‘ಅವಧಿ’ ಬೆಸ್ಟ್ ಬ್ಲಾಗ್ ಲೇಖನಗಳು

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಕ್ಷಿತಿಜಾನಿಸಿಕೆ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಕ್ಷಿತಿಜಾನಿಸಿಕೆ

ಇವತ್ತಿನ ಆಯ್ಕೆ: ಕ್ಷಿತಿಜಾನಿಸಿಕೆ  ಅರುಣ್ ಒಬ್ಬ ಮೇಷ್ಟ್ರು. ಅರುಣ್ ಒಬ್ಬ ಪರಿಸರಪ್ರೇಮಿ. ಅರುಣ್‌ಗೆ ಕ್ಷಿತಿಜ ಎಂದರೆ ಇಷ್ಟ. ಅರುಣನ ಬ್ಲಾಗಿನ ಹೆಸರುಗಳು: ಕ್ಷಿತಿಜದೆಡೆಗೆ, ಕ್ಷಿತಿಜಾನಿಸಿಕೆ, ಕ್ಷಿತಿಜಕವನ -ಹೀಗೆ. ಅರುಣ್ ಇನ್ನೂ ನಾಲ್ಕು ಬ್ಲಾಗು ತೆರೆದರೂ ಅವಕ್ಕೆಲ್ಲ ಕ್ಷಿತಿಜ-ವೇ ಮೊದಲರ್ಧ. ಅರುಣ್ ಒಬ್ಬ ಒಳ್ಳೆಯ ಲಲಿತ ಪ್ರಬಂಧಕಾರ. ಆದರೆ ಅರುಣ್‌ಗೆ ಕವಿತೆ ಬರೆಯುವುದು ಎಂದರೆ ಸಖತ್ ಖುಶಿ. ಹೀಗಾಗಿಯೇ ಅರುಣರ ಬ್ಲಾಗು ’ಕ್ಷಿತಿಜಾನಿಸಿಕೆ’ಯ ತುಂಬ, ತುಂಬಾ-ತುಂಬಾ ಕವಿತೆಗಳು. ಅವರ ಬ್ಲಾಗು ’ಕ್ಷಿತಿಜದೆಡೆಗೆ’ ಪರಿಸರಾಸ್ತೆಯ ಬರಹಗಳಿಂದ ಕೂಡಿದ್ದರೆ ’ಕ್ಷಿತಿಜಾನಿಸಿಕೆ’ ಮೇಷ್ಟ್ರ […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಸೋಮಾರಿ ಕಟ್ಟೆ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಸೋಮಾರಿ ಕಟ್ಟೆ

ಇವತ್ತಿನ ಆಯ್ಕೆ: ಸೋಮಾರಿ ಕಟ್ಟೆ ಸೋಮಾರಿ ಕಟ್ಟೆ ಅಂತ ಒಂದು ಬ್ಲಾಗು. ಅದರ ರೂವಾರಿ ಶಂಕರ ಪ್ರಸಾದ್ ಅಲಿಯಾಸ್ ಕಟ್ಟೆ ಶಂಕ್ರು ಅಲಿಯಾಸ್ ಸೋಮಾರಿ ಶಂಕ್ರಣ್ಣ. ಈ ಮನುಷ್ಯನ ಕೈಯಲ್ಲಿ ಯಾವಾಗಲೂ ಒಂದು ಮೊಬೈಲು. ಆ ಮೊಬೈಲಿಗೆ ಒಂದು ಕೆಮೆರಾ. ಮನೆಯಿಂದ ಆಫೀಸಿಗೆ ಹೋಗಬೇಕಾದ್ರೆ, ಆಫೀಸಿಂದ ಮನೆಗೆ ಬರ್ಬೇಕಾದ್ರೆ ಅಥ್ವಾ ಹೆಂಡತಿ ಜೊತೆ ಶಾಪಿಂಗ್‌ಗೆ ಹೋಗ್ಬೇಕಾದ್ರೆ, ಹೀಗೆ ಸದಾ ಕಾಲ ಆ ಮೊಬೈಲಿನ ಕೆಮೆರಾ ಫೋಟೋ ತೆಗೀಲಿಕ್ಕೆ ಕಾಯ್ತಾ ಇರತ್ತೆ. ರಸ್ತೆಯಲ್ಲಿ ಒಂದು ಹಳದಿ ಬಣ್ಣದ ಸೀರೆಯುಟ್ಟ […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಹಳ್ಳಿಯಿಂದ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಹಳ್ಳಿಯಿಂದ

ಇವತ್ತಿನ ಆಯ್ಕೆ: ಹಳ್ಳಿಯಿಂದ ನೇಲ್ಯಾರು ಗೋವಿಂದ ಭಟ್ ಎಂಬ ಸಾಹಸಿಯ ಬ್ಲಾಗ್ ಪರಿಚಯಿಸಬೇಕಿದೆ. ಗೋವಿಂದ ಭಟ್ಟರು ಪುತ್ತೂರಿನ ಅನಂತಾಡಿಯವರು. ಅಡಿಕೆ ಕೃಷಿಕ. ಒಂದು ಕಾಲದಲ್ಲಿ ಸೈಕಲ್ಲಿನಲ್ಲಿ ದೇಶವಿದೇಶಗಳನ್ನು ಸುತ್ತಿಬಂದವರು. ಭಾರತದಿಂದ ಹೊರಟು, ಆಫ್ರಿಕಾ, ಯುರೋಪ್, ಆಸ್ಟ್ರೇಲಿಯಾಗಳನ್ನು ಸೈಕಲ್ಲಿನಲ್ಲಿ ಸುತ್ತಿದವರು. ಜಪಾನಿಗೆ ತೆರಳಿ ಫುಕುವೋಕಾನನ್ನು ಸಂದರ್ಶಿಸಿ ವಾಪಸಾದವರು. ಕೊನೆಗೆ ಮಂಗಳೂರಿನ ಬಳಿ ಬೆಟ್ಟದಲ್ಲಿ ಗ್ಲೈಡರ್‌ನಲ್ಲಿ ಹಾರಾಟದ ಸಾಹಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ಬೆನ್ನು ಮೂಳೆ ಮುರಕೊಳ್ಳುವುದರೊಂದಿಗೆ ಇವರ ಸಾಹಸದ ಮೊದಲ ಅಧ್ಯಾಯ ಮುಗಿಯಿತು. ಆದರೆ ಇವರ ಉತ್ಸಾಹ ಬತ್ತಿತೇ? […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-  ಚಂಪಕಾವತಿ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಚಂಪಕಾವತಿ

ಚಂಪಕಾವತಿಯಲ್ಲೊಂದು ಮದ್ವೆಯಂತೆ!! ಇವತ್ತಿನ ಆಯ್ಕೆ – ಚಂಪಕಾವತಿ ಸುಧನ್ವ ದೇರಾಜೆ- ಕೆಲವರ್ಷಗಳ ಹಿಂದೆ ಬ್ಲಾಗ್ ಜ್ವರ ಹೊಸದಾಗಿ ಎಲ್ಲರನ್ನೂ ಬೆನ್ನುಹತ್ತಿದ್ದಾಗ ಈ ಯುವ ಪತ್ರಕರ್ತ ತನ್ನ ಬ್ಲಾಗನ್ನೂ ಆರಂಭಿಸಿದರು. ಕೆಲವೇ ಕಾಲದಲ್ಲಿ ’ಚಂಪಕಾವತಿ’ ತನ್ನ ಹೆಸರಿಗೆ ತಕ್ಕಂತೆ ಅಪೂರ್ವ ಸುಗಂಧವನ್ನ ಎಲ್ಲೆಡೆ ಬೀರಲಾರಂಭಿಸಿತು. ಎಲ್ಲ ಬ್ಲಾಗುಗಳ ’ಮಸ್ಟ್ ರೀಡ್’ ಲಿಸ್ಟಿನಲ್ಲಿ ಸುಧನ್ವರ ಹೆಸರು ಇದ್ದೇ ಇರುತ್ತದೆ. ಈ ಬ್ಲಾಗಿನಲ್ಲಿ ದೊರಕುವ ಲೇಖನಗಳ ಸೊಗಸೇ ಬೇರೆ. ಇಲ್ಲಿ ಯಕ್ಷಗಾನ, ಕವಿತೆ, ಸಿನೆಮಾ, ಕಮೆಂಟರಿ, ಹರಟೆ.. ಏನುಂಟು, ಏನಿಲ್ಲ? ಪ್ರತಿಯೊಂದು ವಿಷಯದ […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ನೀಲಿಗ್ಯಾನ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ನೀಲಿಗ್ಯಾನ

ಇವತ್ತಿನ ಆಯ್ಕೆ- ನೀಲಿಗ್ಯಾನ ತಮ್ಮ ಬ್ಲಾಗ್ ಅನ್ನು ‘ಬಿಕ್ಕುಗಳ ಬಣ್ಣದಂಗಡಿ’ ಎಂದು ಕರೆದುಕೊಂಡಿರುವವರು ಹುಲಿಕುಂಟೆ ಮೂರ್ತಿ. ‘ನೀಲಿಗ್ಯಾನ’ ಇವರ ಬ್ಲಾಗ್ ನ ಹೆಸರು. ಬ್ಲಾಗ್ ನಿಂದ ಆರಂಭಿಸಿ ಇದರ ಹೂರಣ, ಜ್ಞಾನ ಎಲ್ಲದರಲ್ಲೂ ಈ ಬ್ಲಾಗ್ ಭಿನ್ನವಾಗಿ ನಿಂತಿದೆ. ನೀಲಿ ಗಯಾನ ಎಂಬ ಹೆಸರಿಗೆ ತಕ್ಕಂತೆ ಬ್ಲಾಗ್ ನ ಬಣ್ಣವನ್ನೂ ನೀಲಿಯಾಗಿರಿಸಿದ್ದಾರೆ. ಇವತ್ತಿನ ಬ್ಲಾಗ್ ಲೋಕ ಹೊಮ್ಮಿಸುತ್ತಿರುವ ಏಕತಾನತೆಯ ದನಿಯ ನಡುವೆ ಹುಲಿಕುಂಟೆ ಮೂರ್ತಿ ಹಾಗೂ ಅವರಂತಹ ಗೆಳೆಯರು ಹೊಮ್ಮಿಸುತ್ತಿರುವ ನೋಟ ಸಮಾಜವನ್ನು ಒಂದು ಹೆಜ್ಜೆ ಮುಂದಕ್ಕೆ […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ನೆನಪಿನ ಸಂಚಿಯಿಂದ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ನೆನಪಿನ ಸಂಚಿಯಿಂದ

ಅವಧಿಯ ಇವತ್ತಿನ ಆಯ್ಕೆ: ನೆನಪಿನ ಸಂಚಿಯಿಂದ ಕನ್ನಡ ಬ್ಲಾಗುಲೋಕದಲ್ಲಿ ಕೆಲ ಪರ್ಮನೆಂಟ್  ಅಣ್ಣಂದಿರು, ತಮ್ಮಂದಿರು, ಅಕ್ಕಂದಿರು, ಕಾಕ, ಮಾಮರೂ ಇರುವರು. ಈ ಅಕ್ಕಂದಿರ ಕೆಟಗರಿಗೆ ಸೇರುವ ಒಬ್ಬ ಬ್ಲಾಗರ್ ಮಾಲತಿ ಶೆಣೈ. ಅನೇಕರ ಪಾಲಿಗೆ ಅವರು ಪ್ರೀತಿಯ ’ಮಾಲ್ತಕ್ಕ’. ಮೂಲತಃ ಮುಂಬಯಿಯವರಾದ ಇವರು ಮದುವೆಯಾಗಿ ಬಂದದ್ದು ತೀರ್ಥಹಳ್ಳಿಗೆ. ಕನ್ನಡ ಕಲಿತು, ಕನ್ನಡ ಸಾಹಿತ್ಯ ಓದಿ, ಇಷ್ಟದ ಲೇಖಕರಿಗೆಲ್ಲ ಪತ್ರಿಸಿ, ಪ್ರೀತಿ ತೋರುತ್ತಾರೆ. ಈಗ ತಮ್ಮ ನೆನಪಿನ ಸಂಚಿಯಲ್ಲಿ ಬ್ಲಾಗಿಸುತ್ತಿದ್ದಾರೆ.  ಹೊಸದಾಗಿ ಭಾಷೆ ಕಲಿತು ಬರೆಯುವ ಇವರ ಉತ್ಸಾಹವೇ, […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ಅತ್ರಿ ಬುಕ್ ಸೆಂಟರ್

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ಅತ್ರಿ ಬುಕ್ ಸೆಂಟರ್

ಇವತ್ತಿನ ಆಯ್ಕೆ: ಅತ್ರಿ ಬುಕ್ ಸೆಂಟರ್ ಮಂಗಳೂರಿನ ಅತ್ರಿ ಬುಕ್ ಸೆಂಟರ್‌ನ ಮಾಲೀಕರಾದ ಜಿ.ಎನ್. ಅಶೋಕವರ್ಧನರ ಈ ಬ್ಲಾಗು, ಸಮೃದ್ಧ ಅನುಭವ ಬರಹಗಳ ಬೀಡು. ಈ ಮೀಸೆಮಾಮ ಅದೆಷ್ಟು ಸುತ್ತಾಡಿದ್ದಾರೆ ಅಂದ್ರೆ, ಈ ಬ್ಲಾಗಿನ ೯೦ ಪ್ರತಿಶತ ಬರಹಗಳು ಅವರ ಪ್ರವಾಸ ಕಥನಗಳೇ ಆಗಿವೆ. ಅದು ಬಿಟ್ಟರೆ ಯಕ್ಷಗಾನ, ಪುಸ್ತಕ ಪ್ರಕಾಶನ ಮತ್ತು ಅವರ ಇನ್ನಿತರ ಅನುಭವಗಳು ಬ್ಲಾಗ್ ಮಣೆ ಏರಿವೆ. ನೀವೇನಾದರೂ ಚಾರಣದ ಹುಚ್ಚಿನವರಾದರೆ ಈ ಬ್ಲಾಗಿನ ಲಿಂಕನ್ನು ಬುಕ್‌ಮಾರ್ಕ್ ಮಾಡಿಟ್ಟುಕೊಂಡು ಓದಬೇಕು. ಬ್ಲಾಕ್-ಅಂಡ್-ವ್ಹೈಟ್ ಫೋಟೋಗಳ […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-  ಕನ್ನಡ ಜಾನಪದ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಕನ್ನಡ ಜಾನಪದ

-‘ಅವಧಿ’ಗಾಗಿ ಟೀನಾ ಶಶಿಕಾಂತ್ ಇವತ್ತಿನ ಬ್ಲಾಗ್ – ಕನ್ನಡ ಜಾನಪದ (http://kannadajaanapada.blogspot.com/) ಅರುಣ ಜೋಳದಕೂಡ್ಲಿಗಿಯ ಹೆಸರನ್ನು ಕೇಳದ ಕನ್ನಡದ ಓದುಗರು ಬಹಳಾ ಕಡಿಮೆ. ಇಂದಿನ ಯುವಪೀಳಿಗೆಯ ಲೇಖಕರ ಪೈಕಿ ಬಹಳ ಗಂಭೀರವಾಗಿ ಸಾಹಿತ್ಯಕೃಷಿಯನ್ನೂ ಸಂಶೋಧನೆಯನ್ನೂ ನಡೆಸುತ್ತಿರುವವರಲ್ಲಿ ಅರುಣ ಮುಂಚೂಣಿಯಲ್ಲಿರುವವರು. ಆಗೀಗ ಹಲವಾರು ಬ್ಲಾಗುಗಳಲ್ಲಿ, ವೆಬ್‍ತಾಣಗಳಲ್ಲಿ ಇವರ ಕವಿತೆಗಳು, ಲೇಖನಗಳು ಕಾಣಿಸಿಕೊಂಡಿದ್ದರೂ ಅರುಣ ಬಹಳ ಕಾಲದ ತನಕ ತಮ್ಮದೇ ಬ್ಲಾಗು ಯಾಕೆ ಶುರುಮಾಡಿರಲಿಲ್ಲ ಅಂದುಕೊಂಡಿದ್ದ ವಾರಿಗೆಯ ಲೇಖಕರುಂಟು. ಅದಕ್ಕೆಲ್ಲ ಉತ್ತರ ನೀಡುವಂತೆ ಅರುಣ ತಮ್ಮ ಮೆಚ್ಚಿನ ವಿಷಯವಾದ ಕನ್ನಡ […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಅನುಭವ ಮಂಟಪ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಅನುಭವ ಮಂಟಪ

ಇವತ್ತಿನ ಆಯ್ಕೆ- ಅನುಭವ ಮಂಟಪ ‘ಇವತ್ತಿನ ಬ್ಲಾಗ್‘ ಹೊಸ ಅಂಕಣ. ಈ ಅಂಕಣದಲ್ಲಿ ಒಂದು ಬ್ಲಾಗ್ ನ ಪರಿಚಯ, ಬ್ಲಾಗಿಗರ ಫೋಟೋ, ಬ್ಲಾಗ್ ಫೋಟೋ ಇರುತ್ತದೆ. ಜೊತೆಗೆ ಅವರ ಬ್ಲಾಗಿನ ಆಶಯದ ಪರಿಚಯ. ಬ್ಲಾಗ್ ರುಚಿ ಉಣಿಸಲು ಆ ಬ್ಲಾಗ್ ನಿಂದ ‘ಅವಧಿ’ ತಂಡ ಆರಿಸಿದ ಒಂದು ಬರಹ. ಇದು ಬ್ಲಾಗ್ ಲೋಕದ ಬೆಲೆ ಹೆಚ್ಚಿಸಲು ಕಾರಣವಾಗಲಿ ಎಂಬ ಆಸೆ ನಮ್ಮದು. ಅಡುಗೆ ಮಾಡುತ್ತೇನೆ, ಅರಣ್ಯ ಸುತ್ತುತ್ತೇನೆ, ಫೋಟೋ ಹೊಡೆಯುತ್ತೇನೆ, ಬ್ಲಾಗ್ ಗೆ ಬರೆಯುತ್ತೇನೆ ಹಾಗಾದರೆ ನಾನು ಯಾರು […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಬದಲಾವಣೆಯೇ ಜಗದ ನಿಯಮ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಬದಲಾವಣೆಯೇ ಜಗದ ನಿಯಮ

 ಇವತ್ತಿನ ಆಯ್ಕೆ: ಬದಲಾವಣೆಯೇ ಜಗದ ನಿಯಮ — ಅಣ್ಣನಿಗೆ ಬೆಂಬಲಿಸಿದಾಗಲೇ ’ಬದಲಾವಣೆ’ ಅಂತಾರೆ ಅವಿನಾಶ್ ಭ್ರಷ್ಟಾಚಾರದ ವಿರುದ್ದ ನಿರಶನಕ್ಕೆ ಕೂತಿರುವ ಅಣ್ಣಾ ಹಜಾರೆಯವರ ಬೆಂಬಲಕ್ಕೆ ಕನ್ನಡ ಬ್ಲಾಗುಲೋಕವೂ ಸ್ಪಂದಿಸಿದೆ. ಅಂತಹ ಬ್ಲಾಗುಗಳಲ್ಲೊಂದು ಅವಿನಾಶರ ’ಬದಲಾವಣೆಯೇ ಜಗದ ನಿಯಮ.’  ವೆಬ್ದುನಿಯಾ ತಾಣದ ಸಂಪಾದಕರೂ ಆಗಿರುವ ಅವಿನಾಶ್, ತಮ್ಮ ಬ್ಲಾಗಿನಲ್ಲಿ ಸಮಕಾಲೀನ ವಿಷಯಗಳ ಬಗ್ಗೆ ಬರೆಯುತ್ತಾರೆ.  ಕನ್ನಡದ ’ಸೀರಿಯಸ್’ ಬ್ಲಾಗುಗಳಲ್ಲಿ ಇದೂ ಒಂದು. ಸಿಕ್ಕಾಪಟ್ಟೆ ಭಾವನೆ, ಪ್ರೀತಿ, ಲಹರಿ, ತಮಾಷೆಗಳನ್ನು ಇಲ್ಲಿ ಹುಡುಕಬೇಡಿ.   ಇಸವಿ ೨೦೦೬ರಿಂದಲೂ ಸಕ್ರಿಯವಾಗಿರುವ ಈ […]

ಮತ್ತಷ್ಟು ಓದಿ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ಭೂರಮೆ

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ಭೂರಮೆ

‘ಅವಧಿ’ ಇಂದಿನಿಂದ ಬೆಸ್ಟ್ ಬ್ಲಾಗ್ ಅನ್ನು ಆಯ್ಕೆ ಮಾಡಿ ನಿಮ್ಮ ಮುಂದೆ ಮಂಡಿಸುತ್ತಿದೆ. ಇದಕ್ಕೆ ಸಾಥ್ ನೀಡಿದವರು ‘ಸುಶ್’ ಅಂತಲೇ ಹೆಸರಾದ ಸುಶ್ರುತಾ ದೊಡ್ಡೇರಿ. ಲಲಿತ ಪ್ರಬಂಧಕ್ಕೆ ‘ಕನ್ನಡಪ್ರಭ-ಅಂಕಿತ ಪುಸ್ತಕ ‘ಜಂಟಿ ಪುರಸ್ಕಾರ ಪಡೆದ ಲೇಖಕ. ಕವಿತೆಯ ಮೂಲಕ ಮೋಡಿ ಮಾಡಿ ಬಿಡಬಲ್ಲ ಹುಡುಗ. ದಿನಕ್ಕೆ ೫೦೦ಕ್ಕೂ ಹೆಚ್ಚು ಬ್ಲಾಗ್ ಗಳನ್ನು ಸುತ್ತಿ ಬರುವ ಈ ಅಲೆಮಾರಿಯೇ ಈ ಕೆಲಸಕ್ಕೆ ಸೈ ಎನ್ನುವುದು ‘ಅವಧಿ’ಯ ಅಭಿಪ್ರಾಯ. ಜೊತೆಗೆ ಈತ ಗುಣ ಪಕ್ಷಪಾತಿ. ಇವರ ಜೊತೆಗೆ ಟೀನಾ ಸಹಾ ಆಯ್ಕೆ […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: