BREAKING NEWS: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ಪಾಟೀಲ್ ಆಯ್ಕೆಯಾಗಿದ್ದಾರೆ.

ಇಂದು ಮಂಗಳೂರು ಸಮೀಪದ ಅಲಪಾಡಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ನ ವಿಶೇಷ ಸಭೆಯಲ್ಲಿ ಚಂಪಾ ಸರ್ವಾನುಮತದಿಂದ ಆಯ್ಕೆಯಾದರು.

ನವೆಂಬರ್ ೨೪ ರಿಂದ ೨೬ರವರೆಗೆ ಮೈಸೂರಿನಲ್ಲಿ ಸಮ್ಮೇಳನ ಜರುಗಲಿದೆ.

ಇದು ಅಖಿಲ ಭಾರತ 83 ನೇ ಕನ್ನಡ ಸಾಹಿತ್ಯ ಸಮ್ಮೇಳನ.

ಇಂದಿನ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ವೀಣಾ ಶಾಂತೇಶ್ವರ, ಡಾ. ಚೆನ್ನಣ್ಣ ವಾಲೀಕಾರ, ಡಾ. ಎನ್.ಆರ್. ನಾಯಕ, ಸಾರಾ ಅಬೂಬಕ್ಕರ್ ಮುಂತಾದವರ ಹೆಸರು ಪ್ರಸ್ತಾಪವಾಯಿತು.

ಕೊನೆಗೆ ಎಲ್ಲರೂ ಚಂಪಾ ಆಯ್ಕೆಯನ್ನು ಅನುಮೋದಿಸಿದರು.

 

ರವಿಕುಮಾರ್ / ಶಿವಮೊಗ್ಗ ಅವರ ಮೆಲುಕು 

ಸಿ.ಎಂ.ಆಗಿದ್ದ ಹೆಚ್.ಡಿ ಕೆ ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತನಗೆ ಸರಿಯಾಗಿ ಆಹ್ವಾನ ನೀಡಿಲ್ಲ . ನಾನು ಬರೋದಿಲ್ಲ ಎಂದು ‘ಗರಂ’ ಆಗಿದ್ದರು. ಅವರನ್ನು ‘ನರಂ’ (ಅವರದ್ದೇ ಭಾಷೆ) ಮಾಡಿ ಕರೆತಂದರು ಚಂಪಾ.

ಸಮ್ಮೇಳನಾಧ್ಯಕ್ಷರಾಗಿ ನಿಸಾರ್ ಆಹಮ್ಮದ್ ಆಯ್ಕೆಗೆ ಆಡಳಿತ ಪಕ್ಷವೇ ಅಗಿದ್ದ ಬಿಜೆಪಿ ಒಳಗೊಳಗೆ ವಿರೋಧಿಸಿತ್ತು.

ವೇದಿಕೆಯಲ್ಲಿ ಕಲ್ಕುಳಿ ವಿಠಲ ಹೆಗ್ಡೆ, ಗೌರಿ ಲಂಕೇಶ್ ಅವರ ವಿಚಾರ ಗೋಷ್ಠಿಯನ್ನು ಸಂಘಪರಿವಾರ ಬಹಿರಂಗವಾಗಿ ವಿರೋಧಿಸಿತ್ತು. ಡಿಸಿಎಂ ಯಡಿಯೂರಪ್ಪ ನಕ್ಸಲ್ ಬೆಂಬಲಿಗರಿಗೆ ಅವಕಾಶ ಬೇಡ ಎಂದು ಖುದ್ದು ಹೇಳಿದರು. ಕೋಮುವಾದಿಗಳು ಗೌರಿಲಂಕೇಶ್ ಇದ್ದ ವೇದಿಕೆ ನುಗ್ಗಿದರು. ಎಲ್ಲವನ್ನೂ ಚಂಪಾ ದಿಟ್ಟತನದಿಂದ ಎದುರಿಸಿದರು.

ಪ್ರಭುತ್ವವನ್ನು ಎದುರಿಗಿಟ್ಟುಕೊಂಡೇ ಶಿವಮೊಗ್ಗದ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ವೈಚಾರಿಕವಾಗಿ ತನ್ನ ಹರಿವನ್ನು ಭೋರ್ಗೆರೆದದ್ದು ಈಗ ಇತಿಹಾಸ.

ಕೊರಳಿಗೊಂದು ಮಪ್ಲರ್ ಸುತ್ತಿಕೊಂಡು. ಪರ್ಸವೊಂದ ಎದೆಗೆ ತಬ್ಬಿಕೊಂಡು ನಗುನಗುತ್ತಲೆ ತಣ್ಣಗೆ ಯಶಸ್ಸನ್ನು ಸಾಧಿಸಿದಾಗ ಸದ್ದಿಲ್ಲದೆ ಮಟ್ಟು- ಪಟ್ಟುಗಳನ್ನು ಹಾಕಿ ಗೆದ್ದ ಜಗಜಟ್ಟಿ ಮಲ್ಲನಂತೆ ಕಾಣುತ್ತಿದ್ದರು.

https://kn.wikipedia.org/wiki/%E0%B2%9A%E0%B2%82%E0%B2%A6%E0%B3%8D%E0%B2%B0%E0%B2%B6%E0%B3%87%E0%B2%96%E0%B2%B0_%E0%B2%AA%E0%B2%BE%E0%B2%9F%E0%B3%80%E0%B2%B2

 

https://en.wikipedia.org/wiki/Chandrashekhar_Patil

‍ಲೇಖಕರು avadhi

September 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: