ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸೂರಿ, ಗುಲ್ಜಾರ್ ಮತ್ತು ಸಿ ಅಶ್ವಥ್
ಆತ್ಮ ಅರಿವಾಗುವ ಪರಿ ಸೂರಿ ಗುಲ್ಝಾರ್ ಸಾಬ್ ಕೇಳುತ್ತಾರೆ: ಆತ್ಮವನ್ನು ನೋಡಿದ್ದೀರೇನು? ಅದರ ಅರಿವಾಗಿದೆಯೇನು? ಮುಖ ನೋಡಿಕೊಳ್ಳಬಹುದು ಕನ್ನಡಿಯಲ್ಲಿ. ಆತ್ಮ? ಅದರ ಚಿಂತೆ ಯಾರಿಗಿದೆ? ಆತ್ಮದ ಅರಿವಾಗುವುದು ಎಂದರೇನು? ಮಣ್ಣು, ಕಾಗದದ ತುಂಡು, ನೀರು, ಇತ್ಯಾದಿಗಳು ಮುಷ್ಟಿಗೆ ದಕ್ಕಬಹುದು. ಮುಷ್ಟಿಗೆ ದಕ್ಕಿದ್ದರಿಂದ ಅರಿವಿಗೂ...
ಓದು ಜನಮೇಜಯ : ಶಿಕ್ಷಣದಲ್ಲಿ ಅದಕ್ಕಿಂತಲೂ ಹೆಚ್ಚು ಜೀವನದಲ್ಲಿ rank ಪಡೆಯಲು ಸಾಹಿತ್ಯ ಓದಿ
(ಇಲ್ಲಿಯವರೆಗೆ...) ಇತ್ತೀಚೆಗೆ ಫೇಸ್ ಬುಕ್ ನಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಪುಸ್ತಕಗಳು ಯಾವುವು ಎಂದು ನಡೆದ ಒಂದು ಖೋಖೋ ಆಟದಲ್ಲಿ ಬಹಳ ಜನರ ಪಟ್ಟಿಯಲ್ಲಿ ಸಾಹಿತ್ಯದ ಪುಸ್ತಕಗಳೇ ರಾರಾಜಿಸಿದವು . ಬೇರೇ ಪುಸ್ತಕಗಳನ್ನು ಹೆಸರಿಸಿದ್ದು ಕೆಲವೇ ಕೆಲವರು. ನನಗೆ ಸಾಹಿತ್ಯೇತರ ಪಠ್ಯೇತರ ಪುಸ್ತಕಗಳೂ ಬಹಳ ಆಸಕ್ತಿಕರವಾಗಿ ಕಂಡಿವೆ....
ಕೊರಗನೂ ಅವನ ಮುದ್ದಿನ ನಾಯಿ ದೊರೆಯೂ
ಜಾತಿ ಮಾತು ಡಾ ಗ್ಲ್ಯಾಡ್ಸನ್ ಜತ್ತನ್ನ ಮತ್ತು ಕೊರಗನಿಗೇಕೆ ಅದು ತಿಳಿಯಲಿಲ್ಲ? ಮುದ್ದಿನ ನಾಯಿ 'ದೊರೆ' ಇಂದೇಕೆ ಬೊಗಳುತ್ತಿಲ್ಲ? ಸದಾ ಸದ್ದು ಮಾಡುವ ಅವನ ತಗಡಿನ ಡಬ್ಬಿ ಇಂದು ಸದ್ದೇ ಇಲ್ಲದೆ ಸುಮ್ಮನಿದೆಯೇಕೆ...? ಬಹುಶಃ ತನ್ನ ಕೊರಗನ್ನು ಒಳಗೇ ಅದುಮಿಟ್ಟುಕೊಂಡನೇ? ಛೆ ಛೆ... ಅಂಥ ಅಳುಕಿನವನೇನಲ್ಲ ಕೊರಗ ತನ್ನ ನಾಯಿಗೆ...
ನಮ್ಮೂರ್ ಕನ್ನಡ, ನಿಮ್ಮೂರ್ ಕನ್ನಡ
ವರ್ಣಭೇದ ನೀತಿ - ಮಂಜುನಾಥ್ ಧಾರವಾಡ ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ, ಇಲ್ಲಿಯ ವಾತಾವರಣ, ಇಲ್ಲಿಯ ಸಂಸ್ಕ್ರತಿ, ಜನರ ವಿಚಾರಶೈಲಿ ಹಾಗೂ ಜೀವನಶೈಲಿಯನ್ನು ನೋಡಿ ನಾನು ದಿಗ್ಬ್ರಾಂತನಾಗಿದ್ದೆ. ನಾನು ಕೂಡ ಕರ್ನಾಟಕದವನೇ ಆದರೂ, ಈ ಊರು ನಮ್ಮ ಊರಿಗಿಂತ ತುಂಬಾನೇ ಭಿನ್ನವಾಗಿ ಕಾಣಿಸುತ್ತಿತ್ತು. ಎಲ್ಲಿ ನೋಡಿದರೂ ಅಲ್ಲಿ...
'ಸುಖದ ಪಲ್ಲಂಗಗಳನ್ನು ಅವಮಾನಿಸಿದ ಏಕಾಂತ..' – ಪ್ರವರ ಕೊಟ್ಟೂರ್
ಒಂದು ಲೈಟ್ ಹೌಸ್ ಪ್ರವರ ಕೊಟ್ಟೂರ್ ಆ ದ್ವೀಪದ ಬಂದರಿನ ಎಡ ಬದಿಯಲ್ಲಿ ಸದಾ ನಿದ್ದೆಗೆಟ್ಟಂತೆ, ಎಚ್ಚರವಾದಂತೆ ಎದೆಗೆ ಸೂತಕ ಕಟ್ಟಿಕೊಂಡಂತೆ ಪ್ಯಾಚು ಹಚ್ಚಿ ಜೋಡಿಸಿಟ್ಟ ನೂರರ ನೋಟುಗಳಂತೆ ಬಡಕಲು ಹಾವಂತೆ ಸದಾ ನಿಸ್ತೇಜ ಸ್ತಿತಿಯಲ್ಲಿ ಸಮುದ್ರದ ಇನ್ನೊಂದು ತೀರವನ್ನು ನೋಡುತ್ತಾ ನಿಂತ ಒಂದು ಲೈಟ್ ಹೌಸ್ ಇದೆ ಸಂಬಂಧಗಳ...
ಪುಸ್ತಕ ಪ್ರೀತಿ – ತಿಂಗಳ ಮಾತುಕತೆಯಲ್ಲಿ ’ಮಾತು ಸೋತ ಭಾರತ’
ಓದು ಜನಮೇಜಯ : ಪುಸ್ತಕಗಳೊಡನೆ ಕಳ್ಳ ಪ್ರಣಯ
(ಇಲ್ಲಿಯವರೆಗೆ...) ಎಂಟನೆಯ ತರಗತಿಯಲ್ಲಿದ್ದಾಗ ಒಂದು ವರ್ಷ ಪೂರ್ತಿ ನಮ್ಮ ಬಂಧುಗಳ ಮನೆಯಲ್ಲಿ ಕಳೆದ ಮೇಲೆ ನಮ್ಮ ತಂದೆ ಬೆಂಗಳೂರಿಗೆ ವರ್ಗಾಯಿಸಿಕೊಂಡು ಬಂದರು. ಸಿದ್ಧಾಪುರ ವೆಂಬ ನಗರದೊಳಗಿನ ಹಳ್ಳಿಯಿಂದ ಮತ್ತೊಂದು ಅಂತಹದೇ ಹಳ್ಳಿಯಲ್ಲದ ಹಳ್ಳಿ ಕನಕನಪಾಳ್ಯದಲ್ಲಿ ನೆಲಸಿದೆವು. ಕೇವಲ ಅಡಿಗೆ ಮನೆ ಮತ್ತು ಹಾಲ್ ಮಾತ್ರ ಇದ್ದ ಜಿಂಕ್...
'ಕಾಲೇಜ್ ಹುಡುಗಿ, ಹೋಟೇಲ್ ಹುಡುಗ' ಅಕ್ಷತಾ ಬರೆದ ಭಾನುವಾರದ ಕಥೆ
ಅಕ್ಷತಾ ರವಿ ದಿನಾ ಕಾಲೇಜಿಗೆ ಅಂತಾ ನೀನು ಬರ್ತಿದ್ದೆ ....... ಕೆಲ್ಸಕ್ಕೆ ಅಂತಾ ನಾನು...... ನಮ್ಮಿಬ್ಬರ ನಡುವೆ ಬಸ್ಸಿನಲ್ಲಿದ್ದ ನೂರಾರು ಜನರು. ಈ ಜನರೇ ನಮ್ಮಿಬ್ಬರ ಸಂಬಂಧಕ್ಕೆ ಸಾಕ್ಷಿ ಅಲ್ವೇನೇ? ಅದಕ್ಕೆ ಸಾಕ್ಷಿ ಬೇರೆ ಬೇಕೇನೋ ಮುಟ್ಹಾಳ ಅಂತಿಯೇನೋ. ನಿಜ ಕಣೆ ನಿನ್ನ ತಕರಾರನ್ನ ನಾನು ಒಪ್ತೀನಿ. ಸಾಕ್ಷಿ ಹೇಳೋ ಸಂಬಂಧಗಳು...
'ಭದ್ರವಾಗಿವೆ ನೆನಪುಗಳು, ಸೆರಗ೦ಚಲ್ಲಿ…' ಪವಿತ್ರಾ ಕವನ
ಕನ್ನಡಿಯೊಳಗಿನ "ನೀನು" ಪವಿತ್ರಾ ಪ್ರಶಾಂತ್ ದುಬೈ ಮುಸ್ಸ೦ಜೆ ಹೊತ್ತು... ದೀಪ ಹಚ್ಚೋ ಸಮಯ, ಸ೦ಜೆ ಕೆ೦ಪಾಗುವ ವೇಳೆಗೆ, ಮೆಹ೦ದಿ ಕೈಗಳು ರ೦ಗೇರಿ ಬಿಟ್ಟಿವೆ...... ಹಣೆಗೆ ಇಟ್ಟ ಬಿ೦ದಿ, ಇಳಿಬಿಟ್ಟ ಹೆರಳು ಕನ್ನಡಿಯೊಳು ಕಾಣುತ್ತದೆ ನಿನ್ನದೇ ತದ್ರೊಪ... ಸುಮ್ಮನೆ ನನ್ನ ನೋಡಿ ನಕ್ಕ೦ತಾಗುತ್ತವೆ... ಹಾಳು ಹಾಳು...
ಎ ಎಸ್ ಮೂರ್ತಿಗಳ ನೆನಪಿನಲ್ಲಿ ’ಗೀತ-ಸಂಗೀತ’
ನರಹಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸ್ವಾಗತ
ಹೆಣ್ಮಕ್ಕಳಿಗೆ ಶಿವ, ಪಡ್ಡೆಗಳಿಗೆ ’ಪರಮಶಿವ’
ಪರಮಶಿವ ಸಿನಿಮಾ ವಿಮರ್ಶೆ ಚಿತ್ರಪ್ರಿಯ ಸಂಭ್ರಮ್ ದೃಶ್ಯ ಸಿನಿಮಾದಲ್ಲಿ ರವಿಚಂದ್ರನ್ ಮಹಿಳೆಯರನ್ನ ಥೇಟರ್ ಕಡೆ ಬರುವಂತೆ ಮಾಡಿದ್ದರು. ನಂತರ ಬಿಡುಗಡೆಯಾಗಿರುವ ಪರಮಶಿವ ಸಿನಿಮಾ ಕೂಡಾ ಅಷ್ಟೇ ಮಹಿಳೆಯರನ್ನ ಕೈ ಬೀಸಿ ಕರೆಯುತ್ತೆ. ಚಿತ್ರದ ಟೈಟಲ್ ನೋಡಿ ಇದು ಪಕ್ಕಾ ಮಾಸ್ ಸಿನಿಮಾ ಎಂದುಕೊಂಡರೆ ಕೊಂಚ ನಿರಾಸೆಯಾಗುತ್ತೆ. ಸಿನಿಮಾದಲ್ಲಿ...
ಓದು ಜನಮೇಜಯ : ಕೋಳೀ ಸಾರು ಎಂಬ ಕನ್ನಡ ಉಪಾಧ್ಯಾಯರೂ ಅವರ ಕೀಳರಿಮೆಯೂ
(ಇಲ್ಲಿಯವರೆಗೆ...) ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಓದುಗರು , ಸಾಹಿತಿಗಳು ತಮಗೆ ಶಾಲಾ ದಿನಗಳಲ್ಲಿ ಉಪಾಧ್ಯಾಯರುಗಳು ಪ್ರಮುಖವಾಗಿ ಕನ್ನಡ ಉಪಾಧ್ಯಾಯರುಗಳಿಂದ ತಮಗಾದ ಪ್ರಭಾವದ ಬಗ್ಗೆ ಹೇಳುವಾಗೆಲ್ಲಾ ನನಗೆ ಹೊಟ್ಟೆಕಿಚ್ಚಾಗುತ್ತದೆ. ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಅನೇಕ ಉಪಾಧ್ಯಯರುಗಳು ನನ್ನನ್ನು ಮೆಚ್ಚಿದ್ದಾರೆ ,...
ಬೇಲೂರು ರಘುನಂದನ್ ಕಟ್ಟುಪದ ಈಗ ’ಭೂಮಿ’ಯಾಗಿ…
- ಅಮರೇಂದ್ರ ಶೆಟ್ಟಿ ಬೇಲೂರು ರಘುನಂದನ್ ಸುಮಾರು 400 ಕ್ಕೂ ಹೆಚ್ಚು ಕಟ್ಟುಪದಗಳನ್ನು ಬರೆದಿದ್ದಾರೆ. ಆಧುನಿಕ ವಚನಗಳನ್ನು ಕಟ್ಟುಪದಗಳು ಅಂತ ಕರೆಯುವ ಇವರು ಸಂವೇದನಾ ಶೀಲ ಕವಿತೆಗಳನ್ನು ಮತ್ತು ವಚನಗಳನ್ನು ಕಟ್ಟಿಕೊಡುತ್ತಿದ್ದಾರೆ. ಈಗ ಇವರ ಕಟ್ಟುಪದಗಳನ್ನು ಆಧರಿಸಿ ಭೂಮಿ ಅನ್ನುವ ನಾಟಕ ರಂಗರೂಪವಾಗುತ್ತಿರುವುದು ಖುಷಿಯ ವಿಷಯ....
ನಾನು ಮಗುವಾಗಿದ್ದಿದ್ದರೆ…. – ಸುಚಿತ್ರಾ ಕವನ
ಸುಚಿತ್ರ ಕೆ ಮಂಗಳೂರು ನಾನು ಮಗುವಾಗಿದ್ದಿದ್ದರೆ ಈ ಎಲ್ಲ ಬೇಗುದಿ ನಿಟ್ಟುಸಿರು ಇರ್ತಾ ಇರಲಿಲ್ಲ ನಾನು ಮಗುವಾಗಿದ್ದಿದ್ದರೆ ಮನಸ್ಸಿನ ತೊಳಲಾಟದಲ್ಲಿ ಒದ್ದಾಟದಲ್ಲಿ ಬೆಂದು ನಲುಗುತಿರಲಿಲ್ಲ .. ನಾನು ಮಗುವಾಗಿದ್ದಿದ್ದರೆ ಕಳ್ಳತನದ ನೋಟದ ಅರಿವಿರುತಿರಲಿಲ್ಲ; ಸುಳ್ಳಿನ ಮಣಿಗಳ ಪೋಣಿಸುತಿರಲಿಲ್ಲ ನಾನು...
ಹೀಗೊಂದು ಹಳೆಯದಾದಷ್ಟೂ ಮಧುರವಾಗುತ್ತಿರುವ ಹಾಡು
http://youtu.be/A6JjAwY7n-M
ರಂಗಶಂಕರದಲ್ಲಿ ’ಮಾಗಡಿ ಡೇಸ್’
ಸುಚಿತ್ರಾದಲ್ಲಿ ಇಂದು ಸಂಜೆ
ಸಂಧ್ಯಾರಾಣಿ ಕಾಲಂ : ಸತ್ಯ ಎನ್ನುವುದು ಯಾವಾಗಲೂ Relative ಮಾತ್ರ
’ನೀನು ಹೋಗಿ ಮೂರೂವರೆ ಗಂಟೆ ಆಯ್ತು, ಏನು ಮಾಡ್ತಾ ಇದ್ದೆ?’, ನಾನು ಹುಬ್ಬು ಗಂಟಿಕ್ಕಿ ಕೇಳುತ್ತಿದ್ದೆ. ’ಇಲ್ಲಾ ಮೇಡಂ ಪೋಲೀಸ್ನೋರು ಕರ್ಕೊಂಡೋಗಿ ಕೂರಿಸ್ಕೊಂಡಿದ್ರು’, ಅವನು ನಿರಾಳವಾಗಿ ಹೇಳುತ್ತಿದ್ದ. ಏನೋ ಮಾತನಾಡಲೆಂದು ನನ್ನ ಆಫೀಸಿಗೆ ಬಂದಿದ್ದ ಗೆಳತಿ ಪಕ್ಕನೆ ಅವನೆಡೆಗೆ ತಿರುಗಲು ಬಯಸುತ್ತಿದ್ದ ಕುತ್ತಿಗೆಯನ್ನು ಬಲವಂತವಾಗಿ...
’ಪರದೆ ಹಿಂದಿನ ನೋವು…’ – ನಸ್ರಿನ್ ಬಾನು ಬರೀತಾರೆ
’ಅವಧಿ’ ಯಲ್ಲಿ ಈ ಮೊದಲು ಪ್ರಕಟವಾಗಿದ್ದ ಲೇಖನ, ಈ ಸಮಯದಲ್ಲಿ ಪ್ರಸ್ತುತ ಅನ್ನಿಸಿದ್ದರಿಂದ ಇದು ನಿಮ್ಮ ಮರು ಓದಿಗೆ... *** ನಸ್ರಿನ್ ಬಾನು ಅವಳು ಸದಾ ಕನಸು ಕಾಣುತಿದ್ದಳು. ಜೀವನದಲ್ಲಿ ತಾನೇನಾದರೂ ಸಾದಿಸಬೇಕೆಂದು. ಅವಳಿಗೂ ಆಸೆಯಿತ್ತು ತಾನು ವಿದ್ಯಾಬ್ಯಾಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದೆಂದು. ಅವಳು ಬಯಸಿದ್ದಳು, ತಾನು...
ಎಮ್ಮ ಮನೆಯಂಗಳದಿ ಕಂಡೊಂದು ಹಕ್ಕಿಯಿದು..
ಹಲೋ, ಪುಟ್ಟ ‘ವೀಕ್ಲಿಂಕಗ್’ ಮರಿಯೇ, ನಿನಗೂ ಬದುಕುವ ಹಕ್ಕಿದೆ! ಲಕ್ಷ್ಮಿಕಾಂತ್ ಇಟ್ನಾಳ್ ಇಂದು ಮುಂಜಾನೆ ಸಮಯ ಬಲು ವಿಶೇಷವಾಗಿತ್ತು, ಕಾರಣ? ಮನೆಯಲ್ಲಿ ಒಂದು ವಿಶೇಷ ಅತಿಥಿ ಇತ್ತು. ನೆನ್ನೆ ಮನೆಯ ಹೊರಗೆ ರಸ್ತೆಯ ಮೇಲೆಯೇ ಒಂದು ಹಕ್ಕಿಯ ಗೂಡು ಚಲ್ಲಾ ಪಿಲ್ಲಿಯಾಗಿ ಬಿದ್ದಿತ್ತು, ಮನೆಯ ಹೊರಗಿನ ರಸ್ತೆಯಲ್ಲಿ ‘ಚಿಂವು ಚಿಂವ್’...
