ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಬೋದಿವೃಕ್ಷದ ಬಳಿ ಯಶೋಧರ ಕಾದಿದ್ದಳು…'

ಕಳೆದುಕೊಡವರು ಸ್ವಾಮಿ ನ. ಕೋಡಿಹಳ್ಳಿ ಉಳ್ಳವರ ಶಿವಾಲಯಕ್ಕೆ ಶಿವನಿಲ್ಲದ ಗುಡಿ 'ಲಿಂಗ' ಮಜ್ಜನಗೊಂಡು ಸೆಟೆದುನಿಂತಿದೆ ದಿಗಂಬರನ ಮೌನದಲಿ ಕಾಲಕ್ಕೆ ಶರಣಾಗಿ ಮಾತು ಮುಜುಗರದ ಬೆನ್ನೇರಿದೆ ಕೇಳಲೆಂದು ಬುದ್ಧನನ್ನರಸಿ ಹೊರಟೆ ಬೋದಿವೃಕ್ಷದ ಬಳಿ ಯಶೋಧರ ಕಾದಿದ್ದಳು!   ಬುದ್ಧ, ಜಗವೆಲ್ಲ ಮಲಗಿರಲು ತಾನೊಬ್ಬನೇ ಎದ್ದಾಗ ಮನೆಮುಂದೆ...

read more
’ಹೀಗೂ ಒಂದು ಲವ್ ಸ್ಟೋರಿ’ – ರಜನಿ

ರಜನಿ ಆಚಾರ್ಯ "ಅಮ್ಮಾ ತಾಯಿ ಕೂತಲ್ಲೇ ಕೂತು ಇನ್ನಷ್ಟು ದಪ್ಪಗಾಗು ..ನಾವು ಜಾಗ್ಗಿಂಗ್ ಮಾಡ್ಕೊಂಡು ಬರ್ತೇವೆ"...ಉತ್ತರಕ್ಕೂ ಕಾಯದೆ ನನ್ನ ಅಪ್ಪ, ತಂಗಿ ಮಾತಾಡುತಾ ಪಾರ್ಕೊಳಗೆ ಹೊರಟೇಬಿಟ್ರು ..ಭಾನುವಾರದ ಈ ಬೆಳಗ ನೋಡಲಿಕ್ಕೇ ಬಂದವಳು ನಾನು..ದಿನವೂ ಈ ಕಾಲೇಜ್ ಟ್ಯೂಷನ್ ರಗಳೆಯಲಿ ಈ ನಗರದ ಟ್ರಾಫಿಕ್ ನಲ್ಲಿ ಬೇಸತ್ತಿದ್ದ ನಾನು...

read more
’ಎಂದೂ ಮರೆಯದ ಶಾಶ್ವತ ಹುಡುಕಾಟ, ನಾನಿನ್ನು ಜೀವಂತ…’

ಆವಾಸ ಶೇಷಗಿರಿ ಜೋಡಿದಾರ್ ಗುರುತ್ವ ಮೀರಿದ, ಆದರೆ, ಮೇಲೆರದ, ಕೆಳಜಾರದ, ಎಳು ಬೀಳುವ ವಲಸೆಗೆ ಸದಾ ಸಿದ್ದವಿರುವ ಹಗುರ ಹಂದರದ,ಗೋಡೆಮುಕ್ತ ಮನೆ ಬೇಕಿದೆ ನನಗೆ ಬಾಡಿಗೆಗೆ ಆದರೂ ಸರಿ ಪರಿಸರದಷ್ಟೆ ಮುಕ್ತ ಆವಾಸಕೆ ಜಾಗ ಬೇಕು ನನಗೆ, ಸತತ ಸ್ಥಾನಪಲ್ಲಟಕೆ, ವಿಸ್ತಾರ ಕೇಂದ್ರದಲಿ ಭಿತ್ತಿಯ ಭ್ರಮೆ ಏಕೆ? ದೃಷ್ಟಿ ಹೋದಲ್ಲಿ ದಿಗಂತ ಕಂಡರೆ...

read more
ಉತ್ಸವ್ ರಾಕ್ ಗಾರ್ಡನ್ ನೋಡಿದೀರಾ?

- ರಘೋತ್ತಮ ರ ಕೊಪ್ಪರ್ ಇದರ ಹೆಸರು ಉತ್ಸವ ರಾಕ್ ಗಾರ್ಡನ್. ಸ್ನೇಹಿತನ ಒತ್ತಾಯದಿಂದ ಒಂದು ದಿನದ ಪ್ರವಾಸಕ್ಕೆಂದು ಇಲ್ಲಿ ಬಂದೆ. ಇಲ್ಲಿ ನೋಡಿದ ಮೇಲೆ ಬಂದ್ದದ್ದು ವ್ಯರ್ಥವಾಗಲಿಲ್ಲ ಅನ್ನಿಸಿತು. ಇಲ್ಲಿ ಕಲಾ ಲೋಕವೇ ಇದೆ. 1000 ಕ್ಕೂ ಹೆಚ್ಚು ಶಿಲ್ಪಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ನಾನಂತೂ ತುಂಬಾ ಎಂಜಾಯ್ ಮಾಡಿದೆ....

read more
ಸಂಧ್ಯಾರಾಣಿ ಕಾಲಂ : 'ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು, ಹೃದಯ ತೆರೆದಿದೆ…'

ಅದೊಂದು ಸಮಯವಿತ್ತು. ಇಡೀ ದಿನ, ಹಲವೊಮ್ಮೆ ದಿನಗಟ್ಟಲೆ ನಾನು ಒಂದೂ ಮಾತನಾಡದೆ ಕಳೆದಿರುತ್ತಿದ್ದೆ. ಮಂಗಳೂರಿನಲ್ಲಿ ಮನೆ. ಮುಖ್ಯರಸ್ತೆಯಿಂದ ಒಂದು ಓಣಿಗೆ ತಿರುಗಿ, ಅಲ್ಲಿಂದ ಸುಮಾರು ೬೦-೭೦ ಮೆಟ್ಟಿಲು ಇಳಿದರೆ ಒಂದು ತೋಟ. ತೋಟದ ನಡುವೆ ಮನೆ ಮಾಲೀಕರ ಮನೆ, ಅಲ್ಲೆ ಸ್ವಲ್ಪ ಪಕ್ಕದಲ್ಲಿ ನಮ್ಮ ’ಬಿಡಾರ’. ಬಿಟ್ಟರೆ ಸುತ್ತ ಮುತ್ತ...

read more
'ಶಾಂತಸಮುದ್ರದಲ್ಲೆದ್ದ ಅಲೆಗಳು ಕಂಡಿಲ್ಲ ಯಾರಿಗೂ…' – ಜಯಶ್ರೀ ದೇಶಪಾಂಡೆ

ಗಿಡುಗನೂ...ಹುಡುಗಿಯೂ ... ಜಯಶ್ರೀ ದೇಶಪಾಂಡೆ ಮಲ್ಲಿಗೆ ಕಮಾನುಕಟ್ಟಿದ ಮನೆ ಜಕ್ಕವಕ್ಕಿಗಳಂಥ ಜೋಡಿ, ಅವನೂ ಸುಖಿ....ಅವಳೂ, ದುಗುಡ ದುಮ್ಮಾನಗಳ ಕಳೆ ಇಲ್ಲ, ಶಾಂತಸಮುದ್ರದಲ್ಲಿ ಅಲೆಗಳಿಲ್ಲ. ಮಂದಗಾಳಿಗೆ ಅನವರತ ಮನವರಳಿದೆಯಲ್ಲಿ. ಹಗಲಿರುಳು ಕೋಗಿಲೆಯ ಕುಹು ಅಲ್ಲಿ!   ಆಕಾಶವಿಡೀ ಹಕ್ಕಿಗಳು, ಬಣ್ಣ ಬಣ್ಣದ ಗರಿಗಳು ತೇಲಿ,ತೂರಿ...

read more
ಟೈಮ್ ಪಾಸ್ ಕಡ್ಲೆ ಕಾಯ್ : ಕಸ ವಿಲೇವಾರಿ ಮಾಡೂದಂದ್ರ ಸುಮ್ನ ಏನ್ರಿ

-  ಸೂರ್ಯಕಾಂತ ಬಳ್ಳಾರಿ ಛೇ, ಎಂಥಾ ನಿದ್ದಿ ಬರ್ತದೋ ಏನೋ, ದರಿದ್ರಂದು, ಎಷ್ಟಾ ಲಗು ಏಳಬೇಕಂದ್ರನೂ ಆಗವಲ್ದು. ಈಗ ಎಚ್ಚರ ಆಗ್ಬೇಕಾ? ಹತ್ತು ಗಂಟೆ ಇಪ್ಪತ್ತ ನಿಮಿಷಕ್ಕ. ಸಾಲಿಯೊಳಗ ಪ್ರಾರ್ಥನ ಚಾಲೂ ಆಗಿರ್ತದ. ಇನ್ನ ಜಳಕಾ ಮಾಡಿ ಅರವಿ ಹಾಕ್ಕೋಂಡ ಆ ನೈಸ್ ರೋಡಿನೊಳಗ ಹೋಗೂದಂದ್ರ ಏನ ಸುಮ್ನೇ ಏನ. ಹಂ ನೈಸ್ ರೋಡ್ ಅಂದ್ರ ಬೆಂಗಳೂರನಾಗ...

read more
ಡೈಲಿ ಬುಕ್ : ಏಕಂ ಪ್ರಕಾಶನದಿಂದ ’ತೆರೆದ ಕಿಟಕಿ’

ಏಕಂ ಪ್ರಕಾಶನ, ಪುಟ ಸಂಖ್ಯೆ 172, ಬೆಲೆ 120 ಎಲ್ಲಾ ಪುಸ್ತಕ ಮಳಿಗೆಯಲ್ಲಿ ಲಭ್ಯ ಚೈತನ್ಯ ಹೆಗಡೆಯ 'ತೆರೆದ ಕಿಟಕಿ ' ಅವರ 28 ಅಂಕಣಗಳ ಸರಮಾಲೆ. ನಿಜಕ್ಕಾದರೂ ಒಂದಕ್ಕಿಂತ ಒಂದು ಅಣಿಮುತ್ತುಗಳು. 'ತೆರೆದ ಕಿಟಕಿ' ಎಂಬ ಹೆಸರೇ ಸೂಚಿಸುವಂತೆ ಇಲ್ಲಿ ವಿಷಯ ವೈವಿಧ್ಯ, ಹರವು ಓದುಗನಿಗೆ ಕೊಡುವ ಅನುಭೂತಿ ಅದ್ಭುತ, ಅಪೂರ್ವ ! ಚೈತನ್ಯರ...

read more
ವಿದ್ಯಾರಶ್ಮಿ ಬರೆದ 'ಅವಳ ಕಥೆ'

ವಿದ್ಯಾರಶ್ಮಿ ಪೆಲತ್ತಡ್ಕ ಅವಳು ದಿನವೂ ಬೆಳಿಗ್ಗೆ ಮಗಳನ್ನು ಸ್ಕೂಲಿಗೆ ಬಿಟ್ಟು ಹೊರಡುವಾಗ ಸ್ಕೂಲ್ ಗೇಟಿನಿಂದ ಸ್ವಲ್ಪ ದೂರದಲ್ಲೇ ಇಬ್ಬರು -ಮೂವರು ಅಮ್ಮಂದಿರು ನಿಂತು ಮಾತಾಡುತ್ತಿದ್ದರು. ಇವಳು ಪ್ರತಿದಿನ ಅವರ ಈ ಮೀಟಿಂಗ್ ನೋಡುತ್ತಿದ್ದಳು. ತನ್ನ ಮಗಳ ಕ್ಲಾಸ್ಮೇಟ್ಗಳ ಅಮ್ಮಂದಿರೇ ಆದ್ದರಿಂದ ತಾನೂ ಸೇರಬಹುದೇನೋ ಅಂದುಕೊಂಡು ಇವಳೂ...

read more
ಗಾನಕೆ ಒಲಿಯದ ಮನಸೇ ಇಲ್ಲ….

ಲಕ್ಷ್ಮಿಕಾಂತ ಇಟ್ನಾಳ್ ...........ಏನಾಯ್ತೂಂದ್ರೆ, ನಾವು ಜೋಧಪುರ ಅರಮನೆಯ ಭವ್ಯತೆಯನ್ನು ಮನತಣಿದು ನೋಡಿ, ದಣಿದು, ಅರಮನೆಯ ಇಳಿಜಾರಿನ ಕಲ್ಲು ಚಪ್ಪಡಿ ಹೊದಿಸಿದ ದಾರಿಗುಂಟ ಕೆಳಗಿಳಿಯುತ್ತಿದ್ದೆವು, ಒಂದು ತಿರುವಿನಲ್ಲಿ ಮಾಡಿನಂತಹ ಮೂಲೆಯಲ್ಲಿ ಕುಳಿತು ಸುಶ್ರಾವ್ಯವಾಗಿ ಡ್ರಮ್ಗಗಳನ್ನು ಎದುರು ಬದುರು ನುಡಿಸುತ್ತ ಹಾಡುತ್ತಿದ್ದವ...

read more
ಹೀಗೆ ಕೆಲವು ಹೈಕುಗಳು…

ನವೀನ್ ಮದುಗಿರಿ ಸುಮ್ಮನೆ ಜಿಗಿಯಿತು ಕಪ್ಪೆ ಕೊಳದ ತುಂಬಾ ಎಷ್ಟೊಂದು ತರಂಗ ~•~   ತುದಿಗಾಲ ಮೇಲೆ ಅಲೆಗಳು ಚಂದಿರ ಹುಳಿ ದ್ರಾಕ್ಷಿ ಗೊಂಚಲು ~•~ ತಂಗಾಳಿಯ ಕೈ ತೂಗುತಿದೆ ಚಿಟ್ಟೆಗೆ ಹೂವಿನ ತೊಟ್ಟಿಲು ~•~ ಶಿವ ಶಿವಾ ಈ ಮರದ ನೆತ್ತಿಯ ಮೇಲೆ ಚಂದಿರ ~•~ ನಿಶ್ಯಬ್ದ ರಾತ್ರಿ ಸುಳ್ಳು ಗಾಳಿಯೂ ಮಾತು ಕಲಿತಿದೆ ಸುಯ್ಯೋ ಸುಯ್ ~•~...

read more
ಫೇಸ್‌ಬುಕ್ ಸ್ನೇಹ, ಪ್ರೇಮ ಇತ್ಯಾದಿ

ಆಶಾದೀಪಾ ಯಾಕೋ ಈ ಸಂಬಂಧಗಳು ಒಂಥರ ಗೊಜಲು,ಗೊಜಲು.. ಕೇವಲ ರಿಕ್ವೆಸ್ಟ್​ವೊಂದರಿಂದ ಆರಂಭವಾಗುವ ಪರಿಚಯ ನಂತರ ಗಾಢ ಸ್ನೇಹಕ್ಕಿಳಿದಾಗ ವಿಚಿತ್ರ ಅನ್ನಿಸಿ ಕೊಲ್ಲುತ್ತದೆ..ಅದರಲ್ಲೂ ಈ ಗೆಳೆತನ ಹೆಸರಿಡದ ಸಂಬಂಧವಾಗಿ ಪರಿವರ್ತನೆಯಾದಾಗಲಂತೂ ಅನಭವಿಸುವ ನೋವು ಹೇಳತೀರದು..ಪರಿಚತ ಆರಂಭವಾದ ಹೊತ್ತಿನಲ್ಲಿ ನಾವು ಮಾಡುವ ಪ್ರತಿ ಲೈಕ್ ಗೊಂದು...

read more
ಸ್ವರ್ಣ ಬರೆದ ಸಣ್ಣ ಕಥೆ ’Love is….'

ಸ್ವರ್ಣ ಎನ್ ಪಿ “ಹೌದು , ಇಲ್ಲ , ಗೊತ್ತಿಲ್ಲ ಎನ್ನುವ ಸಿಧ್ಧ ಮಾದರಿಯ ಉತ್ತರಗಳು ಬದುಕಿನ ಪ್ರಶ್ನೆಗಳಿಗೆ ಉತ್ತರವಾಗಲಾರವು” ಹೀಗಂತ ಅವನು ಹೇಳಿದಾಗ ಹೇಗೆ ವಿವರಿಸಬೇಕೆಂದು ತಿಳಿಯಲಿಲ್ಲ. ಎಲ್ಲ ಆಸ್ತಿಯನ್ನೂ ಮಾರಿ ಕೊನೆಗೆ ವೀಣೆಯನ್ನು ಮಾತ್ರವೇ ಮಾರದೇ ಉಳಿಸಿಹೋದ ಅಜ್ಜನ ಮೊಮ್ಮಗಳು ನಾನು. ಶರದೃತುವಿನ ಮೂಲಾನಕ್ಷತ್ರದಲ್ಲಿ ಧೂಳು...

read more
’ಕವಿತೆ ಹಾಡಾಯಿತು..’ – ಚಿದಂಬರ ನರೇಂದ್ರ

ಚಿದಂಬರ ನರೇಂದ್ರ ತಾಜಾ ಕವಿತೆಯೊಂದು ಟ್ಯೂನಿಗೆ ಒಗ್ಗಿಕೊಳ್ಳಬೇಕೆಂದು ತನ್ನ ರೆಕ್ಕೆ ಪುಕ್ಕಗಳನ್ನೆಲ್ಲ ಟ್ರಿಮ್ ಮಾಡಿಸಿಕೊಳ್ಳಲು ತಲೆ ತಗ್ಗಿಸಿಕೊಂಡು ಕೂತಿತ್ತು. ಪ್ರಾಸ ಸರಿಹೊಂದುತ್ತಿಲ್ಲ ಎಂದು ಒಂದಿಷ್ಟು ಶಬ್ದಗಳು ಅರ್ಥ ಕಳೆದುಕೊಂಡವು. ಹಾಡುವವರ ಮಿತಿಗಳನ್ನ ಅರ್ಥ ಮಾಡಿಕೊಂಡು ಕವಿತೆ, ತನ್ನ ಆವೇಶವನ್ನು ತಾನೇ ಸ್ವಲ್ಪ ಕಡಿಮೆ...

read more
ಹೀಗೊಂದು ಹರಿ ’ಕಥೆ’

ತಿಲಕ್ ಸೋಮಯಾಜಿ ಪಲ್ಲವಿ: "ಉಡಿಯಲ್ಲಿ ಉಡಿಗೆಜ್ಜೆ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ವೈಜಯಂತಿ ಮಾಲೆ ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಮೈಯೆಲ್ಲಾ ಘಮ ಘಮ ಕೃಷ್ಣ ನೀ ಬೇಗನೇ ಬಾರೋ ಬೇಗನೇ ಬಾರೋ ಮುಖವನ್ನು ತೋರೋ.." ಅವಳ ಹೆಸರು ಮೀರಾ. ಚಿಕ್ಕಂದಿನಿಂದಲೂ ಆಕೆಗೆ ಕೃಷ್ಣನ ಮೇಲೆ ಅದೇನೋ ಮೋಹ. ಹೆಣ್ಣು ಮಗು...

read more
ಡೈಲಿ ಬುಕ್ : ಆನಂದ ಭೋವಿಯವರ ’ಹಿಡಿ ಮಣ್ಣಿನ ಬೊಗಸೆ’

ಸಂಯಮಶೀಲ ಮನಸ್ಸಿನ ಸ್ಪಂದನಶೀಲ ಕತೆಗಳು ’ಅವಧಿ’ ಓದುಗರಿಗೆ ಪರಿಚಿತರಾಗಿರುವ ಆನಂದ ಭೋವಿಯವರ ಕಥಾಸಂಕಲನ ಬಿಡುಗಡೆ ಆಗುತ್ತಿದೆ ಪುಸ್ತಕದ ಮುಖಪುಟ ಮತ್ತು ಸುನಂದಾ ಕಡಮೆಯವರು ಬರೆದ ಮುನ್ನುಡಿ ’ಅವಧಿ’ ಓದುಗರಿಗಾಗಿ ಆನಂದ ಭೋವಿ ಎಂಬ ಈ ಕತೆಗಾರನ ಹೆಸರು ಮಾತ್ರ ಕೇಳಿ ಗೊತ್ತಿದ್ದ ನನಗೆ ಸ್ನೇಹಿತರೂ ಸಹಲೇಖಕರೂ ಆದ ಜಯಪ್ರಕಾಶ...

read more

Pin It on Pinterest

Share This