ತೇಜಸ್ವಿ ಕಥನ ಲೇಖನಗಳು

ತೇಜಸ್ವಿ ಕಥನ: ತೇಜಸ್ವಿ ಮದುವೆ..

ತೇಜಸ್ವಿ ಕಥನ: ತೇಜಸ್ವಿ ಮದುವೆ..

ತೇಜಸ್ವಿ ಕಥನ ೭ ಪ್ರಸಾದ್ ರಕ್ಷಿದಿ ಹೀಗೆ ಕರಿಯಪ್ಪ ಗೌಡರ ನೆನಪಿನ ಪಾಕಶಾಲೆಯಿಂದ ಒಂದೊಂದೇ ಐಟಮ್ಮುಗಳು ಹೊರಬರುತ್ತಿದ್ದವು. ಮತ್ತೆ ಕರಿಯಪ್ಪ ಗೌಡ್ರೆ ತೇಜಸ್ವಿಯವರ ಮದ್ವೆಲೂ ನೀವೆ ಬಿರಿಯಾನಿ ಮಾಡಿದ್ರಂತೆ ನಾನು ಕೆಣಕಿದೆ. ಮದುವೇಲಲ್ಲ,.. ಅದೆಂತ ಮದುವೆ ‘ಮಂತ್ರ ಮಾಂಗಲ್ಯ’ ಅದು, ಗಂಡು ಹೆಣ್ಣು ಇಬ್ಬುರ್ನೂ ಎದುರಿಗೆ ನಿಲ್ಲಿಸಿಕೊಳ್ಳೋದು, ಅದೆಂತದೋ ಪುಸ್ತ್ಕ ತಗ್ದು ಅವರಪ್ಪ ಇಂಗ್ರೇಜಿ ಪಾದ್ರಿ ಹಂಗೆ ಓದೋದು. ಆಮೇಲೆ ಇಬ್ರಿಗೂ ಆಶೀರ್ವಾದ ಮಾಡೋದು. ಅಲ್ಲಿಗಾಯ್ತು… ಅದೇ ಒಂದು ಮದುವೆ. ಎಂದು ತೇಜಸ್ವಿಯವರ ಮದುವೆಯನ್ನು ಒಂದು ಕೆಲಸ […]

ಮತ್ತಷ್ಟು ಓದಿ
ತೇಜಸ್ವಿ c/o ಮುಳ್ಳಯ್ಯ

ತೇಜಸ್ವಿ c/o ಮುಳ್ಳಯ್ಯ

ಪ್ರಸಾದ್ ರಕ್ಷಿದಿ ಎಂ.ಬಿ.ಮುಳ್ಳಯ್ಯನವರು ರೈತ ಚಳುವಳಿಯ ಕಾಲದಿಂದಲೂ ನಮ್ಮೊಡನಿರುವ ಮಾವಿನಹಳ್ಳಿಯ ಅತಿ ಸಣ್ಣ ರೈತ. ಇವರು-ರೈತ ಚಳುವಳಿಯಲ್ಲಿ ಗಾಢವಾಗಿ ತೊಡಗಿಕೊಂಡವರಲ್ಲದೆ. ಅನೇಕ ಹೋರಾಟಗಳಲ್ಲಿ ನಮಗೆ ನಾಯಕತ್ವ ನೀಡಿದವರು. ಅದರೊಂದಿಗೆ ಅತ್ಯಂತ ನ್ಯಾಯ ನಿಷ್ಟುರಿಯಾಗಿರುವರು. ಯಾವುದೇ ಜಗಳ ತೀರ್ಮಾನಗಳಿರಲಿ-ಆಸ್ತಿ ವಿವಾದಗಳಿರಲಿ-ಗಂಡ ಹೆಂಡತಿ ಜಗಳವಿರಲಿ ಅತ್ಯಂತ ಪ್ರಗತಿಪರ ಚಿಂತನೆಯಿಂದ ಯಾವುದೇ ಮೂಢನಂಬಿಕೆಗಳ ಬಲ ಪಡೆಯದೆ-ಸಮಸ್ಯೆಗಳನ್ನು ಬಗೆಹರಿಸಬಲ್ಲರು. ಇವರು ಯಾವುದೇ ತೀರ್ಮಾನಕ್ಕೆ ದೇವರು-ಹರಕೆಗಳಿಗಿಂತ ಆತ್ಮಸಾಕ್ಷಿಗೇ ಒತ್ತು ನೀಡಿದವರು. ಈಗಲೂ ಕೂಡಾ ನಮ್ಮ ಸುತ್ತಲಿನ ಊರುಗಳಲ್ಲಿ ಯಾವುದೇ ಸಮಸ್ಯೆ ಬಂದಾಗ ಈ ಸಮಸ್ಯೆಯ […]

ಮತ್ತಷ್ಟು ಓದಿ
ಇನ್ನಷ್ಟು ತೇಜಸ್ವಿ: ಹೀಗಿತ್ತು ತೇಜಸ್ವಿ ಬರಹ ಧ್ವನಿ

ಇನ್ನಷ್ಟು ತೇಜಸ್ವಿ: ಹೀಗಿತ್ತು ತೇಜಸ್ವಿ ಬರಹ ಧ್ವನಿ

  ಡಾ ಬಿ.ಆರ್. ಸತ್ಯನಾರಾಯಣ ಮಹಿಳಾ ಪರವಾದ ದ್ವನಿ ಬೆಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣದ ಸಂವಾದದಲ್ಲಿ ಪ್ರೊ. ರಾಮದಾಸ್ ಅವರಿಗೆ ಮಹಿಳೆಯೊಬ್ಬರು ತೇಜಸ್ವಿಯವರ ಮಹಿಳಾ ಪರವಾದ ನಿಲುವುಗಳೇನು? ಎಂಬ ಪ್ರಶ್ನೆ ಕೇಳಿದ್ದರು. ರಾಮ್ದಾಸ್ ಅವರು ತೇಜಸ್ವಿಯವರ ಸಾಹಿತ್ಯವನ್ನು ಯಾವುದೇ ಇಸಂಗಳಿಂದಲೂ ಗುರುತಿಸುವುದು ಕಷ್ಟ. ಅವರ ಬರದಿದ್ದೆಲ್ಲವೂ ಒಂದು ರೀತಿಯಲ್ಲಿ ಅವರ ಆತ್ಮ ಕಥನವೇ. ಅದು ಪರಿಸರ ಸಾಹಿತ್ಯ, ಅನುವಾದ ಯಾವುದಾದರೂ ಅದು ತೇಜಸ್ವಿಯವರ ಅನುಭವದಿಂದಲೇ ಮೂಡಿ ಬಂದದ್ದಾಗಿರುತ್ತದೆ. ಅವರ ಒಟ್ಟು ಸಾಹಿತ್ಯದಲ್ಲಿ ಮಹಿಳಾಪರವಾದ ದ್ವನಿ ಗಟ್ಟಿಯಾಗಿಯೇ ಇದೆ. ಆದರೆ […]

ಮತ್ತಷ್ಟು ಓದಿ
ಇನ್ನಷ್ಟು ತೇಜಸ್ವಿ: ಅಂತರ್ಗಾಮಿ ಸೆಕ್ಯುಲರ್ ಪರಂಪರೆ

ಇನ್ನಷ್ಟು ತೇಜಸ್ವಿ: ಅಂತರ್ಗಾಮಿ ಸೆಕ್ಯುಲರ್ ಪರಂಪರೆ

ಇನ್ನಷ್ಟು ತೇಜಸ್ವಿ 5 ಡಾ ಬಿ.ಆರ್. ಸತ್ಯನಾರಾಯಣ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಚಾರಿತ್ರಿಕವಾಗಿ ಪರಿಶೀಲನೆ ಮಾಡಿದಾಗ ಹಿಂದೂ ಧರ್ಮವನ್ನು ತಿರಸ್ಕರಿಸುವ ಮತ್ತು ವಿರೋಧಿಸುವ ಪ್ರವೃತ್ತಿಯೊಂದು ಪ್ರತಿ ಕನ್ನಡ ಸಾಹಿತ್ಯ ಕ್ರಾಂತಿಯಲ್ಲಿಯೂ ಅಂತರ್ಯಾಮನಿಯಾಗಿ ಕಾಣಿಸಿಕೊಳ್ಳುತ್ತಿರುವುದನ್ನು, ಒಂದು ಸೆಕ್ಯುಲರ್ ಪರಂಪರೆ ಪುರೋಹಿತಶಾಹಿಗೆ ಎದುರಾಗಿ ಕೆಲಸ ಮಾಡುತ್ತಾ ಬರುತ್ತಿರುವುದನ್ನು ಮೊದಲು ಗಮನಿಸಿದ ಚಿಂತಕ ತೇಜಸ್ವಿ. ಅದಕ್ಕೆ ಅವರು ಉದಾಹರಣೆಯಾಗಿ ಕೊಟ್ಟಿದ್ದು, ಮಾಸ್ತಿ ಬೇಂದ್ರೆ ಪುತಿನ ಮೊದಲಾದವರು ಕಟ್ಟಾ ಭಾರತೀಯ ಸಂಪ್ರದಾಯಸ್ಥರು ಬರೆಯುತ್ತಿದ್ದಾಗಲೇ, ಕುವೆಂಪು ಅವರಂತೆಯೆ ಶ್ರೀರಂಗ, ಕಾರಂತ ಕೈಲಾಸಂ ಮುಂತಾದ ಲೇಖಕರೂ […]

ಮತ್ತಷ್ಟು ಓದಿ
ಇನ್ನಷ್ಟು ತೇಜಸ್ವಿ: ಜಾತೀಯತೆನ್ನು ಪ್ರತಿನಿಧಿಸುತ್ತಿರುವ ಮಠಗಳು

ಇನ್ನಷ್ಟು ತೇಜಸ್ವಿ: ಜಾತೀಯತೆನ್ನು ಪ್ರತಿನಿಧಿಸುತ್ತಿರುವ ಮಠಗಳು

ಇನ್ನಷ್ಟು ತೇಜಸ್ವಿ 4   ಡಾ ಬಿ.ಆರ್. ಸತ್ಯನಾರಾಯಣ ಜಾತಿ ಎಂಬುದೇ ಸ್ಥಾಯಿ ನಮ್ಮ ತೋಟದ ಪಕ್ಕದಲ್ಲಿ ಮೂಡನಹಳ್ಳಿ ಎಂಬ ಗ್ರಾಮವಿದೆ. ಊರಿನಲ್ಲಿ ಹೆಚ್ಚಾಗಿರುವವರು ಒಕ್ಕಲಿಗರು ಮತ್ತು ಕುಂಬಾರರು. ಇನ್ನುಳಿದ ಕೆಲವರು ಉಪ್ಪಾರರು, ಮರಾಠಿಗಳು, ಬಡಗಿಗಳು. ಎಲ್ಲಾ ಸೇರಿ ನೂರು ಮನೆಗಳಿರಬಹುದು ಅಷ್ಟೆ. ನಾನು ಬಾಲ್ಯದಿಂದಲೂ ಗಮನಿಸುತ್ತಿದ್ದೇನೆ. ಈ ಊರಿನಲ್ಲಿ ಎರಡು ಪಾರ್ಟಿಗಳಿವೆ. ಕುಂಬಾರರದೊಂದು ಮತ್ತು ಒಕ್ಕಲಿಗರದೊಂದು. ದಿನ ಬೆಳಗೆದ್ದರೆ ಒಂದೇ ಹೊಲದಲ್ಲಿ ಒಟ್ಟಾಗಿ ದುಡಿಯುವ ಈ ಜನ ಜಾತಿಯ ವಿಷಯ ಬಂದಾಗ ಪರಸ್ಪರ ದ್ವೇಷಿಸುತ್ತಾರೆ. ಪಾರ್ಟನರ್ಶಿಪ್ಪಿನಲ್ಲಿ ಟೆಂಪೋ […]

ಮತ್ತಷ್ಟು ಓದಿ
ಇನ್ನಷ್ಟು ತೇಜಸ್ವಿ: ಕುಬಿಯದೊಂದು ದುರಂತ ಕಥೆ

ಇನ್ನಷ್ಟು ತೇಜಸ್ವಿ: ಕುಬಿಯದೊಂದು ದುರಂತ ಕಥೆ

ಇನ್ನಷ್ಟು ತೇಜಸ್ವಿ 3 ಡಾ ಬಿ.ಆರ್. ಸತ್ಯನಾರಾಯಣ ವ್ಯಕ್ತಿಪೂಜೆಯ ಪ್ರಬಲ ವಿರೋಧಿ ನಮ್ಮ ನಿಮ್ಮಂತೆಯೇ ಉಸಿರಾಡಿಕೊಂಡು ಅನ್ನ ನೀರು ಸೇವಿಸುತ್ತಾ, ನಮ್ಮಂತೆಯೇ ಮಲಮೂತ್ರಗಳನ್ನು ವಿಸರ್ಜಿಸುತ್ತಿರುವ ಅಥವಾ ಹಾಗೆ ಇದ್ದ ಒಬ್ಬ ಸಹಜೀವಿಯನ್ನು ದೈವತ್ವಕ್ಕೇರಿಸಿ ಕಲ್ಪಿಸಿಕೊಳ್ಳುವುದು ತೇಜಸ್ವಿಗೆ ಆಗಿಬರದ ವಿಚಾರ. ಸ್ವತಃ ತಮ್ಮ ತಂದೆಯವರನ್ನು ಕೆಲವರು ದೈವತ್ವಕ್ಕೇರಿಸಿದ್ದನ್ನು ಅವರು ನೋಡಿ ವಿರೋಧಿಸಿದ್ದಾರೆ, ನಕ್ಕು ಸುಮ್ಮನಾಗಿದ್ದಾರೆ. ಒಂದು ಹಂತದಲ್ಲಿ ತಮಗೆ ಮಾದರಿಯೆನಿಸಿದ್ದ ಕಾರಂತರನ್ನೂ ಅವರು ಒಬ್ಬ ಕ್ರಿಯಾಶೀಲ ವ್ಯಕ್ತಿಯಾಗಿ ಕಂಡಿದ್ದಾರೆಯೇ ಹೊರತು ದೇವರಂತಲ್ಲ. ಆದ್ದರಿಂದಲೇ ಕುವೆಂಪು ಕಾರಂತರಿಬ್ಬರ ಜೊತೆಯಲ್ಲೂ ತೇಜಸ್ವಿಗೆ ವಿಚಾರಬೇಧಗಳಿದ್ದವು. […]

ಮತ್ತಷ್ಟು ಓದಿ
ಇನ್ನಷ್ಟು ತೇಜಸ್ವಿ: ಅವರ ಬದುಕೇ ಒಂದು ವೈಚಾರಿಕ ಕೃತಿ

ಇನ್ನಷ್ಟು ತೇಜಸ್ವಿ: ಅವರ ಬದುಕೇ ಒಂದು ವೈಚಾರಿಕ ಕೃತಿ

ಇನ್ನಷ್ಟು ತೇಜಸ್ವಿ 2 ಬಿ.ಆರ್. ಸತ್ಯನಾರಾಯಣ ಸಹಜಾಭಿವ್ಯಕ್ತಿ ತಮ್ಮ ವೈಚಾರಿಕ ನಿಲುವುಗಳನ್ನು, ಆದರ್ಶಗಳನ್ನು ಅಭಿವ್ಯಕ್ತಿಗೊಳಿಸಲೋಸುಗವೇ ಯಾವುದೇ ಪಾತ್ರವನ್ನು ತಮ್ಮ ಸಾಹಿತ್ಯದಲ್ಲಿ ತೇಜಸ್ವಿ ಸೃಷ್ಟಿಸಿದವರಲ್ಲ. ಕಥಾಸಂವಿಧಾನ, ಸನ್ನಿವೇಶ ಪಾತ್ರದ ಔಚಿತ್ಯಗಳ ಚೌಕಟ್ಟಿನಲ್ಲಿಯೇ ಅಭಿವ್ಯಕ್ತಿಗೊಂಡಿರುತ್ತವೆ. ಯಾವ ಪಾತ್ರವನ್ನೂ ಉದ್ದೇಶಪೂರ್ವಕವಾಗಿ ಕ್ರಾಂತಿಕಾರಿಯನ್ನಾಗಿ ಅವರು ಸೃಷ್ಟಿಸಿಲ್ಲ. ಯಾವ ಪಾತ್ರವೂ ಕ್ರಾಂತಿಕಾರಿಯಂತೆ ಭಾಷಣ ಬಿಗಿಯುವುದಿಲ್ಲ. ಹಾಗೆ ನೋಡಿದರೆ ಏನಾದರೂ ಆಗಲಿ ಕ್ರಾಂತಿ ಆಗಬೆಕು ಎನ್ನುವ ಚಿದಂಬರ ರಹಸ್ಯದ ಪಡ್ಡೆಗಳು, ಜುಗಾರಿ ಕ್ರಾಸ್ನ ಗಂಗೂಲಿ ಇವರಂಥ ಪಾತ್ರಗಳು ಯಾವ ಕ್ರಾಂತಿಯನ್ನೂ ಮಾಡದೆ ಹೋಗುತ್ತವೆ. ತಮ್ಮ ಸಹಜ […]

ಮತ್ತಷ್ಟು ಓದಿ
ಇನ್ನಷ್ಟು ತೇಜಸ್ವಿ: ಗುಜರಾತಿ ಮಹಿಳೆ ಓದಿದ ತೇಜಸ್ವಿ ಕೃತಿಗಳು

ಇನ್ನಷ್ಟು ತೇಜಸ್ವಿ: ಗುಜರಾತಿ ಮಹಿಳೆ ಓದಿದ ತೇಜಸ್ವಿ ಕೃತಿಗಳು

ಇನ್ನಷ್ಟು ತೇಜಸ್ವಿ1 ಡಾ ಬಿ.ಆರ್. ಸತ್ಯನಾರಾಯಣ ತೇಜಸ್ವಿಯವರ ಸಾಹಿತ್ಯವನ್ನು ಕುರಿತು ಚಿಂತಿಸುವಾಗಲೆಲ್ಲಾ, ಎರಡು ಪ್ರಮುಖ ಅಂಶಗಳು ನನ್ನನ್ನು ಕಾಡುತ್ತವೆ. ಮೊದಲನೆಯದು ತೇಜಸ್ವಿ ಸಾಹಿತ್ಯಕ್ಕೆ ಹೆಚ್ಚಿನ ವಿವರಣೆ, ವಿಮರ್ಶೆಯ ಅಗತ್ಯವೇ ಇಲ್ಲದಿರುವಾಗ, ಅಂದರೆ ನೇರವಾಗಿಯೇ ಓದುಗನ ಗ್ರಹಿಕೆಗೆ ದಕ್ಕುವಷ್ಟು ಸರಳವಾದ ಸಾಹಿತ್ಯ ಶೈಲಿ ತೇಜಸ್ವಿಯವರದಾಗಿರುವಾಗ, ನಮ್ಮ ವಿವರಣೆ ವಿಮರ್ಶೆಗಳು ಎಲ್ಲಿ ಓದುಗ ಮತ್ತು ತೇಜಸ್ವಿಯವರ ನಡುವೆ ಫಿಲ್ಟರ್ ಆಗಿಬಿಡುತ್ತವೆಯೋ ಎಂಬ ಭಾವ. ಎರಡನೆಯದು ತೇಜಸ್ವಿಯವರ ಮಾತಿನಲ್ಲೇ ಹೇಳುವುದಾದರೆ, ಇಂದು ನಾವು ಪರಿಸರಕ್ಕೆ ಸಹಾಯ ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಮಾಡುತ್ತಿರುವ ಕೃತ್ಯಗಳೆಲ್ಲಾ […]

ಮತ್ತಷ್ಟು ಓದಿ
ಇಲ್ಲೀಗೆ ಈ ಕಥನ ಸಂಪೂರ್ಣವಯ್ಯಾ..

ಇಲ್ಲೀಗೆ ಈ ಕಥನ ಸಂಪೂರ್ಣವಯ್ಯಾ..

ಜಿ ಎನ್ ಮೋಹನ್ ಪ್ರಸಾದ್ ರಕ್ಷಿದಿ ನನ್ನ ಗೆಳೆಯರು. ಅವರ ಪರಿಚಯವಾದಾಗ ಅವರು ಬೆಳ್ಳೇಕೆರೆಯಲ್ಲಿ ನಡೆಸಿದ ರಂಗ ಕ್ರಾಂತಿಯ ಪರಿಚಯ ಖಂಡಿತಾ ನನಗಿರಲಿಲ್ಲ. ಹಾಗೆ ಅವರನ್ನು ಯಾರೂ ಗುರುತು ಮಾಡಿಕೊಡಲಿಲ್ಲ. ರಕ್ಷಿದಿ ತನ್ನ ಬಣ್ಣಿಸುವವರಲ್ಲ. ಹಾಗಾಗಿ ಅದು ನನಗೆ ಗೊತ್ತೇ ಆಗಲಿಲ್ಲ. ರಕ್ಷಿದಿ ನನಗೆ ಪರಿಚಯವಾಗಿದ್ದು ಅದೇ ಮಂಜ್ರಾಬಾದ್ ಕೋಟೆಯಲ್ಲಿ. ನಾವೊಂದಷ್ಟು ಜನ ತುಡುಗು ದಂಡು ಇದ್ದಕ್ಕಿದ್ದಂತೆ ಹುಚ್ಚು ಹತ್ತಿ ಮಂಗಳೂರಿನಿಂದ ಸಿಕ್ಕ ಸಿಕ್ಕ ಸ್ಕೂಟರ್, ಬೈಕ್ ಏರಿ ಮಂಜ್ರಾಬಾದ್ ನೋಡಿಯೇ ಬಿಡೋಣ ಅಂತ ಸಕಲೇಶಪುರದ ದಿಕ್ಕಿಗೆ […]

ಮತ್ತಷ್ಟು ಓದಿ
ತೇಜಸ್ವಿ ಕಥನ: ಏನೋ ಮಾಡೋಕ್ಕೋಗಿ ಗುಂಡೇಟು ತಿಂದು ಸಾಯ್ತಾ ಇದಾರಲ್ರಿ..

ತೇಜಸ್ವಿ ಕಥನ: ಏನೋ ಮಾಡೋಕ್ಕೋಗಿ ಗುಂಡೇಟು ತಿಂದು ಸಾಯ್ತಾ ಇದಾರಲ್ರಿ..

ಪ್ರಸಾದ್ ರಕ್ಷಿದಿ ಹಾಸನದಿಂದ ಕೆಲವರು ಗೆಳೆಯರು ನಮ್ಮೂರಿನ ಪಕ್ಕದ ‘ಮೂರುಕಣ್ಣುಗುಡ್ಡ’ದಲ್ಲಿ ಗುಡ್ಡದಲ್ಲಿ ಚಾರಣಕ್ಕೆಂದು ಬಂದಿದ್ದರು. ಅವರಲ್ಲಿ ಒಂದಿಬ್ಬರು ಸರ್ಕಾರಿ ನೌಕರರರಿದ್ದುದರಿಂದ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರಕ್ಕೆ ಹೊಂದಿಸಿಕೊಂಡು ಅವರು ಕಾರ್ಯಕ್ರಮ ಹಾಕಿಕೊಂಡಿದ್ದರು. ಚಾರಣ ಮುಗಿಸಿ ಭಾನುವಾರ ಮಧ್ಯಾಹ್ನ ನಮ್ಮೂರಿಗೆ ಬಂದರು. ಇನ್ನೂ ಅರ್ಧದಿನ ಸಮಯ ಉಳಿದಿರುವುದರಿಂದ ಮೂಡಿಗೆರೆಗೆ ಹೋಗಿ ತೇಜಸ್ವಿಯವರಲ್ಲಿ ಕೆಲವು ಪುಸ್ತಕಗಳನ್ನು ಖರೀದಿಸುವ ಯೋಜನೆ ಹಾಕಿ ಜೊತೆಯಲ್ಲಿ ಬರುವಂತೆ ನನ್ನನ್ನು ಆಹ್ವಾನಿಸಿದರು. ನನಗೂ ಅಂದು ಬೇರೇನು ಕೆಲಸವಿಲ್ಲದ್ದರಿಂದ ಅವರೊಂದಿಗೆ ಹೊರಟೆ. ಅವರಲ್ಲಿ ಒಂದಿಬ್ಬರು ರೈತಸಂಘದ […]

ಮತ್ತಷ್ಟು ಓದಿ
ತೇಜಸ್ವಿ ಕಥನ: ರಂಗದ ಮೇಲೆ ಕುವೆಂಪು

ತೇಜಸ್ವಿ ಕಥನ: ರಂಗದ ಮೇಲೆ ಕುವೆಂಪು

ಪ್ರಸಾದ್ ರಕ್ಷಿದಿ ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ಹಾಸನ ಜಿಲ್ಲಾಡಳಿತ ಉದ್ಘಾಟನಾ ಸಮಾರಂಭಕ್ಕೆಂದು ಕುವೆಂಪು ಅವರ ನಾಟಕೊವೊಂದನ್ನು ಪ್ರದರ್ಶಿಸಲು ನಮ್ಮ ರಂಗತಂಡಕ್ಕೆ ಆಹ್ವಾನ ನೀಡಿತ್ತು. ಕುವೆಂಪು ಅವರ ಸಣ್ಣ ಕಥೆ ‘ಧನ್ವಂತರಿಯಚಿಕಿತ್ಸೆ’ಯನ್ನು ರಂಗಕ್ಕೆ ಆಳವಡಿಸಿ ನಾಟಕವೊಂದನ್ನು ಸಿದ್ಧಪಡಿಸಿಕೊಂಡಿದ್ದೆವು. ನಾಟಕದಲ್ಲಿ ಕುವೆಂಪು ಅವರೇ ಒಂದು ಪಾತ್ರವಾಗಿ ಬರುವಂತೆ, ಆ ಮೂಲಕ ಕುವೆಂಪು ಅವರ ವಿಚಾರಗಳು ಮತ್ತು ಕಾಳಜಿಗಳು ಸ್ವಲ್ಪಮಟ್ಟಿಗೆ ನಾಟಕದಲ್ಲಿ ಚರ್ಚಿತವಾಗುವಂತೆ ರಂಗಪಠ್ಯವೊಂದನ್ನು ತಯಾರಿಸಲಾಗಿತ್ತು. ಆ ಸಂದರ್ಭದಲ್ಲೇ ಒಮ್ಮೆ ಮೂಡಿಗೆರೆಗೆ ಹೋದಾಗ, ತೇಜಸ್ವಿಯವರನ್ನು ಕಂಡು ನಾಟಕದ ವಿಚಾರವನ್ನೂ, ಹಾಗೇ ತಾಲೀಮಿನ […]

ಮತ್ತಷ್ಟು ಓದಿ
ತೇಜಸ್ವಿ ಕಥನ: ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿ ಸಂದರ್ಶನ ಮಾಡಿದ್ದೀಯ..

ತೇಜಸ್ವಿ ಕಥನ: ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿ ಸಂದರ್ಶನ ಮಾಡಿದ್ದೀಯ..

ಪ್ರಸಾದ್ ರಕ್ಷಿದಿ 2004 ನೇ ಇಸವಿಯ ವೇಳೆಗೆ ಮಲೆನಾಡಿನ ಕಾಫಿವಲಯ ತತ್ತರಿಸಿಹೋಗಿತ್ತು. ಒಂದುಕಡೆ ಅನೇಕ ವರ್ಷಗಳಿಂದ ಇದ್ದ ಕಾಫೀ ಬೋರ್ಡ್  ಏಕಸ್ವಾಮ್ಯದಿಂದ ಕಳಚಿಕೊಂಡು ಮುಕ್ತವಾದ ಕಾಫಿ ಉದ್ಯಮ, ಸ್ವಾತಂತ್ರ್ಯ ದೊರೆತ ಹುಮ್ಮಸ್ಸಿನಲ್ಲಿದ್ದರೆ, ಇನ್ನೊಂದು ಕಡೆ ಕಾಫಿಗೆ ದೊರೆತ-ಅದುವರೆಗೆ ಯಾರೂ ಕನಸಿನಲ್ಲೂ ಊಹಿಸದಿದ್ದಂತಹ ಹೆಚ್ಚಿನ ಬೆಲೆ ದಿಡೀರನೆ ಕುಸಿದು ನೆಲಕಚ್ಚಿತ್ತು. ಅದರೊಂದಿಗೆ ಕಳೆದೆರಡು ವರ್ಷಗಳಿಂದ ಮಳೆಯೂ ಅತ್ಯಂತ ಕಡಿಮೆಯಾಗಿ ನೀರಿನಮೂಲಗಳೆಲ್ಲ ಒಣಗಿಹೋಗಿ ಕಾಫಿತೋಟಗಳೆಲ್ಲ ನಾಶವಾಗುವ ಸ್ಥಿತಿಗೆ ಬಂದಿದ್ದವು. ಪ್ರಥಮಬಾರಿಗೆ ಕಾಫಿತೋಟಗಳ ಮಾಲಿಕರು ಮತ್ತು ಕಾರ್ಮಿಕರು ಒಟ್ಟಾಗಿ ತಮ್ಮ ಉಳಿವಿಗಾಗಿ […]

ಮತ್ತಷ್ಟು ಓದಿ
ತೇಜಸ್ವಿ ಕಥನ: ಆ ನೀನಾಸಂನವರನ್ನು ನೋಡು..

ತೇಜಸ್ವಿ ಕಥನ: ಆ ನೀನಾಸಂನವರನ್ನು ನೋಡು..

ತೇಜಸ್ವಿ ಕಥನ ೧೪ ಪ್ರಸಾದ್ ರಕ್ಷಿದಿ 2002 ನೇ ಇಸವಿಯಲ್ಲಿ ‘ಮಹಾವೀರರ 2000ವರ್ಷದ ಜನ್ಮ ಕಲ್ಯಾಣ ಮಹೋತ್ಸವ’ ವೆಂದು ಘೋಷಿಸಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಂತೆ ಮೈಸೂರಿನ ರಂಗಾಯಣ ಆ ವರ್ಷ ಅಹಿಂಸೆಯನ್ನು ಪ್ರತಿಪಾದಿಸುವ ನಾಟಕವೊಂದನ್ನು ಆರಿಸಿಕೊಂಡು ಅದನ್ನು ಎರಡು ಬೇರೆ ಬೇರೆ ತಂಡಗಳಿಂದ ಸಿದ್ದ ಪಡಿಸಿ ಅನೇಕ ಕಡೆಗಳಲ್ಲಿ ಪ್ರದರ್ಶನ ಮಾಡುವ  ಯೋಜನೆ ಮಾಡಿಕೊಂಡಿತ್ತು. ಎರಡು ಹವ್ಯಾಸಿ ತಂಡಗಳಲ್ಲಿ ಒಂದನ್ನು ಚಾಮರಾಜನಗರದಲ್ಲಿ ಅವರು ಈಗಾಗಲೇ ಆರಿಸಿದ್ದರು. ಇನ್ನೊಂದು ತಂಡ ನಮ್ಮನ್ನು ಆಯ್ಕೆಮಾಡಿದ್ದರು. ಚಿತ್ರ: […]

ಮತ್ತಷ್ಟು ಓದಿ
ತೇಜಸ್ವಿ ಕಥನ: ‘ತೇಜಸ್ವಿ ನಂ ನೆಂಟ್ರು ಗೊತ್ತಾ’..

ತೇಜಸ್ವಿ ಕಥನ: ‘ತೇಜಸ್ವಿ ನಂ ನೆಂಟ್ರು ಗೊತ್ತಾ’..

ತೇಜಸ್ವಿ ಕಥನ ೧೩ ಪ್ರಸಾದ್ ರಕ್ಷಿದಿ ಅನುಮಾನಂ ಪೆದ್ದರೋಗಂ.. ಸುಮ್ನೆ ಬಾರಯ್ಯ ಎಂದು ಹೋಟೆಲ್ ಬಿಲ್ಲನ್ನು ಅವನೇ ಪಾವತಿಸಿ, ನನ್ನನ್ನು ಕಾಫಿಯ ಋಣದಲ್ಲಿ ಸಿಲುಕಿಸಿ ಮತ್ತೆ ಬೈಕನ್ನೇರಿದ, ಅನಿವಾರ್ಯವಾಗಿ ಅವನೊಡನೆ ಹೊರಟೆ. ಬೈಕು ‘ನಿರುತ್ತರ’ ದತ್ತ ಸಾಗಿತು. ನಾವು ಹೋದಾಗ ತೇಜಸ್ವಿ ಮನೆಯಲ್ಲೇ ಇದ್ದರು. ಮನೆಯವರೆಲ್ಲ ಮೈಸೂರಿಗೆ ಹೋಗಿದ್ದಾರೆಂದು, ಸಧ್ಯಕ್ಕೆ ತಾನೊಬ್ಬನೇ ಇದ್ದೇನೆಂದು ತಿಳಿಸಿದರು. ಊಟಕ್ಕೆ ಏನು ಮಾಡ್ತೀರಿ? ಎಂದದಕ್ಕೆ. ಅನ್ನವನ್ನು ಮಾಡಿಕೊಳ್ಳುತ್ತೇನೆಂದೂ, ಒಂದು ವಾರಕ್ಕಾಗುವಷ್ಟು ಸಾರನ್ನು ರಾಜೇಶ್ವರಿ ಮಾಡಿಟ್ಟು ಹೋಗಿದ್ದಾರೆಂದೂ ಹೇಳಿ ಅದಕ್ಕೆ ದಿನಾ ಒಂದಿಷ್ಟು […]

ಮತ್ತಷ್ಟು ಓದಿ
ತೇಜಸ್ವಿ ಕಥನ: ತೇಜಸ್ವಿ ಬಗ್ಗೆಯೇ ಕಥೆ

ತೇಜಸ್ವಿ ಕಥನ: ತೇಜಸ್ವಿ ಬಗ್ಗೆಯೇ ಕಥೆ

ಪ್ರಸಾದ್ ರಕ್ಷಿದಿ 97ನೇ ಇಸವಿಯ ಸುಮಾರಿಗೆ ಒಂದುದಿನ ಚಿಕ್ಕಮಗಳೂರಿಗೆ ಹೋದವನು ಹಿಂದಿರುಗುವಾಗ ಮೂಡಿಗೆರೆಯಲ್ಲಿ ಇಳಿದೆ. ಸಕಲೇಶಪುರದತ್ತ ಹೋಗುವ ಬಸ್ಸಿಗಾಗಿ, ಬಸ್ಟ್ಯಾಂಡಿನಲ್ಲಿ ಕಾಯುತ್ತ ಕುಳಿತಿದ್ದೆ, ನಾರಾಯಣಗೌಡ ನನ್ನಮುಂದೆ ತನ್ನ ಬೈಕನ್ನು ತಂದು ನಿಲ್ಲಿಸಿದ. ಈತ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ. ನಂತರ ಕೆಲವು ವರ್ಷ ದೂರಾಗಿದ್ದೆವಾದರೂ ರೈತಸಂಘ ಮತ್ತೆ ನಮ್ಮನ್ನು ಹತ್ತಿರ ತಂದಿತ್ತು.  ಗೆಳೆತನ ಮತ್ತೊಮ್ಮೆ ಮುಂದುವರಿಯಿತು. ನಾರಾಯಣಗೌಡ ಮೂಡಿಗೆರೆಯ ಪಕ್ಕದ ಬಣಕಲ್ ಎಂಬ ಊರಿನವನು. ಅಲ್ಲೇ ಅವನಿಗೆ ಒಂದಷ್ಟು ಗದ್ದೆ -ತೋಟವೂ ಇದೆ. ಸಾಕಷ್ಟು ಅನುಕೂಲವಿದ್ದವನು. ಎಪ್ಪತ್ತರ ದಶಕದ […]

ಮತ್ತಷ್ಟು ಓದಿ
ತೇಜಸ್ವಿ ಕಥನ: ಕಂಡಿದ್ದೀನಿ ಕಣ್ರಿ ಇಷ್ಟೊಂದು ಕಷ್ಟಪಟ್ಕೊಂಡ್ ಕೆಲಸಮಾಡ್ತಾ ಇದ್ದೀರಿ ಇಟ್ಕೊಳ್ರಿ..

ತೇಜಸ್ವಿ ಕಥನ: ಕಂಡಿದ್ದೀನಿ ಕಣ್ರಿ ಇಷ್ಟೊಂದು ಕಷ್ಟಪಟ್ಕೊಂಡ್ ಕೆಲಸಮಾಡ್ತಾ ಇದ್ದೀರಿ ಇಟ್ಕೊಳ್ರಿ..

ತೇಜಸ್ವಿ ಕಥನ-೧೦ ಪ್ರಸಾದ್ ರಕ್ಷಿದಿ ನಾವು ಪ್ರಥಮ ಬಾರಿಗೆ ಅವರನ್ನು ನಮ್ಮ ರಂಗತರಬೇತಿ ಶಿಬಿರಕ್ಕೆ ತೇಜಸ್ವಿಯವರನ್ನು ಅತಿಥಿಯಾಗಿ ಆಹ್ವಾನಿಸಲು ಹೋಗುವಾಗ, ಅವರಲ್ಲಿ ಮಾತನಾಡುವುದು ಹೇಗೆಂದು ಹೆದರಿಕೊಂಡಿದ್ದೆವು. ತೇಜಸ್ವಿಯೆಂದರೆ ತುಂಬಾ ಹಾಸ್ಯಪ್ರಜ್ಞೆಯಿರುವ ಮನುಷ್ಯ, ಜೊತೆಯಲ್ಲಿ ದೂರ್ವಾಸಮುನಿ ಕೂಡಾ, ಇನ್ನು ಕೆಲವು ಬಾರಿ ಏನೂ ಪ್ರತಿಕ್ರಿಯೆ ನೀಡದೇ ತಣ್ಣಗೆ ನಿರಾಕರಿಸಿಬಿಡುತ್ತಾರೆ, ಅವರು ಒಮ್ಮೆ ಏನನ್ನಾದರೂ ನಿರ್ಧರಿಸಿದ ಮೇಲೆ ಮತ್ತೆ ಅವರ ತೀರ್ಮಾನವನ್ನು ಬದಲಾಯಿಸಲು ಒಪ್ಪುವವರೇ ಅಲ್ಲ. ಹೀಗೆ ಬೇರೆ ಬೇರೆ ರೀತಿಯಲ್ಲಿ ಅವರ ಗುಣ ದೋಷಗಳ ಮಾಹಿತಿಗಳು- ಹಿಂಡಿನಿಂದ ತಪ್ಪಿಸಿಕೊಂಡುಬಂದು […]

ಮತ್ತಷ್ಟು ಓದಿ
ತೇಜಸ್ವಿ ಕಥನ: ಆ ಗುಜರಿ

ತೇಜಸ್ವಿ ಕಥನ: ಆ ಗುಜರಿ

ತೇಜಸ್ವಿ ಕಥನ-೯ ಪ್ರಸಾದ್ ರಕ್ಷಿದಿ ತೊಂಬತ್ತರ ದಶಕದ ಪ್ರಾರಂಭದ ವರ್ಷಗಳಲ್ಲಿ ನಾನು ಹಾನುಬಾಳಿನಿಂದಾಚೆ ದೇವಾಲದಕೆರೆ ಎಂಬ ಊರಿನ ಬಳಿ ಕಾಫಿಎಸ್ಟೇಟೊಂದರ ಉಸ್ತುವಾರಿ ನಡೆಸುತ್ತಿದ್ದೆ, ಸಾಮಾನ್ಯವಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಅಲ್ಲಿಗೆ ಹೋಗಿಬರುತ್ತಿದ್ದೆ. ಜನ್ನಾಪುರದ ಬಳಿಯ ಖಾಸಿಂ ಸಾಬಿ ಎಂಬ ಗುಜರಿ ವ್ಯಾಪಾರಿ ಸೈಕಲ್ಲಿನಲ್ಲಿ ಆ ಕಡೆಯೆಲ್ಲ ಸುತ್ತಾಡುತ್ತ ಬರುತ್ತಿದ್ದ. ಸೈಕಲ್ಲಿನ ಕ್ಯಾರಿಯರಿನಲ್ಲಿ ಐಸ್ ಕ್ಯಾಂಡಿ ಡಬ್ಬವನ್ನಿಟ್ಟುಕೊಂಡು ಪಕ್ಕದಲ್ಲೆರಡು ಗೋಣಿಚೀಲವನ್ನು ಕಟ್ಟಿರುತ್ತಿದ್ದ. ಈತನಿಗೆ ಐಸ್ ಕ್ಯಾಂಡಿಗೆ ಹಣವನ್ನೇ ಕೊಡಬೇಕೇಂದೇನಿರಲಿಲ್ಲ ಕಬ್ಬಿಣ, ಅಲ್ಯುಮಿನಿಯಂ, ಚೂರುಪಾರುಗಳು, ಖಾಲಿ ಕ್ವಾರ್ಟರ್ ಬಾಟ್ಳಿಗಳು […]

ಮತ್ತಷ್ಟು ಓದಿ
ತೇಜಸ್ವಿ ಕಥನ: ತಬರನ ಕಥೆಯ ಕಥೆ

ತೇಜಸ್ವಿ ಕಥನ: ತಬರನ ಕಥೆಯ ಕಥೆ

ತೇಜಸ್ವಿ ಕಥನ -೮ ಪ್ರಸಾದ್ ರಕ್ಷಿದಿ ಮೂಡಿಗೆರೆಯ ಪಕ್ಕದ ಬೆಳಗೋಡಿನ ಶಾಂತಕುಮಾರ್ ಎಂಬವರೊಬ್ಬರು, ‘ತಬರನ ಕಥೆ’ ಸಿನಿಮಾ ಆದಾಗ ಅದರಲ್ಲಿ ಸಣ್ಣ ಪಾತ್ರವೊಂದನ್ನು ಮಾಡಿದ್ದರು. ಅವರೀಗ ನಮ್ಮೂರಿಗೆ ಬಂದು ರೈತರಾಗಿ ನೆಲೆಸಿದ್ದಾರೆ. ಅವರು. ತಬರನ ಕಥೆ ಸಿನಿಮಾ ಆಗುವ ಸಮಯದಲ್ಲಿ ಅವರು ಬೆಳಗೋಡಿನಲ್ಲಿಯೇ ಇದ್ದರು. ಅವರಿಗೆ ಆಗಲೇ ತೇಜಸ್ವಿಯವರ ಪರಿಚಯವೂ ಇತ್ತು. ಒಂದೆರಡು ಬಾರಿ ತೇಜಸ್ವಿಯವರ ತೋಟಕ್ಕೆ ಕೆಲಸದಾಳುಗಳನ್ನು ಒದಗಿಸಿಕೊಟ್ಟಿದ್ದರಂತೆ, ಯಾವಾಗಲೋ ಒಮ್ಮೆ ತೇಜಸ್ವಿ ಇವರಲ್ಲಿ ಯಾರಾದರೂ ತೋಟ ನೋಡಿಕೊಳ್ಳಲು ರೈಟರ್ ಇದ್ದರೆ ಕಳುಹಿಸಿಕೊಡಿ ಎಂದಿದ್ದರಂತೆ. ತಬರನ […]

ಮತ್ತಷ್ಟು ಓದಿ
ತೇಜಸ್ವಿ ಕಥನ: ಅವ್ರೇ ‘ಕುವೆಂಪು’, ಮಗನ ಮನೀಗ್ ಬಂದಿದ್ರು

ತೇಜಸ್ವಿ ಕಥನ: ಅವ್ರೇ ‘ಕುವೆಂಪು’, ಮಗನ ಮನೀಗ್ ಬಂದಿದ್ರು

ತೇಜಸ್ವಿ ಕಥನ-೬ ಪ್ರಸಾದ್ ರಕ್ಷಿದಿ ಈ ನಾಟಕೋತ್ಸವದಲ್ಲಿ ಅಡಿಗೆ ಊಟದ ಜವಾಬ್ದಾರಿ ವಹಿಸಿಕೊಂಡಿದ್ದ ಕರಿಯಪ್ಪ ಗೌಡರಿಗೆ ತೇಜಸ್ವಿಯವರೊಂದಿಗಿದ್ದ ಒಡನಾಟ ನಮೆಗೆಲ್ಲರಿಗೂ ತಿಳಿದಿದ್ದ ವಿಷಯವೇ ಆಗಿದ್ದುದರಿಂದ, ಬಿಡುವಿನವೇಳೆಯಲ್ಲಿ ಅವರನ್ನು ಮಾತಿಗೆಳೆಯುತ್ತಿದ್ದೆವು. ಅಂತಹ ಸಮಯದಲ್ಲಿ ಸಂಜೆ ಅಡಿಗೆ ಕೆಲಸವೆಲ್ಲ ಮುಗಿದ ಮೇಲೆ ಅಳಿಯ ಉಗ್ಗಪ್ಪ ತಂದುಕೊಡುತ್ತಿದ್ದ ಕ್ವಾರ್ಟರ್ ಗಂಟಲಲ್ಲಿ ಇಳಿದ ಮೇಲಂತೂ  ಕರಿಯಪ್ಪ ಗೌಡರಿಗೆ ಮಾತಿಗೆ ಲಹರಿ ಬರುತ್ತಿತ್ತು. ಚಿತ್ರ: ಹರಿಣಿ ಕಿರಗೂರಿನ ಗಯ್ಯಾಳಿಗಳು ನಾಟಕ ನೋಡಿದ ಕರಿಯಪ್ಪ ಗೌಡರು ಇದು ಕಿರುಗೂರೂ ಅಲ್ಲ ಬರಗೂರೂ ಅಲ್ಲ, ನಮ್ಮೂರು ಗಯ್ಯಾಳಿಗಳ […]

ಮತ್ತಷ್ಟು ಓದಿ
ತೇಜಸ್ವಿ ಕಥನ: ಕಿರುಗೂರಿನ ಗಯ್ಯಾಳಿಗಳ ವಿರುಧ್ಧ..

ತೇಜಸ್ವಿ ಕಥನ: ಕಿರುಗೂರಿನ ಗಯ್ಯಾಳಿಗಳ ವಿರುಧ್ಧ..

ತೇಜಸ್ವಿ ಕಥನ- ೫ ಪ್ರಸಾದ್ ರಕ್ಷಿದಿ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆಯಾಗಿತ್ತು. ಹಾನುಬಾಳು ಕ್ಷೇತ್ರದಿಂದ (ನಮ್ಮ ಬೆಳ್ಳೇಕೆರೆ ಹಾನುಬಾಳು ಹೋಬಳಿಗೆ ಸೇರಿರುವ ಗ್ರಾಮ) ಆ ಬಾರಿ, ಕಾಂಗ್ರೆಸ್ಪಕ್ಷದಲ್ಲಿದ್ದ ಅಪ್ಪಣ್ಣ ಎಂಬವರನ್ನು ಕರೆದುತಂದು ಜನತಾದಳದಿಂದ ಅಭ್ಯಥರ್ಿಯಾಗಿ ನಿಲ್ಲಿಸಿದರು. ಜನತಾದಳಕ್ಕೆ ಅನುಕೂಲವಾದ ವಾತಾವರಣ ಕಂಡುಬರುತ್ತಿದ್ದುದರಿಂದ ಆ ಪಕ್ಷದ ಕಾರ್ಯಕರ್ತರು ಎಲ್ಲಾಕಡೆ ಉತ್ಸಾಹದಿಂದ ಓಡಾಡುತ್ತಿದ್ದರು. ನಮ್ಮ ರಂಗ ತಂಡದ ಸದ್ಯರೆಲ್ಲ ಒಟ್ಟಾಗಿ ಚುನಾವಣೆಗೆ ಮುಂಚೆಯೇ ಅಪ್ಪಣ್ಣನವರಲ್ಲಿ ನೀವು ಗೆದ್ದರೆ ಈ ಬಾರಿ ನಮ್ಮಲ್ಲಿ ನಡೆಯುವ ನೀನಾಸಂ ತಿರುಗಾಟದ ನಾಟಕಗಳಿಗೆ ನೀವು […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: