ಹೂವೇ, ಹೂವೇ… ನಿನ್ನೀ ನಗುವಿಗೆ ಕಾರಣವೇನೆ…?

ಎಂ ಬಿ ನದಾಫ

ಈ ನಿಸರ್ಗದ ಮದ್ಯ ಯಾವುದು ಎಷ್ಟು ಸುಂಧರವಾದ ಸೌಂದರ್ಯವೆಂದು ಈ ಪ್ರಕೃತಿಯ ಸೌಂದರ್ಯವನ್ನು ಹೊಗಳಲು ಹೊರಟರೆ ಕವಿಯಾಗಬಲ್ಲೆ ಎಂಬ ಅಧ್ಬುತದ ಅನುಭವ ನಮ್ಮಲ್ಲಿ ಹುಟ್ಟಿಸುತ್ತದೆ. ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊಂಡ ಪ್ರಕೃತಿ ಪ್ರೀಯರಿಗೂ ಆ ಕ್ಷಣವು ಮನಸಿಗೆ ಅದೇಷ್ಟೋ ಯಾರು ಕೊಡದ ಉಚಿತ ಸಂತಸದ ಸೌಬಗುವನ್ನ್ನೆ ಹರಿಸಬಲ್ಲಬಹುದೆಂಬ ಸಾಕ್ಷಿಗೆ ಕನ್ನಡಿಯಂತಿರುವ ತನುಮನವೇ ಸಾಕ್ಷಿ ಬಿಡಿ…
ಇನ್ನು ಸದಾ ಸಾಹಿತ್ಯದ ಸಾಗರದಲ್ಲಿ ಕವನಗಳ ಸುರಿಮಳೆ ಸುರಿಸುವ ಕವನರಸಿಕರು ಹೆಣ್ಣಿನ ಸೌಂಧರ್ಯವನ್ನು ವರ್ಣಿಸಿದಂತೆ ಹೇಚ್ಚಾಗಿ ಪುಷ್ಪ ಪರಪಂಚದ ಸೌಬಗಿಗೆ ತನುಮನ ಸೋತಿರುವ ಕವಿ ಈ ತಾವರೆಗಳ ನಸು ನಗುವಿನ ಕಾರಣವನ್ನು ಕಂಡು ಹೀಡಿಯಲು ಹೋಗಿ ಸಾಗರದಷ್ಟೇ ಹುಟ್ಟಿಸುತ್ತಿರುವ ಕವನಗಳೇ ಸಾಕ್ಷಿಯೇನೋ? ಅನ್ಸುತ್ತೆ !

ಪ್ರಕೃತಿಯ ಪರಪಂಚದಲ್ಲಿ ತಾನೇ ಸೌಂಧರ್ಯವತಿ ಎಂದು ಮೆರೆದಾಡುವ ಹೂಗಳ ರಾಣಿ ಗುಲಾಬಿ, ಮೋಹಕ ಮಲ್ಲಿಗೆ, ಕಾಕಾಡಾ ಮಲ್ಲಿಗೆ, ವಂಸತ ಮಲ್ಲಿಗೆ, ಜಾಜಿ ಮಲ್ಲಿಗೆ, ದಂಡು ಮಲ್ಲಿಗೆ, ಉಡುಪಿ ಮಲ್ಲಿಗೆ, ಸೊಬಗಿನ ಸೇವಂತಿ ಚಂದದ ದುಂಡಾದ ರಾಣಿ ಚಂಡು ಹೂ, ಕಣ್ಣಮನಸ್ಸು ತಣಿಸುವ ಕನಕಾಂಬರ, ಸುಂಧರ ಸುಗಂದರಾಜ, ಹಾಗೆಯೇ ಪುರಾಣಿಕ ಪುರಾಣದಲ್ಲಿ ಸೇರಿರುವ ಪಾರಿಜಾತೆ ಪುಷ್ಪೆಯ ಬಗ್ಗೆ ಹೇಳಿದರೆ ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ತನ್ನ ಮಡದಿಗೆಂದು ಪಾರಿಜಾತ ಪುಷ್ಪದ ಗಿಡವನ್ನು ಸ್ವರ್ಗದಿಂದ ಭೋಮಿಗೆ ತಂದು ಬೆಳಿಸಿದ್ದನ್ನು, ಮನೆಯಂಗಳದಲ್ಲಿ ಗಿಡ ನೆಟ್ಟ ಈ ಹೂಗಳನ್ನೆ ತನ್ನ ಮನದನ್ನೆಯರಿಗೆ ಹೂವನ್ನು ಮುಡಿಸುತ್ತಿದ್ದ ಈ ಕಥೆ ಒಂದಾದರೇ, ಇನೊಂದು ದುರಂತದ ಕಥೆಯಲ್ಲಿ ಪಾರಿಜಾತಿಕಾ ಎಂಬ ರಾಜ ಕುಮಾರಿಯು ಸೊರ್ಯನನ್ನು ತುಂಬಾ ಪ್ರೀತಿಸಿ ಅವನ ಒಲುವು ಪಡೆಯಲೂ ನೀರಸಳಾಗಿ ಕೋನೆಗೆ ಆತ್ಮಹತ್ಯ ಮಾಡಿಕೊಂಡಳಂತೆ ಬಳಿಕ ಅವಳ ಶರೀರ ಸುಟ್ಟ ಬೂದಿಯಲ್ಲೇ ಹುಟ್ಟಿಕೊಂಡಳಂತೆ ಈ ಪಾರಿಜಾತ ಹೂವಿನಗಿಡ.
ಹೀಗೆ ಈ ಸೌಂದರ್ಯರಾಣಿಯರು ತಮ್ಮ ಸುಗಂಧದ ಪರಿಮಳವನ್ನು ಪಸರಿಸಿ ಇಡೀ ವಾತವರುಣವನ್ನೆ ಚೈತನ್ಯೆಗೊಳಿಸಿ ತಮ್ಮಗಿರುವ ಗಾಡ್ ಗಿಪ್ಟ್ ಬಣ್ಣ ಬಣ್ಣದ ವರ್ಣಗಳಿಂದ ನೋಡುಗರನ್ನು ತನ್ನಡೆಗೆ ಆಕರ್ಷಿಸುವ ಈ ತಾರೆಯರನ್ನು ಈ ವಿಶಾಲವಾದ ಪ್ರಕೃತಿ ದೇವತೆಯು ನಮ್ಮಗೆ ನೀಡಿರುವ ಅಮೋಲ್ಯ ಹಾಗೂ ಅಧ್ಬುತವೇ ಸರಿ. ಹೀಗೆಯೇ ಜಡೆಗೆ ಹೆಣಿದ ಮೂತಿಯಂತೆಯೇ ಅರಳಿಕೊಂಡು ಮಲೆನಾಡಿನ ಆ ಸುಂದರಿ ಸೀತಾಳೆ ಹೂವಿನ ಸೌಂದರ್ಯವು ಕಣ್ಣುಗಳಿಗೆ ಅದೆಂಥ ಸಂತಸದ ಮೋಡಿ ಎಂದರೆ ಅನುಭವಿಸಿದವರಿಗೆ ಕೇಳಿ ತಿಳಿದಿಕೊಳ್ಳುವುದಕ್ಕಿಂತ ನಾವೇ ನೋಡಿ ಅನುಭವಿಸಬೇಕು! ಅಂದಾಗ ಮಾತ್ರ ಬಿಲ್ಕುಲ್ ಚನ್ನ…
ಅಂತೆಯೇ ರಂಗಿನ ದಾಸವಳ ಹೂ, ರಾಜ್ಯದಲ್ಲಿ ಅಧಿಕವಾಗಿ ವಾಣಿಜ್ಯ ಹೂವಾದ ಗ್ಲ್ಯಾಡಿಮೋಲಸ್ ಪುಷ್ಪ, ಬಣ್ಣ ಬಣ್ಣದ ವೈವಿಧ್ಯರಾಣಿ ಅಂದದ ಆ್ಯಸ್ಟರ್ ಹೂ, ವಿದೇಶೀ ಸುಂದರಿ ಜರ್ಬರಾ, ಬಹುವರ್ಷಗಳ ನಲ್ಲೆ ಗೋಲ್ಡನ್ರಾಡ್, ಆದ್ದೂರಿ ಅಲಂಕಾರಿಕ್ಕೆ ಹೂವೇ ಡೈಜ ಹೂ, ಕಾಶಿ ಕಣಗಿಲೆ ಹೂ(ಸ್ಮಶಾನ ಮಲ್ಲಿಗೆ), ಹೀಗೇಲ್ಲ ನಾಮಪದ ಇರುವ ಹೂಗಿಡಗಳ ಸೌಂದರ್ಯದ ಪರಿಮಳಕ್ಕೆ ಮಾರು ಹೂಗದವರೇ ಕಡಿಮೆ.ಹೇಚ್ಚಾಗಿ ತಾವರೆಗಳನ್ನು ಮಹಿಳೆಯರಿಗೆ ಹೋಲಿಸಿರುವ ನಾವು ಹೆಣ್ಣಿನ ಅಂದಕ್ಕೆ ಯಾಕೇ ಸೀರೆ ಚಂದ? ಹಾಗೂ ಈ ಹೂ ತಾವರೆಗಳ ನಸು ನಗುವಿಗೆ ಕಾರಣ ಹೇಳಲು ಪ್ರಯತ್ನಿಸಿದರೆ ಅದ್ಧುತವಾದ ಕವನವನ್ನೆ ಹುಟ್ಟಿಸವುದು ಸಹಜ ಕೆಲಸಯೆಂದರೂ ತಪ್ಪಾದದು!
ಆದೆರೆ ಪ್ರಕೃತಿಯ ತಾವರೆಗಳ ಸೌಂಧರ್ಯ, ಮಹಿಳೆಯರ ಅಂದಚಂದ ಈ ಮೂವರು ಪ್ರಶ್ನೆಗಳಿಗೆ ಹಾಡಿ ಹೋಗಳಿ ಬರೆದು ಗಿಜೀದ ಕವಿಗೆ ಕೇಳಿದರೆ ಈ ನೀಸರ್ಗದಲ್ಲಿ ಈ ಹೆಣ್ಣು, ಹೂ, ಪ್ರಕೃತಿ ಸೌಂಧರ್ಯವು ಜಗತ್ತಿನ ಅದ್ಭುತ ಅಂತ ಜವಾಬು ಸಿಕ್ಕರೆ ಸರಿಸಾರಿಟಿಯೇ ಅಲ್ಲವೇ ಆದರೂ ತಾವರೆಗಳ ನಸುನಗುವಿಗೆ ಕಾರಣ ಸಿಗುವವರಿಗೂ ವಣರ್ಿಸುವ ಸೌಬಗು ಸೌಂದರ್ಯಕ್ಕೆ ಆ ಮಳೆರಾಯ ಸುರಿಸುವ ಮಳೆ, ಬೆಳಗಿನ ಸೂರ್ಯ, ಚಂದ್ರನ ನೆನಪು, ಮುಂಜಾನೆಯ ಇಬ್ಬನಿ ಇಷ್ಟೇಲ್ಲ ಕಾರಣ ಕೋಟ್ಟರೂ ಕೊನೆಗೂ ನಿನಗೆ ನನ್ನ ಪ್ರಶ್ನೆ ಹೂವೇ… ಹೂವೇ… ಹೂವೇ… ಹೂವೇ…ನಗುವಿಗೆ ಕಾರಣ ಹೇಳೆ…?

‍ಲೇಖಕರು G

April 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. sangamitra diggi

    ಚನ್ನಾಗಿದೆ ಮೈನೂ….ಹೂವಿನಂತೆ ನೀನು ನಗುತ್ತಾ ಇರು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: