'ಕನ್ನಡದ ಶಬ್ದಪ್ರೀತಿಗೆ ಶರಣಾಗದೇ ಇರಲು ಸಾಧ್ಯವೇ?' – ರಾಘವೇಂದ್ರ ಜೋಶಿ

ರಾಘವೇಂದ್ರ ಜೋಶಿ

ಸತ್ಯದ ಸರಳ ರೂಪಕವೆಂದರೆ ಕನ್ನಡಿ. ಎದುರಿಗಿರುವದನ್ನು ಇದ್ದಂತೆ ತೋರಿಸುವ ದಿಟ್ಟತನದ ಗುಣ ಹೊಂದಿರುವ ಕನ್ನಡಿಗೆ ಮುಲಾಜಿನ ಹಂಗಿಲ್ಲ. ಅಂತೆಯೇ ಇಲ್ಲಿ ಫೋಟೋಶಾಪಿನ ಚಮತ್ಕಾರವಿಲ್ಲ. ಹಿಂಬದಿಯಲ್ಲಿ ಏನೇ ಗಿಲೀಟು ಮಾಡಿಕೊಂಡಿದ್ದರೂ ಕೂಡ ಅದು ಸತ್ಯವನ್ನೇ ಎತ್ತಿ ಹಿಡಿಯಬಲ್ಲದು.
ಕನ್ನಡವೆಂಬುದೂ ಕನ್ನಡಿಯಂತೆ. ಇಲ್ಲಿ ಎಲ್ಲವೂ ನೇರ ಮತ್ತು ಪಾರದರ್ಶಕ. ಕಣ್ಣೆದುರಿಗೆ ಕಾಣುವದನ್ನೆಲ್ಲವನ್ನೂ ಯಾವುದೇ ಮುಚ್ಚುಮರೆಯಿಲ್ಲದೇ ನುಡಿಯಬಲ್ಲದು. ಹೇಳುವದೊಂದು ಮಾಡುವದೊಂದು ಎನ್ನುವ ಕುಟಿಲತೆ ಕನ್ನಡಕ್ಕಿಲ್ಲ. ಬರೆಯುವ ಅಕ್ಷರ ಮತ್ತು ನುಡಿಯುವ ನಾಲಿಗೆಯ ಮಧ್ಯೆ ಯಾವುದೇ ಕಣ್ಣಾಮುಚ್ಚಾಲೆಯಿಲ್ಲ. Island ಅಂತ ಬರೆದ ಮೇಲೆ, ಬರೆದ ಅಕ್ಷರವನ್ನೇ ಕೊಲ್ಲುವ ನಿರ್ದಯತೆ ಕನ್ನಡಕ್ಕಿಲ್ಲ..

ಲೋಕದ ಎಲ್ಲ ಕ್ರಿಯೆ, ಪ್ರತಿಕ್ರಿಯೆಗಳನ್ನೂ ಕನ್ನಡ ಭಾಷೆಯು ಸೂಕ್ಷ್ಮವಾಗಿ ಮತ್ತು ನಿರ್ದಿಷ್ಟವಾಗಿ ಬಿಂಬಿಸಬಲ್ಲದು. ಹೀಗಾಗಿ ಇಲ್ಲಿ ಬರೀ ‘ಚಲನೆ’ಯೆಂಬುದು ಎಷ್ಟೆಲ್ಲ ವಿಧದಲ್ಲಿ ಚಿತ್ರಿತವಾಗುತ್ತದೆ ನೋಡಿ: ಇಲ್ಲಿ ಮಳೆ ಭೋರ್ಗರೆಯುತ್ತದೆ, ನದಿ ಧುಮ್ಮಿಕ್ಕುತ್ತದೆ, ನರಿ ಊಳಿಡುತ್ತದೆ, ಆನೆ ಘೀಳಿಡುತ್ತದೆ, ನಾಯಿಯೆಂದೂ ಗರ್ಜಿಸುವದಿಲ್ಲ, ಹುಲಿ ಯಾವತ್ತೂ ಬೊಗಳುವದಿಲ್ಲ! ಕುದುರೆಯ ಹೇಶಾರವ, ಹಾವಿನ ಪೂತ್ಕಾರ, ಕತ್ತೆಯ ಹೇಂಕಾರ, ದುಂಬಿಯ ಝೇಂಕಾರ, ಬಿಲ್ಲಿನ ಠೇಂಕಾರ… ಆಹ್, ಕನ್ನಡದ ಶಬ್ದಪ್ರೀತಿಗೆ ಶರಣಾಗದೇ ಇರಲು ಸಾಧ್ಯವೇ?
ಎಲ್ಲ ಕನ್ನಡಪ್ರೇಮಿಗಳಿಗೂ ರಾಜ್ಯೋತ್ಸವದ ಶುಭಾಶಯಗಳು.
 

‍ಲೇಖಕರು G

November 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಕನ್ನಡಿಯಂಥ ಕನ್ನಡೆದ ಬಗ್ಗೆ -ಆಹಾ !
    ಚೆನ್ನಾಗಿದೆ.

    ಪ್ರತಿಕ್ರಿಯೆ
  2. Rajn

    ಕನ್ನಡದಲ್ಲಿ ಇರುವ ಧ್ವನಿ, ಪದ ವೈವಿದ್ಯಗಳ ಬಗೆಗೆ ಪ್ರೊಫೆಸರ್ ಕೃಷ್ಣೇಗೌಡರು ಹೇಳುವುದನ್ನು ಕೇಳುವುದೇ ಒಂದು ಅಧ್ಭುತ, ರೋಮಾಂಚನಕಾರಿ ಅನುಭವ. ಇತ್ತೀಚೆಗೆ ನೆಡೆದ ಅಕ್ಕ ಸಮ್ಮೇಳನದಲ್ಲಿ ಅದನ್ನು ಕೇಳಿದ್ದು ಇನ್ನೂ ಕಿವಿಯಲ್ಲಿದೆ!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: