ಶಿವರಾಮ ಕಾರಂತ ಪುರಸ್ಕಾರ ಪ್ರಕಟ: ರಾಜಾರಾಂ ತಲ್ಲೂರು, ಪಿ ಚಂದ್ರಿಕಾಗೆ ಪ್ರಶಸ್ತಿ

ರಾಜಾರಾಂ ತಲ್ಲೂರು

ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಟಿ ಎಂ ಸುಬ್ಬರಾಯ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ಹಾಗೂ ರಾಜಾರಾಂ ತಲ್ಲೂರು, ಪಿ ಚಂದ್ರಿಕಾ ಹಾಗೂ ಡಿ ಬಿ ಶಂಕರಪ್ಪ ಅವರಿಗೆ ಶಿವರಾಮ ಕಾರಂತ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.

ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಕೆಲಸ ಮಾಡಿರುವ ಹಿರಿಯರಿಗೆ ಶಿವರಾಮ ಕಾರಂತ ಪ್ರಶಸ್ತಿಯನ್ನು ಪ್ರತಿಷ್ಠಾನ ಕಳೆದ ೨೦ ವರ್ಷಗಳಿಂದ ನೀಡುತ್ತಾ ಬಂದಿದೆ. ಪ್ರಶಸ್ತಿ ಇಪ್ಪತ್ತು ಸಾವಿರ ರೂಪಾಯಿ ಗೌರವ ಸಂಭಾವನೆ, ಹಾಗೂ ಪ್ರಶಸ್ತಿ ಪತ್ರವನ್ನು ಹೊಂದಿದೆ

ಆಯಾ ವರ್ಷ ಪ್ರಕಟವಾಗುವ ಒಳ್ಳೆಯ ಕೃತಿಗೆ ಶಿವರಾಮ ಕಾರಂತ ಪುರಸ್ಕಾರವನ್ನು ಪ್ರತಿಷ್ಠಾನ ಕಳೆದ ೨೦ ವರ್ಷದಿಂದ ನೀಡುತ್ತಾ ಬಂದಿದೆ. ಪುರಸ್ಕಾರವು ಹತ್ತು ಸಾವಿರ ರೂಪಾಯಿ ಗೌರವ ಸಂಭಾವನೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ

ಟಿ. ಎಂ ಸುಬ್ಬರಾಯರು ನಿರಂತರವಾಗಿ ಕನ್ನಡದ ವಿವಿಧ ಪ್ರಕಾರಗಳಲ್ಲಿ ಸತತವಾಗಿ ಐದು ದಶಕಗಳಿಂದಲೂ ಸಾಹಿತ್ಯ ಕೃಷಿ ಮಾಡುತ್ತಾ ಬಂದಿದ್ದಾರೆ. ಎಂಬತ್ತು ಕಾದಂಬರಿಗಳು, ಹತ್ತು ಕಥಾ ಸಂಕಲನಗಳು, ನಾಲ್ಕು ಪ್ರವಾಸ ಕಥನಗಳು, ಒಂಬತ್ತು ಯಕ್ಷಗಾನ ಪ್ರಸಂಗಗಳು, ಮೂರು ಸಂಶೋಧನಾ ಗ್ರಂಥಗಳು, ಮೂವತ್ತೈದು ಬಾನುಲಿ ನಾಟಕಗಳು, ನಾಲ್ಕು ಅಂಕಣ ಬರಹಗಳು, ನಾಲ್ಕು ಲೇಖನ ಸಂಗ್ರಹಗಳು, ಐದು ಕಿರುಹೊತ್ತಗೆಗಳನ್ನು ಸೇರಿಸಿ 154 ಕೃತಿಗಳನ್ನು ಪ್ರಕಟಿಸಿದ್ದಾರೆ.

‘ತಲ್ಲೂರು ಎಲ್ ಎನ್’ ಕೃತಿಗಾಗಿ ರಾಜಾರಾಂ ತಲ್ಲೂರು  ‘ಮೋದಾಳಿ’ ನಾಟಕ ಕೃತಿಗಾಗಿ ಪಿ. ಚಂದ್ರಿಕಾ ಮತ್ತು ‘ಬೆಳಗು ಹರಿಯುವ ಮುನ್ನ’ ಕಾದಂಬರಿಗಾಗಿ ಡಿ ಬಿ ಶಂಕರಪ್ಪ ಅವರಿಗೆ ಶಿವರಾಮ ಕಾರಂತ ಪುರಸ್ಕಾರವನ್ನು ನೀಡಲಾಗುತ್ತಿದೆ.

‍ಲೇಖಕರು avadhi

March 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Dr T yellappa

    ಮೂರು ಜನ ಪ್ರಶಸ್ತಿ ಪುರಸ್ಕೃತ ಲೇಖಕರಿಗೆ ಹೃತ್ಪೂರ್ವಕವಾದ ಅಭಿನಂದನೆಗಳು

    ಪ್ರತಿಕ್ರಿಯೆ
  2. T S SHRAVANA KUMARI

    ಮೂರೂ ಜನ ಪುರಸ್ಕಾರ ವಿಜೇತರಿಗೂ ಹಾರ್ದಿಕ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: