ಬೆಂದ ಕಾಳು ಆನ್ ಟೋಸ್ಟ್: ಏನು ಸಂದೇಶ ಇದೆ ಇಲ್ಲಿ.. ತಿಳಿಸಿ please.

ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ, ಲೇಖಕಿ ಬಿ ಕೆ ಸುಮತಿ ಅವರು ‘ರಂಗಶಂಕರ’ದ ಇತ್ತೀಚಿನ ನಾಟಕ ‘ಬೆಂದಕಾಳು ಆನ್ ಟೋಸ್ಟ್’ ನಾಟಕವನ್ನು ನೋಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ನಾಟಕ ಅವರ ಮನದೊಳಗೆ ಮೂಡಿಸಿದ ಪ್ರಶ್ನೆಗಳು ಇಲ್ಲಿವೆ.

ಇದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನೂ ತಿಳಿಸಿ

[email protected] ಗೆ ನಿಮ್ಮ ಪ್ರತಿಕ್ರಿಯೆ ಕಳಿಸಿ

ಬಿ ಕೆ ಸುಮತಿ

ಬೇಂದ್ರೆ ಎಲ್ಲಿದ್ದರು.. ಧಾರವಾಡದಲ್ಲಿ
ಶಿವರಾಮ ಕಾರಂತರು.. ಕೋಟದಲ್ಲಿ.
ಕೆ.ವಿ.ಸುಬ್ಬಣ್ಣ ಎಂಬ ರಂಗ ಮಾಂತ್ರಿಕ..ಹೆಗ್ಗೋಡಿನಲ್ಲಿ..
ಕುವೆಂಪು ಮೈಸೂರನ್ನು ವಿಶ್ವ ಮಾಡಿದರು.
ದೇವನೂರು ದೇವರ ಊರಾಯಿತು..

ಅವರೆಲ್ಲ ಎಂದೂ ಅವರ ಊರುಗಳನ್ನು ಬಿಟ್ಟು ಬೇರೆಡೆ ಬರಲೇ ಇಲ್ಲ.

.. ಡಿ.ವಿ. ಗುಂಡಪ್ಪ, ಸರ್ ಎಂ.ವಿಶ್ವೇಶ್ವರಯ್ಯ , ಮಾಸ್ತಿ ಎಲ್ಲ ಬೆಂಗಳೂರು ಎಂಬ ಊರಿನಲ್ಲಿ ತಮ್ಮ ಪಾಡಿಗೆ ತಾವು ಇದ್ದರು.

ಯಾರೂ ಯಾರ ಊರನ್ನೂ ಎತ್ತಿ ಹಂಗಿಸಿ ಆಡಲಿಲ್ಲ. ಅವರವರ ಪರಿಸರದಲ್ಲಿ ಅವರು ಬಿತ್ತಿ ಬೆಳೆದದ್ದನ್ನು ಎಲ್ಲರಿಗೂ ಹಂಚಿದರು.

ಆದರೆ.. ನಾನು ಹಾಕೋದು ಇಂಥ ಚಪ್ಪಲಿ, ನಾನು ಕುಡಿಯೋದು ಇಂಥ ಪೇಯ, ನಾನು ಓಡಿಸೋದು ಇಂಥ ಕಾರು, ನಾನು ಇಂಥ soap ಬಳಸ್ತೀನಿ ಅಂತ ಹೇಳಿಕೊಂಡು ಕಾಸು ಮಾಡಿಕೊಳ್ಳುವ ಕಾಲ ಇದು. ಬೆಂಗಳೂರು ಎಂಬ ನಗರಕ್ಕೆ ಇದೆಲ್ಲ ಗೊತ್ತಿರಲಿಲ್ಲ. ಕೆಂಪೇಗೌಡ ಹಾಕಿದ ನಾಲ್ಕು ಗೋಪುರದ ಆಚೆಗಿಂತ ಹೆಚ್ಚಿನದೇನೂ ಅದಕ್ಕೆ ಬೇಕಿರಲಿಲ್ಲ.

ಕೆಂಗಲ್ ಹನುಮಂತರಾಯರು ವಿಧಾನಸೌಧ ಕಟ್ಟಿಸಿದರು.
ಗುಂಡೂರಾಯರ ಕಾಲದಲ್ಲಿ bus stand ಬಂತು.. ಮತ್ತೊಬ್ಬರು flyover, underpass ನಿರ್ಮಾಣ ಮಾಡಿದರು.
ಸಜ್ಜನರಾಯರು, ನೆಟ್ಕಲ್ಲಪ್ಪ, ಬಸಪ್ಪ, ಇವರೆಲ್ಲ ದಾನ ಧರ್ಮ ಮಾಡಿ ಹೇಳಹೆಸರಿಲ್ಲದಾದರು. Infosys ನಾರಾಯಣಮೂರ್ತಿಗಳು ಎಷ್ಟೋ ಜನರನ್ನು soft ಆಗಿ ಬೆಂಗಳೂರಿನ ಹವಾಮಾನಕ್ಕೆ ಒಗ್ಗಿಸಿದರು.
ಇದ್ಯಾವುದೂ ಬೆಂಗಳೂರಮ್ಮನಿಗೆ ಗೊತ್ತಾಗಲಿಲ್ಲ.

ನಂಗೆ ಕನ್ನಡ್ ಬರಲ್ಲ ಅಂದಾಗ ” its ok ಕಂದಾ ” ಅಂತ ಇಂಗ್ಲಿಷ್ ನಲ್ಲೇ ಲಾಲಿ ಹಾಡಿದಳು.
ಬೆಂಗಳೂರು ಮಕ್ಕಳಿಗೆ ತಾನೇ ಖುದ್ದಾಗಿ twinkle twinkle little star ಹೇಳಿಕೊಟ್ಟಳು. ಜಿ.ಪಿ. ರಾಜರತ್ನಂ
ಮೂಗಲ್ಲೇ ಕನ್ನಡ ಹಾಡಿಕೊಂಡು ಹೋಗಿಬಿಟ್ಟರು.
ನಾಯಿಮರಿ ಬೆಂಗಳೂರು ಬಿಟ್ಟು ಹೋಗಲ್ಲ ಅಂತ ಹೇಳಿದರು.

ಹೌದು. ಬೆಂಗಳೂರು ನಾಯಿಮರಿ ಬೆಂಗಳೂರಿನಲ್ಲಿ ಇತ್ತು.
twinkle stars  ಹಾಡಿದವರು ಊರಿಂದ ಆಚೆ .. ಗಡಿಯಿಂದ ಆಚೆ ಹೋಗಿ ಬೆಂಗಳೂರು wonderful city.. green city cool city, clean city, silicon city.. ಅಂತ ಹೊಗಳಿ ಹೊಗಳಿ ಬೆಂಗಳೂರಿನ ಕೀರ್ತಿ ಪತಾಕೆ ಹಾರಿಸುತ್ತಿದ್ದರು.
……
ಈಗ change over…
ಮಧ್ಯಂತರ……
ಅಪ್ಪ ಹಾಕಿದ ಆಲದ ಮರ ಬ್ಯಾಡ,
ನಾವು ಜಗತ್ತನ್ನು ಗೆದ್ದು ನಮ್ಮೂರಿನ ಹೆಸರು ಚಿರಸ್ಥಾಯಿ ಮಾಡುತ್ತೇವೆ.. ಅಂತ ಪಣ ತೊಟ್ಟ ಹಲವಾರು ಮಂದಿ ತಮ್ಮಊರು, ತಮ್ಮ ಕೇರಿ, ತಮ್ಮ ಕೆಲಸ ಬಿಟ್ಟು ಬೆಂಗಳೂರು ಎಂಬ ನಗರದ ನಾಲ್ಕು ಗೋಪುರ ನೋಡಿದರು. ಕೆಂಪೇಗೌಡ ಕಟ್ಟುಮಸ್ತಾಗಿದ್ರೂ ಸರಳ ಹೃದಯದವನು ಅಂತ ಅವನ ಸ್ನೇಹ ಬೆಳೆಸಿದರು.

ಇವರ ನಾಟಕಗಳಿಗೆ, ಇವರ ಗಾನಕ್ಕೆ, ಇವರ ಬರಹಕ್ಕೆ, ಇವರ ಸೌಂದರ್ಯಕ್ಕೆ, ಇವರ  ಕಲೆ ಕಾರ್ಯಕ್ಕೆ ಮನ ಸೋತ.
ಕರೆದು ಆಸ್ಥಾನ ಪಂಡಿತರನ್ನಾಗಿ ನೇಮಿಸಿ, ಬುದ್ಧಿವಂತರು ಉನ್ನತ ಸ್ಥಾನಗಳಲ್ಲಿ ನಿಂತು ಬೆಂಗಳೂರು ನಗರದ ನಾಡಿಯಾಗಿ ಎಂದು ಹಾರೈಸಿದ. ಕೆಂಪೇಗೌಡ ಕನಸಿಗ. ಕೆಲಸಗಾರ. ಶಿಸ್ತಿನ ಸಿಪಾಯಿ.  ಸರಳಜೀವಿ.
ಎಂದೂ ಯಾರನ್ನೂ ಅನುಮಾನಿಸಲಿಲ್ಲ.
ಅವಮಾನಿಸಲಿಲ್ಲ.

ಅಭಿಮಾನ, ಮಾನ ಸಮ್ಮಾನ.. ನೊಂದ ಜೀವಗಳಿಗೆ ತಾಣ, ಬಯಸಿದವರಿಗೆ ಹರಿವಾಣ ಹಣ..
ಎಲ್ಲ ನೀಡಿದ. ಬೆಂಗಳೂರು ನಿಮ್ಮದು ಕಾಪಾಡಿ ಎಂದು ವಾಗ್ದಾನ ಪಡೆದ. ಬೆಂಗಳೂರಿಗಾಗಿಯೇ
ತನ್ನ ಬಲಿದಾನಗೈದ ಸೊಸೆಯ ಹೆಸರನ್ನೂ ಹೇಳದೆ, ತನ್ನ ಹೆಸರನ್ನೂ ಎಲ್ಲೂ ಜಗಜಾಹೀರು ಮಾಡದೆ, ಇದು ನಾನು ಕಟ್ಟಿದ ಊರು ಎಂದು ಹೇಳದೆಯೇ ಹೊರಟು ಹೋದ.

ಅವನಿಗೆ ತಾನು ಆಶ್ರಯ ಕೊಟ್ಟ ಮಂದಿಯ ಮೇಲೆ ನಂಬಿಕೆ ಇತ್ತು.
ಬೆಂಗಳೂರು ಎಂಬ ಕರುನಾಡ ಜನನಿಯ ತನುಜೆ ಮೇಲೆ ಅವನಿಗೆ ವಿಶ್ವಾಸ ಇತ್ತು.
ಆದರೆ ಕಾಲ..ಬದಲಾಗಿದೆ.
ಕೆಂಪೇಗೌಡನಿಗೆ ಕೊಟ್ಟ ಮಾತು ಏನು ಎಂದು ಮರೆತು ಹೋಗಿದೆ. ಅನ್ನ, ಚಿನ್ನ, ಆದ ಮೇಲೆ , ವಾಸ್ತವ್ಯ, ವೈಭವ ಆದ ಮೇಲೆ..

ಬೆಂಗಳೂರು traffic ನಗರ
ಬೆಂಗಳೂರು ಮೋಸದ ನಗರ
ಬೆಂಗಳೂರು ಗಲೀಜು ನಗರ
ಬೆಂಗಳೂರು ಹಳ್ಳ ದಿಣ್ಣೆ ನಗರ
ಬೆಂಗಳೂರು ಕೆಟ್ಟ ಕೊಂಪೆ
ಬೆಂಗಳೂರು ದರಿದ್ರ..
ಮತ್ತು ಬೆಂಗಳೂರು ಭಯಾನಕ ಆಗಿದೆ..

ಮಾತು ಮರೆತವನು, ಮೆರೆವ ಮತ್ತಿನಲ್ಲಿ ಬೆಂಗಳೂರು ಗತ್ತನ್ನು..ಚಿತ್ತು ಮಾಡಿ..
ದೂರ ನಿಂತು “ನಾನು , …… ಊರಿನವನು..
Bangalore is hopeless.. ನನ್ನ ಊರು ಹೇಗಿದೆ” ಗೊತ್ತಾ .. ಅಂತ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದರೆ..
ಇದೇ ಬೆಂಗಳೂರು ಮಕ್ಕಳು ಚಪ್ಪಾಳೆ ತಟ್ಟಿ ನಗುತ್ತಿವೆ..
ಕೇಕೆ ಕೇಳಿಸುತ್ತಿದೆ..
Correct ಎನ್ನುತ್ತಿದ್ದಾರೆ..
..
ಅಯ್ಯೋ.. ಅಮ್ಮಾ.. ಬೆಂಗಳೂರಮ್ಮಾ..
ಕಣ್ಣಿಗೆ ಬಟ್ಟೆ ಕಟ್ಟಿಕೊ.
ಮೂಗಿಗೆ ಮಾಸ್ಕ್ ಹಾಕಿಕೊ.. ಕಿವಿಗೆ headphone ಹಾಕಿಕೊ..
ಕನ್ನಡ ಬೇಕೆಂದರೆ ಒಂದನ್ನು ಒತ್ತು.
ಆದರೆ line cut ಆಗುತ್ತದೆ. ನೀನು ಉಸಿರಾಡುತ್ತಿರುವುದು ಕೃತಕ ಗಾಳಿ. Oxygen ಯಾವ ಕ್ಷಣದಲ್ಲಿ ಬೇಕಾದರೂ ನಿಲ್ಲುತ್ತೆ. ನಿನ್ನ bill ಯಾರೂ ಕಟ್ಟುವುದಿಲ್ಲ.
ಯಾರೂ ಕಟ್ಟುವುದಿಲ್ಲ.

(Bendakaalooru on toast  ಎಂಬ ಗಿರೀಶ್ ಕಾರ್ನಾಡರ ನಾಟಕ ನೋಡಿ ಅಪಾರ ಸಂಕಟ ಪಟ್ಟು ಬರೆದ ಭಾವ ಇದು.
ಬೆಂಗಳೂರು ಏನೂ ಅಲ್ಲ .. ಭಯಾನಕ ಅನ್ನೋದಾದ್ರೆ.. ಬೆಂಗಳೂರು ನಿಮಗೆ ಬೇಕು ಏಕೆ..
ಊರು ಎಂಬುದು ಅಲ್ಲಿನ ಮನಸು. ವ್ಯಕ್ತಿ ಒಬ್ಬನನ್ನು ನಿಲ್ಲಿಸಿ ಅವನನ್ನು ನಿಂದಿಸುತ್ತಾ ಏಟಿನ ಮೇಲೆ ಏಟು ಹೊಡೆದು..
ಏ ಇದು ನಿಂಗಲ್ಲಪ್ಪಾ.. ನಿನ್ನಂತೆ ಇರುವ ಎಲ್ಲರಿಗೂ ..ಇದು ಸಾಂಕೇತಿಕ ಅಂದ ಹಾಗೆ.

ಸಾಂಕೇತಿಕ  ಅನ್ನುವುದಾದಲ್ಲಿ ಅದು ಯಾವ ನಗರವೂ ಆಗಬಹುದು.
ವ್ಯಂಗ್ಯ, ವಿಡಂಬನೆ ಚೆಂದವೇ. ಬೆಂಗಳೂರಿನಲ್ಲಿ positive ಏನೂ ಇಲ್ಲವೇ?

ನಿಮ್ಮ ಊರನ್ನು ಪ್ರೀತಿಸಿ. ನಿಮ್ಮೂರನ್ನು ಬೇಂದ್ರೆ ಕಾರಂತರ ಹಾಗೆ ವಿಶ್ವವ್ಯಾಪಿ ಮಾಡಿ. ಅಲ್ಲೇ ಇರಿ.
ಮತ್ತೊಂದು ಊರನ್ನು ನಿಂದಿಸುವುದು ಏಕೆ
ಏನು ಸಂದೇಶ ಇದೆ ಇಲ್ಲಿ.. ತಿಳಿಸಿ please.

 

 

‍ಲೇಖಕರು avadhi

March 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

34 ಪ್ರತಿಕ್ರಿಯೆಗಳು

  1. Vvs Togere

    ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರಿಗೆ, ಎಲ್ಲಿಂದಲೋ ಬಂದವರು, ಬೆಂಗಳೂರನ್ನು ತೆಗಳುವುದು ಮನಸ್ಸಿಗೆ ಸಹಜವಾಗಿಯೇ ನೋವನ್ನು ತರುವಂತಹದ್ದು. ಇಲ್ಲಿದ್ದುಕೊಂಡು ನಮ್ಮೂರಲ್ಲಿ ಅದು ಚಂದ, ಇದು ಚಂದ ಅಂತ ಹೇಳುವವರು ಇಲ್ಲಿಗೆ ಏಕೆ ಬಂದರು ಅನ್ನೋದೇ ದೊಡ್ಡ ಪ್ರಶ್ನೆ. ಸುಮತಿ ಅವರು ಬೆಂಗಳೂರಿನ ಜನರ ಪರವಾಗಿ ಈ ನೋವನ್ನು ವ್ಯಕ್ತಪಡಿಸಿರುವುದು ಸರಿಯಾಗಿದೆ.

    ಪ್ರತಿಕ್ರಿಯೆ
    • Ashok Kumar

      ಬಹಳ ಅದ್ಭುತ ವಾಗಿದೆ ಮೇಡಂ. ನಿಮ್ಮ ಮನಸ್ಸಿನ ಅಂತರಾಳ , ಊರಿನ ಬಗ್ಸೆ ನಿಮಗಿರುವ ಕಾಳಜಿ, ಕಳಕಳಿ ಮನಸ್ಸಿಗೆ ನಾ ಟು ವ ಹಾಗೆ ಪದ ಗಳ ಜೋಡಣೆ ಆಗಿದೆ. ನೀವು ನಿಮ್ನ. ಪಾಯಿಂಟ್ of view ಅನ್ನು ನಮ್ಮ ಜೊತೆ ಇದ್ದ ದೊಡ್ಡ ಬರಹಗಾರರನ್ನು ಬಳಸಿ ಕೊಂಡ್ಡು ನೆಲದ ಮಹತ್ವದ ಬಗ್ಗೇ ಹೇಳಿರುವುದು ಸೊಗಸಾಗಿದೆ. ಬೆಂಗಳೂರನ್ನು bengaloramma ಮಾಡಿರುವುದು, ಕಿಚಾಯಿಸಿರುವುದು ವೇರಿ settled ಆಗಿ ಮೂಡಿಬಂದಿದೆ..

      ನೋವಿದೆ, ಖುಶಿ ಇದೆ, ಇತಿಹಾಸವಿದೆ.
      ಇಂತಹ ಬರವಣಿಗೆ ಇನ್ನು ಹೆಚ್ಚು ಬರಲಿ

      ಪ್ರತಿಕ್ರಿಯೆ
  2. Dhanyata Sastry

    ಧನ್ಯವಾದಗಳು ಸುಮತಿ ಮೇಡಂ, ಈ ರೀತಿಯಾದ ದನಿ ಎತ್ತಿದ್ದಕ್ಕೆ.
    ನಾನು ನಿಮ್ಮೊಂದಿಗೆ ಇದ್ದೇನೆ.
    “ಎನಕೇನ ಪ್ರಕಾರೇಣ ಪ್ರಸಿದ್ಧಾ ಪುರುಷೋ ಭವ”
    ಎನ್ನು ವ ಧೋರಣೆಯ ಚಾಳಿ ಎಲ್ಲಿರುತ್ತದೋ ಅಂತಹ ಕಡೆಗಳಲ್ಲಿ ತನ್ನನ್ನೇ ತಾನು ವಂಚಿಸಿಕೊಳ್ಳುವ ಅಲ್ಪತೆ ಕಾಣುವುದು.
    ಕುಪ್ರಸಿ ದ್ಧಿ ಯೋ ಸುಪ್ರಸಿದ್ದಿಯೋ ಒಟ್ಟಿನಲ್ಲಿ ಚಲಾವಣೆ ಬೇಕು ಅಷ್ಟೇ. ಅದರ ಮುಖಬೆಲೆ ಕಳಪೆ ಇದ್ದರೂ ಪರವಾಗಿಲ್ಲ.
    “ಜನನೀ ಜನ್ಮಭೂಮಿ ಶ್ಚ ಸ್ವರ್ಗಾದಪಿ ಗರೀಯಸೀ ” ಎಂಬ ಗರಿಮೆಯ ಈ ನಮ್ಮ ಮಣ್ಣಿನಲ್ಲಿ ಎಲ್ಲ ತರಹದ ಕ್ರಿಮಿಗಳು ವೈರಸ್ ಆಗುತ್ತಿರುವುದು ಅಪಾಯಕಾರಿ.
    ತಾಯಿ ಋಣದ ಮರೆವು ಅನ್ನುವುದಕ್ಕಿಂತ, ಅರಿವೇ ಇಲ್ಲವಲ್ಲ ಎನ್ನುವದಕ್ಕೆ ವಿಷಾದವಿದೆ.

    ಪ್ರತಿಕ್ರಿಯೆ
  3. Sushma

    Well said sumathi madam. Naanu bengalurinavalu. Bengaluru bari naraka, mosa yendu thorisiruvudu bahala novayithu.

    ಪ್ರತಿಕ್ರಿಯೆ
  4. Shobha venkatesh

    ನಾನೂ ಬೆಂಗಳೂರಿನವಳಾದ್ದರಿಂದ ನನ್ನ ಮನವೂ ನೊಂದಿತು ಸುಮತಿ.ಊರಿನ ಬಗ್ಗೆ ಸಕಾರಾತ್ಮಕವಾಗಿ ಒಂದು ಕಡೆಯೂ ಇಲ್ಲ.

    ಪ್ರತಿಕ್ರಿಯೆ
    • KLR

      Sumathi, definitely agree with you. Bangalore is our birthplace. Bangalore has been our pride too. Proud to be called as Bangalorean. Any adverse comment against this city shows the lacuna in their adaptability. As Bangalore is a place where everyone is welcomed with a smile. The vibrancy of this city is the best in the world.

      ಪ್ರತಿಕ್ರಿಯೆ
  5. Dr.S.V.Kashyap

    ನಾನು ನಾಟಕ ನೋಡಿಲ್ಲ. ಆದರೆ ಒಂದು ವಿಷಯವನ್ನು ನಾನು ಹೇಳಲಿಚ್ಛಿಸುತ್ತೇನೆ .ವ್ಯಾಸರಾಯ ಬಲ್ಲಾಳರು ಜಯಂತ್ ಕಾಯ್ಕಿಣಿ ಮುಂತಾದ ಲೇಖಕರು ಮುಂಬಯಿ ಎಂಬ ನಗರದ ಬಗ್ಗೆ ಬಹಳ ಆರ್ದ್ರವಾಗಿ ತಮ್ಮ ಕತೆಗಳಲ್ಲಿ ಲೇಖನಗಳಲ್ಲಿ ಬರೆಯುತ್ತಾರೆ .ಆದರೆ ಬೆಂಗಳೂರಿನ ಬಗ್ಗೆ ಆ ರೀತಿಯ ಪ್ರೀತಿಯ ಭಾವ ಹೊಮ್ಮಿಸುವ ಬರಹಗಳು ಕಡಿಮೆ ಇದರ ಬಗ್ಗೆ ಇನ್ನಾದರೂ ಸಾಹಿತಿಗಳು ಗಮನ ಹರಿಸಿದರೆ ಒಳಿತೇನೋ ….
    ಈ ರೀತಿಯ ದನಿಯಾದದಕ್ಕೆ ಸುಮತಿ ಮೇಡಂ ನಿಮಗೆ ತುಂಬು ಹೃದಯದ ಧನ್ಯವಾದಗಳು

    ಪ್ರತಿಕ್ರಿಯೆ
  6. Savitha Shivakumar

    ಮೇಡಂ ಸರಿಯಾಗಿ ಹೇಳಿದ್ದಿರಿ,ಇಲ್ಲಿಯ ಅನ್ನ ಗಾಳಿ ನೀರು ಜೊತೆಗೆ ಎಲ್ಲಾ ಸೌಲಭ್ಯವನ್ನು ಪಡೆದು ಬೆಂಗಳೂರು ಸರಿ ಇಲ್ಲ ಅಂತ ಹೇಳೋರಿಗೆ ನನ್ನ ದಿಕ್ಕಾರ, ನಿಮ್ಮ ಲೇಖನ ಓದಿ ತುಂಬಾ ಬೇಜಾರಾಯಿತು ಮನಸ್ಸಿಗೆ ನೋವಾಯಿತು, ಆಶ್ರಯ ಕೊಟ್ಟ ಬೆಂಗಳೂರಿನ ಬಗ್ಗೆ ಗೌರವ ಅಭಿಮಾನ ಇರಬೇಕು

    ಪ್ರತಿಕ್ರಿಯೆ
  7. ನಾಗಚಂದ್ರಿಕಾ ಭಟ್

    ನನ್ನ ಮನಸ್ಸಿನ ಎಲ್ಲಾ ಭಾವನೆಗಳನ್ನೂ , ನಿಮ್ಮ ಮಾತುಗಳಲ್ಲಿ ಅತ್ಯಂತ ಸರಳವಾಗಿ ವಿವರಿಸಿದ್ದೀರಿ. ದಿನನಿತ್ಯ ನನಗೆ ಇದೇ ಭಾವಗಳು ಕಾಡುತ್ತವೆ.

    ಪ್ರತಿಕ್ರಿಯೆ
  8. Sunitha

    ನೀವು ಹೇಳಿದ ಮಾತುಗಳು ಸತ್ಯವಾಗಿ
    ದೆ. ನಿಮ್ಮ ಜೊತೆಯಲಿ ನಾವು ಕೈಜೋಡಿಸುತೇವೆ.

    ಪ್ರತಿಕ್ರಿಯೆ
  9. vanjoc

    ಬೆಂಗಳೂರು ಅಷ್ಟೊಂದು ಕಳಪೆಯಾಗಿದ್ದರೆ, ಇಲ್ಲೇ ಟೆಂಟ್ ಹೊಡ್ಕೊಂಡು ಇದ್ದದ್ದು ಯಾಕಂತೆ??
    ಹೊಳೆ ದಾಟಿದ ಮೇಲೆ ಅಂಬಿಗ ಯಾರೋ ಅಂತೆ!! ತಮಗೆ ಬೇಕಾದದ್ದನ್ನೆಲ್ಲಾ ಪಡೆದುಕೊಂಡ ಮೇಲೆ ಬೆಂಗಳೂರು ಬಗ್ಗೆ ಒಳ್ಳೆ ಮಾತಾಡೋ ಅವಶ್ಯಕತೆ ಅವ್ರಿಗೆಲ್ಲಿದೆ!!??
    ಅವರಿಂದ ಒಳ್ಳೆ ಮಾತು ಬಯಸುವ ನಮಗೆ ಬುದ್ಧಿ ಇಲ್ಲ

    ಪ್ರತಿಕ್ರಿಯೆ
  10. KLR

    Bangalore is our favourite city and a mother. She is the best in the world. Proud to be known as a Bangalorean. Any adverse comment against this city shows the lacuna in their adaptability. As you cannot find a city which welcomes it’s guests with such warmth and open arms. Sumathi, your observations are perfect.

    ಪ್ರತಿಕ್ರಿಯೆ
  11. Jyothi B. G..

    Yes sumuthi ur right, I agree with you. Nammure namage Chanda. Superb and fantabulous article. Whether it’s positive or negative we are living here. It is most beautiful and peaceful city in India.

    ಪ್ರತಿಕ್ರಿಯೆ
    • Manjula k

      ನಿಮ್ಮ ಧ್ವನಿಯೊಂದಿಗೆ ನಮ್ಮ ಧ್ವನಿಯೂ ಸೇರಿದೆ ಮೇಡಂ . ಎಲ್ಲರಿಗೂ ದುಡಿಯಲು ಬೆಂಗಳೂರು ಬೇಕು ಆದ್ರೆ ಊರಿನ ಬಗ್ಗೆ ಅಭಿಮಾನ ಇಲ್ಲ

      ಪ್ರತಿಕ್ರಿಯೆ
  12. Prabhamani k

    Ella sukha savalattu beku Bangalore beda…kannada bhashe beda…dikkaravirali Bangalorannu nindisuvarige…well said sumathi..I am always supportive for love Bangalore nd live0 Bangalore movements love u Bangalore..mundeena nanna janma baradittanante brahma illiye illiye nanu endigo illiye…❤❤

    ಪ್ರತಿಕ್ರಿಯೆ
  13. Srilakshmi S

    ಸುಮತಿ Madam, ನಿಮ್ಮ ಧ್ವನಿ ಮಾತ್ರ ಸುಂದರವಲ್ಲ…. ನಿಮ್ಮ ಬರಹವು ಚೆಂದವೋ ಚಂದ…. ನೀವು ಬರೆದಿರುವ ವಿಷಯ ನನಗೆ ಬಹಳ ಹತ್ತಿರವಾಗಿದೆ ಏಕೆಂದರೆ ನಾನು ಹುಟ್ಟಿ ಬೆಳೆದಿರುವುದು ಇಲ್ಲಿ…. ಹೀಗೆ ತಮ್ಮ ಜೀವನೋಪಾಯಕ್ಕೆ ಕೆಲಸ ಹುಡುಕಿ ಬೆಂಗಳೂರಿಗೆ ಬರುವವರ ಸಂಖ್ಯೆ ಜಾಸ್ತಿ ಆಗಿದೆ….
    ಬೆಂಗಳೂರು ಪ್ರವೇಶಿಸಲು ಒಂದು Visa ಇದ್ದಿದಿದ್ರೆ ಎಷ್ಟು ಚೆನ್ನಾಗಿರ್ತಿತ್ತು…..

    ಪ್ರತಿಕ್ರಿಯೆ
    • Geetha b u

      ನಾವಿಬ್ಬರು ನಾಟಕ ನೋಡುತ್ತಾ , ನೋಡುತ್ತಿರುವವರು ನಕ್ಕಾಗ ಸಂಕಟಪಡುತ್ತಾ, ಇರುವ ಊರನ್ನು ಹೀಯಾಳಿಸಿದಾಗ ಇವರಿಗೆ ನಗು ಯಾಕೆ ಬರುತ್ತದೆ ಎಂದು ಆಶ್ಚರ್ಯ ಪಡುತ್ತಾ ಮಾತಾಡಿಕೊಂಡಿದ್ದನ್ನು ಯಥಾವತ್ತಾಗಿ ಅಕ್ಷರ ರೂಪಕ್ಕೆ ಇಳಿಸಿದ್ದೀಯ ಸುಮತಿ.
      ಧನ್ಯವಾದಗಳು.
      ಬೇಕೆನ್ನಿಸಿದರೆ ಬಡತನ, ರಸ್ತೆಯ ಜೀವನವನ್ನೂ romanticise ಮಾಡಬಲ್ಲ ಲೇಖಕ. ಬೇರೆ ದೊಡ್ಡ ಅಥವಾ ಚಿಕ್ಕ ನಗರಕ್ಕಿಂಥ ಹೆಚ್ಚು ಭಿನ್ನವಾಗಿಲ್ಲ ನಮ್ಮ ಬೆಂಗಳೂರು. ಮಮ್ಮದು ಎಂಬ ಅಭಿಮಾನ ಬೇಕಷ್ಟೇ.
      ರಸ್ತೆ ಬೇಕು, ಆದರೆ ಅಗೆಯಬಾರದು. ನೀರು ಬೇಕು, ಆದರೆ ಬೋರ್ವೆಲ್ ಶಬ್ದ ಬೇಡ. ನಾವು ದೊಡ್ಡ ಕಾರಿನಲ್ಲಿ ಓಡಾಡಬೇಕು, ಆದರೆ ರಸ್ತೆಯಲ್ಲಿ ಬೇರೆ ಯಾರೂ ಇರಬಾರದು. ಬೆಂಗಳೂರಿನಲ್ಲಿ ಇರುವ ವಯಸ್ಸಾದ , ಮದ್ಯವಯಸ್ಕ, ಹಾಗೂ ಯುವಕರು…ಎಲ್ಲರೂ ಉಡಾಫೆ ಜನರೇ.
      ಯಾರು ಎನೇ ಹೇಳಲೀ, she is my heroine. Bangalore is my heroine.
      Finally ವಾಸಿಸುವ ಜನರಿದ್ದಂತೆ ನಗರ.

      ಪ್ರತಿಕ್ರಿಯೆ
  14. ಬಾಲಸುಬ್ರಮಣ್ಯ S A

    ನಗರದ ರಸ್ತೆಗಳ ಓರೆಕೋರೆಗಳ ತಿದ್ದಿ ತೀಡಿ ಸಮಮಾಡಿ ಹಿತವಾಗಿ ಉಪಯೋಗಿಸಲು ಅರ್ಹ ಮಾಡುವಂತೆ, ನಗರದ ತೊಂದರೆ ತಾಪತ್ರಯಗಳ ತಿಳಿಸಿ ಹಿತವಾಗಿ ಬಾಳಲು ಕಂಡುಕೊಂಡ ಹತ್ತಾರು ವಿಧಿ ವಿಧಾನಗಳನ್ನೂ ಮೇಳೈಸಿರುವ ಸುಮತಿಯವರ ಆಕಾಶವಾಣಿಯ ಹರಿತವಾದ ಭಾಷೆಗೆ ನಮೋನ್ನಮಃ. ಹಳ್ಳಕೊಳ್ಳಗಳು ರಸ್ಹೆಗಳ ಹೆಚ್ಚಿನ ಬಳಕೆಯ ಲಕ್ಷಣ. ಹಾಗಂತ ರಸ್ತೆಯನ್ನು ಬಿಡಲಾರದಾದೀತೇ? ರಿಪೇರಿ ಮಾಡಿ. ಬಳಲಸಲೇಬೇಕಾದ ಅನಿವಾರ್ಯತೆ ಇದೆ. ಪ್ಯಾಚ್ ಅಪ್ಪ ಮಾಡದೇ ಬದುಕೂ ಸಾಧ್ಯವಿಲ್ಲ. ನಗರಗಳೂ ಅಂತೆಯೇ. ಹೊಸತನವನ್ನು ಸ್ವೀಕರಿಸಿ ಹಳೆತನವ ಮೈಗೂಡಿಸಿಕೊಂಡವರು ಜಾಣ್ಮೆ ನಮ್ಮದಾಗಬೇಷ್ಟೆ. ಓವರ್ ಆಕ್ಟಿಂಗ್ ಇಲ್ಲದಿದ್ರೆ ಕೆಲವೊಮ್ಮೆ ಪರಿಣಾಮ ಬರಲಾರದು. ಹಾಗಾಗಿ ಅಲ್ಲಲ್ಲಿ ಕಡುತನವೂ ಸಹ್ಯ. ಒಟ್ಟಾರೆ ನಿಂತನೀರಾಗದ ನಗರದ ಬೆಳವಣಿಗೆಯ ಉತ್ತಮಿಕೆ ನಗರವಾಸಿಗಳಾದ ನಿಮ್ಮದಾಗಲಿ. ಇಂದು ಎಲ್ಲ ನಗರಗಳೂ ಪಾಡೂ ಹೌದು.

    ಪ್ರತಿಕ್ರಿಯೆ
  15. ಆಶಾ P

    ಬೆಂಗಳೂರಿನ ದುಡ್ಡು ನಮ್ಮದು. ಇಲ್ಲಿನ ತೊಂದರೆ ನಮ್ಮದಲ್ಲ ಅನ್ನೋ ಜನರ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ.

    ಪ್ರತಿಕ್ರಿಯೆ
  16. veda

    ಚೆಂದದ ಬರಹ ಸುಮತಿ , ನಾನು ನಾಟಕ ನೋಡಿಲ್ಲ ಆದ್ರೂ ಬೆಂಗಳೂರಿನವಳಾಗಿರುವ ಹಾಗೂ ಬೆಂಗಳೂರಿನ ಬಗ್ಗೆ ಹೆಮ್ಮೆ ಹಾಗೂ ಅಭಿಮಾನವನ್ನು ಇಟ್ಟುಕೊಂಡಿರುವ ನನ್ನಂತ ಅನೇಕರ ಅಭಿಪ್ರಾಯವೂ ಇದೆ ಆಗಿರುತ್ತದೆ, “ನಂಗೆ ಕನ್ನಡ್ ಬರಲ್ಲ ಅಂದಾಗ ” its ok ಕಂದಾ ” ಅಂತ ಇಂಗ್ಲಿಷ್ ನಲ್ಲೇ ಲಾಲಿ ಹಾಡಿದಳು” ನಿಜ, ನಾವು ಬೆಂಗಳೂರಿಗರು ಶಾಂತ ಹಾಗೂ ತುಂಬಾ ಹೊಂದಾಣಿಕೆ ಸ್ವಭಾವದವರಾಗಿರುವುದರಿಂದಲೇ ಏನೋ ಎಲ್ರೂ ನಮ್ಮ ಮೇಲೆ ಸವಾರಿ ಮಾಡುತ್ತಾರೆ .ಬೇರೆ ರಾಜ್ಯದವರನ್ನು ಬಿಡು ಕೇಳುವಂತೆ ಇಲ್ಲ ,ಆದ್ರೆ ನಮ್ಮದೇ ರಾಜ್ಯದವರಾದ ನಾವು ಮೆಚ್ಚುವ ಅನೇಕ ಸಾಹಿತಿಗಳು ಬೆಂಗಳೂರಿನಲ್ಲೇ ಇದ್ದು ಇಲ್ಲಿನ ಸಕಲ ಸವಲತ್ತುಗಳನ್ನು ಉಪ್ಯೋಗಿಸಿಕೊಂಡು ಉದ್ದಾರವಾಗಿ, ಅಭಿವೃದ್ದಿಹೊಂದಿದ್ದರೂ ಸಹ ನಮ್ಮ ಬೆಂಗಳೂರಿನ ಬಗ್ಗೆ ಕೇವಲವಾಗಿ ಮಾತನಾಡುವುದನ್ನು ಕೇಳಿದಾಗ ಸಹಿಸಲಾಗುವುದಿಲ್ಲ. ಈ ಲೇಖನದ ಪ್ರತಿಯೊಂದು ಮಾತು ನಿಜ ಇಲ್ಲಿ ವ್ಯಕ್ತ ಪಡಿಸಿರುವ ಎಲ್ಲಾ ಅಭಿಪ್ರಾಯಗಳನ್ನು ನಾನು ಖಂಡಿತ ಅನುಮೋದಿಸುತ್ತೇನೆ.

    ಪ್ರತಿಕ್ರಿಯೆ
  17. Dr. Niveditha Ramaprasad

    ನಿಮ್ಮ ಮಾತು ಅಕ್ಷರಶಃ ಸತ್ಯ ಮೇಡಂ.
    ವಿದ್ಯೆ, ಉದ್ಯೋಗ ಎಲ್ಲದಕ್ಕೂ ಬೆಂಗಳೂರು ಬೇಕು. ಆದರೆ ಅಭಿಮಾನ ನಮ್ಮ ಊರು ಎಂದು. ಅದೂ ಸಹ ತೋರಿಕೆಯ ಅಭಿಮಾನ…
    ನಿಮ್ಮ ಊರಿನ ಬಗ್ಗೆ ಅಭಿಮಾನ ಇರಲಿ ಆದರೆ ನಿಮಗೆ ಆಶ್ರಯ ಕೊಟ್ಟ ಬೆಂಗಳೂರಿನ ಬಗ್ಗೆ ಹೆಮ್ಮೆ ಇರಲಿ

    ಪ್ರತಿಕ್ರಿಯೆ
  18. Sumathi BK

    ಇಷ್ಟು ಪ್ರೀತಿಯಿಂದ ನೀವೆಲ್ಲ ಪ್ರತಿಕ್ರಿಯೆ ಕೊಟ್ಟಿದ್ದೀರಿ. Thanku. Thanks a lot.
    ಇದು ಬೆಂಗ್ಳೂರಮ್ಮನಿಗೆ ಅರ್ಪಿತ.

    ಧನ್ಯವಾದಗಳು

    ಪ್ರತಿಕ್ರಿಯೆ
  19. ಕೆಂಬೂತ

    ಗಿರೀಶ್ ಕಾರ್ನಾಡ್ ಅವರು ಬೆಂಗಳೂರಿಗರಲ್ಲ. ಅವರು ಜೀವನ ಸಂಧ್ಯಾಕಾಲದಲ್ಲಿ ಇಲ್ಲಿ ಬಂದು ನೆಲೆಸಿದರು. ಸೃಜನಶೀಲ ಬರಹಗಾರರಾದ ಅವರು ಸಹಜವಾಗಿಯೇ ಈ ನಗರಕ್ಕೆ ಪ್ರತಿಕ್ರಿಯುಸುತ್ತ ಬಂದರು. ಅದು ಬೆಂಗಳೂರು ಅತ್ಯಂತ ವೇಗವಾಗಿ ಬದಲಾಗುತ್ತಿದ್ದ, ಇಡೀ ಪ್ರಪಂಚದ ಗಮನ ತನ್ನೆಡೆಗೆ ಸೆಳೆದಿಟ್ಟುಕೊಂಡಿದ್ದ ಕಾಲ. ಅವರಿಗೆ ಮುಂಬೈ, ದೆಹಲಿ, ಕೋಲ್ಕತ್ತಾ ನಗರಗಳು ಸಾಹಿತ್ಯದೊಳಗೆ ಬಂದ ಹಾಗೆ ಬೆಂಗಳೂರು ಬಂದಿಲ್ಲ ಎಂದೆನಿಸಿತು. ಈ ಬಗ್ಗೆ ಅವರು ಕಡೇ ದಿನಗಳವರೆಗೂ ಸಹ ಮಾತಾಡುತ್ತಿದ್ದರು. ಅದರ ಭಾಗವಾಗಿಯೇ ಅವರು ಬರೆದ ನಾಟಕ, ಬೆಂಗಳೂರ ಬದುಕಿಗೆ ಅವರ ಪ್ರತಿಕ್ರಿಯೆ “ಬೆಂದಕಾಳು ಆನ್ ಟೋಸ್ಟ್”, ೨೦೧೨-೧೩ರಲ್ಲಿ ಬರೆದುದು.

    ನನ್ನ ನೆನಪು ಸರಿ ಇದ್ದರೆ, ಬೆಂಗಳೂರೇ ಕೇಂದ್ರ ಪಾತ್ರವಾದ ಈ ನಾಟಕದ ಮೊದಲ ಪ್ರಯೋಗ ಆದದ್ದು ಪುಣೆಯಲ್ಲಿ, ಮರಾಠಿ ನಾಟಕವಾಗಿ. ೨೦೧೪ರ ಏಪ್ರಿಲ್ನಲ್ಲಿ. ಆ ಪ್ರಯೋಗದಲ್ಲಿ ಬೆಂಗಳೂರು ಬದಲು ಪುಣೆ! ಮಿಕ್ಕಂತೆ ನಾಟಕವೆಲ್ಲವೂ ಅದೇ! ಇದು ಈ ನಾಟಕ ಮತ್ತು ನಮ್ಮ ನಗರ ಬದುಕಿನ ವಿಮರ್ಶೆ, ಜಿಜ್ಞಾಸೆಗೆ ಉಪಮೆ.

    ಬೆಂದ ಕಾಳು ಅನ್ ಟೋಸ್ಟ್ ನಾಟಕ ಅಸಂಗತ ನಗರ ಜೀವನವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಮನೆಕೆಲಸದಾಕೆಯ ಕಳ್ಳತನ, ಪೋಲೀಸರು, ಅಜ್ಜಿಯ ಕುದುರೆ ಜೂಜು, ಆ ಹುಡುಗನ ಏಲಿಯನೇಷನ್ ಹೀಗೆ..ಇದು ಎಲ್ಲ ನಗರಗಳ ಸತ್ಯ. ಹಾಗಾಗಿಯೇ ಈ ನಾಟಕವನ್ನು ಅಷ್ಟು ಸುಲಭವಾಗಿ ಪುಣೆಗೆ ಅನ್ವಯಿಸಿ ಮಾಡಬಹುದು. ಹಾಗಾದರೆ ಇಲ್ಲಿ ಬೆಂಗಳೂರು ಎಲ್ಲಿದೆ?

    ಇವತ್ತು ಎಲ್ಲ ನಗರಗಳ ಬದುಕೂ ಒಂದೆಯಾ? ಹೌದು ಮತ್ತು ಇಲ್ಲ. ಇವತ್ತು ಒಬ್ಬ ವ್ಯಕ್ತಿ ಬೀದಿಯ ಜೊತೆ ಸಂಪರ್ಕವೇ ಇಲ್ಲದೆ ನಮ್ಮ ನಗರಗಳಲ್ಲಿರಬಲ್ಲ. ಗೇಟೆಡ್ ಕಮ್ಯೂನಿಟಿ/ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಾ, ಊಬರ್-ಓಲಾಗಳಲ್ಲಿ ಓಡಾಡುತ್ತಾ, ಗ್ಲೋಬಲ್ ಎನಿಸಿಕೊಳ್ಳುವ ಕಾರ್ಪೋರೇಟ್ ಆಫೀಸುಗಳಲ್ಲಿ ದುಡಿಯುತ್ತಾ, ಪಿವಿಆರ್-ಐನಾಕ್ಸ್ ಗಳಲ್ಲಿ ಪಿಚ್ಚರ್ ನೋಡುತ್ತಾ, ಮಾಲ್ಗಳಲ್ಲಿ ಶಾಪಿಂಗ್ ಮಾಡುತ್ತಾ, ಬಿಗ್ ಬ್ಯಾಸ್ಕೆಟ್ನಲ್ಲಿ ದಿನಸಿ-ತರಕಾರಿ ತರಿಸುತ್ತಾ, ಮಕ್ಕಳನ್ನು ಇಂಟರ್ನ್ಯಾಷನಲ್ ಶಾಲೆಗೆ ಸೇರಿಸಿ, ಮನೆ ಮಾತು ಇಂಗ್ಲಿಷ್ ಮಾಡಿಕೊಂಡು ಬಿಟ್ಟರೆ…ಈ ಬದುಕಿಗೆ ಬೆಂಗಳೂರು, ಪುಣೆ, ಗುರುಗ್ರಾಮ, ನೋಯ್ಡಾ, ಹೈದರಾಬಾದ್ ಗಳ ನಡುವೆ ಫರಕ್ಕೇನಿದೆ? ನಗರೀಕರಣದ ಪರಿಭಾಷೆಯಲ್ಲಿ ಇದನ್ನು sweep of generic spaces ಎನ್ನುತ್ತಾರೆ.

    ನಾವೆಲ್ಲರೂ ಇಂದು ಈ ಜೀವನದ ಕೆಲವು ತುಣುಕುಗಳನ್ನಾದರೂ ಬದುಕುತ್ತಿದ್ದೇವೆ, ಹಾಗಾಗಿ ಇದೇ ನವ ಬೆಂಗಳೂರಿನ ಬದುಕು ಎಂದು ಸಾಧಾರಣವಾಗಿ ಭ್ರಮಿಸುತ್ತೇವೆ. ಕಾರ್ನಾಡರ ನಾಟಕ ಇಂಥದೊಂದು ಜೆನೆರಿಕ್ ಆದ ಅಸಂಗತ ನಗರ ಜೀವನವನ್ನು ಕಟ್ಟಿಕೊಡುತ್ತದೆ. ಆದರೆ ಅದನ್ನು ಬೆಂಗಳೂರಿಗೆ ಆರೋಪಿಸುತ್ತದೆ.

    ಈ ಜೆನೆರಿಕ್ ಆದ ಇವತ್ತಿನ ಡೆವಲಪಿಂಗ್ ದೇಶಗಳ ನಗರ ಜೀವನದ ಹೊರತಾಗಿ ಬೆಂಗಳೂರಿಗೆ ಒಂದು ವಿಶಿಷ್ಟ ವ್ಯಕ್ತಿತ್ವ, ದನಿ, ಆತ್ಮ ಇಲ್ಲವೇ? ಖಂಡಿತ ಇದೆ, ಪ್ರತಿ ನಗರಕ್ಕಿರುವಂತೆ, ಈ ನಾಟಕದಲ್ಲಿಲ್ಲ ಎಂದೇ ನನ್ನ ಭಾವನೆ.

    Why isn’t there a Bengaluru novel, like there is a Bombay novel? ಎಂದು ಹೊರಟ ಕಾರ್ನಾಡರು ಅವರ ಅನುಭವಕ್ಕೆ ದಕ್ಕಿದ ಊರನ್ನು ಕಟ್ಟಿಕೊಟ್ಟಿದ್ದಾರೆ. But as it turns out ಇದು ಎಲ್ಲ ನಗರಗಳ ಕತೆ!

    ಕಾರ್ನಾಡರಿಗೆ ಕಾಡಿದ ಪ್ರಶ್ನೆ ಬೆಂಗಳೂರಿಗರಿಗೆ ಕಾಡಿಲ್ಲ ಏಕೆ?

    ಪ್ರತಿಕ್ರಿಯೆ
  20. Roopa Lakshmipathi Rao

    ಧನ್ಯವಾದಗಳು ಸುಮತಿ ಮೇಡಂ. ಬೆಂಗಳೂರು ಬಹಳಷ್ಟು ಜನಕ್ಕೆ ಅನ್ನ ಮಾತ್ರವಲ್ಲ, ವೈಭೋಗವನ್ನೂ ಕೊಟ್ಟಿದೆ ಅಷ್ಟೇಕೆ ಸಂಗಾತಿಯನ್ನೂ ಸಹ.
    ಆದರೂ ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎನ್ನುವಂತೆ ಬಹಳಷ್ಟು ಜನ ನಿಮ್ಮ ಬೆ೦ಗಳೂರಿನ ಜನ ಸರಿ ಇಲ್ಲಿ.
    ನಿಮ್ಬೆಂಗಳೂರು ಭಾಷೆ ಅದ್ವಾನ. ಮೋಸಗಾರರೇ ಇದ್ದಾರೆ , ಟ್ರಾಫಿಕ್ ಬಹಳ ಅಂತೆಲ್ಲಾ ಹಂಗಿಸುವಾಗ ಬೆಂಗಳೂರಿನವಳಾಗಿ ನನಗೂ ಬೇಸರವಾಗುತ್ತದೆ

    ಪ್ರತಿಕ್ರಿಯೆ
  21. prathibha nandakumar

    ಕಾರ್ನಾಡರಿಗೆ ಬೆಂಗಳೂರು ಸ್ವಂತ ಊರಲ್ಲ. ಅವರಿಗೆ ಅನ್ನ ಪ್ರಶಸ್ತಿ ಜನಪ್ರಿಯತೆ ಕೊಟ್ಟ ಊರಾದರೂ, ಸ್ವಂತ ಅಲ್ಲ. ಅದಕ್ಕೆ

    ಪ್ರತಿಕ್ರಿಯೆ
  22. SARVAMANGALA

    ಸರ್ವಮಂಗಳಾ . .

    ಸುಮತಿಯವರಿಗೊಂದು ಪ್ರೀತಿಯ ವಂದನೆ . . ಬೆಂಗಳೂರಿನ ಎಲ್ಲವೂ ಬೇಕು . . ಅಭಿಮಾನವಿಲ್ಲ. . ತನ್ನೂರು ಕೊಡದ ಭದ್ರತೆಯನ್ನು ಕೊಟ್ಟದ್ದು ಬೆಂಗಳೂರು ,ಅದರ ಪ್ರತಿ ಗೌರವವಿಲ್ಲ ಉಂಡ ಮನೆ ಜಂತಿ ಎಣಿಸೊರು ಅನ್ನೊದು ಇಂಥವರಿಗೆ ಇರಬೇಕು . .ಅಭಿಮಾನವಿಲ್ಲದವನ ಎದೆ ಸುಡುಗಾಡು ಅನ್ನೊದನ್ನ ಇಂಥವರಿಗೆ ಅಂದರೆ ಬಹುಶಃ ಸುಡುಗಾಡೂ ಕೆರಳೀತು . . . ನನಗಂತೂ ಬೆಂಗಳೂರು ಪ್ರೀತಿಯ ಊರು. .

    ಪ್ರತಿಕ್ರಿಯೆ
  23. Nagendra Shaan

    ಆದ್ರೆ ಕಾರನಾಡರು…. ಬೀಫ್ ಬಿರಿಯಾನಿ ಸವಿದದ್ದು. ಇದೇ ಬೆಂಗಳೂರಿನ ಟೌನ್‌ಹಾಲ್ ಮುಂದೆ…

    ವಾ೨ಡೂ…

    ಪ್ರತಿಕ್ರಿಯೆ
  24. K.Anantha Prahlada

    I’m from Hyderabad but I love Bengaluru and Kannada
    Jai Karnataka maathe ✊

    ಪ್ರತಿಕ್ರಿಯೆ

Trackbacks/Pingbacks

  1. ಕಾರ್ನಾಡರಿಗೆ ಕಾಡಿದ ಪ್ರಶ್ನೆ ಬೆಂಗಳೂರಿಗರಿಗೆ ಕಾಡಿಲ್ಲ ಏಕೆ? – ಅವಧಿ । AVADHI - […] ‘ರಂಗಶಂಕರ’ದ ಇತ್ತೀಚಿನ ನಾಟಕ ‘ಬೆಂದಕಾಳು ಆನ್ ಟೋಸ್ಟ್’ ನಾಟಕವನ್ನು ನೋಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ  […]
  2. ‘ಬೆಂದಕಾಳೂರು’ ಚರ್ಚೆ: ಯಾರು ಎನೇ ಹೇಳಲೀ, Bangalore is my heroine. – ಅವಧಿ । AVADHI - […] ‘ರಂಗಶಂಕರ’ದ ಇತ್ತೀಚಿನ ನಾಟಕ ‘ಬೆಂದಕಾಳು ಆನ್ ಟೋಸ್ಟ್’ ನಾಟಕವನ್ನು ನೋಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ  […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: