್ಲೇ ನನಗೆ ನಡುರಾತ್ರಿ ಕಾಣದರಿಯದ ಪರರಾಜ್ಯದ ಊರಲ್ಲೊಂದು ಪ್ರಯಾಣ ಮಾಡಬೇಕಾಗಿ ಬಂದುಬಿಟ್ಟಿತು. ರಾತ್ರಿ ಹನ್ನೆರೆಡೂವರೆಗೆ ಸಿಂಗಪುರದಿಂದ ಕೊಚ್ಚಿ ಏರ್ ಪೋರ್ಟ್ ಗೆ ಬಂದಿಳಿದ ನನಗೆ ಅಲ್ಲಿಂದ ಮೂರ್ನಾಲ್ಕು ತಾಸು...

read more
’ಬಣ್ಣಗಳು ಕಾಡುತ್ತಿವೆ ಕನಸು, ನೆನಪುಗಳಾಗಿ…’ – ರಶ್ಮಿ ಕಾಸರಗೋಡು ಕವಿತೆ

ಬಣ್ಣ ಬಳಿಯಬೇಕಿದೆ... ರಶ್ಮಿ ಕಾಸರಗೋಡು ಬಣ್ಣ ಬಳಿಯಬೇಕಿದೆ ಕನ್ನಡಿಗಳಲಿ ತೋರುವ ಬಿಂಬಗಳಿಗೆ ನಾನಾರೆಂಬ ಅರಿವನ್ನು ಮರೆ ಮಾಚಿರುವ ಕಪ್ಪು ಬಿಳುಪಿನ ಹೃದಯಗಳಿಗೆ   ಸಮುದ್ರದ ಅಂಚಿನ ನೀಲಿಗೆರೆ ಮನೆಯ ಮಾಡಿನ ಮೇಲೆ ಮೂಡಿರುವ ಕಾಮನ ಬಿಲ್ಲು ಅಪ್ಪನ ಬೆಳ್ಳಗಿನ ಧೋತಿ ಅಮ್ಮನ ಕುಂಕುಮದ ಬಿಂದಿ   ಬಣ್ಣಗಳು ಕಾಡುತ್ತಿವೆ ಕನಸು,...

read more
ಕಾಲಾಯ ತಸ್ಮೈ ನಮಃ…

ಬಿ ಆರ್ ಸತ್ಯ ನಾರಾಯಣ ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ, ಬೊಂಬೆಮನೆ ಅಥವಾ ಚಂದಮಾಮ ಪುಸ್ತಕದಲ್ಲಿ ಓದಿದ್ದ ಒಂದು ಕಥೆ: ಒಬ್ಬ ಸಾಹುಕಾರ ತನಗೊಬ್ಬ ಸಹಾಯಕನನ್ನು ನೇಮಿಸಿಕೊಳ್ಳಲು ನಿರ್ಧರಿಸಿದ. ಹಲವರನ್ನು ಸಂದರ್ಶಿಸಿದ. ಅದರಲ್ಲಿ ಇಬ್ಬರು ಅವನಿಗೆ ಇಷ್ಟವಾದರು. ವಿದ್ಯೆ, ಅನುಭವ ಎಲ್ಲದರಲ್ಲೂ ಸರಿಸಮಾನರಾಗಿದ್ದ ಅವರಲ್ಲಿ...

read more
ಭಾಷೆಯ ಬಳುಕುವಿಕೆಯೂ, ಯುವ ಮನಸ್ಸಿನ ಪ್ರಯೋಗಶೀಲತೆಯೂ…

- ಎಚ್ ಕೆ ಶರತ್ ಭಾಷೆ ಸಂವಹನ ಮಾಧ್ಯಮವೆಂಬುದು ನಮ್ಮೆಲ್ಲರ ಸಾಮಾನ್ಯ ತಿಳುವಳಿಕೆ. ನಮಗನಿಸಿದ್ದನ್ನು ಬೇರೆಯವರ ಕಿವಿಗಾಕಲು ನಮಗೆ ಮಾತು ಬೇಕು. ಆ ಮಾತಿಗೊಂದು ಭಾಷೆ ಇರಲೇಬೇಕೆಂಬುದು ಕಡ್ಡಾಯವಲ್ಲದಿದ್ದರೂ, ಮೌನ ಮತ್ತು ಸಂಕೇತಗಳ ಮೂಲಕ ನಡೆಸುವ ಸಂವಹನಕ್ಕಿಂತ ಮಾತು ಬಳಸಿ ಸುಲಭವಾಗಿ ಕಮ್ಯುನಿಕೇಟ್ ಮಾಡಬಹುದೆಂಬುದು ನಮ್ಮ ಅನುಭವದಿಂದ...

read more
'ಕಿ ರಂ ಎಂಬ ಗಾರುಡಿಗ' – ಅಬ್ದುಲ್ ರಶೀದ್

ಅಬ್ದುಲ್ ರಷೀದ್ ಮೈಸೂರ್ ಪೋಸ್ಟ್ ಶ್ರಾವಣದ ಕೊನೆಯ ಶನಿವಾರ ಅಪರಾಹ್ನ. ಕೊತ್ತಂಬರಿ, ಮೆಂತೆ ಸೊಪ್ಪು, ಚೆಂಡು ಹೂ, ಸೇವಂತಿಗೆ. ಕುಂಕುಮ, ಅಗರಬತ್ತಿ ಮತ್ತು ಬೀದಿಯ ತುಂಬ ತಳ್ಳಾಡುತ್ತಾ ಹೆಗಲಿಗೆ ಒರೆಸಿ ಬೆವರುತ್ತ ನಡೆಯುತ್ತಿರುವ ಮಂದಿಯ ಮಿಶ್ರ ಪರಿಮಳ. ಕಿ.ರಂ ನನ್ನನ್ನು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಗೆ ತಾಗಿಕೊಂಡಿರುವ...

read more
’ಕನ್ನಡ ಕಾವ್ಯಲೋಕದ ಮಾಂತ್ರಿಕ ಕಿ ರಂ ಮೇಷ್ಟ್ರು’ – ಗಿರಿಜಾ ಶಾಸ್ತ್ರಿ

ಕಿ ರಂ ಅವರ ನೆನಪಿನಲ್ಲಿ ಗಿರಿಜಾ ಶಾಸ್ತ್ರಿ ಅವರು ಬರೆದಿದ್ದ ಈ ಲೇಖನ ಈಗಾಗಲೆ ’ಅವಧಿ’ಯಲ್ಲಿ ಪ್ರಕಟವಾಗಿತ್ತು. ಕಿ ರಂ ನಮ್ಮಿಂದ ದೂರಾದ ಈ ದಿನದ ನೆನಪಿನಲ್ಲಿ ಈ ಲೇಖನ ನಿಮ್ಮ ಓದಿಗಾಗಿ *** ಗಿರಿಜಾಶಾಸ್ತ್ರಿ, ಮುಂಬಯಿ 3-4 ದಿನಗಳಿಂದ ಸತತವಾಗಿ ಕಿ.ರಂ ಅವರಿಗೆ ಫೋನ್ ಮಾಡುತ್ತಿದ್ದೆ. ಒಂದು ನಾಲ್ಕೈದು ಮಿಸ್ಕಾಲ್ ಗಳಾದರೂ...

read more
'ಭೂತುಕನ್ನಡಿ ಹಾಗೂ ಮೇಷ್ಟ್ರು' – ಆರ್ ಜಿ ಹಳ್ಳಿ ನಾಗರಾಜ

ಆರ್ ಜಿ ಹಳ್ಳಿ ನಾಗರಾಜ 'ಮರೆತು ಹೋದ ಹೊತ್ತೊಂದು ಉದಿರಿ ಮೂಡಿಸಿದೆ ಭವ್ಯ ಆಸೆ ನಿಶಾಗುಹೆಯ ತೆರೆದಾದ ಅದ್ಭುತವ ಬರೆವ ಅಗ್ನಿರೇಷೆ' -ದ ರಾ ಬೇಂದ್ರೆ ಭೂತುಕನ್ನಡಿ ಕೊಡಿಸುವೆನೆಂದು ಪ್ರಾಮಿಸ್ಸು ಮಾಡಿದ್ದರು ಮೇಷ್ಟ್ರು ಕವಿತೆ ಕಟ್ಟು ಹೊತ್ತು ಆ ಒಂದು ದಿನ ಕಾವ್ಯಮಂಡಲದ ಮಹಡಿ ಏರಿ ಮೇಷ್ಟ್ರು ಅರಸುತ್ತ ಹೋದೆ. ಗ್ರಾಮಾಫೋನು ಹಚ್ಚಿ...

read more
'ಕಾಡುವ ಕೀರಂ…' – ಪ್ರದೀಪ್ ಮಾಲ್ಗುಡಿ

ಪ್ರದೀಪ್ ಮಾಲ್ಗುಡಿ ಸಮಕಾಲೀನ ವಾಗ್ವಾದಗಳನ್ನು ಸದಾ ಹೊಸ ದಿಗಂತಗಳಿಗೆ ವಿಸ್ತರಿಸುತ್ತಿದ್ದ ಪ್ರೊ.ಕಿ.ರಂ.ನಾಗರಾಜ ಅವರು ಕನ್ನಡ ಸಂವೇದನೆಯ ಭಾಗವಾಗಿದ್ದಾರೆ. ಅವರು ಕವಿ ಸಂವೇದನೆಯ ವಿವಿಧ ಮಜಲುಗಳನ್ನು ವಿದ್ಯಾರ್ಥಿ, ಕೇಳುಗ ವರ್ಗಕ್ಕೆ ಸದಾ ಹೊಸದಾಗಿ ಮನಮುಟ್ಟುವಂತೆ ವ್ಯಾಖ್ಯಾನಿಸುತ್ತಿದ್ದ ಪರಿ ಅನನ್ಯ. ಕಲೆ, ಸಾಹಿತ್ಯ, ರಂಗಭೂಮಿ,...

read more
'ಹೆಣ್ಣು ಅವಳೆ, ನೋಡುವ ದೃಷ್ಠಿ ಬದಲಾಗಲಿ…' – ಸೌಮ್ಯಾ

- ಸೌಮ್ಯಾ ಕೆ ಆರ್ ಘಟನೆ 1 : ಪವಿತ್ರಾ ಮತ್ತು ಆಶಾ ಸ್ನೇಹಿತರು. 7ನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಬಾಲಕಿಯರು. ಪವಿತ್ರಾ ಮನೆಯಲ್ಲಿ ಆಧುನಿಕ ತಂತ್ರಜ್ಞಾನದ ಟಿವಿ ಇತ್ತು, ಆದರೆ ಆಶಾ ಮನೆಯಲ್ಲಿ ಇರಲಿಲ್ಲ. ಆ ಎಳೆಯ ವಯಸ್ಸಿನಲ್ಲೇ ಇವರಿಬ್ಬರೂ ಪ್ರಾಣಸ್ನೇಹಿತರು. ಅಂತಸ್ತು ಎಂದೂ ಅವರ ಸ್ನೇಹಕ್ಕೆ ಅಡ್ಡಿಯಾಗಿರಲಿಲ್ಲ. ಎಲ್ಲೇ...

read more
'ಕಳ್ಳ ಬೆಕ್ಕು ಕಣ್ಣ ಮುಚ್ಚಿಕೊಂಡು ಹಾಲ ಕುಡದ್ರ…' – ಕಿರಣ್ ಬರೀತಾರೆ

ಕಿರಣ್ ದೇಸಾಯಿ ಬಹುಶ; ಇದು ಎಲ್ಲಾ ಹೆಂಡತಿಯರ ಕಥೆಯೋ ಏನೋ? ಗಂಡ ನಮ್ಮನ್ನ ಹೊಗಳಿ ಹೊಗಳಿ ಹೊನ್ನಶೂಲಕ್ಕೇರಿಸ್ತಾರಲ್ಲ ಇದಕ್ಕ್ ಏನನಬೇಕು. ಅಲ್ಲ ನೋಡ್ರೀ,..... ಸೂಟಿಯಿದ್ದಾಗ," "ಚಾ " ಕುಡುಕೊತ ಕೂತಾಗ್ ಖಾಸಾ ದೋಸ್ತನ್ ಬರಬೆಕ್ ನೋಡ್ರೀ........ಮೈಯಾಗ್ ನುಸಗುನ್ನಿ ಹೊಕ್ಕಂಗ ಆಟಾ ಆದ್ತಾರ . ಭಾಳ ಆರಾಮ ಇದ್ದೆನಪಾ......

read more

Pin It on Pinterest

Share This