KUWJ ನಲ್ಲಿ ಡಾ ಸಿ ಎನ್ ಮಂಜುನಾಥ್

ಕೋವಿಡ್ ಸಂದರ್ಭದಲ್ಲಿ, ಸುದ್ದಿ ಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಸಿಬ್ಬಂದಿಗಳು ತೀವ್ರ ಸಂಕಷ್ಟದಲ್ಲಿ ಸಮಸ್ಯೆ ವಿರುದ್ಧ ವೃತ್ತಿ ಬದ್ಧತೆಯಿಂದ ಈಜುತ್ತಿದ್ದಾರೆ.

ಈ ದುರಿತ ಕಾಲದಲ್ಲಿ ಒತ್ತಡದಲ್ಲಿರುವ ಪತ್ರಕರ್ತರು, ಸುದ್ದಿ ಧಾವಂತಕ್ಕೆ ಬಿದ್ದು ಪ್ರಾಣ ತೆತ್ತ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಇಂಥದ್ದೆ ಸಂಕಷ್ಟವನ್ನು ಮಾಧ್ಯಮ ಕ್ಷೇತ್ರ ಎದುರಿಸಿತ್ತು. ಈಗ ಇನ್ನಷ್ಟು ಭಯಾನಕ ಸನ್ನಿವೇಶಗಳಿಗೆ ಸುದ್ದಿ ಮನೆ ಸಾಕ್ಷಿಯಾಗುತ್ತಿದೆ.

ಇಂತಹ ಹೊತ್ತಿನಲ್ಲಿ ನಾವು ಕನಿಷ್ಠ ಮುಂಜಾಗ್ರತೆ ವಹಿಸುವುದು, ಮುಂದೆ ಬಂದೊದಗಬಹುದಾದ ಸನ್ನಿವೇಶವನ್ನು ಧೈರ್ಯದಿಂದ ನಿಭಾಯಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಸುದ್ದಿ ಮನೆಯಲ್ಲಿ ಪತ್ರಕರ್ತರು ಮತ್ತು ಸಿಬ್ಬಂದಿಗಳು, ಅವರ ಕುಟುಂಬದ ಕ್ಷೇಮ ಕೂಡ ಬಹುಮುಖ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಪುಟ್ಟ ಹೆಜ್ಜೆ ಇಟ್ಟಿದೆ.

ನಾಡಿನ ಹೆಸರಾಂತ ವೈದ್ಯ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರೊಂದಿಗೆ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೆಚ್ಚರಿಕೆ ವಿಷಯ ಬಗ್ಗೆ ವೆಬಿನಾರ್ ಸಂವಾದ ಏರ್ಪಡಿಸಿದೆ. ಅಲ್ಲಿ ನಮ್ಮ ಆತಂಕಗಳಿಗೆ ಒಂದಿಷ್ಟು ಉತ್ತರ ಸಿಗಬಹುದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಬನ್ನಿ, ನೀವೂ ಪಾಲ್ಗೊಳ್ಳಿ.

‍ಲೇಖಕರು Avadhi

April 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: