EVM= ಈ ವಿಚಿತ್ರ ಮೌನ!

“ನಮ್ಮನ್ನು ನಂಬಿ ಪ್ಲೀಸ್” ಎಂದು ಜಿಲ್ಲಾಡಳಿತಗಳ ಮೂಲಕ ಇಲೆಕ್ಟ್ರಾನಿಕ್ ಮತದಾನಯಂತ್ರಗಳು ಗೋಗರೆಯುತ್ತಿವೆ. ಜೊತೆಗೆ ನಂಬದಿದ್ದರೆ ಜಾಗ್ರತೆ ಎಂಬ ಚುನಾವಣಾ ಆಯೋಗದ ಎಚ್ಚರಿಕೆಯಮಾತುಗಳೂ ಇವೆ. ಇವಿಎಂ ಗಳ ಬಗ್ಗೆ ತಪ್ಪು ಮಾಹಿತಿ/ಸುಳ್ಳು ಹೇಳುವವರನ್ನು ಸೆರೆಮನೆಗೆ ತಳ್ಳಲಾಗುವುದು ಎಂಬ ಬೆದರಿಕೆಯೂ ಇದೆ. ಕರ್ನಾಟಕವೀಗ ಚುನಾವಣೆಯ ಹೊಸ್ತಿಲಿನಲ್ಲಿದೆ. ಇಂತಹದೊಂದುಸ್ಥಿತಿಯಲ್ಲಿ ಸಾರ್ವಜನಿಕರ ಪರವಾಗಿ ನಿಂತು ಇವಿಎಂಗಳ ಬಗ್ಗೆ ಇರುವ ಅಪನಂಬಿಕೆಗಳನ್ನು ಒಂದೋ ಹೋಗಲಾಡಿಸುವ ಅಥವಾ ಸಾಬೀತು ಪಡಿಸುವ ಜವಾಬ್ದಾರಿ ಹೊರಬೇಕಿದ್ದ ನಮ್ಮ ಮಾಧ್ಯಮಗಳು ವಿಚಿತ್ರಮೌನಕ್ಕೆ ಶರಣಾಗಿರುವುದು ಬಿರುಗಾಳಿಯ ಮೊದಲಿನ ರೌದ್ರ ಪ್ರಶಾಂತ ವಾತಾವರಣದಂತೆ ತೋರತೊಡಗಿದೆ.

ಪ್ರಾತ್ಯಕ್ಷಿಕೆ ಯಂತ್ರಗಳ ಮೂಲಕ, ಪವರ್ ಪಾಯಿಂಟ್ ಗಳ ಮೂಲಕ ಸರ್ಕಾರವು ಮತದಾನ ಯಂತ್ರಗಳು ಸರ್ವ ಸುರಕ್ಷಿತ ಎಂದು ಹೇಳುತ್ತಿರುವಂತೆಯೇ ಇನ್ನೊಂದೆಡೆ ತೆಳ್ಳಗೆ ಅಲ್ಲಲ್ಲಿ ಯಂತ್ರಗಳು ನೂರಕ್ಕೆನೂರು ಸರಿಯಾಗಿಲ್ಲ ಎಂಬುದಕ್ಕೆ ಉದಾಹರಣೆಗಳೂ ಸಿಗುತ್ತಿವೆ. ಉದಾ:

1. ಮೊನ್ನೆ ಮಾರ್ಚ್ ನಲ್ಲಿ ಮಧ್ಯಪ್ರದೇಶದ ಭೀಂಡ್ ಉಪಚುನಾವಣೆಯ ಮುನ್ನ ಪ್ರಾತ್ಯಕ್ಷಿಕೆಗೆಂದು ಬಳಸಲಾಗಿದ್ದ ಇವಿಎಂನಲ್ಲಿ VVPATನ ಎಲ್ಲ ಮತಗಳೂ ಕಮಲ ಗುರುತಿಗೆ ಬೀಳುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರಕಾರ ಅಲ್ಲಿನ ಜಿಲ್ಲಾಧಿಕಾರಿ ಸಹಿತ 19 ಅಧಿಕಾರಿಗಳನ್ನು ಅಮಾನತು ಮಾಡಿತ್ತು.

2. ಕಳೆದ ಎಪ್ರಿಲ್ ನಲ್ಲಿ ದಿಲ್ಲಿ ಮಹಾನಗರಪಾಲಿಕೆ ಚುನಾವಣೆಯ ವೇಳೆ 250ಕ್ಕೂ ಹೆಚ್ಚು ಇವಿಎಂಗಳಲ್ಲಿ ಸಮಸ್ಯೆ ಇರುವುದು ವರದಿ ಆಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು.

3. ಮಾರ್ಚ್ ತಿಂಗಳಲ್ಲಿ ನಾಗಾಲಾಂಡ್ ವಿಧಾನಸಭಾ ಚುನಾವಣೆಗಳ ವೇಲೆ ಹಲವು ಇವಿಎಂಗಳು ದೋಷಪೂರಿತವಾಗಿರುವುದಕ್ಕೆ ಕಾರಣ ಕೇಳಿದಾಗ (ದಿ ಹಿಂದೂ ಪತ್ರಿಕೆಗೆ ಸಂದರ್ಶನದಲ್ಲಿ) ಕಳಪೆ ರಸ್ತೆಗಳಲ್ಲಿ ಸಾಗಿದ್ದರಿಂದ ಇವಿಎಂಗಳ ಇಲೆಕ್ಟ್ರಾನಿಕ್ ಭಾಗಗಳಲ್ಲಿ ದೋಷ ಉಂಟಾಗಿರಬಹುದೆಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಹೇಳಿಕೆ ನೀಡಿದ್ದರು.

4. ಮೊನ್ನೆ ಮಾರ್ಚ್ ನಲ್ಲಿ ಬಿಹಾರ ಉಪಚುನಾವಣೆಯ ವೇಳೆ ಬಾಬುವಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 137ಇವಿಎಂಗಳು ದೋಷಪೂರಿತವಾಗಿದ್ದವೆಂದು ಆಪಾದಿಸಿದ್ದರೆ, ಅಲ್ಲಿನ ಕೈಮೂರ್ ಜಿಲ್ಲಾಧಿಕಾರಿಗಳು ದೂಷಪೂರಿತ ಇವಿಎಂಗಳ ಸಂಖ್ಯೆ 25 ಮಾತ್ರ ಎಂದಿದ್ದರು.

5. ಮೊನ್ನೆ ಮಾರ್ಚ್ ಕೊನೆಯ ವಾರದಲ್ಲಿ ರಾಜ್ಯದ ರಾಯಚೂರಿನಲ್ಲಿ ಇವಿಎಂ ಪ್ರಾತ್ಯಕ್ಷಿಕೆಯ ವೇಳೆ ಅದು ದೋಷಪೂರಿತವಾಗಿದ್ದದ್ದು ಪತ್ತೆ ಆದಾಗ ಅದನ್ನು ಬದಲಾಯಿಸುವುದಾಗಿ ಅಲ್ಲಿನ ಜಿಲ್ಲಾಧಿಕಾರಿ ಡಾ| ಗೌತಮ್ ಬಗದಿ ಮತ್ತು ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿಕೆ ನೀಡಿದ್ದರು.

ತೀರಾ ಇತ್ತೀಚೆಗಿನವೇ ಆದ ಈ ಎಲ್ಲ ಉದಾಹರಣೆಗಳೂ (ಇವು ತಕ್ಷಣಕ್ಕೆ ಸಿಕ್ಕಿದ ಕೆಲವೆ ಕೆಲವು!) ಹೇಳುವುದು ಇಲೆಕ್ಟ್ರಾನಿಕ್ ಮತಯಂತ್ರಗಳು 100% ಸಮರ್ಪಕ ಆಗಿರಬೇಕಾಗಿಲ್ಲ ಎಂದೇ. ಪರಿಸ್ಥಿತಿ ಹೀಗಿರುವಂತೆಯೇ ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳ ಮೂಲಕ ಮತಯಂತ್ರ ಮತ್ತು ವಿವಿಪಾಟ್ ಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಲು ಅಭಿಯಾನ ಕೂಡ ನಡೆದಿದೆ.

ಇಂತಹದೊಂದು ಪರಿಸ್ಥಿತಿಯಲ್ಲಿ ಚುನಾವಣೆಯಲ್ಲಿ ಮತಯಂತ್ರಗಳ ಬಳಕೆಯ ಬಗ್ಗೆ ವಿಶ್ವಾಸ ಎಷ್ಟರ ಮಟ್ಟಿಗೆ ಹುಟ್ಟಬಹುದು? ಒಂದಿಷ್ಟು ಸಂಭಾವ್ಯತೆಗಳನ್ನು ಗಮನಿಸೋಣ:

೧.  ಸಾಮಾನ್ಯವಾಗಿ ಒಂದು ಮತಯಂತ್ರದಲ್ಲಿ ಹೆಚ್ಚೆಂದರೆ 3840 ಮತಗಳನ್ನು ತುಂಬಿಸಬಹುದಂತೆ. ಆದರೆ, ಒಂದು ಮತಗಟ್ಟೆಯಲ್ಲಿ ಹೆಚ್ಚೆಂದರೆ 1500 ಮತಗಳಿರುವುದು. ವಿಧಾನಸಭಾ ಚುನಾವಣೆಗಳಲ್ಲಿನೂರಕ್ಕೆ 70 ಫಲಿತಾಂಶಗಳು ನಿರ್ಧಾರ ಆಗುವುದು 5000ಮತಗಳ ಒಳಗೆ. ಹಾಗಾಗಿ, ರಾಂಡಂ ಆಗಿ ಒಂದಿಷ್ಟು ಮತಯಂತ್ರಗಳನ್ನು ತಪಾಸಣೆ ನಡೆಸಿದರೆ ಸಾಕೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾಕೆಂದರೆಕ್ಷೇತ್ರವೊಂದರ ಹತ್ತೇ ಹತ್ತು ಬೂತುಗಳ ಮತಯಂತ್ರ ಸಾಚಾ ಇಲ್ಲದಿದ್ದರೂ ಫಲಿತಾಂಶ ಏರುಪೇರಾಗಲು ಸಾಧ್ಯವಿದೆ.

ಚುನಾವಣಾ ಆಯೋಗ ಮಾತ್ರ ಇದು ಸಾಧ್ಯವಿಲ್ಲ ಎನ್ನುತ್ತದೆ. ಈ ಯಂತ್ರದ ಮೈಕ್ರೋಚಿಪ್ ಆಮದಾಗಿ ಬಂದುದಾಗಿದ್ದು, ಅದನ್ನು ಒಮ್ಮೆಮಾತ್ರ ಪ್ರೋಗ್ರಾಂ ಮಾಡಬಹುದಾಗಿದೆ ಮತ್ತು ಅದು ಸೀಲ್ಆಗಿರುವುದರಿಂದ ಅದನ್ನು ಭೇದಿಸುವುದು ಅಸಾಧ್ಯ, ಯಾವುದೇ ಬಾಹ್ಯ ಪರಿಕರಗಳಿಂದ ಅದನ್ನು ನಿಯಂತ್ರಿಸಲಾಗುವುದಿಲ್ಲ ಎಂದು  ಚುನಾವಣಾ ಆಯೋಗ ಹೇಳುತ್ತದೆ.

೨. ಮತದಾನದ ವೇಳೆ ಏನಾದರೂ ಏರುಪೇರು ಕಂಡುಬಂದಲ್ಲಿ, ಮತದಾರ ಆ ಬಗ್ಗೆ ದೂರು ನೀಡುವುದಕ್ಕೂ ಹಿಂಜರಿಯಬೇಕಾದ ಸ್ಥಿತಿ ಇದೆ. ಏಕೆಂದರೆ, ಮುಂದಿನ ತಪಾಸಣಾ ಮತ ಸರಿಯಾಗಿ ಬಿದ್ದರೆ, ದೂರುದಾರ ಜೈಲುಪಾಲಾಗಬೇಕಾಗುತ್ತದೆ. ಇದೊಂದು ರೀತಿಯ ಭಯೋತ್ಪಾದನೆಯೇ. ಮತಯಂತ್ರ ಟ್ಯಾಂಪರಿಂಗ್ ಸಾಧ್ಯವಿರುವುದಾದರೆ, ಬೆನ್ನು ಬೆನ್ನಿಗೆ ಮತಗಳು ಟ್ಯಾಂಪರ್ ಆಗಿರಬೇಕೆಂದೇನೂ ಇಲ್ಲ ಅಲ್ಲವೇ?!

ಚುನಾವಣಾ ಆಯೋಗದ ಪ್ರಕಾರ ಮತದಾನ ಖಾತ್ರಿ ವೇಳೆ ಮತದಾರ ಸುಳ್ಳು ಹೇಳಿದರೆ 6ತಿಂಗಳಿನಿಂದ 1 ವರ್ಷ ಜೈಲು ಶಿಕ್ಷೆ ಮತ್ತು ₹ 5 ಸಾವಿರ ದಂಡ ವಿಧಿಸಲು ಅವಕಾಶ ಇದೆ. “ಮತದಾರ ಮೊದಲ ಅಭ್ಯರ್ಥಿಗೆ ಮತ ಹಾಕಿರುತ್ತಾನೆ. ಖಾತ್ರಿ ವೇಳೆ ಅದು ಎರಡನೇ ಅಭ್ಯರ್ಥಿಗೆ ಹೋಯಿತು ಎಂದು ವಾದಿಸುತ್ತಾನೆ. ಈ ಬಗ್ಗೆ ಆತ ‘49 ಎಂಎ’ ಘೋಷಣಾ ಪತ್ರದಡಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಮತ್ತು ಬೂತ್ ಏಜೆಂಟರ ಸಮ್ಮುಖದಲ್ಲಿ ಮತ್ತೆ ಆತನಿಂದ ಮತ ಹಾಕಿಸುತ್ತೇವೆ. ಅದನ್ನು ವಿಡಿಯೊ ಮಾಡುತ್ತೇವೆ. ಒಂದು ವೇಳೆ ಮತದಾರ ಹೇಳಿದ್ದು ಸುಳ್ಳು ಎಂದು ಸಾಬೀತಾದರೆ ಪೊಲೀಸರ ವಶಕ್ಕೆ ಒಪ್ಪಿಸುತ್ತೇವೆ. ಆತ ಈ ಹಿಂದೆ ಚಲಾಯಿಸಿದ ಮತವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ”ಎಂದು ಚುನಾವಣಾಧಿಕಾರಿಗಳು ಮತ್ತು ತರಬೇತಿದಾರರು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

೩. ಕಳೆದ ಜೂನ್ ತಿಂಗಳಲ್ಲಿ ಚುನಾವಣಾ ಆಯೋಗವು ಮತಯಂತ್ರಗಳನ್ನು ಸಾಧ್ಯವಿದ್ದರೆ ಟ್ಯಾಂಪರ್ ಮಾಡಿ ತೋರಿಸಿ ಎಂದು “ಹ್ಯಾಕತಾನ್” ಒಂದನ್ನು ಆಯೋಜಿಸಿತ್ತು. ಆದರೆ, ಅಲ್ಲಿ ಹೇರಲಾಗಿದ್ದ ಮಿತಿಗಳ ಕಾರಣದಿಂದಾಗಿ  ಏಕೆ ಹ್ಯಾಕಿಂಗ್ ಯಶಸ್ವಿ ಆಗಲಾರದು ಎಂದು AAP ಪಕ್ಷದ ಐಟಿ ವಿಭಾಗದ ಮುಖ್ಯಸ್ಥ  ಅಂಕಿತ್ ಲಾಲ್ ಬರೆದಿದ್ದ ಲೇಖನಕ್ಕೆ ಲಿಂಕ್ ಇಲ್ಲಿದೆ:https://www.huffingtonpost.in/ ankit-lal/dear-election- commission-here-s-why-your- evm-hackathon-is-a-j_a_ 22108571/

೪. 2010ರಲ್ಲಿ ಹೈದರಾಬಾದ್ ಮೂಲದ ಖಾಸಗಿ ಇಂಜಿನಿಯರ್ ಗಳ ತಂಡವೊಂದು ಸಂಶೋಧನೆ-ತನಿಖೆಗಿಳಿದು ಇವಿಎಂ ಗಳು ಸುರಕ್ಷಿತ ಅಲ್ಲ ಎಂಬ ಬಗ್ಗೆ ಸವಿವರವಾದ ವರದಿಯೊಂದನ್ನು ನೀಡಿದೆ. ಆ ವರದಿ ಇಲ್ಲಿದೆ: https://indiaevm.org/evm_ tr2010.pdf

ಅವರು ಇವಿಎಂನ ಸೋರ್ಸ್ ಕೋಡ್ ಮುಟ್ಟದೇ ಇವಿಎಂನಲ್ಲಿ ಟ್ಯಾಂಪರಿಂಗ್ ಸಾಧ್ಯ ಇದೆ ಎಂದು ಸಾಧಿಸುತ್ತಾ, “We implemented two demonstration attacks to illustrate and experimentally confirm the security problems with Indian EVMs. These demonstrations show that attacks against the EVMs are practical and that they can circumvent safeguards such as candidate order randomization. We built these attacks without access to the machines’ source code and with only limited access to the EVMs during the design and testing process. Nonetheless, they are fully functional on the real EVMs. A criminal who employed methods like these could alter vote totals in real elections or undermine ballot secrecy to determine how each voter voted.”ಎನ್ನುತ್ತಾರೆ.

೫. ಚುನಾವಣೆಯಲ್ಲಿ ಇವಿಎಂ ಬಳಕೆ ಬಹಳ ಸುರಕ್ಶ್ಇತ ಮತ್ತು ಅದನ್ನು ಟ್ಯಾಂಪರ್ ಮಾಡಲು ಸಾಧ್ಯವೇ ಇಲ್ಲ ಎನ್ನುವ ಚುನಾವಣಾ ಆಯೋಗದ ವಾದ ಇಲ್ಲಿದೆ: http://eci.nic.in/eci_main1/ current/presentation_evm_ 20052017.pdf

ಮಾಧ್ಯಮಗಳ ಬಾಯೊಳಗೆ ಅವಲಕ್ಕಿ

ಇಷ್ಟೆಲ್ಲ ಗೊಂದಲಗಳಿರುವಾಗ, ಮಾಧ್ಯಮಗಳು ಮುಗಂ ಆಗಿ ತಾವು ಯಾರದ್ದೋ ಮುಲಾಜಿಗೆ ಬಿದ್ದವರಂತೆ ಕೇವಲ ಸರ್ಕಾರದ-ಅಧಿಕಾರಿಗಳ ಪತ್ರಿಕಾಹೇಳಿಕೆಗಳನ್ನು ಮಾತ್ರ ಪ್ರಕಟಿಸಿ ಏನೂ ಆಗಿಲ್ಲ ಎಂಬಂತೆ ಮೌನವಾಗಿ ಕುಳಿತಿರುವುದು ಅಚ್ಚರಿ ಹುಟ್ಟಿಸುತ್ತದೆ. ಸ್ವತಂತ್ರವಾಗಿ ಕೆಲಸ ಮಾಡುವ ಬುದ್ಧಿಯುಳ್ಳ ಯಾರಿಗೇ ಆದರೂ ಇವಿಎಂಗಳ ಬಗ್ಗೆ ವಿಶ್ವಾಸ ಹುಟ್ಟಿಸುವಂತಹ ಅಥವಾ ಅದು ಸರಿಯಾಗಿಲ್ಲ ಎಂದು ಸಾಬೀತುಪಡಿಸುವಂತಹ ವರದಿಯೊಂದರ ತಯಾರಿಗಾಗಿ ಸುದ್ದಿಯ ಬೆನ್ನುಹತ್ತುವುದು ಸಹಜ ಹಾದಿಯಾಗಬೇಕಿತ್ತು.

ಆದರೆ ನಾಡಿನ ಎಲ್ಲ ಪತ್ರಿಕೆಗಳೂ ಬಾಯೊಳಗೆ ಅವಲಕ್ಕಿ ತುಂಬಿಸಿಕೊಂಡವರಂತೆ ಬರಿಯ ಸರ್ಕಾರಿ ಪ್ರಚಾರದ ಪ್ರೆಸ್ ಹ್ಯಾಂಡೌಟ್ ಗಳನ್ನು ಪ್ರಕಟಿಸಿ ಕೈತೊಳೆದುಕೊಳ್ಳುತ್ತಿರುವುದು ಆಶ್ಚರ್ಯದ ಜೊತೆ ಅನುಮಾನಗಳನ್ನೂ ಹುಟ್ಟಿಸುತ್ತಿದೆ.

ಚುನಾವಣೆಯ ಹೊತ್ತಿಗೆ ಇದು ಸುದ್ದಿ ಆಗುವುದಿಲ್ಲ ಎಂದಾದರೆ ಯಾವುದು ಸುದ್ದಿ?!!!!

‍ಲೇಖಕರು avadhi

April 9, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ರವಿಕಾಂತ

    ಮಾಧ್ಯಮಗಳು‌ ಏನೂ ಆಗಿಲ್ಲಸಂತೆ ಸುಮ್ಮನೆ ಕುಳಿತಿವೆ. ನೀವು evmಗಳನ್ನು ಖುದ್ದು ಹ್ಯಾಕ್ ಮಾಡಿದ್ದನ್ನು ನೋಡಿದಂತೆ ಬಡಬಡಿಸುತ್ತೀರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: