ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಳತೇವ ಕೇಳಾ..

ಸಂಗಮೇಶ ಮೆಣಸಿನಕಾಯಿ 

ಕಳೆದ ವಾರ ಸಂಪೂರ್ಣ ಮಳೆ, ಪ್ರವಾಹದಲ್ಲಿ ‘ಮುಳುಗಿ’ ಹೋಗಿದ್ದೆ. ಮನೆಯಲ್ಲಿ, ಕಚೇರಿಯಲ್ಲಿ ಅದೇ ಧ್ಯಾನ. ಹೊಳೆ ಆಲೂರು-ಆಲಮಟ್ಟಿಗೆ ಹೋಗಿ ಬಂದ ಮೇಲೆ ಮಕ್ಕಳ ಬಳಿಯೂ ಕೆಲವು ಘಟನೆಗಳನ್ನು ಹಂಚಿಕೊಂಡಿದ್ದೆ.

ಒಂದನೆಯ ತರಗತಿ ಓದುತ್ತಿರುವ ನನ್ನ ಮಗ (ಸಹಜ್ ಮೆಣಸಿನಕಾಯಿ. ಒಂದನೆಯ ತರಗತಿ, ಕೇಂದ್ರೀಯ ವಿದ್ಯಾಲಯ ನಂ.೧, ಹುಬ್ಬಳ್ಳಿ) ಮೌನವಾಗಿ ಬಿಡಿಸಿ ಕೊಟ್ಟ ಚಿತ್ರ ಇದು…

ಒಂದೆರಡು ದಿನ ಸಮಯ ಸಿಕ್ಕಾಗಲೆಲ್ಲ ಒಂದು ಡ್ರಾಯಿಂಗ್ ಶೀಟ್ ಮೇಲೆ ಏನೋ ಚಿತ್ರಿಸುತ್ತಿದ್ದ. ನಾನು ಆ ಕಡೆ ಕಣ್ಣು ಹಾಯಿಸುತ್ತಲೇ ಮುಚ್ಚಿಕೊಳ್ಳುತ್ತಿದ್ದ.

“ಅದು ಸಸ್ಪೆನ್ಸ್ ಪಪ್ಪ, ಪೂರ್ತಿ ಮುಗಿದ ಮೇಲೆ ಸರ್ಪ್ರೈಜ್ ಕೊಡ್ತೀನಿ ನಿನಗೆ” ಅಂತಿದ್ದ. ಕೊನೆಗೂ ಈ ಸರ್ಪ್ರೈಜ್ ನೋಡಿದಾಗ ಮಗನ ಸೃಜನಶೀಲತೆಗೆ ಖುಷಿ ಪಡಬೇಕೊ, ಅಲ್ಲಿನ ಜನರ ನರಕಯಾತನೆಗೆ ಅಳಬೇಕೋ ತಿಳಿಯಲಿಲ್ಲ.

ಮಗನ ಹಣೆಗೊಂದು ಮುತ್ತನಿಟ್ಟೆ ಭಾವನೆಗಳ ತಾಕಲಾಟದಲ್ಲಿ…

‍ಲೇಖಕರು avadhi

22 August, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading